ಸ್ಯಾಮ್‌ಸಂಗ್‌ನ ಆಡಿಯೋ ಬ್ರಾಂಡ್‌ AKG ಯ N400 ಇಯರ್‌ಬಡ್ಸ್‌ ಲಾಂಚ್‌!

|

ಇತ್ತೀಚಿನ ದಿನಗಳಲ್ಲಿ ಟೆಕ್‌ ಮಾರುಕಟ್ಟೆಯಲ್ಲಿ ಆಡಿಯೋ ಆಕ್ಸಿಸರೀಸ್‌ಗಳು ಸಿಕ್ಕಾಪಟ್ಟೆ ಸೌಂಡ್‌ಮಾಡುತ್ತಿವೆ. ನಿಮಗೆಲ್ಲಾ ತಿಳಿದಿರುವ ಹಾಗೇ ಮಾರುಕಟ್ಟೆಯಲ್ಲಿ ನೀವು ಸ್ಮಾರ್ಟ್‌ಫೋನ್‌ಗಳನ್ನ ಖರೀದಿ ಮಾಡಿದರೆ ಯಾವುದೇ ಇಯರ್‌ಫೋನ್‌ ಲಬ್ಯವಾಗುವುದಿಲ್ಲ. ಬದಲಿಗೆ ನಿಮಗೆ ಹೊಂದಿಕೆ ಆಗುವ ಇಯರ್‌ಫೋನ್‌ಗಳನ್ನ ನಿವೇ ಖರೀದಿಸಬೇಕಾಗಿದೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ವಿವಿಧ ಮಾದರಿಯ ಇಯರ್‌ ಫೋನ್‌ಗಳನ್ನ ಬಿಡುಗಡೆ ಮಾಡಿವೆ. ಇವುಗಳಲ್ಲಿ ಸ್ಯಾಮ್‌ಸಂಗ್‌ ಕಂಪೆನಿ ಕೂಡ ಒಮದಾಗಿದೆ. ಹಲವು ಇಯರ್‌ಬಡ್ಸ್‌, ಇಯರ್‌ಫೋನ್‌ಗಳನ್ನ ಪರಿಚಯಿಸಿರುವ ಕಂಪೆನಿ ಇದೀಗ ಹೊಸ ಮಾದರಿಯ ಇಯರ್‌ ಬಡ್‌ ಅನ್ನು ಬಿಡುಗಡೆ ಮಾಡಿದೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಕಂಪೆನಿ ತನ್ನ ಆಡಿಯೋ ಬ್ರ್ಯಾಂಡ್‌AKG ಮೂಲಕ ಹೊಸ ಇಯರ್‌ಬಡ್ಸ್‌ ಅನ್ನು ಲಾಂಚ್ ಮಾಡಿದೆ. ಸದ್ಯ ಈ ಇಯರ್‌ಬಡ್ಸ್‌ ಅನ್ನು AKG N400 ಎಂದು ಹೆಸರಿಸಲಾಗಿದ್ದು, ದಕ್ಷಿಣ ಕೋರಿಯಾದಲ್ಲಿ ಬಿಡುಗಡೆ ಆಗಿದೆ. ಇನ್ನು ಈ ಇಯರ್‌ ಬಡ್ಸ್‌ ಹೊಸ ಮಾದರಿಯ ವಿನ್ಯಾಸವನ್ನು ಹೊಂದಿದ್ದು, ಐಪಿಎಕ್ಸ್‌ 7 ವಾಟರ್‌ಪ್ರೂಪ್‌ ಅನ್ನು ಒಳಗೊಂಡಿದೆ. ಅಷ್ಟಕ್ಕೂ ಈ ಇಯರ್‌ಬಡ್ಸ್‌ ವಿನ್ಯಾಸ ಹಾಗೂ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿ.

ಸ್ಯಾಮ್‌ಸಂಗ್‌

ಸದ್ಯ ಸ್ಯಾಮ್‌ಸಂಗ್‌ ನ ಆಡಿಯೋ ಬ್ರ್ಯಾಂಡ್‌ AKG N400 ಇಯರ್‌ಬಡ್ಸ್‌ ಅನ್ನು ಬಿಡುಗಡೆ ಮಾಡಿ್ದು, ಹೊಸ ವಿನ್ಯಾಸವನ್ನ ಒಳಗೊಂಡಿದೆ. ಈ ಇಯರ್‌ಬಡ್ಸ್‌ ಐಪಿಎಕ್ಸ್ 7 ವಾಟರ್‌ ಪ್ರೂಪ್ ಟೆಕ್ನಾಲಜಿಯನ್ನ ಹೊಂದಿದ್ದು, 1 ಮೀಟರ್ ನೀರನ್ನು 30 ನಿಮಿಷಗಳ ಕಾಲ ತಡೆದುಕೊಳ್ಳಬಲ್ಲ ಸಾಮರ್ಥ್ಯವನ್ನ ಒಳಗೊಂಡಿದೆ. ಜೊತೆಗೆ ANC ಟೆಕ್ನಾಜಿ ಹೊಂದಿರುವ ಬ್ಯಾಟರಿ ಹೊಂದಿದ್ದು, ಆನ್‌ ಮಾಡಿದಾಗ 5 ಗಂಟೆಗಳ ಬ್ಯಾಟರಿ ಅವಧಿಯನ್ನು ಮತ್ತು ಆಫ್ ಮಾಡಿದಾಗ ಆರು ಗಂಟೆಗಳವರೆಗೆ ಬಾಳಿಕೆಯನ್ನು ನೀಡುತ್ತದೆ. ಜೊತೆಗೆ ಸಂಪೂರ್ಣವಾಗಿ ಚಾರ್ಜ್ ಮಾಡಲು ಸರಿಸುಮಾರು 2 ಗಂಟೆ ತೆಗೆದುಕೊಳ್ಳುತ್ತದೆ ಮತ್ತು ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ 12 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ.

ಇಯರ್‌ಬಡ್ಸ್‌

ಇನ್ನು ಈ ಇಯರ್‌ಬಡ್ಸ್‌ ANC ಫೀಚರ್ಸ್‌ ಜೊತೆಗೆ ಸ್ಯಾಮ್‌ಸಂಗ್‌ನ ಬಿಕ್ಸ್‌ಬಿ, ಗೂಗಲ್ ಅಸಿಸ್ಟೆಂಟ್ ಮತ್ತು ಸಿರಿಗೆ ಬೆಂಬಲವನ್ನು ನೀಡುವ ಸಾಮರ್ಥ್ಯವನ್ನು ಸಹ ಹೊಂದಿದೆ. ಇದಲ್ಲದೆ N400 ಇಯರ್‌ಬಡ್‌ಗಳು ಟಾಕ್‌ಥ್ರೂ ಮೋಡ್‌ ಅನ್ನು ಹೊಂದಿದ್ದು, ಇದು ಮ್ಯೂಸಿಕ್‌ ಅನ್ನು ಉತ್ತಮ ಅನುಭವ ನಿಡುವಂತೆ ಮಾಡಲಿದೆ. ಇದರಿಂದ ಬಳಕೆದಾರರು ಇಯರ್‌ಬಡ್‌ಗಳನ್ನು ತೆಗೆದುಹಾಕದೆ ಕಂಟಿನ್ಯೂ ಕಮ್ಯೂನಿಕೆಷನ್‌ ನಡೆಸಬಹುದಾಗಿದೆ. ಅಲ್ಲದೆ ಆಂಬಿಯೆಂಟ್ ಅವೇರ್ ಮೋಡ್ ಪರಿಮಾಣವನ್ನು ಕಡಿಮೆ ಮಾಡುತ್ತದೆ ಇದರಿಂದ ಬಳಕೆದಾರರು ಮ್ಯೂಸಿಕ್‌ ಕೇಳುವಾಗ ತಮ್ಮ ಸುತ್ತಮುತ್ತಲಿನ ಬಗ್ಗೆ ಜಾಗೃತರಾಗಿರಬಹುದಾಗಿದೆ.

ನಾಯಿಸ್‌

ಇದಲ್ಲದೆ AKG N400 ನಾಯಿಸ್‌ ಕ್ಯಾನ್ಸೆಲಿಂಗ್‌ ಪ್ರತಿ ಇಯರ್‌ಬಡ್‌ಗೆ ಎರಡು ಮೈಕ್ರೊಫೋನ್‌ಗಳನ್ನು ಹೊಂದಿದೆ ಮತ್ತು ಅಸ್ಪಷ್ಟ-ಮುಕ್ತ ಧ್ವನಿಯನ್ನು ನೀಡುತ್ತದೆ. ಅಲ್ಲದೆ ಅಪ್ಲಿಕೇಶನ್ ಮೂಲಕ ಎಷ್ಟು ಶಬ್ದವನ್ನು ಹೊರಹಾಕಲಾಗುತ್ತದೆ ಎಂಬುದನ್ನು ಸಹ ನಿಯಂತ್ರಿಸಬಹುದಾಗಿದೆ. ಜೊತೆಗೆ ಎಡ ಇಯರ್‌ಬಡ್ ಅನ್ನು ಟ್ಯಾಪ್ ಮಾಡುವುದರಿಂದ ಟಾಕ್-ಥ್ರೂ ಆನ್ ಆಗುವುದರಿಂದ ನಿಮ್ಮ ಸುತ್ತಮುತ್ತಲಿನ ಪ್ರದೇಶಗಳ ಧ್ವನಿಯನ್ನ ನೀವು ಕೇಳಬಹುದು.ಇದಲ್ಲದೆ, ಹಿನ್ನೆಲೆ ಧ್ವನಿಯನ್ನು ಸಹ ತೆಗೆದುಹಾಕಲಾಗುತ್ತದೆ.

AKG

ಸದ್ಯ AKG N 400 ಇಯರ್‌ಬಡ್ಸ್‌ ಕೊರಿಯನ್ ವೆಬ್‌ಸೈಟ್‌ನಲ್ಲಿ ಮಾತ್ರ ಲಭ್ಯವಿದ್ದು, ಇದರ ಬೆಲೆ KRW 2,30,000 (ಸುಮಾರು 14,179 ರೂ.) ಆಗಿದೆ. ಇನ್ನು ಈ ಇಯರ್‌ಬಡ್‌ಗಳು ಕಪ್ಪು, ಬೆಳ್ಳಿ ಮತ್ತು ನೇವಿ ಕಲರ್‌ಗಳ ಆಯ್ಕೆಯಲ್ಲಿ ಲಭ್ಯವಿದೆ.

Best Mobiles in India

English summary
AKG’s newly launched earbuds are available in Black, Blue and Silver colour variants..to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X