ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲಿದೆ ಸ್ಯಾಮ್‌ಸಂಗ್‌ನ ಈ ಸ್ಮಾರ್ಟ್‌ಫೋನ್‌!

|

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ ಕಂಪೆನಿಯ ಫೋನ್‌ಗಳಿಗೆ ಸಿಕ್ಕಾಪಟ್ಟೆ ಕ್ರೇಜ್‌ ಇದೆ. ಹೆಚ್ಚಿನ ಜನರು ಲೈಕ್‌ ಮಾಡುವ ಫೋನ್‌ಗಳಲ್ಲಿ ಸ್ಯಾಮ್‌ಸಂಗ್‌ ಬ್ರ್ಯಾಂಡ್‌ ಕೂಡ ಒಂದಾಗಿದೆ. ಇದೇ ಕಾರಣಕ್ಕೆ ಸ್ಯಾಮ್‌ಸಂಗ್‌ ಕಂಪೆನಿ ಸ್ಮಾರ್ಟ್‌ಫೋನ್‌ಗಳ ಬಿಡುಗಡೆಗೆ ಸ್ಮಾರ್ಟ್‌ಫೋನ್‌ ಪ್ರಿಯರು ಕಾತುರದಿಂದ ಕಾಯುತ್ತಿರುತ್ತಾರೆ. ಸದ್ಯ ಇದೀಗ ಸ್ಯಾಮ್‌ಸಂಗ್‌ ಕಂಪೆನಿಯ ಮುಂದಿನ ಸ್ಮಾರ್ಟ್‌ಫೋನ್‌ ಸರಣಿ ಗ್ಯಾಲಕ್ಸಿ S23 ಫೀಚರ್ಸ್‌ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಭಾರಿ ಸಂಚಲನ ಸೃಷ್ಟಿಸಿದೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಸರಣಿಯ ಫ್ಲ್ಯಾಗ್‌ಶಿಪ್‌ಗಳ ವಿವರ ಬಹಿರಂಗವಾಗಿದೆ. ಈ ಫ್ಯಾಗ್‌ಶಿಪ್‌ಗಳು ಮುಂದಿನ ವರ್ಷ ಫೆಬ್ರವರಿ 1 ರಂದು ಜಾಗತಿಕವಾಗಿ ಬಿಡುಗಡೆಯಾಗಬಹುದು ಎಂದು ವರದಿಯಾಗಿದೆ. ಇನ್ನು ಈ ಸರಣಿಯಲ್ಲಿ ಗ್ಯಾಲಕ್ಸಿ S23, ಗ್ಯಾಲಕ್ಸಿ S23 ಪ್ಲಸ್‌ ಮತ್ತು ಗ್ಯಾಲಕ್ಸಿ S23 ಅಲ್ಟ್ರಾವನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ. ಇದಲ್ಲದೆ ಈ ಎಲ್ಲಾ ಮೂರು ಸ್ಮಾರ್ಟ್‌ಫೋನ್‌ಗಳು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 8 Gen 2 ಚಿಪ್‌ಸೆಟ್‌ನಲ್ಲಿ ರನ್‌ ಆಗಲಿದೆ ಎಂದು ಹೇಳಲಾಗಿದೆ. ಹಾಗಾದ್ರೆ ಈ ಸರಣಿಯ ವಿಶೇಷತೆ ಏನಿರಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹೇಗಿರಲಿದೆ ಗ್ಯಾಲಕ್ಸಿ S23 ಸರಣಿ!

ಹೇಗಿರಲಿದೆ ಗ್ಯಾಲಕ್ಸಿ S23 ಸರಣಿ!

ಐಸ್ ಯೂನಿವರ್ಸ್ ಎಂಬ ಹೆಸರಿನಿಂದ ಪ್ರಸಿದ್ಧವಾದ ಟಿಪ್‌ಸ್ಟರ್‌ ಗ್ಯಾಲಕ್ಸಿ S23 ಸರಣಿಯ ಫೀಚರ್ಸ್‌ ಸೋರಿಕೆ ಮಾಡಿದೆ. ಅದರಂತೆ ಗ್ಯಾಲಕ್ಸಿ S23 ಸರಣಿಯು ಮುಂದಿನ ವರ್ಷದ ಫೆಬ್ರವರಿಗೆ ಎಂಟ್ರಿ ನೀಡಲಿದೆ. ಇದರಲ್ಲಿ ಗ್ಯಾಲಕ್ಸಿ S23 ಸಾಮಾನ್ಯ ಮಾದರಿಗಿಂತ ಗ್ಯಾಲಕ್ಸಿ S23 ಅಲ್ಟ್ರಾ ಬೆಸ್ಟ್‌ ಬಿಲ್ಟ್‌, ನಯವಾದ ದೇಹ ಮತ್ತು SPen ಸ್ಟೈಲಸ್‌ಗಾಗಿ ಮೀಸಲಾದ ಪಾಕೆಟ್ ಅನ್ನು ಒಳಗೊಂಡಿರಲಿದೆ ಎನ್ನಲಾಗಿದೆ. ಅಲ್ಲದೆ ಗ್ಲಾಸ್ ಬಾಡಿ ಬಳಸುವ ಟ್ರೆಂಡ್ ಮುಂದಿನ ವರ್ಷವೂ ಮುಂದುವರಿಯಬಹುದು ಎಂದು ಅಂದಾಜಿಸಲಾಗಿದೆ.

ಸ್ಯಾಮ್‌ಸಂಗ್

ಇನ್ನು ಸ್ಯಾಮ್‌ಸಂಗ್ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಸಾಮಾನ್ಯವಾಗಿ ಹೆಚ್ಚಿನ ವೇಗದ ಚಾರ್ಜಿಂಗ್ ಟೆಕ್ನಾಲಜಿಯನ್ನು ಹೊಂದಿರುವುದಿಲ್ಲ. ಅದು ಗ್ಯಾಲಕ್ಸಿ S23 ಸರಣಿಯಲ್ಲಿಯೂ ಕೂಡ ಮುಂದುವರೆಯುವ ಸಾಧ್ಯತೆಯಿದೆ. ಅದರಂತೆ ಈ ಸರಣಿಯಲ್ಲಿ ಗರಿಷ್ಠ 50W ವೇಗದ ಚಾರ್ಜಿಂಗ್‌ ಟೆಕ್ನಾಲಜಿಯನ್ನು ನೀಡುವ ನಿರೀಕ್ಷೆಯಿದೆ. ಇನ್ನು ಈ ಸರಣಿಯಲ್ಲಿ ಬರುವ ಎಲ್ಲಾ ಮೂರು ಸ್ಮಾರ್ಟ್‌ಫೋನ್‌ಗಳು ಕೂಡ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 2 SoC ಪ್ರೊಸೆಸರ್‌ ಒಳಗೊಂಡಿರುತ್ತವೆ ಎನ್ನಲಾಗಿದೆ. ಇದು ಬಹಳಷ್ಟು ಸಾಮರ್ಥ್ಯಗಳನ್ನು ಅನ್ಲಾಕ್ ಮಾಡುತ್ತದೆ ಎಂಬ ನಿರೀಕ್ಷೆಯಿದೆ.

ವೇಗದ ಪ್ರೊಸೆಸರ್‌? ಅತ್ಯುತ್ತಮ ಕಾರ್ಯದಕ್ಷತೆ?

ವೇಗದ ಪ್ರೊಸೆಸರ್‌? ಅತ್ಯುತ್ತಮ ಕಾರ್ಯದಕ್ಷತೆ?

ಈ ಪ್ರೊಸೆಸರ್‌ ನಿಮಗೆ ವೇಗವಾದ ಮತ್ತು ಸ್ಥಿರವಾದ ಇಂಟರ್ನೆಟ್ ಬೆಂಬಲಕ್ಕಾಗಿ ವೈ-ಫೈ 7 ಟೆಕ್ನಾಲಜಿಯನ್ನು ಬೆಂಬಲಿಸಲಿದೆ. ಸ್ಯಾಮ್‌ಸಂಗ್ ಕನೆಕ್ಟಿವಿಟಿ ಆಯ್ಕೆಯನ್ನು ವೈ-ಫೈ 6e ಗೆ ಸೀಮಿತವಾಗಿರಿಸುತ್ತದೆ ಎಂದು ಹೇಳಲಾಗಿದೆ. ಜೊತೆಗೆ ಈ ಚಿಪ್‌ಸೆಟ್ ಗೇಮ್‌ಗಳಲ್ಲಿ ರೇ-ಟ್ರೇಸಿಂಗ್ ಟೆಕ್ನಾಲಜಿಯನ್ನು ಅನ್‌ಲಾಕ್ ಮಾಡುತ್ತದೆ. ಇದರಿಂದ ಸ್ಯಾಮ್‌ಸಂಗ್‌ನ ಹೈ-ರೆಸ್ ಡಿಸ್‌ಪ್ಲೇಯಲ್ಲಿ ಗೇಮಿಂಗ್ ಅನುಭವವನ್ನು ಗಣನೀಯವಾಗಿ ಸುಧಾರಿಸಬಹುದು ಎಂದು ಹೇಳಲಾಗಿದೆ.

ಡಿಸ್‌ಪ್ಲೇ ವಿನ್ಯಾಸದಲ್ಲಿನ ನಿರೀಕ್ಷೆ ಏನು?

ಡಿಸ್‌ಪ್ಲೇ ವಿನ್ಯಾಸದಲ್ಲಿನ ನಿರೀಕ್ಷೆ ಏನು?

ಗ್ಯಾಲಕ್ಸಿ S23 ಸರಣಿಯಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಸ್ಮಾರ್ಟ್‌ಫೋನ್‌ 6.1 ಇಂಚಿನ ಡಿಸ್‌ಪ್ಲೇ ಹೊಂದಿರುವ ಸಾಧ್ಯತೆಯಿದೆ. ಆದರೆ ಗ್ಯಾಲಕ್ಸಿ S23 ಪ್ಲಸ್ ಮತ್ತು ಗ್ಯಾಲಕ್ಸಿ S23 ಅಲ್ಟ್ರಾ ಮಾದರಿಗಳು 6.7 ಇಂಚಿನ ಬಿಗ್‌ ಡಿಸ್‌ಪ್ಲೇಯನ್ನು ಹೊಂದಿರಬಹುದು. ಇದಲ್ಲದೆ ಈ ಡಿಸ್‌ಪ್ಲೇಗಳಲ್ಲಿ ವಿಷಯಕ್ಕೆ ಅನುಗುಣವಾಗಿ ರಿಫ್ರೆಶ್ ರೇಟ್‌ ಅನ್ನು ಸೆಟ್‌ ಮಾಡಲುಇವುಗಳು LTPO ಪ್ಯಾನೆಲ್ ಅನ್ನು ಹೊಂದಿರುವ ನಿರೀಕ್ಷೆಯಿದೆ. ಅಲ್ಲದೆ ಫೋನ್‌ನಲ್ಲಿ ಸೆಲ್ಫಿ ಕ್ಯಾಮರಾಗಾಗಿ ಹೋಲ್-ಪಂಚ್ ಕಟೌಟ್ ನೀಡಬಹುದು. ಎಲ್ಲದಕ್ಕಿಂತ ಹೆಚ್ಚಾಗಿ S23 ಅಲ್ಟ್ರಾ ಫೋನ್‌ 200 ಮೆಗಾಪಿಕ್ಸೆಲ್ ಸೆನ್ಸಾರ್‌ ಕ್ಯಾಮೆರಾ ಹೊಂದುವ ನಿರೀಕ್ಷೆಯಿದೆ.

Best Mobiles in India

English summary
Samsung's next-generation Galaxy S23 series likely to launch on February 1

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X