ಭಾರತದಲ್ಲಿ ಸ್ಯಾಮ್‌ಸಂಗ್‌ ಸ್ಮಾರ್ಟ್‌ ಮಾನಿಟರ್‌ M8 ಬಿಡುಗಡೆ! ಬೆಲೆ ಎಷ್ಟು?

|

ದಕ್ಷಿಣ ಕೊರಿಯಾದ ಟೆಕ್‌ ದಿಗ್ಗಜ ಸ್ಯಾಮ್‌ಸಂಗ್‌ ಟೆಕ್‌ ವಲಯದಲ್ಲಿ ಪ್ರಮುಖ ಬ್ರ್ಯಾಂಡ್‌ ಆಗಿ ಗುರುತಿಸಿಕೊಂಡಿದೆ. ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಹಲವು ವೈವಿಧ್ಯಮಯ ಗ್ಯಾಜೆಟ್ಸ್‌ಗಳನ್ನು ಪರಿಚಯಿಸುವ ಮೂಲಕ ತನ್ನದೇ ಆದ ಪ್ರಾಬಲ್ಯವನ್ನು ಸಾಧಿಸಿದೆ. ಸದ್ಯ ಇದೀಗ ಭಾರತದ ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್ ಮಾನಿಟರ್ M8 ಅನ್ನು ಬಿಡುಗಡೆ ಮಾಡಿದೆ. ಇದು ತಡೆರಹಿತ ಕೆಲಸಕ್ಕಾಗಿ PC-ಕಡಿಮೆ ಅನುಭವವನ್ನು ನೀಡುವುದಲ್ಲದೆ, ಬಳಕೆದಾರರಿಗೆ ವಿವಿಧ OTT ಸೇವೆಗಳನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ.

ಸ್ಮಾರ್ಟ್‌ ಮಾನಿಟರ್‌

ಹೌದು, ಸ್ಯಾಮ್‌ಸಂಗ್‌ ಕಂಪೆನಿ ಭಾರತದಲ್ಲಿ ಸ್ಮಾರ್ಟ್‌ ಮಾನಿಟರ್‌ M8 ಅನ್ನು ಲಾಂಚ್‌ ಮಾಡಿದೆ. ಇದು Tizen OS ನಲ್ಲಿ ಕಾರ್ಯನಿರ್ವಹಿಸುವುದರಿಂದ ಮತ್ತು IR ರಿಮೋಟ್‌ನೊಂದಿಗೆ ಬರುವುದರಿಂದ ಸ್ಮಾರ್ಟ್ ಟಿವಿಯಂತೆ ಬಳಸುವುದಕ್ಕೆ ಕೂಡ ಅವಕಾಶ ದೊರೆಯಲಿದೆ. ಇದಲ್ಲದೆ ಈ ಸ್ಮಾರ್ಟ್‌ ಮಾನಿಟರ್‌ ಮ್ಯಾಗ್ನೆಟಿಕ್ ಮತ್ತು ತೆಗೆಯಬಹುದಾದ ಸ್ಲಿಮ್‌ಫಿಟ್ ಕ್ಯಾಮ್ ಅನ್ನು ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ ಮಾನಿಟರ್‌ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌ ಸ್ಮಾರ್ಟ್‌ ಮಾನಿಟರ್‌ 32-ಇಂಚಿನ 4K ಅಲ್ಟ್ರಾ HD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ M8 99% sRGB ಕಲರ್‌, 400 ನಿಟ್ಸ್‌ ಬ್ರೈಟ್‌ನೆಸ್‌, HDR 10+ ಮತ್ತು 1.07 ಶತಕೋಟಿ ಬಣ್ಣಗಳನ್ನು ಬೆಂಬಲಿಸುವ 60Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ ಮಾನಿಟರ್ Tizen OS ನಲ್ಲಿ ಕಾರ್ಯನಿರ್ವಹಿಸುವುದರಿಂದ ಮತ್ತು IR ರಿಮೋಟ್‌ನೊಂದಿಗೆ ಬರುವುದರಿಂದ ಸ್ಮಾರ್ಟ್ ಟಿವಿಯಂತೆ ಬಳಸಬಹುದಾಗಿದೆ.

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌ ಸ್ಮಾರ್ಟ್‌ ಮಾನಿಟರ್‌ M8 ಮ್ಯಾಗ್ನೆಟಿಕ್ ಮತ್ತು ರಿಮೋವ್‌ ಮಾಡಬಹುದಾದ ಸ್ಲಿಮ್‌ಫಿಟ್ ಕ್ಯಾಮ್ ಅನ್ನು ಹೊಂದಿದೆ. ಈ ಸ್ಲಿಮ್‌ಫಿಟ್ ಕ್ಯಾಮೆರಾವನ್ನು ಮಾನಿಟರ್‌ಗೆ ಸುಲಭವಾಗಿ ಜೋಡಿಸಬಹುದಾಗಿದ್ದು, ಇದು ಸುತ್ತಲೂ ಮೂವ್‌ ಮಾಡಬಹುದಾಗಿದೆ. ಇನ್ನು ಈ ಸ್ಮಾರ್ಟ್ ಮಾನಿಟರ್ M8 ಸ್ಮಾರ್ಟ್ ಥಿಂಗ್ಸ್ ಹಬ್ ಎಂಬ ಎನ್ನುವ IoT ಹಬ್ ಅನ್ನು ಹೊಂದಿದೆ, ಇದರಲ್ಲಿ ಬಳಕೆದಾರರು ತಮ್ಮ ಎಲ್ಲಾ IoT ಡಿವೈಸ್‌ಗಳನ್ನು ವಾಯರ್‌ಲೆಸ್‌ ಮೂಲಕ ಕನೆಕ್ಟ್‌ ಮಾಡಬಹುದಾಗಿದೆ.

ಮಾನಿಟರ್

ಇನ್ನು ಈ ಮಾನಿಟರ್ ಕನೆಕ್ಟಿವಿಟ ಆಯ್ಕೆಗಳಲ್ಲಿ ಮಾನಿಟರ್ ಮೈಕ್ರೋ HDMI ಪೋರ್ಟ್ ಮತ್ತು 65W ರಿವರ್ಸ್ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿರುವ ಎರಡು USB-C ಪೋರ್ಟ್‌ಗಳನ್ನು ಒಳಗೊಂಡಿದೆ. ಇದಲ್ಲದೆ ಸ್ಮಾರ್ಟ್‌ ಮಾನಿಟರ್‌ನಲ್ಲಿ ನೀಡಲಾದ ವಾಯರ್‌ಲೆಸ್‌ ಕನೆಕ್ಟಿವಿಟಿ ಬ್ಲೂಟೂತ್ 4.2 ಮತ್ತು ವೈಫೈ 5 ಅನ್ನು ಒಳಗೊಂಡಿದೆ. ಜೊತೆಗೆ ಈ ಸ್ಮಾರ್ಟ್ ಮಾನಿಟರ್ ಎರಡು 5W ಸ್ಪೀಕರ್‌ಗಳನ್ನು ಸಹ ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸ್ಮಾರ್ಟ್ ಮಾನಿಟರ್ M8 59,999ರೂ ಬೆಲೆಯನ್ನು ಹೊಂದಿದೆ. ಇನ್ನು ಈ ಮಾನಿಟರ್‌ ಸನ್‌ಸೆಟ್ ಪಿಂಕ್ ಮತ್ತು ಸ್ಪ್ರಿಂಗ್ ಗ್ರೀ ಕಲರ್‌ ಆಯ್ಕೆಗಳಲ್ಲಿ ಬರಲಿದೆ. ಇದು ಇದೇ ಜೂನ್ 15, 2022 ರಿಂದ ಭಾರತದಲ್ಲಿ ಸ್ಯಾಮ್‌ಸಂಗ್‌ನ ಅಧಿಕೃತ ಆನ್‌ಲೈನ್ ಸ್ಟೋರ್ ಸ್ಯಾಮ್‌ಸಂಗ್‌ ಶಾಪ್, ಅಮೆಜಾನ್‌ ಮತ್ತು ಎಲ್ಲಾ ಪ್ರಮುಖ ರಿಟೇಲ್‌ ಸ್ಟೋರ್‌ಗಳಲ್ಲಿ ಲಭ್ಯವಾಗಲಿದೆ. ಆದರೆ ಈ ಸ್ಮಾರ್ಟ್‌ ಮಾನಿಟರ್‌ನ ಡೇಲೈಟ್ ಬ್ಲೂ ಮತ್ತು ವಾರ್ಮ್ ವೈಟ್ ರೂಪಾಂತರಗಳು ಈ ವರ್ಷದ ನಂತರ ಲಭ್ಯವಾಗಲಿದೆ.
ಇನ್ನು ಸ್ಮಾರ್ಟ್ ಮಾನಿಟರ್ M8 ಅನ್ನು ಇಂದಿನಿಂದ ಮುಂಗಡ ಬುಕಿಂಗ್ ಮಾಡಬಹುದಾಗಿದೆ. ಮುಂಗಡ ಬುಕ್ಕಿಂಗ್‌ ಮಾಡುವ ಗ್ರಾಹಕರು 11,999ರೂ. ಮೌಲ್ಯದ ಗ್ಯಾಲಕ್ಸಿ ಬಡ್ಸ್‌ 2 ಮತ್ತು 3,499ರೂ. ಮೌಲ್ಯದ ಸ್ಯಾಮ್‌ಸಂಗ್‌ ಸ್ಮಾರ್ಟ್ ವಾಯರ್‌ಲೆಸ್ ಕೀಬೋರ್ಡ್ ಅನ್ನು 3,000ರೂ. ತ್ವರಿತ ಕಾರ್ಟ್ ರಿಯಾಯಿತಿಯೊಂದಿಗೆ ಉಚಿತವಾಗಿ ಪಡೆಯಬಹುದಾಗಿದೆ.

Best Mobiles in India

English summary
Consumers pre-booking Smart Monitor M8 from today will get Galaxy Buds2 worth Rs 11,999 and Samsung smart wireless keyboard worth Rs 3,499 absolutely free.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X