ಸ್ಯಾಮ್‌ಸಂಗ್‌ ನಿಂದ 'ಬಿಕ್ಸ್‌ ಬಿ' ಸೇವೆ ಸ್ಥಗಿತ.!

|

ಟೆಕ್‌ ಲೋಕದ ದಿಗ್ಗಜ ಕಂಪೆನಿಗಳಲ್ಲಿ ಒಂದಾದ ಸ್ಯಾಮ್‌ಸಂಗ್‌ ಕಂಪೆನಿಯು ತನ್ನ ಬಿಕ್ಸ್‌ ಬಿ (bixby) ಡಿಜಿಟಲ್‌ ಅಸಿಸ್ಟನ್ಸ್‌ ತಂತ್ರಜ್ಞಾನದಿಂದ ಗುರ್ತಿಸಿಕೊಂಡಿದೆ. ಈಗ ಸ್ಯಾಮ್‌ಸಂಗ್‌ ಈ ಡಿಜಿಟಲ್‌ ಅಸಿಸ್ಟೆಂಟ್‌ ಸೇವೆಯನ್ನ ನೌಗಾಟ್‌ ,ಒರಿಯಾ ಆವೃತ್ತಿಗಳಲ್ಲಿ ಕಡಿತ ಮಾಡಲು ಸ್ಯಾಮ್‌ಸಂಗ್‌ ನಿರ್ಧಾರ ಮಾಡಿದೆ. ಅಂದಹಾಗೇ ಬಿಕ್ಸ್‌ ಬಿ ಡಿಜಿಟಲ್‌ ಅಸಿಸ್ಟನ್ಸ್‌ 2017ರಲ್ಲಿ ಪ್ರಾರಂಭಿಸಿತ್ತು.

ಸ್ಯಾಮ್‌ಸಂಗ್‌

ಹೌದು ಸ್ಯಾಮ್‌ಸಂಗ್‌ ಸಂಸ್ಥೆಯೇ ಅಭಿವೃದ್ಧಿಪಡಿಸಿದ್ದ ಬಿಕ್ಸ್ಬೈ (bixby)ಡಿಜಿಟಲ್ ಅಸಿಸ್ಟನ್ಸ್ ತಂತ್ರಜ್ಞಾನವನ್ನು ಗ್ಯಾಲಕ್ಸಿ ಎಸ್8 ಹಾಗೂ ಎಸ್8 ಪ್ಲಸ್ ಮಾದರಿಗಳಲ್ಲಿ ನೀಡಲಾಗಿತ್ತು. ಇದು ಆಪಲ್ನ ಸಿರಿ ಹಾಗೂ ಮೈಕ್ರೋಸಾಫ್ಟ್ ಕೋರ್ಟನಾಗಳಿಗೆ ಪೈಪೋಟಿಯನ್ನು ನೀಡಲಿದೆ ಎಂದೇ ಹೇಳಲಾಗಿತ್ತು. ಅಲ್ಲದೆ ತನ್ನ ಪ್ರತಿಸ್ಪರ್ಧಿಗಳಂತೆ ಅನೇಕ ಫೀಚರ್ಗಳನ್ನು ಬಿಕ್ಸ್ಬೈ ಒಳಗೊಂಡಿದ್ದಲ್ಲದೆ. ವಾಯ್ಸ್ ಅಸಿಸ್ಟನ್ಸ್ ಸೇವೆಯು ಪ್ರಮುಖ ವೈಶಿಷ್ಟ್ಯವಾಗಿತ್ತು.

ಗ್ಯಾಲಕ್ಸಿ ನೋಟ್ 9

ಇನ್ನು ಕಳೆದ ವರ್ಷ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ನೋಟ್ 9 ಬಿಡುಗಡೆ ಮಾಡಿತ್ತು. ಇದರಲ್ಲಿ ಇನ್ನು ಹೆಚ್ಚಿನ ಸುಧಾರಣೆಯ ಬಿಕ್ಸ್‌ಬಿ ವಾಯ್ಸ್‌ ಆಪ್ಲಿಕೇಶನ್‌ ಪರಿಷಯಿಸಿತ್ತು. ಇದು ಹೊಸ ಇಂಟರ್ಫೇಸ್ ಅನ್ನು ತಂದಿತು. ಇದರ ಮೂಲಕ ಬಿಕ್ಷ್‌ ಬಿ ಸಮಾನ್ಯ ಭಾಷೆಯನ್ನು ಅರ್ಥೈಸಿಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ಆದ್ರೆ ಬಿಕ್ಸ್‌ ಬಿ ಆಪ್ಲಿಕೇಶನ್‌ ಸ್ಯಾಮ್‌ಸಂಗ್‌ನ ನೌಗಾಟ್‌,ಒರಿಯಾ ಆವೃತ್ತಿಗಳಲ್ಲಿ ಕಾರ್ಯನಿರ್ವಹಿಸುವಾಗ ಆಗಾಗ ಅಡಚಣೆಯನ್ನ ಎದುರಿಸುತ್ತಿತ್ತು. ಈ ಕಾರಣಕ್ಕಾಗಿ ಬಿಕ್ಸ್‌ಬಿಯನ್ನ ಸ್ಥಗಿತ ಮಾಡಲು ಸ್ಯಾಮ್‌ಸಂಗ್‌ ಮುಂದಾಗಿದೆ.

ಬಿಕ್ಸ್‌ ಬಿ

ಹಾಗಂತ ಬಿಕ್ಸ್‌ ಬಿ ವಾಯ್ಸ್‌ ಆಪ್ಲಿಕೇಶನ್‌ ಸ್ಯಾಮ್‌ಸಂಗ್‌ನ ಎಲ್ಲಾ ಆವೃತ್ತಿಗಳಲ್ಲಿ ಮತ್ತು ಟ್ಯಾಬ್ಲೆಟ್‌ಗಳಲ್ಲಿ ಇರಲಿಲ್ಲ. ಕೆಲವೇ ಕೆಲವು ಆವೃತ್ತಿಗಳಲ್ಲಿ ಮಾತ್ರ ಬಿಕ್ಸ್‌ಬಿ ಲಭ್ಯವಿದೆ. ಅಡ್ರಾಯ್ಡ್‌ ನೌಗಾಟ್‌ ಮತ್ತು ಆಂಡ್ರಾಯ್ಡ್‌ ಓರಿಯಾ ಸಾಧನಗಳಲ್ಲಿ ಬಿಕ್ಸ್‌ ಬಿ ಬ್ರೀಫಿಂಗ್‌ ಅವಕಾಶವನ್ನ ನೀಡಲಾಗಿತ್ತು. ಸದ್ಯ ತನ್ನ ಬಳಕೆದಾರರಿಗೆ ಹೆಚ್ಚಿನ ಖರ್ಚುಗಳನ್ನು ತಪ್ಪಿಸಲು ಬಿಕ್ಸ್‌ಬಿ ಸೇವೆಯನ್ನ ಕಡಿತ ಮಾಡಲು ಸ್ಯಾಮ್‌ಸಂಗ್‌ ಪ್ಲಾನ್‌ ಮಾಡಿಕೊಂಡಿದೆ.

 ಗ್ಯಾಲಕ್ಸಿ ಎಸ್ 9,

ಹಾಗೇ ನೋಡಿದ್ರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 9, ಗ್ಯಾಲಕ್ಸಿ ಎಸ್ 9 +, ಗ್ಯಾಲಕ್ಸಿ ಎಸ್ 8, ಗ್ಯಾಲಕ್ಸಿ ಎಸ್ 8 +, ಗ್ಯಾಲಕ್ಸಿ ಎಸ್ 8 ಆಕ್ಟಿವ್, ಗ್ಯಾಲಕ್ಸಿ ನೋಟ್ 8, ಮತ್ತು ಗ್ಯಾಲಕ್ಸಿ ಎ 9 2018 ಸ್ಮಾರ್ಟ್‌ಪೋನ್‌ಗಳಲ್ಲಿ ಬಿಕ್ಸ್‌ಬಿ ಆಪ್ಲಿಕೇಶನ್‌ ಸೇವೆ ಸ್ಥಗಿತಗೊಳ್ಳಲಿದೆ. ಅಡ್ರಾಯ್ಡ್‌ ಅಪ್ಡೇಟ್‌ ಮಾಡಿಕೊಳ್ಳದ ಬಳಕೆದಾರರಿಗೆ ಇದರಿಂದ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಸದ್ಯ ಇದರ ಬಗ್ಗೆ ಸ್ಯಾಮ್‌ಸಂಗ್‌ ಕಂಪೆನಿ ಇನ್ನು ಅಧಿಕೃತ ಪ್ರಕಟಣೆಯನ್ನು ಮಾಡಿಲ್ಲ. ಆದರೆ ಇನ್ನು ಕೆಲವೇ ದಿನಗಳಲ್ಲಿ ಇದರ ಬಗ್ಗೆ ಸ್ಯಾಮ್‌ಸಂಗ್‌ ನಿಂದ ಅಧಿಕೃತ ಮಾಹಿತಿ ಹೊರಬರುವ ನಿರೀಕ್ಷೆಯಿದೆ.

Most Read Articles
Best Mobiles in India

English summary
Samsung is reportedly ending support for Bixby Voice on Android phones running Nougat or Oreo versions. Bixby Voice is the voice assistant part of the Samsung's digital assistant that was launched in 2017. Bixby Voice isn't available on all Samsung phones and tablets and many mid-range devices only include Bixby Home support.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X