ಸ್ಯಾಮ್‌ಸಂಗ್‌ ಸಂಸ್ಥೆಯಿಂದ ಸ್ಪೇಸ್‌ಮ್ಯಾಕ್ಸ್ ಫ್ಯಾಮಿಲಿ ಹಬ್ ಪ್ರಾರಂಭ!

|

ಸ್ಮಾರ್ಟ್‌ಫೋನ್‌ ದಿಗ್ಗಜ ಸ್ಯಾಮ್‌ಸಂಗ್‌ ಕಂಪೆನಿ ಈಗಾಗಲೇ ಟೆಕ್‌ ವಲಯದಲ್ಲಿ ತನ್ನದೇ ಆದ ಹೊಸ ಮಾದರಿಯ ಪ್ರಾಡಕ್ಟ್‌ಗಳನ್ನ ಪರಿಚಯಿಸುವ ಮೂಲಕ ತನ್ನ ಸ್ಥಾನ ಭದ್ರ ಪಡಿಸಿಕೊಂಡಿದೆ. ತನ್ನ ವಿವಿದ ಮಾದರಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಸ್ಮಾರ್ಟ್‌ಫೋನ್‌ ಪ್ರಿಯರ ನೆಚ್ಚಿನ ಬ್ರಾಂಡ್‌ ಆಗಿದೆ. ಸದ್ಯ ಈಗಾಗಲೇ ತನ್ನ ವೈವಿಧ್ಯಮಯ ಪ್ರಾಡಕ್ಟ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ ಸ್ಯಾಮ್‌ಸಂಗ್‌ ತನ್ನ ಸ್ಪೇಸ್‌ಮ್ಯಾಕ್ಸ್ ಫ್ಯಾಮಿಲಿ ಹಬ್ ರೆಫ್ರಿಜರೇಟರ್ ಅನ್ನು ಪರಿಚಯಿಸಿದೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಕಂಪೆನಿ ತನ್ನ ಇಂಟರ್‌ನೆಟ್ ಆಫ್ ಥಿಂಗ್ಸ್ (IOT) ಪ್ರಾಡಕ್ಟ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಸದ್ಯ ಸ್ಪೇಸ್‌ಮ್ಯಾಕ್ಸ್ ಫ್ಯಾಮಿಲಿ ಹಬ್ ರೆಫ್ರಿಜರೇಟರ್ ಅನ್ನು ಪರಿಚಯಿಸಿದ್ದು, ಇದು ನಿಮ್ಮ ಯೋಜನೆಯನ್ನು ಸ್ವಯಂಚಾಲಿತಗೊಳಿಸುವ ಫೀಚರ್ಸ್‌ಗಳನ್ನ ಒಳಗೊಂಡಿದೆ ಎಂದು ಹೇಳಲಾಗ್ತಿದೆ. ಅಲ್ಲದೆ ಈ ರೆಫ್ರಿಜರೇಟರ್ ಒಳಗೆ ಟಿವಿ ಪರದೆಯ್ನನ ಅಳವಡಿಸಲಾಗಿದ್ದು, ನೀವು ಎಲ್ಲಿಂದಲಾದರೂ ಟಿವಿ ವೀಕ್ಷಿಸಲು ನಿಮಗೆ ಅವಕಾಶ ಮಾಡಿಕೊಡುತ್ತದೆ ಮತ್ತು ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ನಿಮ್ಮ ಮನೆಯಲ್ಲಿರುವ ಇತರ ಸ್ಮಾರ್ಟ್ ಉಪಕರಣಗಳೊಂದಿಗೆ ಸಂಪರ್ಕ ಸಾಧಿಸುತ್ತದೆ. ಅಷ್ಟಕ್ಕೂ ಈ ಪ್ರಾಡಕ್ಟ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಯಾಮ್‌ಸಂಗ್‌

ಇನ್ನು ಸ್ಯಾಮ್‌ಸಂಗ್‌ ಕಂಪೆನಿಯ ಸ್ಪೇಸ್‌ಮ್ಯಾಕ್ಸ್ ಫ್ಯಾಮಿಲಿ ಹಬ್ ರೆಫ್ರಿಜರೇಟರ್ ಉತ್ತಮವಾದ ಫೀಚರ್ಸ್‌ಗಳನ್ನ ಹೊಂದಿದೆ. ಅಲ್ಲದೆ ಅಡುಗೆಮನೆಯಲ್ಲಿ ರೆಫ್ರಿಜರೇಟರ್‌ನ ಮನರಂಜನಾ ಪರದೆಯಲ್ಲಿ ನಿಮ್ಮ ನೆಚ್ಚಿನ ಟಿವಿ ಕಾರ್ಯಕ್ರಮವನ್ನು ಸಹ ನೀವು ವೀಕ್ಷಿಸಬಹುದು. ಜೊತೆಗೆ ಈ ಸ್ಪೇಸ್‌ಮ್ಯಾಕ್ಸ್ ಫ್ಯಾಮಿಲಿ ಹಬ್ ರೆಫ್ರಿಜರೇಟರ್‌ನಲ್ಲಿನ ಹೋಮ್ ಕಂಟ್ರೋಲ್ ಫೀಚರ್ಸ್‌ ಅನ್ನು ಒಳಗೊಂಡಿದೆ. ಅಲ್ಲದೆ ಬಳಕೆದಾರರು ತಮ್ಮ ಸಂಪರ್ಕಿತ ಡಿವೈಸ್‌ಗಳಾದ ಸ್ಯಾಮ್‌ಸಂಗ್ ಫ್ಲೆಕ್ಸ್‌ವಾಶ್ ಕ್ಲಿನಿಂಗ್‌ ಮೆಷಿನ್‌, ಮತ್ತು ಫ್ಯಾಮಿಲಿ ಹಬ್ ಪರದೆಯಿಂದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳನ್ನು ನಿಯಂತ್ರಿಸಲು ಮತ್ತು ಮೇಲ್ವಿಚಾರಣೆ ಮಾಡಲು ಅವಕಾಶವನ್ನ ನೀಡಲಿದೆ.

ರೆಫ್ರಿಜರೇಟರ್‌

ಇದಲ್ಲದೆ ಈ ರೆಫ್ರಿಜರೇಟರ್‌ ಆಹಾರ ನಿರ್ವಹಣಾ ಫೀಚರ್ಸ್‌ ಫ್ರಿಜ್ ಅನ್ನು ನಿಜವಾಗಿ ತೆರೆಯದೆ ಒಳಗೆ ನೋಡಲು ನಿಮಗೆ ಅನುಮತಿಸುತ್ತದೆ, ಇದರಿಂದಾಗಿ ನೀವು ಮರುಪ್ರಾರಂಭಿಸಬೇಕಾದದ್ದು ನಿಮಗೆ ತಿಳಿದಿರುತ್ತದೆ. ಅಲ್ಲದೆ ಇದರಲ್ಲಿ ನೀವು ಬಿಕ್ಸ್‌ಬಿಯನ್ನು ಪರದೆಯ ಮೇಲೆ ಎಳೆಯಲು ಅವಕಾಶವನ್ನು ನೀಡಲಾಗಿದೆ. ಇದಲ್ಲದೆ ಈ ಫ್ರಿಜ್ ಪ್ರೀಮಿಯಂ ಬ್ಲ್ಯಾಕ್ ಮ್ಯಾಟ್ ಫಿನಿಶ್‌ನಲ್ಲಿ 657-ಲೀಟರ್ ಸಾಮರ್ಥ್ಯದೊಂದಿಗೆ ಬರುತ್ತದೆ. ಜೊತೆಗೆ ಪ್ಲ್ಯಾನರ್ ವೈಶಿಷ್ಟ್ಯವು ನೀವು ಹೊಂದಿಸಿದ ಆಹಾರದ ಆದ್ಯತೆಗಳ ಆಧಾರದ ಮೇಲೆ ಸ್ಮಾರ್ಟ್ ಪಾಕವಿಧಾನಗಳನ್ನು ಶಿಫಾರಸು ಮಾಡಲಿದೆ, ಜೊತೆಗೆ ನಿಮಗೆ ಅಗತ್ಯವಿರುವ ಎಲ್ಲಾ ಸರಿಯಾದ ಪದಾರ್ಥಗಳೊಂದಿಗೆ ನಿಮ್ಮ ಶಾಪಿಂಗ್ ಪಟ್ಟಿಯನ್ನು ಸಹ ಸಿದ್ಧಪಡಿಸುತ್ತದೆ.

ಸ್ಪೇಸ್‌ಮ್ಯಾಕ್ಸ್

ಇನ್ನು ಸ್ಪೇಸ್‌ಮ್ಯಾಕ್ಸ್ ಫ್ಯಾಮಿಲಿ ಹಬ್ 21.5 ಇಂಚಿನ FHD ಟಚ್ ಸ್ಕ್ರೀನ್ ಡಿಸ್‌ಪ್ಲೇಯೊಂದಿಗೆ 25ವ್ಯಾಟ್ ಸ್ಪೀಕರ್‌ಗಳನ್ನು ಹೊಂದಿದೆ. ಈ ಫ್ರಿಜ್ ಪ್ರೀಮಿಯಂ ಬ್ಲ್ಯಾಕ್ ಮ್ಯಾಟ್ ಫಿನಿಶ್‌ನಲ್ಲಿ 657-ಲೀಟರ್ ಸಾಮರ್ಥ್ಯದೊಂದಿಗೆ ಬರಲಿದೆ. ಇನ್ನು ಈ ಪ್ರಾಡಕ್ಟ್‌ ಫ್ಲಿಪ್‌ಕಾರ್ಟ್, ಸ್ಯಾಮ್‌ಸಂಗ್.ಕಾಮ್, ರಿಲಯನ್ಸೆಡಿಜಿಟಲ್.ಇನ್, ಕ್ರೋಮಾ.ಕಾಮ್ ಮತ್ತು ವಿಜಯ್ಸೇಲ್ಸ್.ಕಾಂನಲ್ಲಿ ಜುಲೈ 13 ರಿಂದ ಜುಲೈ 26, 2020 ರವರೆಗೆ ಪ್ರಿ ಬುಕಿಂಗ್‌ಗೆ ಲಭ್ಯವಿರಲಿದ್ದು, ಇದರ ಬೆಲೆ 1,96,990ರೂ ಎಂದು ಹೇಳಲಾಗ್ತಿದೆ. ಜೊತೆಗೆ ಸ್ಪೇಸ್‌ಮ್ಯಾಕ್ಸ್ ಫ್ಯಾಮಿಲಿ ಹಬ್ ತನ್ನ ಡಿಜಿಟಲ್ ಇನ್ವರ್ಟರ್ ಟೆಕ್ನಾಲಜಿ ಸಂಕೋಚಕದಲ್ಲಿ 10 ವರ್ಷಗಳ ಖಾತರಿಯೊಂದಿಗೆ ಬರುತ್ತದೆ.

Most Read Articles
Best Mobiles in India

English summary
The SpaceMax Family Hub Refrigerator comes with features that automate meal planning, to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X