LCD ಬ್ಯುಸಿನೆಸ್‌ ಸ್ಟಾಪ್‌ ಮಾಡಲು ಮುಂದಾದ ಸ್ಯಾಮ್‌ಸಂಗ್‌ !

|

ಟೆಕ್‌ ದೈತ್ಯ ಸ್ಯಾಮ್‌ಸಂಗ್‌ ಕಂಪೆನಿ ಎಲ್‌ಸಿಡಿ ಡಿಸ್‌ಪ್ಲೇ ಬ್ಯುಸಿನೆಸ್‌ ಅನ್ನು ಸ್ಟಾಪ್‌ ಮಾಡಲು ಮುಂದಾಗಿದೆ. ಎಲ್‌ಸಿಡಿ ಡಿಸ್‌ಪ್ಲೇಗೆ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಕುಸಿದಿರುವುದರಿಂದ ಹೊಸ ಟೆಕ್ನಾಲಜಿಯ ಡಿಸ್‌ಪ್ಲೇ ತಯಾರಿಕೆಗೆ ಸ್ಯಾಮ್‌ಸಂಗ್‌ ಮುಂದಾಗಿದೆ. ಪ್ರಸ್ತುತ ಸ್ಮಾರ್ಟ್‌ಫೋನ್‌ಗಳಲ್ಲಿ OLED ಡಿಸ್‌ಪ್ಲೇ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಇದೇ ಕಾರಣಕ್ಕೆ ಸ್ಯಾಮ್‌ಸಂಗ್‌ ಕಂಪೆನಿ OLED ಮತ್ತು ಕ್ವಾಂಟಮ್ ಡಾಟ್ (QD) ಡಿಸ್‌ಪ್ಲೇಗಳನ್ನು ತಯಾರಿಸುವ ಕಡೆಗೆ ಹೆಚ್ಚಿನ ಗಮನ ನೀಡಲು ಮುಂದಾಗಿದೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಕಂಪೆನಿ ಇದೇ ವರ್ಷ ತನ್ನ ಎಲ್‌ಸಿಡಿ ಬ್ಯುಸಿನೆಸ್‌ ಅನ್ನು ಮುಚ್ಚಲಿದೆ. ಎಲ್‌ಸಿಡಿ ಪ್ಯಾನಲ್‌ಗಳು ಇತರೆ ಪ್ಯಾನಲ್‌ಗಳಿಗೆ ಪೈಪೋಟಿ ನೀಡುವಲ್ಲಿ ಸೋತಿರುವುದರಿಂದ ಸ್ಯಾಮ್‌ಸಂಗ್‌ ಈ ನಿರ್ಧಾರಕ್ಕೆ ಬಂದಿದೆ. 2014ಕ್ಕೆ ಹೋಲಿಸಿದರೆ ಈ ವರ್ಷ ಎಲ್‌ಸಿಡಿ ಪ್ಯಾನಲ್‌ಗಳ ಬೆಲೆ ಸೂಚ್ಯಂಕವು 36.6 ಕ್ಕೆ ಇಳಿಯಲಿದೆ ಎನ್ನಲಾಗಿದೆ. ಇದೇಲ್ಲವನ್ನು ಪರಿಗಣಿಸಿರುವ ಸ್ಯಾಮ್‌ಸಂಗ್‌ ಕಂಪೆನಿ ಎಲ್‌ಸಿಡಿ ಬ್ಯುಸಿನೆಸ್‌ ಸ್ಟಾಪ್‌ ಮಾಡಲು ಮುಂದಾಗಿದೆ. ಹಾಗಾದ್ರೆ ಎಲ್‌ಸಿಡಿ ಪ್ಯಾನಲ್‌ಗಳ ಬೇಡಿಕೆ ಕುಸಿತಕ್ಕೆ ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಎಲ್‌ಸಿಡಿ ಜನಪ್ರಿಯತೆಯಲ್ಲಿ ಕುಸಿತ

ಎಲ್‌ಸಿಡಿ ಜನಪ್ರಿಯತೆಯಲ್ಲಿ ಕುಸಿತ

ಅಗ್ಗದ LCD ಪ್ಯಾನೆಲ್‌ಗಳನ್ನು ನೀಡುವ ಚೈನೀಸ್ ಮತ್ತು ತೈವಾನೀಸ್ ತಯಾರಕರ ಸ್ಪರ್ಧೆಯಿಂದಾಗಿ ಎಲ್‌ಸಿಡಿ ಪ್ಯಾನಲ್‌ಗಳ ಬೆಲೆ ಕುಸಿತವನ್ನು ಅನುಭವಿಸಿದೆ. ಇದರಿಂದ ಸ್ಯಾಮ್‌ಸಂಗ್ ತನ್ನ LCD-ತಯಾರಿಕೆಯಲ್ಲಿ ಸಾಕಷ್ಟು ನಷ್ಟವನ್ನು ಅನುಭವಿಸಿದೆ. ಇದರಿಂದ ಎಲ್‌ಸಿಡಿ ವ್ಯವಹಾರವನ್ನು ಈ ವರ್ಷದ ಜೂನ್‌ನಲ್ಲಿ ಮುಚ್ಚುವ ನಿರೀಕ್ಷೆಯಿದೆ. ಡಿಸ್ಪ್ಲೇ ಸಪ್ಲೈ ಚೈನ್ ಕನ್ಸಲ್ಟೆಂಟ್ಸ್ (DSCC) ಪ್ರಕಾರ, LCD ಪ್ಯಾನೆಲ್‌ಗಳ ಸರಾಸರಿ ಬೆಲೆ ವೇಗವಾಗಿ ಕುಸಿದಿದೆ. 2014 ರ 100 ಗೆ ಹೋಲಿಸಿದರೆ, ಈ ವರ್ಷ ಸೆಪ್ಟೆಂಬರ್‌ನಲ್ಲಿ LCD ಪ್ಯಾನೆಲ್‌ಗಳ ಬೆಲೆ ಸೂಚ್ಯಂಕವು 36.6 ಕ್ಕೆ ಇಳಿಯಲಿದೆ. ಈ ವರ್ಷದ ಏಪ್ರಿಲ್‌ನಲ್ಲಿ, ಇದು 41.5 ಆಗಿದೆ, ಇದು LCD ಬೆಲೆ ಸೂಚ್ಯಂಕಕ್ಕೆ ದಾಖಲೆಯ ಕಡಿಮೆ ಎಂದು ಪರಿಗಣಿಸಲಾಗಿದೆ.

ಎಲ್‌ಸಿಡಿ ಬ್ಯುಸಿನೆಸ್‌ ಸ್ಟಾಪ್‌ ಮಾಡಲು ಕಾರಣ?

ಎಲ್‌ಸಿಡಿ ಬ್ಯುಸಿನೆಸ್‌ ಸ್ಟಾಪ್‌ ಮಾಡಲು ಕಾರಣ?

ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಚೈನೀಸ್ ಮತ್ತು ತೈವಾನೀಸ್ ಕೌಂಟರ್‌ಪಾರ್ಟ್‌ಗಳಾದ BOE ಟೆಕ್ನಾಲಜಿ ಗ್ರೂಪ್ ಮತ್ತು AU ಆಪ್ಟ್ರಾನಿಕ್ಸ್ ಕಾರ್ಪೊರೇಶನ್‌ನಿಂದ ಪರದೆಗಳನ್ನು ತೆಗೆದುಕೊಳ್ಳುತ್ತಿದೆ. ಇದು ಕೂಡ ಎಲ್‌ಸಿಡಿ ಬ್ಯುಸಿನೆಸ್‌ ಸ್ಟಾಪ್‌ ಮಾಡಲು ಕಾರಣ ಎನ್ನಲಾಗಿದೆ. ಈಗಾಗಲೇ ಸ್ಯಾಮ್‌ಸಂಗ್ ತನ್ನ ಸ್ಮಾರ್ಟ್‌ಟಿವಿಗಲ್ಲಿ ಎಲ್‌ಸಿಡಿ ಪ್ಯಾನೆಲ್‌ಗಳನ್ನು ಕಡಿತಗೊಳಿಸುತ್ತಿದೆ ಮತ್ತು ಒಎಲ್‌ಇಡಿ ಮತ್ತು ಕ್ವಾಂಟಮ್ ಡಾಟ್ (ಕ್ಯೂಡಿ) ಪ್ಯಾನೆಲ್‌ಗಳ ಮೇಲೆ ಮಾತ್ರ ಕೇಂದ್ರೀಕರಿಸುತ್ತದೆ ಎಂದು ಹೇಳಲಾಗಿದೆ.

ಸ್ಯಾಮ್‌ಸಂಗ್‌

ಇದಲ್ಲದೆ ಸ್ಯಾಮ್‌ಸಂಗ್‌ ಕಂಪೆನಿ ಮುಂದಿನ ವರ್ಷದಿಂದ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಮಾಡುವುದಿಲ್ಲ ಎಂದು ವರದಿಯಾಗಿದೆ. ಈ ವರ್ಷಾಂತ್ಯದ ವೇಳೆಗೆ ತನ್ನ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳ ಸ್ಟಾಕ್‌ ಅನ್ನು ಸೇಲ್‌ ಮಾಡಲಿದೆ. ಬಜೆಟ್‌ ಸ್ಮಾರ್ಟ್‌ಫೋನ್‌ಗಳ ಕೊನೆಯ ಬ್ಯಾಚ್ ಅನ್ನು ಸ್ಯಾಮ್‌ಸಂಗ್‌ನ ಒಪ್ಪಂದದ ಪಾಲುದಾರ ಡಿಕ್ಸನ್ ಈ ಡಿಸೆಂಬರ್‌ನಲ್ಲಿ ತಯಾರಿಸುತ್ತಾರೆ.ಪ್ರಸ್ತುತ ಭಾರತ ಸರ್ಕಾರದ ಪ್ರೊಡಕ್ಷನ್‌-ಲಿಂಕ್ಡ್‌ ಇನ್‌ಸೆಂಟಿವ್‌ (PLI) ಯೋಜನೆಗೆ ಕೊಡುಗೆ ನೀಡುವ ಪ್ರಮುಖ ಎಂಎನ್‌ಸಿ ಕಂಪನಿಗಳಲ್ಲಿ ಸ್ಯಾಮ್‌ಸಂಗ್ ಒಂದಾಗಿದೆ. ಈ ಪ್ಲಾನ್‌ನಲ್ಲಿ ತಯಾರಕರು ಸ್ಥಳೀಯ ಉತ್ಪಾದನೆಗಾಗಿ ಸರ್ಕಾರದಿಂದ sops ಪಡೆಯಲು ಅವಕಾಶವಿದೆ. ಆದರೆ ಈ ಫೋನ್‌ಗಳು 15,000ರೂ. ಫ್ಯಾಕ್ಟರಿ ಬೆಲೆಯನ್ನು ಹೊಂದಿರಬೇಕಾಗುತ್ತದೆ. ಇದರಿಂದ ಸ್ಯಾಮ್‌ಸಂಗ್ ಕಂಪೆನಿ 20,000ರೂ. ಅಥವಾ ಅದಕ್ಕಿಂತ ಹೆಚ್ಚಿನ ಮಾರುಕಟ್ಟೆಯತ್ತ ಗಮನಹರಿಸಲು ಕಾರಣವಾಗಿರಬಹುದು. ಇದರಿಂದ ಸ್ಯಾಮ್‌ಸಂಗ್‌ನ ಉತ್ಪಾದನಾ ಪಾಲುದಾರರಾದ ಡಿಕ್ಸನ್ ಕಡಿಮೆ ಬೆಲೆಯ ಫೋನ್‌ಗಳನ್ನು ತಯಾರಿಸುವುದನ್ನು ಸ್ಟಾಪ್‌ ಮಾಡಲಿದೆ.

Best Mobiles in India

Read more about:
English summary
Samsung Display is reported to shut down its LCD business this year. The company will continue to make OLED and Quantum dot (QD) panels.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X