ಹೊಸ ವರ್ಷಕ್ಕೆ ಸ್ಯಾಮ್‌ಸಂಗ್‌ನಿಂದ ಮೂರು ಹೊಸ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್!

|

ದಕ್ಷಿಣ ಕೊರೊಯಾ ಟೆಕ್ ದೈತ್ಯ ಸಂಸ್ಥೆ ಸ್ಯಾಮ್‌ಸಂಗ್ ಕಳೆದ ವರ್ಷದಲ್ಲಿ ಗ್ಯಾಲಕ್ಸಿ A ಮತ್ತು ಗ್ಯಾಲಕ್ಸಿ M ಸರಣಿಯಲ್ಲಿ ಹಲವು ಬಜೆಟ್‌ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಗ್ರಾಹಕರ ಗಮನ ಸೆಳೆದಿದೆ. ಹಾಗೆಯೇ ಗ್ಯಾಲಕ್ಸಿ ಫೋಲ್ಡ್ ಮಾಡೆಲ್‌ಗಳನ್ನು ಪರಿಚಯಿಸಿದೆ. ಅದೇ ಹಾದಿಯಲ್ಲಿ ಮುಂದುವರೆದಿರುವ ಸಂಸ್ಥೆಯು ಬರುವ 2021 ವರ್ಷದಲ್ಲಿ ಮತ್ತೆ ಮೂರು ಫೋಲ್ಡೆಬಲ್‌ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಲಕ್ಷಣಗಳನ್ನು ಹೊರಹಾಕಿದೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಕಂಪನಿಯು ಹೊಸ ವರ್ಷದಲ್ಲಿ ಫೋಲ್ಡೆಬಲ್ ವಿನ್ಯಾಸದ ಮಾಡೆಲ್‌ನಲ್ಲಿ ಮೂರು ನೂತನ ಸ್ಮಾರ್ಟ್‌ಫೋನ್‌ ಅನಾವರಣ ಮಾಡುವ ಸುಳಿವು ಹೊರಹಾಕಿದೆ. ಸಂಸ್ಥೆಯ ಗ್ಯಾಲಕ್ಸಿ Z ಸರಣಿಯಲ್ಲಿನ ಫೋಲ್ಡೆಬಲ್‌ ಫೋನ್‌ಗಳು ಈಗಾಗಲೇ ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿವೆ. ಇದೇ ಸರಣಿಯಲ್ಲಿ ಮತ್ತೆ ಮೂರು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲಿದೆ ಎನ್ನಲಾಗಿದೆ. ಅವುಗಳು ಕ್ರಮವಾಗಿ ಗ್ಯಾಲಕ್ಸಿ Z ಫ್ಲಿಪ್ 2, ಗ್ಯಾಲಕ್ಸಿ Z ಫ್ಲಿಪ್ 3 ಮತ್ತು ಗ್ಯಾಲಕ್ಸಿ Z ಫ್ಲಿಪ್ ಲೈಟ್ ಎನ್ನಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ನೋಡೋಣ ಬನ್ನಿರಿ.

ಗ್ಯಾಲಕ್ಸಿ Z ಫ್ಲಿಪ್ 3 ಫೋನ್

ಗ್ಯಾಲಕ್ಸಿ Z ಫ್ಲಿಪ್ 3 ಫೋನ್

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 3 ಅಂಡರ್-ಡಿಸ್ಪ್ಲೇ ಸೆಲ್ಫಿ ಕ್ಯಾಮೆರಾದೊಂದಿಗೆ ಪಾದಾರ್ಪಣೆ ಮಾಡುವ ನಿರೀಕ್ಷೆಯಿದೆ. ಈ ಫೋನ್ ಡಿಸ್‌ಪ್ಲೇಯು 7.6-ಇಂಚಿನಿಂದ 7-ಇಂಚಿನವರೆಗೆ ಇರುವ ನಿರೀಕ್ಷೆಯಿದೆ. ದ್ವಿತೀಯಕ ಪ್ರದರ್ಶನವನ್ನು 4-ಇಂಚಿನ ಪರದೆಯೆಂದು ಕರೆಯಲಾಗುತ್ತದೆ. ಇದು ಎಸ್-ಪೆನ್ (ಸ್ಯಾಮ್‌ಸಂಗ್‌ನ ಸ್ವಾಮ್ಯದ ಸ್ಟೈಲಸ್) ಅನ್ನು ಬೆಂಬಲಿಸುವ ನಿರೀಕ್ಷೆಯಿದೆ.

ಗ್ಯಾಲಕ್ಸಿ Z ಫ್ಲಿಪ್ 2 ಫೋನ್

ಗ್ಯಾಲಕ್ಸಿ Z ಫ್ಲಿಪ್ 2 ಫೋನ್

ಬರಲಿರುವ ಈ ನೂತನ ಫೋಲ್ಡೆಬಲ್‌ ಫೋನ್ 6.7-ಇಂಚಿನ ಆಂತರಿಕ ಡಿಸ್‌ಪ್ಲೇ ಮತ್ತು 3-ಇಂಚಿನ ಬಾಹ್ಯ ಡಿಸ್‌ಪ್ಲೇಯನ್ನು ಹೊಂದಿರುವ ಸಾಧ್ಯತೆಗಳು ಇವೆ. ಗ್ಯಾಲಕ್ಸಿ Z ಫ್ಲಿಪ್ 2 ಫೋನ್ಡಿಸ್‌ಪ್ಲೇ ಫ್ಲಿಪ್‌ನಿಂದ ಸಾಕಷ್ಟು ವಿನ್ಯಾಸ ಅಂಶಗಳನ್ನು ಮುಂದಕ್ಕೆ ಸಾಗಿಸುವ ನಿರೀಕ್ಷೆಯಿದೆ. ಅದು ಬಾಹ್ಯ ಪ್ರದರ್ಶನವು ಈಗ ನವೀಕರಣವನ್ನು ಪಡೆಯುತ್ತದೆ. ಇನ್ನು ಈ ಫೋನ್ ಪಂಚ್‌ ಹೋಲ್‌ ಡಿಸ್‌ಪ್ಲೇ ವಿನ್ಯಾಸವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗುವುದಿಲ್ಲ.

ಗ್ಯಾಲಕ್ಸಿ Z ಫ್ಲಿಪ್ ಲೈಟ್ ಫೋನ್

ಗ್ಯಾಲಕ್ಸಿ Z ಫ್ಲಿಪ್ ಲೈಟ್ ಫೋನ್

ಕಂಪನಿಯು ಗ್ಯಾಲಕ್ಸಿ Z ಫ್ಲಿಪ್ ಲೈಟ್ ಫೋನ್ ಹೆಸರಿನ ಫೋನ್ ಲಾಂಚ್ ಮಾಡಲಿದೆ. ಹೆಸರೆ ಸೂಚಿಸುವಂತೆ, ಈ ಫೋನ್ ಲೈಟ್‌ ಆವೃತ್ತಿಯಾಗಿರಲಿದೆ. ಇನ್ನು ಈ ಫೋನಿನ ಡಿಸ್‌ಪ್ಲೇಯು ಗ್ಯಾಲಕ್ಸಿ Z ಫ್ಲಿಪ್ 3 ಫೋನ್ ಗಿಂತ ಚಿಕ್ಕದಾಗಿರಲಿದೆ. ಹಾಗೆಯೇ ಹಾರ್ಡ್‌ವೇರ್ ಹಾಗೂ ಸ್ಟೋರೇಜ್‌ ವಿಭಾಗದಲ್ಲಿಯೂ ಕಡಿಮೆ ಸಾಮರ್ಥ್ಯ ಪಡೆದಿರಲಿದೆ ಎನ್ನಲಾಗಿದೆ. ಅಂಡರ್‌ ಡಿಸ್‌ಪ್ಲೇ ಕ್ಯಾಮೆರಾ ಇರದಿರಬಹುದು ಎಂದು ಹೇಳಲಾಗುತ್ತಿದೆ.

Best Mobiles in India

English summary
Samsung is introduce three new foldable smartphones in 2021: Galaxy Fold 3, Galaxy Z Flip 2 & Galaxy Fold Lite.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X