ಸ್ಯಾಮ್‌ಸಂಗ್‌ ಟಿವಿ ಪ್ಲಸ್‌ ಸೇವೆ ಇದೀಗ ಭಾರತದಲ್ಲಿಯೂ ಲಭ್ಯ!

|

ಸ್ಮಾರ್ಟ್‌ಫೋನ್‌ ದೈತ್ಯ ಸ್ಯಾಮ್‌ಸಂಗ್‌ ಸಂಸ್ಥೆ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಸ್ಮಾರ್ಟ್‌ಟಿವಿ ವಲಯದಲ್ಲಿಯೂ ಸೈ ಎನಿಸಿಕೊಂಡಿದೆ. ಗ್ರಾಹಕರ ನೆಚ್ಚಿನ ಸ್ಮಾರ್ಟ್‌ಟಿವಿ ಬ್ರ್ಯಾಂಡ್‌ ಆಗಿ ಗುರುತಿಸಿಕೊಂಡಿದೆ. ಸದ್ಯ ಇದೀಗ ಜಾಹೀರಾತು ಬೆಂಬಲಿತ ಆಯ್ದ ಲೈವ್ ಚಾನೆಲ್‌ಗಳು ಮತ್ತು ಬೇಡಿಕೆಯ ವೀಡಿಯೊಗಳೊಂದಿಗೆ ಸ್ಯಾಮ್‌ಸಂಗ್ ಸ್ಮಾರ್ಟ್ ಟೆಲಿವಿಷನ್‌ಗಳ ಗ್ರಾಹಕರಿಗೆ ಉಚಿತ ವಿಷಯವನ್ನು ಒದಗಿಸುವ ಸೇವೆಯಾದ ಸ್ಯಾಮ್‌ಸಂಗ್ ಟಿವಿ ಪ್ಲಸ್ ಅನ್ನು ಬಿಡುಗಡೆ ಮಾಡಿದೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಕಂಪೆನಿ ಭಾರತದಲ್ಲಿ ಸ್ಯಾಮ್‌ಸಂಗ್‌ ಟಿವಿ ಪ್ಲಸ್‌ ಅನ್ನು ಲಾಂಚ್‌ ಮಾಡಿದೆ. ಇನ್ನು ಈ ಸೇವೆಯನ್ನು ಪಡೆಯುವುದಕ್ಕೆ ಯಾವುದೇ ರೀತಿಯ ಸೆಟ್ ಟಾಪ್ ಬಾಕ್ಸ್‌ನಂತಹ ಹೆಚ್ಚುವರಿ ಸಾಧನದ ಅಗತ್ಯವಿರುವುದಿಲ್ಲ. ಆದರೆ ಈ ಸೇವೆಯನ್ನು ಪ್ರವೇಶಿಸಬೇಕಾದರೆ 2017 ಅಥವಾ ನಂತರದ ದಿನಗಳಲ್ಲಿ ಪರಿಚಯಿಸಲಾದ ಸ್ಯಾಮ್‌ಸಂಗ್ ಸ್ಮಾರ್ಟ್ ಟಿವಿ ಮತ್ತು ಸಕ್ರಿಯ ಇಂಟರ್ನೆಟ್ ಸಂಪರ್ಕ ಅಗತ್ಯವಿದೆ. ಇನ್ನುಳಿದಂತೆ ಸ್ಯಾಮ್‌ಸಂಗ್‌ ಟಿವಿ ಪ್ಲಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಯಾಮ್ಸಂಗ್

ಸ್ಯಾಮ್ಸಂಗ್ ಸಂಸ್ಥೆ ಪರಿಚಯಿಸಿರುವ ಸ್ಯಾಮ್‌ಸಂಗ್‌ ಟಿವಿ ಪ್ಲಸ್ ಓಎಸ್ ಅಥವಾ ಹೆಚ್ಚಿನ ಸಾಫ್ಟ್‌ವೇರ್ ಆವೃತ್ತಿಯೊಂದಿಗೆ ಹೆಚ್ಚಿನ ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್ ಸಾಧನಗಳಲ್ಲಿ ಲಭ್ಯವಿರುತ್ತದೆ. ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳ ಸೇವೆಗಳು ಏಪ್ರಿಲ್‌ನಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ಇನ್ನು ಸ್ಯಾಮ್‌ಸಂಗ್ ಟಿವಿ ಪ್ಲಸ್ ಅಪ್ಲಿಕೇಶನ್ ಅನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್ ಎರಡರಿಂದಲೂ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಸ್ಯಾಮ್‌ಸಂಗ್

ಸ್ಯಾಮ್‌ಸಂಗ್ ಟಿವಿ ಪ್ಲಸ್ ಸೇವೆ 2017 ರಿಂದ 2021 ರವರೆಗೆ ಎಲ್ಲಾ ಸ್ಮಾರ್ಟ್ ಟಿವಿ ಮಾದರಿಗಳಲ್ಲಿ ತಕ್ಷಣ ಲೈವ್ ಆಗುತ್ತದೆ. ಈ ಸೇವೆಯನ್ನು ಹೆಚ್ಚು ದೃಡವಾಗಿಸಲು ಹೆಚ್ಚಿನ ಪಾಲುದಾರರನ್ನು ಶೀಘ್ರದಲ್ಲೇ ಆನ್-ಬೋರ್ಡ್ ಮಾಡಲಾಗುತ್ತದೆ ಎನ್ನಲಾಗಿದೆ. ಸ್ಯಾಮ್ಸಂಗ್ ಟಿವಿ ಪ್ಲಸ್ ಭಾರತದಲ್ಲಿ ಬಿಡುಗಡೆ ಆಗುವ ಮೂಲಕ ಯುಎಸ್, ಕೆನಡಾ, ಕೊರಿಯಾ, ಸ್ವಿಟ್ಜರ್ಲೆಂಡ್, ಜರ್ಮನಿ, ಆಸ್ಟ್ರಿಯಾ, ಯುಕೆ, ಇಟಲಿ, ಫ್ರಾನ್ಸ್, ಸ್ಪೇನ್, ಆಸ್ಟ್ರೇಲಿಯಾ, ಬ್ರೆಜಿಲ್ ಮತ್ತು ಮೆಕ್ಸಿಕೊ ಸೇರಿದಂತೆ ಜಾಗತಿಕವಾಗಿ 14 ದೇಶಗಳಲ್ಲಿ ಲಭ್ಯವಿದೆ.

ಭಾರತದ ಸ್ಯಾಮ್‌ಸಂಗ್ ಟಿವಿ ಪ್ಲಸ್‌ನಲ್ಲಿ ಈಗ 27 ಚಾನೆಲ್‌ಗಳು

ಭಾರತದ ಸ್ಯಾಮ್‌ಸಂಗ್ ಟಿವಿ ಪ್ಲಸ್‌ನಲ್ಲಿ ಈಗ 27 ಚಾನೆಲ್‌ಗಳು

ಟಿವಿ ಪ್ಲಸ್ ಸ್ಯಾಮ್‌ಸಂಗ್ ಸ್ಮಾರ್ಟ್ ಟಿವಿ ಬಳಕೆದಾರರಿಗೆ ಯಾವುದೇ ಚಂದಾದಾರಿಕೆ ಇಲ್ಲದ ಪ್ರಕಾರಗಳಲ್ಲಿ ಹೆಚ್ಚಿನ ವಿಷಯಕ್ಕೆ ಪ್ರವೇಶವನ್ನು ನೀಡುತ್ತದೆ. ಈ ಮೂಲಕ ಬಳಕೆದಾರರು 27 ಜಾಗತಿಕ ಮತ್ತು ಸ್ಥಳೀಯ ಚಾನಲ್‌ಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಸ್ಯಾಮ್‌ಸಂಗ್ ಒಂದು ದಶಕಕ್ಕೂ ಹೆಚ್ಚು ಕಾಲ ಭಾರತದ ನಂ 1 ಬ್ರಾಂಡ್ ಟೆಲಿವಿಷನ್ ಆಗಿದ್ದು, 18,900 ರೂ.ಗಳಿಂದ 15,79,900 ರೂ.ಗಳವರೆಗೆ ಸ್ಮಾರ್ಟ್ ಟಿವಿಗಳನ್ನು ನೀಡುತ್ತದೆ.

Best Mobiles in India

English summary
Samsung TV Plus is available on Samsung’s smart TV models launched from 2017 onwards and those using the Samsung Galaxy smartphones and tabs with O OS and higher are also eligible to use Samsung TV Plus.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X