ಸ್ಯಾಮ್‌ಸಂಗ್‌ ವರ್ಚುವಲ್‌ ಈವೆಂಟ್‌ನಲ್ಲಿ ಹೊಸ ಸ್ಮಾರ್ಟ್‌ಟಿವಿ, ಮಾನಿಟರ್‌ಗಳು ಲಾಂಚ್‌!

|

ದಕ್ಷಿಣ ಕೋರಿಯಾ ಮೂಲದ ಸ್ಯಾಮ್‌ಸಂಗ್‌ ಸಂಸ್ಥೆ ಅನ್ಬಾಕ್ಸ್ ಮತ್ತು ಡಿಸ್ಕವರ್ ಈವೆಂಟ್ ಅನ್ನು ನಡೆಸಿದೆ. ಈ ಈವೆಂಟ್‌ನಲ್ಲಿ ಸ್ಯಾಮ್‌ಸಂಗ್‌ ಕಂಪನಿಯು ತನ್ನ ಹೊಸ ಟಿವಿಗಳು, ಮಾನಿಟರ್‌ಗಳು ಮತ್ತು ಸೌಂಡ್‌ಬಾರ್‌ಗಳನ್ನು ಅನಾವರಣಗೊಳಿಸಿದೆ. ಸದ್ಯ ಬಿಡುಗಡೆ ಮಾಡಿರುವ ಟಿವಿಗಳಲ್ಲಿ ಮೈಕ್ರೋ-ಎಲ್ಇಡಿ, ನಿಯೋ ಕ್ಯೂಎಲ್ಇಡಿ ಮತ್ತು ಲೈಪ್‌ಸ್ಟೈಲ್‌ ಟಿವಿಗಳು ಸೇರಿವೆ. ಆದರೆ ಮಾನಿಟರ್‌ಗಳಲ್ಲಿ ಸ್ಮಾರ್ಟ್ ಮಾನಿಟರ್, ಹೊಸ ಒಡಿಸ್ಸಿ G9 ಗೇಮಿಂಗ್ ಮಾನಿಟರ್ ಮತ್ತು ಇಂಟರ್‌ ಆಕ್ಟಿವ್ ಡಿಸ್‌ಪ್ಲೇ ಫ್ಲಿಪ್ 75-ಇಂಚುಗಳು ಸೇರಿವೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಕಂಪೆನಿ ತನ್ನ ಹೊಸ ಸ್ಮಾರ್ಟ್‌ಟಿವಿಗಳು, ಮಾನಿಟರ್‌ಗಳು, ಕ್ಯೂ ಸರಣಿ ಸೌಂಡ್‌ಬಾರ್‌ಗಳನ್ನು ಅನಾವರಣಗೊಳಿಸಿದೆ. ಸದ್ಯ ಕಂಪನಿಯು ಹೊಸ 2021 ಕ್ಯೂ ಸೀರೀಸ್ ಸೌಂಡ್‌ಬಾರ್ ಮಾದರಿಗಳನ್ನು ಪರಿಚಯಿಸಿದ್ದು, ಇದು ಕ್ಯೂ-ಸಿಂಫನಿ ತಂತ್ರಜ್ಞಾನವನ್ನು ಒಳಗೊಂಡಿದೆ. ಜೊತೆಗೆ ಮಲ್ಟಿ ವಾಯ್ಸ್‌ ಅಸಿಸ್ಟೆಂಟ್‌ಗೆ ಬೆಂಬಲವನ್ನು ನೀಡಲಿದೆ. ಇನ್ನುಳಿದಂತೆ ಈ ಪ್ರಾಡಕ್ಟ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌ ತನ್ನ ವರ್ಚುವಲ್ ಅನ್‌ಬಾಕ್ಸ್ ಮತ್ತು ಡಿಸ್ಕವರ್ ಈವೆಂಟ್ 2021 ನಲ್ಲಿ ವಿಡಿಯೋ ಮತ್ತು ಆಡಿಯೊ ಉತ್ಪನ್ನಗಳನ್ನು ಅನಾವರಣಗೊಳಿಸಿದೆ. ಇನ್ನು ಅನಾವರಣೊಳಿಸಿರುವ ಮೈಕ್ರೋ-ಎಲ್‌ಇಡಿ ಟಿವಿಗಳು 4 ವ್ಯೂ (ಕ್ವಾಡ್ ವ್ಯೂ) ತಂತ್ರಜ್ಞಾನದೊಂದಿಗೆ ಬರುತ್ತವೆ, ಇದು ಬಳಕೆದಾರರಿಗೆ ನಾಲ್ಕು ವಿಭಿನ್ನ ಮೂಲಗಳಿಂದ ಏಕಕಾಲದಲ್ಲಿ ವಿಷಯವನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಸದ್ಯ ಸ್ಯಾಮ್‌ಸಂಗ್‌ ಸಂಸ್ಥೆ ಮೈಕ್ರೊ-ಎಲ್ಇಡಿ ತಂತ್ರಜ್ಞಾನವನ್ನು ಮೊದಲ ಬಾರಿಗೆ 2018 ರಲ್ಲಿ ತನ್ನ ಮಾಡ್ಯುಲರ್ ಸ್ಕ್ರೀನ್‌ನಲ್ಲಿ ಪರಿಚಯಿಸಿತ್ತು. ಇದನ್ನು ಒಂದು ಬಿಗ್‌ ಸ್ಕ್ರೀನ್‌ ರೂಪಿಸಲು ಒಟ್ಟಿಗೆ ಜೋಡಿಸಬಹುದು. ಈಗ, ಸ್ಯಾಮ್‌ಸಂಗ್ ಮೈಕ್ರೋ-ಎಲ್ಇಡಿ ತಂತ್ರಜ್ಞಾನವನ್ನು ಹೆಚ್ಚು ವಾಣಿಜ್ಯವಾಗಿಸುತ್ತಿದೆ.

ಕ್ವಾಂಟಮ್

ಇನ್ನು ಕ್ವಾಂಟಮ್ ಮಿನಿ-ಎಲ್ಇಡಿ ಡಿಸ್‌ಪ್ಲೇ ಮತ್ತು ಸ್ಯಾಮ್‌ಸಂಗ್‌ ನಿಯೋ ಕ್ವಾಂಟಮ್ ಪ್ರೊಸೆಸರ್ ಬಳಸುವ ಪ್ರಾಡಕ್ಟ್‌ಗಳಾಗಿವೆ. 4K ರೆಸಲ್ಯೂಶನ್ ಮತ್ತು 120fps ಬೆಂಬಲದೊಂದಿಗೆ ಸುಧಾರಿತ ಗೇಮಿಂಗ್ ಅನುಭವವನ್ನು ನೀಡಲು ಸ್ಯಾಮ್‌ಸಂಗ್ ಯುಎಸ್ ಮತ್ತು ಕೆನಡಾದಲ್ಲಿ ಎಕ್ಸ್‌ಬಾಕ್ಸ್‌ನೊಂದಿಗಿನ ಪಾಲುದಾರಿಕೆಯನ್ನು ನವೀಕರಿಸಿದೆ. ಈ ಟಿವಿ ಮಾದರಿಗಳು 5.8ms ರೆಸ್ಪಾನ್ಸ್‌ ಟೈಂ ಅನ್ನು ಹೊಂದಿರುತ್ತವೆ. ಫ್ರೀಸಿಂಕ್ ಪ್ರೀಮಿಯಂ ಪ್ರೊ ಅನ್ನು ತನ್ನ ನಿಯೋ ಕ್ಯೂಎಲ್‌ಇಡಿ ಮತ್ತು ಕ್ಯೂಎಲ್‌ಇಡಿ ಶ್ರೇಣಿಗೆ ತರಲು ಸ್ಯಾಮ್‌ಸಂಗ್ ಎಎಮ್‌ಡಿಯೊಂದಿಗೆ ಸಹಭಾಗಿತ್ವವನ್ನು ಹೊಂದಿದೆ. ಇದಲ್ಲದೆ ಆಂಗಲ್‌ಗಳನ್ನು ವಿಶ್ಲೇಷಿಸಲು ಮತ್ತು ರಿಯಲ್‌ಟೈಂ ರೆಸ್ಪಾನ್ಸ್‌ ಅನ್ನು ಒದಗಿಸಲು AI ಅನ್ನು ಬಳಸುವ ಸ್ಯಾಮ್‌ಸಂಗ್ ಹೆಲ್ತ್ ಪ್ರೋಗ್ರಾಂ ಮತ್ತು ಸ್ಮಾರ್ಟ್ ಟ್ರೈನರ್‌ನಂತಹ ಹೊಸ ಸೇರ್ಪಡೆಗಳನ್ನು ನೀಡಲಾಗಿದೆ.

ಇದಲ್ಲದೆ

ಇದಲ್ಲದೆ ನಿಯೋ ಕ್ಯೂಎಲ್‌ಇಡಿ ಟಿವಿ ಮತ್ತು ಕ್ಯೂಎಲ್‌ಇಡಿ ಟಿವಿಯ 2021 ಟೀಂ ಕ್ಯೂಎನ್ 800A ಮತ್ತು ಕ್ಯೂಎನ್ 900A 8K ಮಾದರಿಗಳನ್ನು ಒಳಗೊಂಡಿರುತ್ತದೆ. ಇವು 65 ಇಂಚು, 75 ಇಂಚು ಮತ್ತು 85 ಇಂಚಿನ ಗಾತ್ರಗಳಲ್ಲಿ ನೀಡಲಾಗುವುದು. 4K QN 90A ಮತ್ತು QN85A ಮಾದರಿಗಳು 50 ಇಂಚಿನಿಂದ ಪ್ರಾರಂಭವಾಗಲಿವೆ. ಜೊತೆಗೆ ಸ್ಯಾಮ್‌ಸಂಗ್‌ನ ದಿ ಫ್ರೇಮ್ ಟಿವಿಯು 2021 ಕ್ಕೆ ಕೆಲವು ಅಪ್ಡೇಟ್‌ಗಳನ್ನು ಪಡೆದುಕೊಂಡಿದೆ. ಇದು 500MB ಬದಲಿಗೆ 6GB ಸಂಗ್ರಹದೊಂದಿಗೆ ಬರಲಿದೆ.

ಸ್ಯಾಮ್ಸಂಗ್

ಇನ್ನು ಈವೆಂಟ್‌ನಲ್ಲಿ, ಸ್ಯಾಮ್ಸಂಗ್ ದಿ ಪ್ರೀಮಿಯರ್ ಎಂಬ ಹೊಸ ಟ್ರಿಪಲ್ ಲೇಸರ್ 4 ಕೆ ಪ್ರೊಜೆಕ್ಟರ್ ಅನ್ನು ಸಹ ಅನಾವರಣಗೊಳಿಸಿದೆ. ಇದು "ಕನಿಷ್ಠ ವಿನ್ಯಾಸ" ವನ್ನು ಹೊಂದಿದೆ ಮತ್ತು ಶಾರ್ಟ್-ಥ್ರೋ ಪ್ರೊಜೆಕ್ಟರ್ ಆಗಿದ್ದು ಇದನ್ನು ಗೋಡೆ ಅಥವಾ ಪರದೆಯಿಂದ 5 ಇಂಚುಗಳಷ್ಟು ಅಥವಾ ಅದಕ್ಕಿಂತ ಹೆಚ್ಚು ದೂರದಲ್ಲಿ ಇರಿಸಬಹುದು. ಸ್ಯಾಮ್‌ಸಂಗ್ ತನ್ನ ದಿ ಟೆರೇಸ್ ಹೊರಾಂಗಣ ಟಿವಿಯನ್ನು ಐಪಿ 55 ರೇಟಿಂಗ್‌ನೊಂದಿಗೆ ಅಪ್‌ಗ್ರೇಡ್ ಮಾಡಿದೆ ಮತ್ತು 75 ಇಂಚಿನ ಫುಲ್ ಸನ್ ಮಾದರಿಯನ್ನು ಹೊಂದಿದ್ದು ವಿಂಟರ್‌ ನಲ್ಲಿ ಅನಾವರಣಗೊಳ್ಳಲಿದೆ. ಜೊತೆಗೆ ಮಾನಿಟರ್‌ಗಳಿಗೆ ಬರುತ್ತಿರುವ ಸ್ಯಾಮ್‌ಸಂಗ್ ತನ್ನ ಸ್ಮಾರ್ಟ್ ಮಾನಿಟರ್ ಅನ್ನು ತರುತ್ತಿದ್ದು ಅದು ವೈರ್‌ಲೆಸ್ ಡಿಎಕ್ಸ್ ಮತ್ತು ಆಪಲ್ ಏರ್‌ಪ್ಲೇ 2 ನಂತಹ ಫೀಚರ್ಸ್‌ಗಳನ್ನು ನೀಡಲಿದೆ.

Best Mobiles in India

English summary
Samsung Unbox and Discover event was held on Tuesday, where the company unveiled its new lineup of TVs, monitors, and soundbars.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X