ಸ್ಯಾಮ್ ಸಂಗ್ ಯುಹೆಚ್ಡಿ ಟಿವಿ ಲೈನ್ ಅಪ್ ಜೊತೆಗೆ ಸೂಪರ್6 ಫೀಚರ್ ಗಳು- ಬೆಲೆ 41,990 ರುಪಾಯಿ

By Gizbot Bureau
|

ಸೌತ್ ಕೊರಿಯಾದ ಎಲೆಕ್ಟ್ರಾನಿಕ್ ದೈತ್ಯ ಸಂಸ್ಥೆ ಸ್ಯಾಮ್ ಸಂಗ್ ತನ್ನ ಆನ್ ಲೈನ್ ಎಕ್ಸ್ ಕ್ಲೂಸೀವ್ UHD ಟಿವಿ ಲೈನ್ ಅಪ್ ನ್ನು ಭಾರತದಲ್ಲಿ ಪರಿಚಯಿಸಿದೆ. ಈ ಹೊಸ ರೇಂಜಿನ ಟಿವಿ ಸೂಪರ್ 6 ಫೀಚರ್ ಗಳನ್ನು ಒಳಗೊಂಡಿದ್ದು ಉದಾಹರಣೆಗೆ ಟ್ಯೂನ್ ಸ್ಟೇಷನ್, ಸ್ಕ್ರೀನ್ ಮಾನಿಟರಿಂಗ್, ರಿಯಲ್ 4ಕೆ ರೆಸಲ್ಯೂಷನ್ ಗ್ರಾಹಕರಿಗೆ ಉತ್ತಮ ಪಿಕ್ಚರ್ ಗುಣಮಟ್ಟವನ್ನು ಅನುಭವಿಸುವುದಕ್ಕೆ ಅವಕಾಶ ನೀಡುತ್ತದೆ ಮತ್ತು ಉನ್ನತ ಮಟ್ಟದ ಕಟೆಂಟ್ ಬಳಕೆ ಕೂಡ ಇದರಲ್ಲಿ ಲಭ್ಯವಿದೆ.

ಸ್ಯಾಮ್ ಸಂಗ್ ಯುಹೆಚ್ಡಿ ಟಿವಿ ಲೈನ್ ಅಪ್ ಜೊತೆಗೆ ಸೂಪರ್6 ಫೀಚರ್ ಗಳು- ಬೆಲೆ 41,99

ಸ್ಯಾಮ್ ಸಂಗ್ UHD ಟಿವಿಯನ್ನು ಪ್ಯೂರ್ ಕಲರ್ ಟೆಕ್ನಾಲಜಿ ಬಳಸಿ ತಯಾರಿಸಲಾಗಿದ್ದು ಅದು ಉತ್ತಮ ಗುಣಮಟ್ಟದ ಬಣ್ಣ ಜೊತೆಗೆ ಉತ್ತಮ ಶಾರ್ಪ್ ನೆಸ್ ಮತ್ತು ಕಾಂಟ್ರ್ಯಾಸ್ಟ್ ನ್ನು ನೀಡುವುದಕ್ಕೆ ನೆರವು ನೀಡುತ್ತದೆ.

ಹೊಸದಾಗಿರುವ ಈ ಟಿವಿಯು ಸ್ಮಾರ್ಟ್ ಹಬ್ ನೊಂದಿಗೆ ಮತ್ತು ಸ್ಮಾರ್ಟ್ ಕನ್ವರ್ಜೆನ್ಸ್ ನೊಂದಿಗೆ ಬರುತ್ತದೆ ಮತ್ತು ಇದು ನಿಮ್ಮ ಟಿವಿಯನ್ನು ಸ್ಮಾರ್ಟ್ ಫೋನ್ ನೊಂದಿಗೆ ಕನೆಕ್ಟ್ ಮಾಡಿಕೊಳ್ಳುವುದಕ್ಕೆ ಸಹಕಾರಿಯಾಗಿದೆ.

ಗ್ರಾಹಕರ ಜೀವನಶೈಲಿಯ ಬೇಡಿಕೆಗೆ ಅನುಗುಣವಾಗಿ ಈ ಟಿವಿಯನ್ನು ಡಿಸೈನ್ ಮಾಡಲಾಗಿದೆ ಎಂದು ಸ್ಯಾಮ್ ಸಂಗ್ ಇಂಡಿಯಾದ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಆನ್ ಲೈನ್ ಬ್ಯುಸಿನೆಸ್ ನ ಹಿರಿಯ ಉಪಾಧ್ಯಕ್ಷರಾಗಿರುವ ರಾಜು ಪುಲ್ಲನ್ ತಿಳಿಸಿದ್ದಾರೆ.

ಹೊಸ ರೇಂಜಿನ ಟಿವಿ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ ಕೆಲವು ಅಂಶಗಳು ಇಲ್ಲಿವೆ.

ರಿಯಲ್ 4ಕೆ

ರಿಯಲ್ 4ಕೆ

ಪ್ರತಿ ನಿಮಿಷವನ್ನು ತುಂಬಾ ತೀಕ್ಷ್ಣವಾಗಿ ನೋಡಿ ಮನರಂಜನೆ ನೀಡುವ ಉದ್ದೇಶದಿಂದ ಹೊಸ ಯುಹೆಚ್ ಡಿ ಸರಣಿಯು ಹೆಚ್ಚು ಶಾರ್ಪ್ ಆಗಿರುವು ಮತ್ತು ಕ್ರಿಸ್ಪ್ ಆಗಿರುವ ಇಮೇಜ್ ಜೊತೆಗೆ 4ಕೆ ಯುಹೆಚ್ ಡಿಯನ್ನು ನೀಡಲಾಗುತ್ತದೆ. ಇದರಲ್ಲಿ ಎಫ್ ಹೆಚ್ ಡಿ ಟಿವಿಗಿಂತ 4ಎಕ್ಸ್ ನಷ್ಟು ಹೆಚ್ಚು ಪಿಕ್ಸಲ್ಸ್ ಸಾಮರ್ಥ್ಯವಿದೆ.

ಲೈವ್ ಕಾಸ್ಟ್

ಲೈವ್ ಕಾಸ್ಟ್

ಲೈವ್ ಕಾಸ್ಟ್ ಫೀಚರ್ ಬಳಕೆದಾರರಿಗೆ ಸ್ಮಾರ್ಟ್ ಫೋನ್ ಮೂಲಕ ಟಿವಿಯಲ್ಲಿ ಯಾವುದೇ ಸ್ಥಳದಲ್ಲಿ ಬ್ರಾಡ್ ಕಾಸ್ಟ್ ಮಾಡಿಕೊಳ್ಳುವುದಕ್ಕೆ ಸಾಧ್ಯವಿದೆ.

ಟ್ಯೂನ್ ಸ್ಟೇಷನ್

ಟ್ಯೂನ್ ಸ್ಟೇಷನ್ ಮೂಲಕ ಪ್ಲೇ ಲಿಸ್ಟ್ ಗೆ ರಿಯಲಿಸ್ಟಿಕ್ ಆಗಿರುವ ವಿಷುವಲ್ ನ್ನು ಸೇರಿಸುತ್ತದೆ ಮತ್ತು ಟಿವಿಯನ್ನು ವರ್ಚುವಲ್ ಮ್ಯೂಸಿಕ್ ಡಿವೈಸ್ ಆಗಿ ಪರಿವರ್ತಿಸುತ್ತದೆ. ಆ ಮೂಲಕ ಒಟ್ಟಾರೆ ಆಡಿಯೋ ಅನುಭವ ಲಭ್ಯವಾಗುತ್ತದೆ.

ಸ್ಕ್ರೀನ್ ಮಾನಿಟರಿಂಗ್

ಸ್ಕ್ರೀನ್ ಮಾನಿಟರಿಂಗ್

ಬಳಕೆದಾರರ ಫೋನ್ ನೊಂದಿಗೆ ಟಿವಿಯನ್ನು ಸಿನ್ಕ್ರನೈಜ್ ಮಾಡುವುದಕ್ಕೆ ಈ ಪೀಚರ್ ಕೆಲಸ ಮಾಡುತ್ತದೆ. ತಮ್ಮ ಸ್ಮಾರ್ಟ್ ಫೋನ್ ಮೂಲಕ ನೋಡುಗರು ಟಿವಿಯಲ್ಲಿ ಮಿರರ್ ಸ್ಕ್ರೀನ್ ಕಂಟೆಂಟ್ ನ್ನು ಕಾಣಲು ಸಾಧ್ಯವಾಗುತ್ತದೆ.

ಲ್ಯಾಗ್-ಫ್ರೀ ಗೇಮಿಂಗ್

ಗೇಮಿಂಗ್ ಉತ್ಸಾಹಿಗಳಿಗೆ ಇದರಲ್ಲಿ ಧನಾತ್ಮಕ ಅಂಶಗಳಿವೆ.ಗೇಮ್ ಮೋಡ್ ಮತ್ತು ಕ್ವಾಡ್ ಕೋರ್ ಪ್ರೊಸೆಸರ್ ಮೂಲಕ ಬಳಕೆದಾರರು ದೊಡ್ಡ ಸ್ಕ್ರೀನಿನಲ್ಲಿ ಮತ್ತು ಹೆಚ್ಚು ಗುಣಮಟ್ಟದ ಗ್ರಾಫಿಕ್ಸ್ ನಲ್ಲಿ ಯೆಹೆಚ್ ಡಿ ಪಿಕ್ಚರ್ ಇಂಜಿನ್ ಮೂಲಕ ಗೇಮ್ ಆಡಬಹುದು.

60ಕೆ+ ಟೈಟಲ್ಸ್

ಈ ಟಿವಿಯಲ್ಲಿ ಅಂದಾಜು 60,000 ಟೈಟಲ್ಸ್ ನ್ನು ಸೇರಿಸಲಾಗಿದ್ದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕಂಟೆಂಟ್ ಗಳು 10+ ಸ್ಥಳೀಯ ಭಾಷೆಗಳಲ್ಲಿ ಲಭ್ಯವಾಗುತ್ತದೆ.

43 ಇಂಚಿನ ವರ್ಷನ್ನಿನ ಸೂಪರ್ 6 ಸರಣಿಯ ಯುಹೆಚ್ ಡಿ ಲೈನ್ ಅಪ್ ನ ಬೆಲೆ 41,990 ರುಪಾಯಿಗಳು. 50,55 ಇಂಚಿನ ವರ್ಷನ್ ಗೆ ಕ್ರಮವಾಗಿ ರುಪಾಯಿ 51,990 ಮತ್ತು ರುಪಾಯಿ 61,990 ಆಗಿದೆ. ಸ್ಯಾಮ್ ಸಂಗ್ ಶಾಪ್ ಮತ್ತು ಇಕಾಮರ್ಸ್ ಫ್ಲ್ಯಾಟ್ ಫಾರ್ಮ್ ಗಳಾದ ಫ್ಲಿಪ್ ಕಾರ್ಟ್ ಮತ್ತು ಅಮೇಜಾನ್ ಗಳಲ್ಲಿ ಈ ಟಿವಿ ಲಭ್ಯವಿದೆ.

ಕಂಪೆನಿಯು ಪರಿಚಯಾರ್ಥವಾಗಿ ವಿಶೇಷ ರಿಯಾಯಿತಿ ದರವನ್ನು ನಿಗದಿಗೊಳಿಸಿದೆ ಮತ್ತು ಅದು ಈ ಗುರುವಾರದವರೆಗೆ ಅಂದರೆ ನಾಳೆಯವರೆಗೆ ಲಭ್ಯವಿರುತ್ತದೆ.

Best Mobiles in India

Read more about:
English summary
Samsung unveils UHD TV line-up with 'Super6' features priced at Rs 41,990 onwards

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X