ಸ್ಯಾಮ್‌ಸಂಗ್ 12 ಇಂಚಿನ 4 ಕೆ ಪ್ರೊಟೋಟೈಪ್ ಟ್ಯಾಬ್ಲೆಟ್ ಬಿಡುಗಡೆ

Written By:

ಸಣ್ಣ ಮಕ್ಕಳಿಂದ ಹಿಡಿದು ವೃತ್ತಿಪರರವರೆಗೆ ಟ್ಯಾಬ್ಲೆಟ್ ತಯಾರಿ ಮಾಡುವ ನೈಪುಣ್ಯದಲ್ಲಿ ಸ್ಯಾಮ್‌ಸಂಗ್‌ನದ್ದು ಎತ್ತಿದ ಕೈ. ತನ್ನ ಹಲವಾರು ಪ್ರಯತ್ನಗಳ ಫಲವೆಂಬಂತೆ ಕೊನೆಗೂ ಈ ದಕ್ಷಿಣ ಕೊರಿಯಾದ ಕಂಪೆನಿ ಗ್ಯಾಲಕ್ಸಿ ಟ್ಯಾಬ್ ಎಸ್ ಅನ್ನು ನ್ಯೂಯಾರ್ಕ್‌ನಲ್ಲಿ ಜೂನ್ ಹನ್ನೆರಡಕ್ಕೆ ಪ್ರಸ್ತುತಪಡಿಸುವ ತೀರ್ಮಾನವನ್ನು ದೃಢಪಡಿಸಿದೆ.

ಈ ವರ್ಷದ ಅಂತ್ಯ ಕೊನೆಗೂ ಉತ್ಸಾಹಕರವಾಗಿದ್ದು, ಸ್ಯಾಮ್‌ಸಂಗ್ ತನ್ನ ಮೊತ್ತಮೊದಲನೆಯ 4 ಕೆ ರೆಸಲ್ಯೂಶನ್ ಟ್ಯಾಬ್ಲೆಟ್ ಅನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದು ಇನ್ನೂ ಆಶಾದಾಯಕವಾಗಿದೆ.

ಸ್ಯಾಮ್‌ಸಂಗ್ ಸಂಭಾವ್ಯ ಕ್ರಾಂತಿಕಾರಿ ಟ್ಯಾಬ್ಲೆಟ್ ಹೇಗೆ?

ಪ್ಯಾನಸೋನಿಕ್ ಇತ್ತೀಚೆಗೆ 4K UT-MA6 ಟ್ಯಾಬ್ಲೆಟ್ ಅನ್ನು ಲಾಂಚ್ ಮಾಡಿದ್ದು ಇದರ 20 ಇಂಚಿನ ಪರದೆಯು 3840 x 2560 ಪಿಕ್ಸೆಲ್ ರೆಸಲ್ಯೂಶನ್ ಅನ್ನು ನೀಡುತ್ತದೆ. ಇದೀಗ 4K ಸಿದ್ಧ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡುವ ಸರದಿ ಸ್ಯಾಮ್‌ಸಂಗ್‌ನದ್ದಾಗಿದೆ. ಇದು 12-ಇಂಚಿನ UHD ಪ್ರೊಟೋಟೈಪ್ ಟ್ಯಾಬ್ಲೆಟ್ ಸ್ಯಾಮ್‌ಸಂಗ್‌ನ ಸಾಂಪ್ರದಾಯಿಕವಾಗಿ ವಿನ್ಯಾಸ ಮಾಡಿದ ಸ್ಲೇಟ್‌ನಂತೆ ಕಂಡುಬರುತ್ತಿದೆ.

ಇದು ಸಾಮರ್ಥ್ಯವುಳ್ಳ ಸ್ಪರ್ಶ ಬಟನ್ ಅನ್ನು ಹೊಂದಿದ್ದು ಡಿಸ್‌ಪ್ಲೇಯ ಕೆಳಗಡೆ ಹೋಮ್ ಬಟನ್‌ನಿಂದ ನೋಡಲು ಅತ್ಯಾಕರ್ಷಕವಾಗಿದೆ. ಈ ಟ್ಯಾಬ್ಲೆಟ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ ಅನ್ನು ಹೊಂದಿದ್ದು ಇದನ್ನು ಇನ್ನಷ್ಟು ಶಕ್ತಿಯುತ ಸ್ನ್ಯಾಪ್‌ಡ್ರಾಗನ್ 805 SoC ನೊಂದಿಗೆ ಲಾಂಚ್ ಮಾಡುವ ಉದ್ದೇಶ ಕಂಪೆನಿಯದ್ದಾಗಿದೆ. ಅಂತೂ ಸ್ಯಾಮ್‌ಸಂಗ್ ಈ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಎಲ್ಲಾ ಪ್ರಮುಖ ಅಂಶಗಳಿಗೂ ಮಹತ್ವವನ್ನು ನೀಡಿದೆ.

ಇತ್ತೀಚಿನ ಒಂದು ವರದಿಯ ಪ್ರಕಾರ ಆಪಲ್ ಕೂಡ ಲ್ಯಾಪ್‌ಟಾಪ್ ಮತ್ತು ಟ್ಯಾಬ್ಲೆಟ್ ನಡುವೆ ವಿಶಿಷ್ಟ ಅಂಶವನ್ನು ಬಿಂಬಿಸುವಂತಹ 12.9 ಇಂಚಿನ ಐಪ್ಯಾಡ್ ಅನ್ನು ಬಿಡುಗಡೆಗೊಳಿಸುವ ಆಲೋಚನೆಯಲ್ಲಿದೆ. ಈ ಡಿವೈಸ್ ಎರಡು ವಿಭಿನ್ನ ರೆಸಲ್ಯೂಶನ್‌ಗಳಲ್ಲಿ ಲಾಂಚ್ ಆಗಲಿದೆ. ಒಂದು 2 ಕೆ ರೆಸಲ್ಯೂಶನ್ ಡಿಸ್‌ಪ್ಲೇಯನ್ನು ಹೊಂದಲಿದ್ದು ಇನ್ನೊಂದು 4 ಕೆ ರೆಸಲ್ಯೂಶನ್ ಡಿಸ್‌ಪ್ಲೇಯನ್ನು ಹೊಂದಿದೆ. ಪ್ರಸ್ತುತ ಐಪ್ಯಾಡ್ ಏರ್ ಮೋಡೆಲ್ 2048 x 1536 ಡಿಸ್‌ಪ್ಲೇಯನ್ನು ಒದಗಿಸುತ್ತದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot