ಭಾರತದಲ್ಲಿ 'ಇ-ಕಾಮರ್ಸ್' ಸಂಸ್ಥೆಗಳ ಹೈಟೆಕ್ ವಂಚನೆ ಬೆಳಕಿಗೆ!..ದಂಡ ವಿಧಿಸಿದ ಸರ್ಕಾರ!!

  |

  ಆನ್‌ಲೈನ್ ಖರೀದಿದಾರರಿಗೆ ಹೈಟೆಕ್ ಆಗಿ ಮೋಸ ಮಾಡುತ್ತಿದ್ದ ಇ ಕಾಮರ್ಸ್ ಕಂಪೆನಿಗಳಿಗೆ ಕೇಂದ್ರ ಸರ್ಕಾರ ಭಾರೀ ಶಾಕ್ ನೀಡಿದೆ. ಆನ್‌ಲೈನ್‌ನಲ್ಲಿ ಖರೀದಿ ಪ್ರಕ್ರಿಯೆಯಲ್ಲಿಯನ ಜನಪ್ರಿಯತೆಯನ್ನೇ ಬಂಡವಾಳ ಮಾಡಿಕೊಂಡು ಗ್ರಾಹಕರಿಗೆ ವಂಚಿಸುತ್ತಿದ್ದ ಇ ಕಾಮರ್ಸ್ ಕಂಪೆನಿಗಳಿಗೆ ಲಾಗಾಮು ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ ಎನ್ನುವ ಸುದ್ದಿ ಹೊರಬಿದ್ದಿದೆ.

  ಆನ್‌ಲೈನ್‌ನಲ್ಲಿ ಖರೀದಿಸುವ ಯಾವುದೇ ಉತ್ಪನ್ನದ ಹೆಸರು, ಉತ್ಪನ್ನಗಳ ಗರಿಷ್ಠ ಮಾರಾಟ ಬೆಲೆ (ಎಂಆರ್‌ಪಿ) ಸೇರಿದಂತೆ ಆಯ್ದ ಮಾಹಿತಿಯನ್ನು ಗೌಪ್ಯವಾಗಿಟ್ಟು ವಂಚಿಸುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಇ- ಮೇಲ್‌ ವಿಳಾಸದ ವಿವರವನ್ನು ಕಡ್ಡಾಯವಾಗಿ ಪ್ರಕಟಿಸಬೇಕೆಂಬ ಆದೇಶವಿದ್ದರೂ ಪಾಲನೆ ಮಾಡದಿರುವುದರಿಂದ ಗ್ರಾಹಕರು ವಂಚನೆಗೆ ಒಳಗಾಗುತ್ತಿದ್ದಾರೆ.

  ಭಾರತದಲ್ಲಿ 'ಇ-ಕಾಮರ್ಸ್' ಸಂಸ್ಥೆಗಳ ಹೈಟೆಕ್ ವಂಚನೆ ಬೆಳಕಿಗೆ!!

  ಹಾಗಾಗಿ, ಆನ್‌ಲೈನ್‌ನಲ್ಲಿ ವಸ್ತುಗಳ ಖರೀದಿಸುವ ಗ್ರಾಹಕ ಹಿತ ಕಾಪಾಡುವ ಸಲುವಾಗಿ ಉತ್ಪನ್ನದ ಆಯ್ದ ವಿವರಗಳನ್ನು ಕಡ್ಡಾಯವಾಗಿ ಪ್ರಕಟಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯ ಗೊಳಿಸಿದೆ ಮತ್ತು ಕೆಲ ಇ ಕಾಮರ್ಸ್ ತಾಣಗಳಿಗೆ ದಂಡವನ್ನು ಸಹ ವಿಧಿಸಿದೆ. ಹಾಗಾದರೆ, ಏನಿದು ಶಾಕಿಂಗ್ ಸುದ್ದಿ ಎಂಬ ಪೂರ್ಣ ಮಾಹಿತಿಯನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಗ್ರಾಹಕರಿಗೆ ಭಾರೀ ವಂಚನೆ.!

  ವಸ್ತುಗಳ ನಿವ್ವಳ ತೂಕ, ಆಕಾರ ಮತ್ತು ಸ್ವರೂಪ, ಉತ್ಪಾದಕ/ಆಮದುದಾರರ ಹೆಸರು ಮತ್ತು ವಿಳಾಸ ಹಾಗೂ ಸಮಸ್ಯೆ- ಆಕ್ಷೇಪಣೆಗಳಿದ್ದರೆ ದೂರು ಸಲ್ಲಿಸಲು ವಿಳಾಸ, ಸಂಪರ್ಕ ಸಂಖ್ಯೆ, ಇ- ಮೇಲ್‌ ವಿಳಾಸದ ವಿವರವನ್ನು ಕಡ್ಡಾಯವಾಗಿ ಪ್ರಕಟಿಸಬೇಕೆಂಬ ಆದೇಶವಿದ್ದರೂ ಪಾಲನೆಯಾಗದೆ ಗ್ರಾಹಕರು ವಂಚನೆಗೆ ಒಳಗಾಗುತ್ತಿರುವುದು ಮುಂದುವರೆದಿದೆ.

  ಇದು ಹೈಟೆಕ್ ಮೋಸ!

  ಆನ್‌ಲೈನ್‌ನಲ್ಲಿ ಖರೀದಿ ಪ್ರಕ್ರಿಯೆಯಲ್ಲಿ ಇ ಕಾಮರ್ಸ್ ಕಂಪೆನಿಗಳು ಆನ್‌ಲೈನ್‌ನಲ್ಲಿ ಖರೀದಿದಾರರಿಗೆ ಹೈಟೆಕ್ ಮೋಸ ಮಾಡುತ್ತಿವೆ. ಉದಾಹರಣೆಗೆ ಯಾವುದೇ ಉತ್ಪನ್ನ ಕೊಂಡಾಗ ಅದರ ಉಪ ಉತ್ಪನ್ನಗಳನ್ನು ನೀಡದಿರುವುದು, ವಸ್ತುಗಳ ಸಂಖ್ಯೆ, ಬಟ್ಟೆ ಅಳತೆಯಲ್ಲಿ ಲೋಪ, ಮೂಲ ಬೆಲೆಯನ್ನು ಪ್ರಕಟಿಸದೆ ಭಾರಿ ರಿಯಾಯ್ತಿ ನೀಡುವ ಇತರೆ ವಿಧಾನಗಳಲ್ಲಿ ವಂಚಿಸಲಾಗುತ್ತಿದೆ.

  ಎರಡು ಸಂಸ್ಥೆಗಳಿಗೆ ದಂಡ

  ಇ-ಕಾಮರ್ಸ್ ಕಂಪೆನಿಗಳು ನಿಯಮ ಉಲ್ಲಂಸುವುದನ್ನು ಪತ್ತೆ ಹಚ್ಚಲು, ದಂಡ ವಿಧಿಸುವ ಕಾರ್ಯವನ್ನು ಸರ್ಕಾರ ಆರಂಭಿಸಿದೆ. ಸರ್ಕಾರ ನಿಯಮಾನುಸಾರ ಸರಿಯಾದ ವಿವರಗಳನ್ನು ಪ್ರಕಟಿಸದ "ಹೋಮ್‌ಶಾಪ್ 18' ಮತ್ತು "ಫ್ಯಾಬ್ ಇಂಡಿಯಾ' ಸಂಸ್ಥೆಗಳಿಗೆ ಕ್ರಮವಾಗಿ 40,000 ರೂ. ಹಾಗೂ 10,000 ರೂ. ದಂಡ ವಿಧಿಸಿ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ.

  ದೊಡ್ಡ ದೊಡ್ಡ ಕಂಪೆನಿಗಳಿಗೂ ಶಾಕ್!

  ಹೋಮ್‌ಶಾಪ್ 18 ಮತ್ತು ಫ್ಯಾಬ್ ಇಂಡಿಯಾ ಸಂಸ್ಥೆಗಳಿಗೆ ದಂಡವನ್ನು ವಿಧಿಸಲಾಗಿದ್ದರೆ, ಅಮೇಜಾನ್, ಪೆಟ್ ಶಾಪ್ ಇಂಡಿಯಾ ಡಾಟ್ ಕಾಮ್‌, ಶಾಪ್ ಕ್ಲೂಸ್‌ ಹಾಗೂ ಮಿಂತ್ರ ಸಂಸ್ಥೆಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ವಿಚಾರಣೆ ನಡೆಸುತ್ತಿರುವ ಸಂಸ್ಥೆ ಸರ್ಕಾರದಿಂದ ಸ್ಪಷ್ಟನೆ ಪಡೆದು ಮತ್ತಷ್ಟು ತೀವ್ರ ಕಾಯಾಚರಣೆ ನಡೆಸಲು ಸಿದ್ಧತೆ ನಡೆದಿದೆ ಎನ್ನಲಾಗಿದೆ.

  ಉತ್ಪಾದಕರ ಜವಾಬ್ದಾರಿ

  ಸ್ತುಗಳನ್ನು ಮಾರಾಟ ಮಾಡುವ ಮುನ್ನ ಆ ವಸ್ತುವಿನ ಆಯ್ದ ವಿವರಗಳನ್ನು ಕಡ್ಡಾಯವಾಗಿ ಪ್ರಕಟಿಸುವುದು ಉತ್ಪಾದಕರ ಜವಾಬ್ದಾರಿಯೇ ಇಲ್ಲವೇ ಮಾರಾಟ ಮಾಡುವ ಸಂಸ್ಥೆಯ ಹೊಣೆಗಾರಿಕೆಯಾಗಿರಲಿದೆ ಎಂದು ಹೇಳಲಾಗಿದೆ. ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಉತ್ಪನ್ನಗಳ ಎಂಆರ್‌ಪಿ ಸೇರಿದಂತೆ ಆಯ್ದ ಆರು ವಿವರ ಪ್ರಕಟಿಸುವುದನ್ನು ಕಡ್ಡಾಯಗೊಳಿಸಿದೆ.

  ಕಡ್ಡಾಯವಾಗಿ ಪ್ರಕಟಿಸಬೇಕಾದ ವಿವರಗಳು ಹೀಗಿವೆ.!

  ಎಂಆರ್‌ಪಿ ಜೊತೆಗೆ, ಯಾವುದೇ ಉತ್ಪನ್ನದ ಹೆಸರು, ವಸ್ತುವಿನ ನಿವ್ವಳ ತೂಕ, ಉತ್ಪನ್ನದ ಆಕಾರ ಸ್ವರೂಪ, ದೂರು ಸಲ್ಲಿಕೆ ವಿಳಾಸ, ಸಂಪರ್ಕ ಸಂಖ್ಯೆ, ಇ- ಮೇಲ್‌ ಹಾಗೂ ಉತ್ಪಾದಕ/ ಪ್ಯಾಕರ್‌/ ಆಮದುದಾರರ ಹೆಸರು, ವಿಳಾಸಗಳನ್ನು ಇನ್ಮುಂದೆ ಇ ಕಾಮರ್ಸ್ ಕಂಪೆನಿಗಳು ಕಡ್ಡಾಯವಾಗಿ ಪ್ರಕಟಿಸಬೇಕಾಗಿದೆ.

  ಆನ್‌ಲೈನ್ ಕಂಪೆನಿಗಳು ಮಾಡುವ ಅಮೇಜಿಂಗ್ ಮೋಸಗಳಿವು!..ಎಲ್ಲರೂ ತಿಳಿಯಲೇಬೇಕು!!

  ಆನ್‌ಲೈನ್ ಮಾರುಕಟ್ಟೆಯಲ್ಲಿ ಎಲ್ಲವೂ ಕಡಿಮೆ ದರದಲ್ಲಿಯೇ ಸಿಗಲಿದೆ ಎಂಬ ಪೂರ್ವಗ್ರಹ ನಂಬಿಕೆಯೊಂದು ಇಂದಿನ ಡಿಜಿಟಲ್ ಯುಗದಲ್ಲಿ ಸೃಷ್ಟಿಯಾಗಿದೆ. ಹಾಗಾಗಿ, ಎಷ್ಟೋ ಬಾರಿ ಒಂದು ಖರೀದಿಯ ವಾಸ್ತವ ಬೆಲೆಯನ್ನು ಬೇರೆಡೆ ಪರೀಕ್ಷಿಸದೇ ಆನ್‌ಲೈನಿನಲ್ಲಿ ವಸ್ತುಗಳನ್ನು ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ ಎಂದರೆ ಅದು ನಮ್ಮ ಮೂರ್ಖತನ.
  ಆನ್‌ಲೈನಿನಲ್ಲಿ ಕೆಲವೊಂದು ಆಫರ್‌ಗಳು ಲಾಭವಾಗಬಹುದಾದರೂ ಅದನ್ನು ಸಮರ್ಥವಾಗಿ ತಿಳಿದುಕೊಳ್ಳಬೇಕಿರುತ್ತದೆ. ಇಲ್ಲವಾದಲ್ಲಿ ನೀವು ಮೋಸಹೋಗಬಹುದು. ಇದಕ್ಕೆ ಉದಾಹರಣೆ ಎಂದರೆ, ಆನ್‌ಲೈನ್‌ ಕಂಪನಿಗಳಾದ ಇಬೇ, ಅಮೆಜಾನ್‌ಗಳು "ರಿಫ‌ರ್ಬಶಿಂಗ್‌ ಐಟಂ'ಗಳನ್ನು ಮಾರಲಾರಂಭಿಸಿವೆ. ಆದರೆ, ಈ ಮಾಹಿತಿ ನಮ್ಮ ಕಣ್ಣಿಗೆ ಕಾಣಿಸದಂತೆ ಇರುತ್ತದೆ.!

  ಇಷ್ಟಕ್ಕೂ ರಿಫ‌ರ್ಬಶಿಂಗ್ ಎಂದರೆ, ಗ್ಯಾರಂಟಿ ಅವಧಿಯಲ್ಲಿ ದೋಷಪೂರಿತವಾದ ತಯಾರಿಕೆಯನ್ನು ಅಧಿಕೃತ ರಿಪೇರಿಗಾರರಿಂದ ಸರಿಪಡಿಸಿ ಮಾರಾಟಗಾರ ಮತ್ತೆ ವ್ಯಾಪಾರಕ್ಕೆ ಬಿಟ್ಟಿರುವಂತದು. ಹಾಗಾಗಿ, ಇಂದಿನ ಲೇಖನದಲ್ಲಿ ಆನ್‌ಲೈನ್ ಕಂಪೆನಿಗಳು ನಮಗೆ ಮಾಡುತ್ತಿರುವ ಅಮಮೇಜಿಂಗ್ ಮೋಸಗಳು ಯಾವುವು ಎಂಬುದನ್ನು ತಿಳಿದುಕೊಳ್ಳೊಣ!!

  ಬೆಲೆ ಕಮ್ಮಿ ಇದ್ದರೂ ಖರೀದಿ ಕಷ್ಟ!!

  ಮೊದಲೇ ಹೇಳಿದಂತೆ ಇ ಬೇ, ಅಮೆಜಾನ್‌ಗಳು "ರಿಫ‌ರ್ಬಶಿಂಗ್‌ ಐಟಂ'ಗಳನ್ನು ಮಾರಲಾರಂಭಿಸಿವೆ. ರಿಫ‌ರ್ಬಶಿಂಗ್‌ ಐಟಂಗಳ ಖರೀದಿ ದರದಲ್ಲಿ ಸದರಿ ಐಟಂನ ಬೆಲೆ ಇವತ್ತಿನ ಎಂಆರ್‌ಪಿಗಿಂತ ಬೆಲೆ ತೀರಾ ಕಡಿಮೆ ಇರುತ್ತದೆ. ಇದಕ್ಕೆ ಕೇವಲ ಮಾರಾಟಗಾರರ ಗ್ಯಾರಂಟಿ ಮಾತ್ರ ಲಭ್ಯವಾಗುತ್ತದೆ. ಹಾಗಾಗಿ, ಬೆಲೆ ಕಮ್ಮಿ ಇದ್ದರೆ ಎಚ್ಚರ ವಹಿಸುವುದು ಉತ್ತಮ.

  ಆನ್‌ಲೈನ್‌ನಲ್ಲೂ ನಯವಂಚನೆ!

  ಆನ್‌ಲೈನ್‌ ದೈತ್ಯ ಅಮೆಜಾನ್‌ ತನ್ನ ಅಮೆಜಾನ್‌ ಪೇ ಗ್ರಾಹಕರಿಗೆ ಅಕೌಂಟ್‌ಗೆ 500 ರೂ. ತುಂಬಿದರೆ ನಿಮಗೆ ಅದಕ್ಕೆ 100 ರೂ. ಕ್ಯಾಷ್‌ಬ್ಯಾಕ್‌ ನೀಡುವುದಾಗಿ ಹೇಳಿಕೊಂಡಿತು. ಆದರೆ, . 500 ರೂ. ಭರ್ತಿ ಮಾಡಿದವರಿಗೆ ಹೆಚ್ಚುವರಿ 100 ರೂ. ಸಿಗಲಿಲ್ಲ. ಅಲ್ಲಿಟ್ಟ ಹಣಕ್ಕೆ ಏನಾದರೊಂದು ಖರೀದಿ ಮಾಡಲೇಬೇಕು ಎಂಬ ಷರತ್ತನ್ನು ಕಣ್ಣಿಗೆ ಕಾಣದಂತೆ ಅಮೆಜಾನ್ ಹೇಳಿತ್ತು. ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

  up to ಸೂಪರ್‌ ಕ್ಯಾಷ್!

  ಗ್ರಾಹಕರು ಯಾವ ಅನುಮಾನವಿಲ್ಲದೇ ಈ up to ಕ್ಯಾಷ್ ಬ್ಯಾಕ್ ಆಫರ್ ಅನ್ನು ನಂಬದೇ ಇದ್ದರೆ ಒಳಿತು. ಇರುವ ಹತ್ತು ವಸ್ತುಗಳಲ್ಲಿ ಡಮ್ಮಿಯಂತಹ ಒಂದು ವಸ್ತುವಿಗೆ ಹೆಚ್ಚು ಕ್ಯಾಶ್‌ಬ್ಯಾಕ್ ನೀಡಿ ಮಾರಾಟ ಮಾಡುವ ತಂತ್ರ ಇದು. ಇತ್ತೀಚೆಗೆ ಕ್ಯಾಶ್‌ಬ್ಯಾಕ್‌ ಎಂಬ ವಾಲೆಟ್‌ಗಳ ಆಕರ್ಷಕ ಸ್ಲೋಗನ್‌ನ ಕೊನೆಯಲ್ಲಿ ಅದನ್ನು ಸೂಪರ್‌ ಕ್ಯಾಷ್ ಸೂತ್ರ ಜಾರಿಗೆ ಬಂದಿದೆ.

  ಮೊಬಿಕ್ವಿಕ್ ಸೂಪರ್‌ ಕ್ಯಾಶ್‌?

  ಮೊಬಿಕ್ವಿಕ್ ಪಾವತಿ ನಿಮಗೆ ಗೊತ್ತಿರಬಹುದು. ಈ ಪಾವತಿ ಆಪ್ 100 ರೂ. ಸೂಪರ್‌ ಕ್ಯಾಶ್‌ ಎಂಬ ಆಫರ್ ಅನ್ನು ನೀಡಿದೆ. 100 ರೂಪಾಯಿಗಳ ಸೂಪರ್‌ ಕ್ಯಾಶ್‌ಬ್ಯಾಕ್ ನಲ್ಲಿ ಗ್ರಾಹಕ ತನ್ನ ಪ್ರತಿ ಖರೀದಿಯ ಶೇ. 10ರಷ್ಟನ್ನು ಮಾತ್ರ ಬಳಸಿಕೊಳ್ಳಬಹುದು. ಹಾಗಾಗಿ, 100 ರೂ. ಸೂಪರ್‌ ಕ್ಯಾಶ್‌ ಬಳಸಿಕೊಳ್ಳಲು ಸಾವಿರ ರೂ. ವ್ಯಾಪಾರ ಮಾಡಬೇಕು.

  ಕಮರ್ಷಿಯಲ್ ಜಾಹೀರಾತು!

  ಫೇಸ್‌ಬುಕ್ ಬಳಕೆದಾರರಿಗೆ ಫೇಸ್‌ಬುಕ್ ಯಾವುದೋ ಆನ್‌ಲೈನ್‌ ಕಂಪನಿಯ ಕಮರ್ಷಿಯಲ್‌ ಜಾಹೀರಾತು ನೀಡುತ್ತದೆ. ಆ ಕಂಪೆನಿಯನ್ನು ನಿಮ್ಮ ಸ್ನೇಹಿತರು ಲೈಕ್ ಮಾಡಿರುವುದಾಗಿ ಪೋಸ್ಟ್‌ನಲ್ಲಿ ತೋರಿಸುತ್ತದೆ. ಸ್ನೇಹಿತರು ಲೈಕ್ ಮಾಡಿರುವ ಆ ಆನ್‌ಲೈನ್ ಕಂಪೆನಿಗಳು ಮೋಸ ಮಾಡುವ ಕಂಪೆನಿಗಳು ಆಗಿರಬಹುದು ಎಂದು ತಿಳೀಯುವುದಿಲ್ಲ. ಇದರಿಂದ ಏನೂ ತಿಳಿಯದವರೂ ಗುಂಡಿಗೆ ಬೀಳುತ್ತಾರೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Who Cheats and How?: Scams, Frauds and the Dark Side of the Corporate World. to know more visit to kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more