ಸೆನ್ಹೈಸರ್‌ ನಿಂದ ಹೊಸ ಹೆಡ್‌ಫೋನ್‌ ಬಿಡುಗಡೆ!..60 ಗಂಟೆಗಳ ಬ್ಯಾಟರಿ ಬಾಳಿಕೆ ಸಾಮರ್ಥ್ಯ!

|

ಪ್ರಸ್ತುತ ದಿನಗಳಲ್ಲಿ ವಾಯರ್‌ಲೆಸ್‌ ಹೆಡ್‌ಫೋನ್‌ಗಳು ಭಾರಿ ಬೇಡಿಕೆ ಪಡೆದುಕೊಂಡಿವೆ. ಸ್ಮಾರ್ಟ್‌ಫೋನ್‌ ಬಳಸುವ ಬಹುತೇಕ ಮಂದಿ ಜೊತೆಗೊಂದು ವಾಯರ್‌ಲೆಸ್‌ ಹೆಡ್‌ಫೋನ್‌ ಬಳಸುವುದಕ್ಕೆ ಬಯಸುತ್ತಾರೆ. ಇದಕ್ಕೆ ತಕ್ಕಂತೆ ಹೆಡ್‌ಫೋನ್‌ ತಯಾರಕ ಕಂಪೆನಿಗಳು ವೈವಿಧ್ಯಮಯ ಹೆಡ್‌ಫೋನ್‌ಗಳನ್ನು ಪರಿಚಯಿಸುತ್ತಾ ಬಂದಿವೆ. ಇದರಲ್ಲಿ ಸೆನ್ಹೈಸರ್‌ ಕಂಪೆನಿ ಕೂಡ ಒಂದಾಗಿದೆ. ಸೆನ್ಹೈಸರ್‌ ಕಂಪೆನಿ ತನ್ನ ಭಿನ್ನ ಮಾದರಿಯ ಹೆಡ್‌ಫೋನ್‌ಗಳಿಂದ ಗುರುತಿಸಿಕೊಂಡಿದೆ. ಸದ್ಯ ಇದೀಗ ಭಾರತದಲ್ಲಿ ತನ್ನು ಹೊಸ ವಾಯರ್‌ಲೆಸ್‌ ಹೆಡ್‌ಫೋನ್‌ ಲಾಂಚ್‌ ಮಾಡಿದೆ.

ಸೆನ್ಹೈಸರ್‌

ಹೌದು, ಸೆನ್ಹೈಸರ್‌ ಕಂಪೆನಿ ಭಾರತದಲ್ಲಿ ಹೊಸ ಸೆನ್ಹೈಸರ್‌ ಮೊಮೆಂಟಮ್‌ 4 ವಾಯರ್‌ಲೆಸ್‌ ಹೆಡ್‌ಫೋನ್‌ ಬಿಡುಗಡೆ ಮಾಡಿದೆ. ಇದು ಒವರ್‌-ಇಯರ್‌ ವಾಯರ್‌ಲೆಸ್‌ ಹೆಡ್‌ಫೋನ್‌ ಆಗಿದೆ. ಈ ಹೆಡ್‌ಫೋನ್‌ಗಳು ಸುಧಾರಿತ ಬ್ಲೂಟೂತ್ ಕೊಡೆಕ್‌ಗಳಿಗೆ ಬೆಂಬಲಿಸಲಿದ್ದು, ಬ್ಲೂಟೂತ್ 5.2 ಕನೆಕ್ಟಿವಿಟಿಯನ್ನು ಹೊಂದಿದೆ. ಇದಲ್ಲದೆ ಈ ಹೆಡ್‌ಫೋನ್‌ಗಳು ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಮತ್ತು ಅಪ್ಲಿಕೇಶನ್ ಬೆಂಬಲವನ್ನು ಪಡೆದಿವೆ. ಇನ್ನುಳಿದಂತೆ ಸೆನ್ಹೈಸರ್‌ ಮೊಮೆಂಟಮ್‌ 4 ಹೆಡ್‌ಫೋನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೊಮೆಂಟಮ್‌

ಸೆನ್ಹೈಸರ್‌ ಮೊಮೆಂಟಮ್‌ 4 ವಾಯರ್‌ಲೆಸ್‌ ಹೆಡ್‌ಫೋನ್‌ ಪ್ರೀಮಿಯಂ-ಗ್ರೇಡ್ ಕಾರ್ಯಕ್ಷಮತೆ ಮತ್ತು ಪಂಕ್ಷನ್‌ ನೀಡಲಿದೆ. ಇದು ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಹೊಂದಿದೆ. ಅಲ್ಲದೆ AptX ಮತ್ತು aptX ಅಡಾಪ್ಟಿವ್ ಬ್ಲೂಟೂತ್ ಕೊಡೆಕ್‌ಗಳಿಗೆ SBC ಮತ್ತು AAC ಜೊತೆಗೆ ಅಡ್ವಾನ್ಸ್‌ ಬ್ಲೂಟೂತ್ ಕೊಡೆಕ್ ಬೆಂಬಲವನ್ನು ಕೂಡ ಹೊಂದಿದೆ. ಇನ್ನು ಈ ಹೆಡ್‌ಫೋನ್‌ ಸ್ಮಾರ್ಟ್ ಕಂಟ್ರೋಲ್ ಅಪ್ಲಿಕೇಶನ್ ಮೂಲಕ ಅಪ್ಲಿಕೇಶನ್ ಬೆಂಬಲವನ್ನು ನೀಡಲಿದೆಈ ಹೆಡ್‌ಫೋನ್‌ಗಳು ಕನೆಕಟಿವಿಟಿಗಾಗಿ ಬ್ಲೂಟೂತ್ 5.2 ಅನ್ನು ಬೆಂಬಲಿಸಲಿದ್ದು, ಉತ್ತಮ ಅನುಭವವನ್ನು ನೀಡಲಿವೆ.

ಚಾರ್ಜಿಂಗ್

ಇದು USB ಟೈಪ್-C ಮೂಲಕ ಫಾಸ್ಟ್‌ ಚಾರ್ಜಿಂಗ್ ಅನ್ನು ನೀಡಲಿದ್ದು, ಪ್ರತಿ ಚಾರ್ಜ್‌ಗೆ 60 ಗಂಟೆಗಳ ಕ್ಲಾಸ್-ಲೀಡಿಂಗ್ ಬ್ಯಾಟರಿ ಬಾಳಿಕೆಯನ್ನು ನೀಡಲಿವೆ. ಈ ಹೆಡ್‌ಫೋನ್‌ಗಳು 42mm ಡೈನಾಮಿಕ್ ಆಡಿಯೋ ಡ್ರೈವರ್‌ಗಳು, ವಾಯ್ಸ್‌ ಮತ್ತು ANC ಕಾರ್ಯಕ್ಕಾಗಿ ನಾಲ್ಕು ಮೈಕ್ರೊಫೋನ್‌ಗಳನ್ನು ಒಳಗೊಂಡಿವೆ. ಇನ್ನು ಸೆನ್ಹೈಸರ್‌ ಮೊಮೆಂಟಮ್‌ 4 ವಾಯರ್‌ಲೆಸ್‌ ಹೆಡ್‌ಫೋನ್‌ 6-22,000Hz ಫ್ರೀಕ್ವೆನ್ಸಿ ರೆಸ್ಪಾನ್ಸ್‌ ರೇಂಜ್‌ ಅನ್ನು ಹೊಂದಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸೆನ್ಹೈಸರ್ ಮೊಮೆಂಟಮ್ 4 ವಾಯರ್‌ಲೆಸ್‌ ಹೆಡ್‌ಫೋನ್‌ ಭಾರತದಲ್ಲಿ 34,990ರೂ. ಬೆಲೆಯನ್ನು ಹೊಂದಿದೆ. ಇದು ಸನ್ಹೈಸರ್‌ ಕಂಪೆನಿಯ ಅತ್ಯಂತ ದುಬಾರಿ ವಾಯರ್‌ಲೆಸ್ ಹೆಡ್‌ಸೆಟ್‌ಗಳಲ್ಲಿ ಒಂದಾಗಿದೆ. ಇನ್ನು ಈ ಹೆಡ್‌ಫೋನ್‌ ಅನ್ನು ಸನ್ಹೈಸರ್‌ ಕಂಪೆನಿಯ ಅಧಿಕೃತ ಇ-ಸ್ಟೋರ್ ಮತ್ತು ಅಮೆಜಾನ್ ಇಂಡಿಯಾದ ಮೂಲಕ ಖರೀದಿಸಬಹುದಾಗಿದೆ.

ಹೆಡ್‌ಫೋನ್‌ಗಳನ್ನು

ಇನ್ನು ನೀವು ಯಾವುದೇ ಕಂಪೆನಿಯ ಹೆಡ್‌ಫೋನ್‌ಗಳನ್ನು ಖರೀದಿಸುವ ಮುನ್ನ ಮರೆಯದೆ ಕೆಲವೊಂದು ಅಂಶಗಳನ್ನು ಗಮನಿಸುವುದು ಉತ್ತಮ. ಏಕೆಂದರೆ ಹೆಡ್‌ಫೋನಿನಲ್ಲಿ ಹಲವು ಮಾಡೆಲ್‌ಗಳ ಆಯ್ಕೆಗಳು ಲಭ್ಯ ಇವೆ. ಅವುಗಳಲ್ಲಿ ಕೆಲವು ಇನ್‌-ಇಯರ್‌ ಮಾದರಿ ಆಗಿದ್ದರೇ, ಮತ್ತೆ ಕೆಲವು ಆನ್‌-ಇಯರ್‌ ರಚನೆ ಪಡೆದಿರುತ್ತವೆ. ಇದಲ್ಲದೇ ಇನ್ನೂ ಕೆಲವು ಡಿವೈಸ್‌ಗಳು ಓವರ್-ಇಯರ್‌ ಮಾದರಿಯ ವಿನ್ಯಾಸ ಪಡೆದಿರುತ್ತವೆ. ನಿಮಗೆ ಸರಿ ಹೊಂದುವ ಹೆಡ್‌ಫೋನ್ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಿರಿ.

ಆಡಿಯೊ

ಇದಲ್ಲದ ಇತ್ತೀಚಿಗೆ ಬಹುತೇಕ ಆಡಿಯೊ ಕಂಪನಿಗಳು ತಮ್ಮ ಹೆಡ್‌ಫೋನ್‌ ಉತ್ಪನ್ನಗಳ ಜಾಹಿರಾತು ನೀಡಿರುತ್ತವೆ. ಅವುಗಳಲ್ಲಿ ಆ ಉತ್ಪನ್ನದ ವಿಶೇಷ ಫೀಚರ್ಸ್‌ಗಳು ಮತ್ತು ಆಯ್ಕೆಗಳ ಕುರಿತು ಮಾಹಿತಿ ನೀಡಿರುತ್ತಾರೆ. ಖರೀದಿಸುವ ಸಮಯದಲ್ಲಿ ಬ್ಲೂಟೂತ್‌ ಸ್ಪೀಕರ್‌ನಲ್ಲಿ ನೀಡಿರುವ ಫೀಚರ್ಸ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ ಮತ್ತು ಅದರ ವಿಶೇಷತೆಯೆನು ಎಂಬುದನ್ನು ಅರಿಯಿರಿ.

ಹೇಳುತ್ತಾರೆ

ಇದರೊಂದಿಗೆ ಹೆಡ್‌ಫೋನ್‌ ಸ್ಪೀಕರ್ಸ್‌ ತರಗಾಂತರಗಳ ಅಳತೆಯನ್ನು ಹರ್ಡ್ಜ್‌ನಲ್ಲಿ ಹೇಳುತ್ತಾರೆ. ಸಾಮಾನ್ಯವಾಗಿ ಬಹುತೇಕ ಹೆಡ್‌ಫೋನ್‌ಗಳು 20 Hz - 20000 Hz ಅಂತರದಲ್ಲಿ ತರಗಾಂತರಗಳನ್ನು ಬೆಂಬಲಿಸುತ್ತವೆ. ನೀವು ಹೆಚ್ಚಿನ ಬಾಸ್‌ ಆಯ್ಕೆ ಬಯಸಿದಿರೇ ಅಧಿಕ ತರಂಗಾಂತರದ ಸೌಲಭ್ಯದ ಡಿವೈಸ್‌ ಖರೀದಿಸುವುದು ಉತ್ತಮ.

ಹೆಡ್‌ಫೋನ್‌

ಹೆಡ್‌ಫೋನ್‌ ನಿಮ್ಮ ಕಿವಿಗೆ ಆರಾಮದಾಯಕವಾಗಿದೆಯೇ ಎಂದು ಪ್ರಯತ್ನಿಸಿ ಮತ್ತು ಪರಿಶೀಲಿಸಿ. ಜನರ ಕಿವಿಗಳು ಒಂದೇ ರೀತಿ ಆಗಿರುವುದಿಲ್ಲ ಮತ್ತು ಪ್ರತಿಯೊಂದು ಡಿವೈಸ್‌ ನಿಮಗೆ ಸರಿಹೊಂದುವುದಿಲ್ಲ. ಕಿವಿಗಳಿಗೆ ಹಿತವೆನಿಸುವ ರಚನೆಯನ್ನು ಹೊಂದಿರುವ ಡಿವೈಸ್‌ ಆಯ್ಕೆ ಮಾಡುವುದು ಉತ್ತಮ.

Best Mobiles in India

English summary
Sennheiser Momentum 4 Wireless Headphones Launched in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X