ಫೇಸ್‌ಬುಕ್‌, ಗೂಗಲ್‌, ವಾಟ್ಸ್ಆಪ್‌ಗೆ ಸುಪ್ರೀಂಕೋರ್ಟ್ ಛೀಮಾರಿ!..ದಂಡ ಪಾವತಿಸಲು ಆದೇಶ!!

|

ಸಾಮಾಜಿಕ ಜಾಲತಾಣಗಳಿಂದ ಲೈಂಗಿಕ ಹಿಂಸೆಯ ವಿಡಿಯೊಗಳನ್ನು ತೆಗೆದುಹಾಕಲು ವಿಫಲವಾಗಿರುವ ಫೇಸ್‌ಬುಕ್‌, ಗೂಗಲ್‌, ವಾಟ್ಸ್ ಆಪ್‌ ಸೇರಿದಂತೆ ಬಹುತೇಕ ಎಲ್ಲಾ ಸಾಮಾಜಿಕ ಜಾಲತಾಣ ಕಂಪನಿಗಳಿಗೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ. ಲೈಂಗಿಕ ಹಿಂಸೆಯ ದೃಶ್ಯಾವಳಿಗಳನ್ನು ಶಾಶ್ವತವಾಗಿ ಸ್ಥಗಿತಗೊಳಿಸುವಂತೆ ತಾಕೀತು ಮಾಡಿ ತಲಾ 1 ಲಕ್ಷ ದಂಡ ವಿಧಿಸಿದೆ.

ನ್ಯಾಯಮೂರ್ತಿಗಳಾದ ಮದನ್ ಬಿ.ಲೋಕೂರ್‌ ಮತ್ತು ಯು.ಯು.ಲಲಿತ್‌ ಅವರಿದ್ದ ದ್ವಿಸದಸ್ಯ ಪೀಠವು ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿದೆ. ಲೈಂಗಿಕ ದೌರ್ಜನ್ಯದ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಿಂದ ಅಳಿಸಿ ಹಾಕಲು ಯಾವುದೇ ಕ್ರಮ ಕೈಗೊಂಡಿರದೇ ಇರುವ ಈ ಕಂಪನಿಗಳ ವಿರುದ್ಧ ಸುಪ್ರೀಂಕೋರ್ಟ್ ಕಿಡಿಕಾರಿದೆ.

ಫೇಸ್‌ಬುಕ್‌, ಗೂಗಲ್‌, ವಾಟ್ಸ್ಆಪ್‌ಗೆ ಸುಪ್ರೀಂಕೋರ್ಟ್ ಛೀಮಾರಿ!!

ಸಮಿತಿಯ ವರದಿ ಅನುಸಾರ ಇಂಥ ವಿಡಿಯೊಗಳನ್ನು ತೆಗೆದು ಹಾಕಲು ಏನೆಲ್ಲ ಕ್ರಮ ಕೈಗೊಂಡಿವೆ ಎನ್ನುವುದರ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಲು ಕಳೆದ ಏಪ್ರಿಲ್‌ 16ರಂದೇ ಆದೇಶ ನೀಡಿದ್ದೆವು. ಆದರೆ, ಪ್ರತಿವಾದಿಗಳು (ಎಲ್ಲಾ ಸಾಮಾಜಿಕ ಜಾಲತಾಣಗಳು) ಇದುವರೆಗೂ ಯಾವುದೇ ಪ್ರಮಾಣ ಪತ್ರ ಸಲ್ಲಿಸಿಲ್ಲ ಎಂದು ಪೀಠವು ಅಸಮಾಧಾನ ವ್ಯಕ್ತಪಡಿಸಿದೆ.

How to Send a WhatsApp Message Without Saving the Contact in Your Phone - GIZBOT KANNADA

ಇದರಿಂದ ಲೈಂಗಿಕ ಹಿಂಸೆಯ ದೃಶ್ಯಾವಳಿಗಳನ್ನು ಶಾಶ್ವತವಾಗಿ ಸ್ಥಗಿತಗೊಳಿಸುವಂತೆ ತಾಕೀತು ಮಾಡಿರುವ ಪೀಠವು, ಈ ಬಗ್ಗೆ ಕೈಗೊಂಡಿರುವ ಕ್ರಮಗಳ ಪ್ರಗತಿ ಬಗ್ಗೆಯೂ ಜೂನ್‌ 15ರೊಳಗೆ ಪ್ರಮಾಣ ಪತ್ರ ಸಲ್ಲಿಸಬೇಕೆಂದು ನಿರ್ದೇಶನ ನೀಡಿದೆ. ಈ ಸವಾಲು ಸಾಧಿಸಲು ಬೇಕಾದರೆ ಇನ್ನಷ್ಟು ಸಮಯಾವಕಾಶ ತೆಗೆದುಕೊಳ್ಳಿ. ಆದರೆ, ಸರಿಯಾದ ರೀತಿಯಲ್ಲಿ ಸಂಪೂರ್ಣ ಜಾರಿಗೆ ತರಬೇಕು ಎಂದು ತಿಳಿಸಿದೆ.

ಫೇಸ್‌ಬುಕ್‌, ಗೂಗಲ್‌, ವಾಟ್ಸ್ಆಪ್‌ಗೆ ಸುಪ್ರೀಂಕೋರ್ಟ್ ಛೀಮಾರಿ!!

ಆನ್‌ಲೈನ್‌ನಲ್ಲಿ ನಡೆಯುವ ಅಪರಾಧ ತಡೆಯಲು ಮತ್ತು ಅಪರಾಧ ಚಟುವಟಿಕೆ ಮೇಲೆ ನಿಗಾ ಇಡಲು ಸಮಗ್ರವಾದ 'ಪೋರ್ಟಲ್ ಬೀಟಾ ಆವೃತ್ತಿ' ರೂಪಿಸಲಾಗುತ್ತಿದ್ದು, ಅಂತಿಮ ಹಂತದಲ್ಲಿದೆ. ಇದನ್ನು ಜುಲೈ 15ರೊಳಗೆ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿತು. ನಂತರ, ಪೋರ್ಟಲ್ ಬೀಟಾ ಆವೃತ್ತಿ ಬಿಡುಗಡೆಗೆ ಜುಲೈ 30ರವರೆಗೆ ಸಮಯಾವಕಾಶವನ್ನು ಕೇಂದ್ರ ಗೃಹ ವ್ಯವಹಾರ ಸಚಿವಾಲಯಕ್ಕೆ ಸುಪ್ರೀಂಕೋರ್ಟ್ ನೀಡಿದೆ.

ಓದಿರಿ: ಆನ್‌ಲೈನ್ ಕಂಪೆನಿಗಳು ಮಾಡುವ ಅಮೇಜಿಂಗ್ ಮೋಸಗಳಿವು!..ಎಲ್ಲರೂ ತಿಳಿಯಲೇಬೇಕು!!

Best Mobiles in India

English summary
The Supreme Court on Monday, 21 May, imposed a fine of Rs 1 lakh each on Internet giants Google, Facebook, Yahoo, Microsoft and WhatsApp. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X