ರೈಲು ಪ್ರಯಾಣಿಕರಿಗೆ ಬಿಗ್‌ ಶಾಕ್‌! ಸೇಲ್‌ ಆಗ್ತಿದೆ ನಿಮ್ಮ ವೈಯುಕ್ತಿಕ ಮಾಹಿತಿ!

|

ನೀವು ರೈಲಿನ ಮೂಲಕ ಪ್ರಯಾಣ ಮಾಡ್ತಾ ಇದ್ದೀರಾ, ಹಾಗಾದ್ರೆ ಈ ಸುದ್ದಿಯನ್ನು ಗಮನಿಸಲೇಬೇಕು. ಯಾಕಂದ್ರೆ ದೇಶದ ಪ್ರಮುಖ ಸಾರಿಗೆ ವ್ಯವಸ್ಥೆಯಾಗಿರುವ ಭಾರತೀಯ ರೈಲ್ವೆ ಬಳಕೆದಾರರ ಡೇಟಾ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ರೈಲ್ವೆ ಪ್ರಯಾಣಿಕರ ವೈಯುಕ್ತಿಕ ಡೇಟಾ ಇದೀಗ ಡಾರ್ಕ್‌ ವೆಬ್‌ ಮೂಲಕ ಸೇಲ್‌ ಆಗ್ತಿದೆ ಎಂದು ವರದಿಯಾಗಿದೆ. ಈ ಮೂಲಕ ರೈಲು ಪ್ರಯಾಣಿಕರ ಮಾಹಿತಿ ಸುರಕ್ಷಿತವಾಗಿಲ್ಲ ಎಂದು ಹೇಳಲಾಗಿದೆ. ಡಾರ್ಕ್ ವೆಬ್ ಮೂಲಕ ಹ್ಯಾಕರ್‌ಗಳು ಡೇಟಾವನ್ನು ಮಾರಾಟಕ್ಕೆ ಇಟ್ಟಿದ್ದಾರೆ ಎಂದು ಹೇಳಲಾಗಿದೆ.

ಇಲಾಖೆ

ಹೌದು, ಭಾರತದ ರೈಲ್ವೆ ಇಲಾಖೆ ಹಾಗೂ ರೈಲು ಪ್ರಯಾಣಿಕರಿಗೆ ಬಿಗ್‌ ಶಾಕ್‌ ಎದುರಾಗಿದೆ. ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (AIIMS) ನಲ್ಲಿನ ಡೇಟಾ ಉಲ್ಲಂಘನೆ ವರದಿಯಾದ ಕೆಲವೇ ದಿನಗಳಲ್ಲಿ ಈ ಸುದ್ದಿ ಹೊರ ಬಿದ್ದಿದೆ. ಇದರಲ್ಲಿ ಬಳಕೆದಾರರ ಇಮೇಲ್, ಮೊಬೈಲ್ ಸಂಖ್ಯೆ, ವಿಳಾಸ, ವಯಸ್ಸು ಮತ್ತು ಲಿಂಗ ಸೇರಿದಂತೆ ಬಹಳಷ್ಟು ವಿಚಾರವನ್ನು ಹ್ಯಾಕರ್‌ಗಳು ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಹಾಗಾದ್ರೆ ರೈಲ್ವೆ ಮಾಹಿತಿ ಸೋರಿಕೆ ಹೇಗೆ ಆಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಭಾರತೀಯ ರೈಲ್ವೆ

ಭಾರತೀಯ ರೈಲ್ವೆ ಇಲಾಖೆಯ ಮಾಹಿತಿಗೆ ಹ್ಯಾಕರ್ಸ್‌ಗಳು ಕನ್ನ ಹಾಕಿದ್ದಾರೆ. ಇದರಿಂದ 3 ಕೋಟಿಗೂ ಹೆಚ್ಚು ಪ್ರಯಾಣಿಕರ ಹೆಸರು ಮತ್ತು ಫೋನ್ ಸಂಖ್ಯೆ ಸೋರಿಕೆಯಾಗಿದೆ. ಈ ಎಲ್ಲಾ ಮಾಹಿತಿಯನ್ನು ಡಾರ್ಕ್‌ವೆಬ್‌ನಲ್ಲಿ ಮಾರಾಟ ಮಾಡಲಾಗ್ತಿದೆ. ಅಲ್ಲದೆ ಹ್ಯಾಕರ್‌ಗಳ ಗುಂಪು ಭಾರತೀಯ ರೈಲ್ವೇ ಪ್ರಯಾಣಿಕರ ಟ್ರಾವಲ್‌ ಹಿಸ್ಟರಿ ಮತ್ತು ಇನ್‌ವಾಯ್ಸ್‌ಗಳನ್ನು ಸಹ ಸೋರಿಕೆ ಮಾಡಿದೆ ಎಂದು ಹೇಳಿದ್ದಾರೆ. ಇದಲ್ಲದೆ ಲೀಕ್‌ ಆಗಿರುವ ಡೇಟಾದಲ್ಲಿ ಬಳಕೆದಾರರ ಮಾಹಿತಿ ಮತ್ತು ಜನರ ಬುಕ್ಕಿಂಗ್‌ ಡೇಟಾವನ್ನು ಕೂಡ ಸೋರಿಕೆ ಮಾಡಲಾಗಿದೆ. ಅಲ್ಲದೆ ಈ ಸೋರಿಕೆ ಡೇಟಾ ಇದೀಗ ಡಾರ್ಕ್‌ವೆಬ್‌ನಲ್ಲಿ ಸೇಲ್‌ ಆಗ್ತಿದೆ. ಅದರಲ್ಲೂ ಪ್ರತಿ ಡೇಟಾದ ಪ್ರತಿಗೆ $400 ಶುಲ್ಕದಲ್ಲಿ ಸೇಲ್‌ ಆಗ್ತಿದೆ ಎನ್ನಲಾಗಿದೆ.

ಡೇಟಾ

ಇನ್ನು ಈ ಡೇಟಾ ಸೋರಿಕೆ ಡಿಸೆಂಬರ್ 27 ರಂದು ನಡೆದಿದೆ ಎಂದು ವರದಿಯಾಗಿದೆ. ಜೊತೆಗೆ ಡೇಟಾ ಸೋರಿಕೆಯ ವಿವರಗಳನ್ನು ಯಾರೋ ಹ್ಯಾಕರ್ ಫೋರಂನಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಸದ್ಯ ಈ ಡೇಟಾ ಸೋರಿಕೆಯ ಬಗ್ಗೆ ರೈಲ್ವೆ ಇಲಾಖೆ ಇನ್ನು ಅಧಿಕೃತಪಡಿಸಿಲ್ಲ. ಆದರೆ ಹ್ಯಾಕರ್ ಗುಂಪು ಸರ್ಕಾರಿ ಇಲಾಖೆಗಳಲ್ಲಿ ಹಲವಾರು ಜನರ ಅಧಿಕೃತ ಇಮೇಲ್ ಖಾತೆಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿಕೊಳ್ಳುತ್ತಿದೆ.

IRCTC

ಇದರ ನಡುವೆ IRCTC ಡೇಟಾವನ್ನು ಪ್ರವೇಶಿಸಲು ಹ್ಯಾಕರ್ ಗುಂಪು ಹೇಗೆ ನಿರ್ವಹಿಸಿದೆ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹಾಗಂತ ರೈಲ್ವೆ ಇಲಾಖೆಯ ಮಾಹಿತಿ ಸೋರಿಕೆಯಾಗಿರುವುದು ಇದೇ ಮೊದಲೇನಲ್ಲ. 2019 ರಲ್ಲಿ, ಇದೇ ರೀತಿಯ ಮಾಹಿತಿ ಸೋರಿಕೆಯಾಗಿರುವುದನ್ನು ನಾವು ಕಾಣಬಹುದಾಗಿದೆ. ಈ ಸಮಯದಲ್ಲಿ ಸುಮಾರು 9 ಮಿಲಿಯನ್ ಜನರ ಡೇಟಾ ಆನ್‌ಲೈನ್‌ನಲ್ಲಿ ಸೋರಿಕೆಯಾಗಿತ್ತು.

ರೈಲ್ವೆ

ಸದ್ಯ ರೈಲ್ವೆ ಇಲಾಖೆ ಹ್ಯಾಕರ್‌ಗಳಿಂದ ಮಾಹಿತಿ ಸೋರಿಕೆಯಾಗಿರುವುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಆದರೆ ರೈಲು ಪ್ರಯಾಣಿಕರ ಡೇಟಾ ಸೋರಿಕೆಯಾಗಿರೋದು ಪಕ್ಕಾ ಎಂದೇ ಹೇಳಲಾಗಿದೆ. ಇದರಿಂದ ರೈಲಿನಲ್ಲಿ ಪ್ರಯಾಣಿಸುವವರು ತಮ್ಮ ಡೇಟಾ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನವಹಿಸಬೇಕಾದ ಅನಿವಾರ್ಯತೆಯಿದೆ. ತಮ್ಮ ವೈಯುಕ್ತಿಕ ಮಾಹಿತಿ ಡಾರ್ಕ್‌ವೆಬ್‌ ನಲ್ಲಿ ಸೇಲ್‌ ಆಗ್ತಾ ಇರೋದ್ರಿಂದ ಮುಂದಿನ ದಿನಗಳಲ್ಲಿ ಭಾರತೀಯ ರೈಲ್ವೆ ಇಲಾಖೆ ಯಾವ ಕ್ರಮ ಕೈಗೊಳ್ಳಲಿದೆ ಅನ್ನೊದನ್ನ ಕಾದು ನೋಡಬೇಕಿದೆ.

Best Mobiles in India

Read more about:
English summary
Shocking: Over 3 crore Indian Railway passengers data leak

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X