'ವಾಟ್ಸ್ಆಪ್' ವ್ಯಸನಕ್ಕೆ ತುತ್ತಾಗಿದ್ದರೆ ಒಮ್ಮೆ ಚೆಕ್ ಮಾಡಿಕೊಳ್ಳಿ!

|

ಒಂದು ಕಾಲದಲ್ಲಿ ಅಂದರೆ, ವಾಟ್ಸ್ಆಪ್ ಬರುವ ಮೊದಲು ಮೆಸೇಜ್ ಮಾಡಿದರೆ ಕಾಸು ಖರ್ಚಾಗುತ್ತಿತ್ತು. ಈಗ ವಾಟ್ಸ್​ಆಪ್ ಬಂದ ಮೇಲೆ ಖರ್ಚಿನ ಭಯವೇ ಹೊರಟು ಹೋಗಿದೆ. ಈಗ ಪ್ರತಿಯೋರ್ವ ಸ್ಮಾರ್ಟ್‌ಫೋನ್ ಬಳಕೆದಾರರ ಪರಸ್ಪರ ಮಾತು, ಜಗಳ, ಆಹ್ವಾನಗಳೆಲ್ಲ ವಾಟ್ಸಾಪ್​ನಲ್ಲೇ ನಡೆಯುತ್ತಿವೆ. ದಿನದ 24 ಗಂಟೆಯೂ ವಾಟ್ಸ್​ಆಪ್​ನಲ್ಲಿದ್ದರೂ ಅದಕ್ಕೆ ಹಣ ಖರ್ಚು ಮಾಡಬೇಕಾಗಿಲ್ಲ. ಹೀಗಾಗಿ ದಿನೇದಿನೆ ಈ ಫೋನ್ ಹುಚ್ಚು ಹೆಚ್ಚಾಗುತ್ತದ್ದು ವ್ಯಸನವಾಗಿ ಬದಲಾಗುತ್ತಿದೆ ಎನ್ನುತ್ತಿದ್ದಾರೆ ತಜ್ಞರು.

ಹೌದು, ಜೀವನದ ಮೇಲೆ ಪ್ರಭಾವ ಬೀರುವ ನಿರ್ಣಯಗಳನ್ನು ಫೇಸ್​ಬುಕ್ ಮತ್ತು ವಾಟ್ಸ್​ಆಪ್​ನೊಂದಿಗೆ ಹಂಚಿಕೊಳ್ಳುವವರ ಪ್ರಮಾಣ ಹೆಚ್ಚಾಗುತ್ತಿದೆ. ಅದರಲ್ಲೂ ವಾಟ್ಸ್ಆಪ್ ಒಂದು ರೀತಿಯಲ್ಲಿ ನಾವು ಮೌನವಾಗಿ, ನಾವೇ ಸೃಷ್ಟಿ ಮಾಡಿದ ಉಪಕರಣ ಮಾತಾಡುವ ಹಾಗೆ ಮಾಡಿಕೊಂಡಿದ್ದೇವೆ. ಬೆಳಗ್ಗೆ ಎದ್ದಾಗ ಏನಾದರೂ ಆಗಲಿ ಮೊದಲು ಮೊಬೈಲ್ ತೆಗೆದು ವಾಟ್ಸ್ಆಪ್ ನೋಡಬೇಕೆನ್ನುವ ಆತುರ, ರಾತ್ರಿ ಮಲಗುವ ಮುಂಚೆಯೇ ನಾಳೆ ಯಾವ ಪೋಟೋ ಹಾಕಲಿ ಎಂಬ ಕಾತರವಿದೆ.!

'ವಾಟ್ಸ್ಆಪ್' ವ್ಯಸನಕ್ಕೆ ತುತ್ತಾಗಿದ್ದರೆ ಒಮ್ಮೆ ಚೆಕ್ ಮಾಡಿಕೊಳ್ಳಿ!

ಈ ಕಾತುರವನ್ನು ನಾವು ಸಾಮಾನ್ಯವಾಗಿ ತೆಗೆದುಕೊಳ್ಳುವಂತಿಲ್ಲ. ವಾಟ್ಸ್​ಆಪ್​ನಲ್ಲಿ ಮುಳುಗಿದಾಗ ನಮಗೆ ಇದು ವ್ಯಸನ ಎಂದು ಕೂಡ ಅನಿಸುವುದಿಲ್ಲ. ಆದರೆ, ವಾಟ್ಸ್ಆಪ್ ಸ್ಟೇಟಸ್ ಅನ್ನು ಯಾವಾಗಲೂ ತೆರೆದುನೋಡುತ್ತಿರುವುದು. ಡಿಸ್​ಪ್ಲೇ ಪಿಕ್ಚರ್ ಬದಲಾಯಿಸುವುದು, ಬೇರೆಯವರು ಎಷ್ಟು ಚೆನ್ನಾಗಿರೋ ಡಿಪಿ ಹಾಕಿದ್ದಾರೆ ಎಂದು ನೋಡುವುದು, ನಾನು ಎಷ್ಟು ದಿನಕ್ಕೊಮ್ಮೆ ಡಿಪಿ ಬದಲಾಯಿಸಲಿ?, ಯಾವ ಸೆಲ್ಪಿ ವಾಟ್ಸ್‌ಆಪ್ ಡಿಪಿಗೆ ಚೆನ್ನಾಗಿ ಕಾಣುತ್ತೆ ಎಂದೆಲ್ಲ ಯೋಚಿಸುವುದು ವ್ಯಸನವೇ ಹೇಳಿ.?

ಇಲ್ಲ ಇದು ವ್ಯಸನವಲ್ಲ ಎಂದು ನೀವು ಹೇಳಿದರೆ, ನಾವು ಮೇಲೆ ಹೇಳಿದ ಕೆಲಸಗಳನ್ನು ಕೆಲ ದಿನಗಳ ವರೆಗೂ ನಿಲ್ಲಿಸಿಬಿಡಿ. ವಾಟ್ಸ್ಆಪ್ ಸ್ಟೇಟಸ್ ಅನ್ನು ಯಾವಾಗಲೂ ತೆರೆದುನೋಡಬೇಡಿ. ಡಿಸ್​ಪ್ಲೇ ಪಿಕ್ಚರ್ ಬದಲಾಯಿಸಬೇಡಿ. ಸೆಲ್ಪಿ ವಾಟ್ಸ್‌ಆಪ್ ಡಿಪಿಗೆ ಚೆನ್ನಾಗಿ ಕಾಣುತ್ತೆ ಎಂದೆಲ್ಲ ಯೋಚಿಸಬೇಡಿ. ಈ ಎಲ್ಲಾ ಕೆಲಸಗಳನ್ನು ನೀವು ಸರಾಗವಾಗಿ ಮಾಡಿದರೆ ನೀವು ವಾಟ್ಸ್ಆಪ್‌ಗೆ ವ್ಯಸನಿಯಾಗಿಲ್ಲ ಎಂದು ಹೇಳಬಹದು. ಆದರೆ, ಇವೆಲ್ಲವನ್ನು ಮಾಡಲು ನಿಮಗೆ ಸಾಧ್ಯವೇ ಎಂಬುದನ್ನು ಮೊದಲು ಯತ್ನಿಸಿ.

'ವಾಟ್ಸ್ಆಪ್' ವ್ಯಸನಕ್ಕೆ ತುತ್ತಾಗಿದ್ದರೆ ಒಮ್ಮೆ ಚೆಕ್ ಮಾಡಿಕೊಳ್ಳಿ!

ವಾಟ್ಸಾಆಪ್‌ನಲ್ಲಿರುವ ಹತ್ತಾರು ಗುಂಪುಗಳಲ್ಲಿ ಹತ್ತಾರು ಸಂದೇಶಗಳು ದಿನಪೂರ್ತಿ ಬರುತ್ತಲೇ ಇರುತ್ತವೆ. ಟಣ್ ಅಂದರೆ ಸಾಕು. ಫೋನ್ ತೆಗೆದು ನೋಡುವ ಹುಚ್ಚು, ಗಮನವೆಲ್ಲ ಅಲ್ಲಿಯೇ ಇರುತ್ತದೆ. ಇದು ಖಂಡಿತ ಒಳ್ಳೆಯ ಅಭ್ಯಾಸವಲ್ಲ. ಇದು ಕೂಡ ನಮ್ಮ ವ್ಯಸನವಾಗಿ ಬದಲಾಗಿಬಿಡಬಹುದು. ಒಂದು ವಾಟ್ಸ್ಆಪ್ ನೋಟಿಫಿಕೇಷನ್ ಬಂದತಕ್ಷಣವೇ ನೋಡದೇ ಇರುವು ಓರ್ವ ವಾಟ್ಸ್ಆಪ್ ಬಳಕೆದಾರನಿದ್ದರೆ ಆತ ಈ ಕಾಲದಲ್ಲೂ ಸ್ವಲ್ಪ ಸುಖಜೀವಿ ಎಂದು ನಾವು ಹೇಳಬಹದು ಅಷ್ಟೇ.!

ಓದಿರಿ: ಕತ್ತಲಲ್ಲಿ 30 ನಿಮಿಷ ಮೊಬೈಲ್ ಬಳಸಿದರೆ ಏನಾಗಲಿದೆ?..ಸಂಶೋಧನೆ ಹೇಳಿದ್ದು ಹೀಗೆ!

ಬೆಂಗಳೂರಿನಲ್ಲೇ ಮೊದಲು!..'ಎಟಿಎಂ' ಮೂಲಕ ಶಿಯೋಮಿ ಮೊಬೈಲ್ ಖರೀದಿಸಿ!!

ಬೆಂಗಳೂರಿನಲ್ಲೇ ಮೊದಲು!..'ಎಟಿಎಂ' ಮೂಲಕ ಶಿಯೋಮಿ ಮೊಬೈಲ್ ಖರೀದಿಸಿ!!

ಸ್ಮಾರ್ಟ್‌ಫೋನ್‌ಗಳು ಮತ್ತು ಮೊಬೈಲ್ ಬಿಡಿಭಾಗಗಳನ್ನು ತ್ವರಿತವಾಗಿ ಖರೀದಿಸಲು ಅವಕಾಶ ಮಾಡಿಕೊಡಲು ಶಿಯೋಮಿ ಕಂಪೆನಿ ಕ್ರಾಂತಿಕಾರಿಕ ವಿಧಾನವೊಂದನ್ನು ಬೆಂಗಳೂರಿನಲ್ಲಿ ಪರಿಚಯಿಸಿದೆ. ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಶಿಯೋಮಿ ಮಳಿಗೆಯಲ್ಲಿ, ಶಿಯೋಮಿ ಉತ್ಪನ್ನಗಳನ್ನು ಖರೀದಿಸಬಹುದಾದ 'ಎಟಿಎಂ' ಮಷಿನ್ ಒಂದನ್ನು ಅಳವಡಿಸಿದೆ.

ಹೌದು, ಭಾರತದ ಮಾರುಕಟ್ಟೆಯಲ್ಲಿ ತನ್ನದೇ ಪಾರುಪತ್ಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಚೀನಾದ ಮೊಬೈಲ್‌ ಉತ್ಪಾದಕ ಕಂಪನಿಯಾದ ಶಿಯೋಮಿ ಹೊಸ ಯೋಜನೆ ರೂಪಿಸಿದೆ. ಈ ಯೋಜನೆಯಲ್ಲಿ ಗ್ರಾಹಕರು ಎಟಿಎಂ ಮೂಲಕ ಸ್ಮಾರ್ಟ್‌ಫೋನ್‌ ಮತ್ತು ಮೊಬೈಲ್ ಬಿಡಿಭಾಗಗಳನ್ನು ಖರೀದಿಸಬಹುದಾಗಿದ್ದು, ಬೆಂಗಳೂರಿನಲ್ಲಿ ದೇಶದ ಮೊದಲ ಎಟಿಎಂ ಅನ್ನು ಸ್ಥಾಪಿಸಿದೆ.

ಈ ಎಟಿಎಂ ಅನ್ನು 'ಮಿ ಎಕ್ಸ್ಪ್ರೆಸ್ ಕಿಯೋಸ್ಕ್' ಎಂದು ಕರೆಯಲಾಗಿದ್ದು, ಇದರಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್‌ ಕಾರ್ಡ್ ಮತ್ತು ಯುಪಿಐ ಸೇರಿದಂತೆ ಡಿಜಿಟಲ್ ಆಗಿ ವ್ಯವಹಾರ ನಡೆಸಬಹುದು ಎಂದು ಕಂಪೆನಿ ತಿಳಿಸಿದೆ. ಹಾಗಾದರೆ, ಸ್ಮಾರ್ಟ್‌ಫೋನ್‌ ಹಾಗೂ ಬಿಡಿಭಾಗಗಳಿಗಾಗಿಯೇ ಮಾತ್ರವೇ ವಿನ್ಯಾಸಗೊಳಿಸಲಾದ ಶಿಯೋಮಿ ಎಟಿಎಂ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ ಬನ್ನಿ.

ಏನಿದು 'ಮಿ ಎಕ್ಸ್ಪ್ರೆಸ್ ಕಿಯೋಸ್ಕ್'

ಏನಿದು 'ಮಿ ಎಕ್ಸ್ಪ್ರೆಸ್ ಕಿಯೋಸ್ಕ್'

ಮೊದಲೇ ಹೇಳಿದಂತೆ, 'ಮಿ ಎಕ್ಸ್ಪ್ರೆಸ್ ಕಿಯೋಸ್ಕ್' ಒಂದು ಎಟಿಎಂ ರೀತಿಯ ಯಂತ್ರವಾಗಿದ್ದಯ, ಇದರಲ್ಲಿ ಗ್ರಾಹಕರು ತಮಗೆ ಬೇಕಾದ ಶಿಯೋಮಿ ಉತ್ಪನ್ನಗಳನ್ನು ಖರೀದಿಸಬಹುದು. ಅದಕ್ಕೆ ತಗುಲುವ ವೆಚ್ಚವನ್ನು ಡೆಬಿಟ್, ಕ್ರೆಡಿಟ್‌, ನಗದು ಹಾಗೂ ಯುಪಿಐ ಕೋಡ್‌ ಮೂಲಕ ಪಾವತಿ ಮಾಡಬಹುದಾದ ವ್ಯವಸ್ಥೆಯನ್ನು ಈ ಯಂತ್ರದಲ್ಲಿ ಕಲ್ಪಿಸಲಾಗಿದೆ. ಸ್ಮಾರ್ಟ್‌ಫೋನ್‌ ಹಾಗೂ ಬಿಡಿಭಾಗಗಳಿಗಾಗಿಯೇ ಮಾತ್ರವೇ ವಿನ್ಯಾಸಗೊಳಿಸಲಾದ ಈ ಯಂತ್ರ 200 ಮೊಬೈಲ್‌ಗಳನ್ನು ತನ್ನಲ್ಲಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ.

ಬೆಂಗಳೂರಿನಲ್ಲೇ ಮೊದಲು ಸ್ಥಾಪನೆ!

ಬೆಂಗಳೂರಿನಲ್ಲೇ ಮೊದಲು ಸ್ಥಾಪನೆ!

ಮುಂದಿನ ಕೆಲವು ತಿಂಗಳುಗಳಲ್ಲೇ ಭಾರತದ ಮೆಟ್ರೋ ನಗರಗಳಲ್ಲಿ 'ಮಿ ಎಕ್ಸ್ಪ್ರೆಸ್ ಕಿಯೋಸ್ಕ್' ಎಟಿಎಂ ಮಷಿನ್ ಅನ್ನು ಸ್ಥಾಪಿಸಲು ಶೀಯೋಮಿ ಕಂಪನಿ ಮುಂದಾಗಿದೆ. ಮೆಟ್ರೋ ನಗರಗಳ ಏರ್‌ಪೋರ್ಟ್‌, ಮೆಟ್ರೋ ನಿಲ್ದಾಣ, ಶಾಪಿಂಗ್‌ ಮಾಲ್‌ ಸೇರಿದಂತೆ ಇನ್ನಿತರ ಹೆಚ್ಚು ಜನನಿಬಿಡ ಪ್ರದೇಶಗಳಲ್ಲಿ ಸ್ಮಾರ್ಟ್‌ಫೋನ್‌ ವಿತರಣಾ ಯಂತ್ರಗಳನ್ನು ಅಳವಡಿಸಲಾಗುತ್ತದೆ. ಇದರ ಆರಂಭವಾಗಿ ಬೆಂಗಳೂರಿನಲ್ಲಿ ದೇಶದ ಮೊದಲ ಸ್ಮಾರ್ಟ್‌ಫೋನ್‌ ಹಾಗೂ ಬಿಡಿಭಾಗಗಳಿಗಾಗಿಯೇ ಮಾತ್ರವೇ ವಿನ್ಯಾಸಗೊಂಡ ಎಟಿಎಂ ಅನ್ನು ಸ್ಥಾಪಿಸಿದೆ.

ಇದರಲ್ಲಿ ಮೊಬೈಲ್ ಖರೀದಿ ಹೇಗೆ?

ಇದರಲ್ಲಿ ಮೊಬೈಲ್ ಖರೀದಿ ಹೇಗೆ?

'ಮಿ ಎಕ್ಸ್ಪ್ರೆಸ್ ಕಿಯೋಸ್ಕ್' ವಿತರಣಾ ಯಂತ್ರಗಳಲ್ಲಿ ಗ್ರಾಹಕರು ತಮಗೆ ಬೇಕಾದ ಮೊಬೈಲ್‌ಗಳನ್ನು ಖರೀದಿಸಬಹುದಾಗಿದೆ. ಸ್ಮಾರ್ಟ್‌ಫೋನ್‌ ಹಾಗೂ ಬಿಡಿಭಾಗಗಳಿಗಾಗಿಯೇ ಮಾತ್ರವೇ ವಿನ್ಯಾಸಗೊಳಿಸಲಾದ ಈ ಯಂತ್ರದಲ್ಲಿ ಎಟಿಎಂ ರೀತಿಯಲ್ಲೇ ವ್ಯವಹಾರ ನಡೆಯಲಿದೆ. ಆ ಯಂತ್ರದ ಮುಂದೆ ನಿಂತು ನಿಮಗೆ ಬೇಕಾದ ಯಾವುದೇ ಶಿಯೋಮಿ ಉತ್ಪನ್ನಗಳನ್ನು ಆಯ್ಕೆ ಮಾಡುವ ಮೂಲಕ ಅದನ್ನು ಖರೀದಿಸಬಹುದು. ಒಮ್ಮೆ ಆಯ್ಕೆ ಮಾಡಿಕೊಂಡ ವಸ್ತುವಿಗೆ ಹಣ ಪಾವತಿಸಿದರೆ ಆ ಕೂಡಲೇ ಆ ಉತ್ಪನ್ನ ನಿಮ್ಮ ಕೈಸೇರಲಿದೆ.

ಹೆಚ್ಚು ಆಫರ್‌ಗಳು ಸಹ ದೊರೆಯಲಿವೆ.!

ಹೆಚ್ಚು ಆಫರ್‌ಗಳು ಸಹ ದೊರೆಯಲಿವೆ.!

ಡೆಬಿಟ್‌, ಕ್ರೆಡಿಟ್‌, ನಗದು ಹಾಗೂ ಯುಪಿಐ ಕೋಡ್‌ ಮೂಲಕ ಪಾವತಿ ಮಾಡಬಹುದಾದ ವ್ಯವಸ್ಥೆ ಹೊಂದಿರುವ 'ಮಿ ಎಕ್ಸ್ಪ್ರೆಸ್ ಕಿಯೋಸ್ಕ್' ವಿತರಣಾ ಯಂತ್ರಗಳಲ್ಲಿ ಗ್ರಾಹಕರು ಆನ್‌ಲೈನ್ ರೀತಿಯ ಆಫರ್‌ಗಳನ್ನು ಸಹ ಪಡೆಯಬಹುದಾಗಿದೆ. ಆನ್‌ಲೈನಿನಲ್ಲಿ ಡೆಬಿಟ್ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಮೇಲೆ ಶೇ.10 ರಷ್ಟು ಕ್ಯಾಶ್‌ಬ್ಯಾಕ್ ನೀಡುವಂತೆ ಇಲ್ಲೂ ಕ್ಯಾಶ್‌ಬ್ಯಾಕ್ ನೀಡಲು ಶಿಯೋಮಿ ಚಿಂತಿಸಿದೆ. ಅಗತ್ಯಬಿದ್ದಲ್ಲಿ, ಗ್ರಾಹಕರ ಅನುಕೂಲಕ್ಕಾಗಿ ಕಿಯೋಸ್ಕ್‌ಗಳ ನಿರ್ವಹಣೆಗೆ ಜನರನ್ನು ನೇಮಿಸಿಕೊಳ್ಳಲಾಗುತ್ತದೆ ಎಂದು ಕಂಪನಿ ಹೇಳಿದೆ.

Best Mobiles in India

English summary
Chatting, exchanging texts, forwarding images, sharing jokes and sometimes, just ... world whatever you are doing and honestly, there's nothing bad about it. but. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X