Subscribe to Gizbot

ಎಚ್ಚರ..! ಸಿಮ್ ಸ್ವಾಪ್‌ ಮೂಲಕ ನಿಮ್ಮ ಖಾತೆಗೆ ಕನ್ನ ಹಾಕುವ ಖದೀಮರು

Written By:

ಇಷ್ಟು ದಿನ ಕ್ರೆಡಿಟ್ ಕಾರ್ಡ್- ಡೆಬಿಟ್ ಕಾರ್ಡ್‌ಗಳ ಮಾಹಿತಿಯನ್ನು ಪಡೆದು ಅಮಾಯಕರಿಗೆ ವಂಚನೆ ಮಾಡುತ್ತಿದ್ದ ಹ್ಯಾಕರ್ಸ್, ಇಂದು ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಫೋನ್ ಮಾಡಿ ಕಾರ್ಡ್ ನಂಬರ್ ಪಡೆದುಕೊಂಡು OTPಯನ್ನು ಪಡೆದುಕೊಂಡು ಹಣವನ್ನು ಲಪಟಾಯಿಸುತ್ತಿದ್ದ ವಂಚಕರು ಹೊಸದೊಂದು ಜಾಲವನ್ನು ಸೃಷ್ಟಿಸಿಕೊಂಡಿದ್ದಾರೆ. ಹೊಸ ಮಾರ್ಗದ ಮೂಲಕ ವಂಚನೆಯನ್ನು ನಡೆಸುತ್ತಿದ್ದಾರೆ.

ಎಚ್ಚರ..! ಸಿಮ್ ಸ್ವಾಪ್‌ ಮೂಲಕ ನಿಮ್ಮ ಖಾತೆಗೆ ಕನ್ನ ಹಾಕುವ ಖದೀಮರು

ಬಳಕೆದಾರರು ಕ್ರೆಡಿಟ್ ಕಾರ್ಡ್- ಡೆಬಿಟ್ ಕಾರ್ಡ್‌ ಮೋಸದ ಜಾಲದಿಂದ ಎಚ್ಚೆತ್ತು ಕೊಂಡಿದ್ದು, ಈ ಕುರಿತು ಜನರನ್ನು ಎಚ್ಚರಿಸುವ ಸಾಕಷ್ಟು ಪ್ರಯತ್ನಗಳು ನಡೆದಿರುವ ಹಿನ್ನಲೆಯಲ್ಲಿ ಬಳಕೆದಾರರು ಯಾರಿಗೂ ತಮ್ಮ ಕಾರ್ಡ್ ಮಾಹಿತಿಯನ್ನು ನೀಡುತ್ತಿಲ್ಲ. ಅದರಲ್ಲಿಯೂ OTPಗಳನ್ನು ತಿಳಿಸುತ್ತಿಲ್ಲ. ಈ ಹಿನ್ನಲೆಯಲ್ಲಿ ಬಳಕೆದಾರರ OTPಯನ್ನು ಕದಿಯುವ ಸಲುವಾಗಿ ಹ್ಯಾಕರ್ಸ್‌ಗಳು ಹೊಸದೊಂದು ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
‘ಸಿಮ್ ಸ್ವಾಪ್'

‘ಸಿಮ್ ಸ್ವಾಪ್'

ಹ್ಯಾಕರ್ಸ್‌ಗಳು ಸ್ಮಾರ್ಟ್‌ಫೋನ್ ಬಳಕೆದಾರರ ಕ್ರೆಡಿಟ್ ಕಾರ್ಡ್- ಡೆಬಿಟ್ ಕಾರ್ಡ್‌ಗಳ ಮಾಹಿತಿಯನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ, OTP ಬರುವ ಸಿಮ್ ಕಾರ್ಡ್‌ಗಳನ್ನು ಸ್ವಾಪ್ ಮಾಡುವ ಮೂಲಕ ವಂಚನೆ ಮಾಡಲು ಮುಂದಾಗಿದ್ದಾರೆ. ಇಷ್ಟು ದಿನ ನಿಮ್ಮ ಕ್ರೆಡಿಟ್ ಕಾರ್ಡ್- ಡೆಬಿಟ್ ಕಾರ್ಡ್‌ಗಳನ್ನು ರಕ್ಷಿಸಿಕೊಂಡಂತೆ ನಿಮ್ಮ ಸಿಮ್ ಕಾರ್ಡ್‌ಗಳನ್ನು ಜೋಪಾನ ಮಾಡಿಕೊಳ್ಳುವುದು ಉತ್ತಮ.

ಯಾರೊಂದಿಗೂ ಹಂಚಿಕೊಳ್ಳಬೇಡಿ:

ಯಾರೊಂದಿಗೂ ಹಂಚಿಕೊಳ್ಳಬೇಡಿ:

ನಿಮ್ಮ ಸಿಮ್‌ ನಂಬರ್ ಅನ್ನು ಯಾವುದೇ ಕಾರಣಕ್ಕೂ ಯಾರೊಂದಿಗೂ ಹಂಚಿಕೊಳ್ಳಬೇಡಿ. ಕಾರಣ ನಿಮ್ಮ ಸಿಮ್ ಹಿಂಭಾಗದಲ್ಲಿರುವ ನಂಬರ್ ಅನ್ನು ಪಡೆದುಕೊಂಡವರು ನಕಲಿ ಸಿಮ್ ಕಾರ್ಡ್ ಅನ್ನು ನಿಮಗೆ ತಿಳಿಯದಂತೆ ಪಡೆದುಕೊಂಡು ನಿಮ್ಮ OTPಗಳನ್ನು ಕದಿಯಬಹುದಾಗಿದೆ.

ಕರೆ ಬರಲಿದೆ:

ಕರೆ ಬರಲಿದೆ:

ನಾವು ಮೊಬೈಲ್ ಸಂಸ್ಥೆಯಿಂದ ಕರೆಮಾಡುತ್ತಿದ್ದೇವೆ ನಿಮ್ಮ ಸಿಮ್‌ ಕಾರ್ಡಿನ ಇಪ್ಪತ್ತು ಸಂಖ್ಯೆಯನ್ನು ತಿಳಿಸಿ, ಇಲ್ಲವಾದರೆ ನಿಮ್ಮ ಸಿಮ್ ಕಾರ್ಡ್ ಸ್ಥಬ್ಧವಾಗಲಿದೆ ಎನ್ನುವ ಭೀತಿಯನ್ನು ಹುಟ್ಟಿಸಿ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಯಾವುದೇ ಟೆಲಿಕಾಂ ಕಂಪನಿಗಳು ನಿಮಗೆ ಕರೆ ಮಾಡಿ ಈ ರೀತಿಯ ಮಾಹಿತಿಯನ್ನು ಪಡೆಯುವುದಿಲ್ಲ.

ಹೆಚ್ಚಾಗುತ್ತಿರುವ ಪ್ರಕರಣ:

ಹೆಚ್ಚಾಗುತ್ತಿರುವ ಪ್ರಕರಣ:

ದೇಶದ ವಿವಿಧ ಭಾಗದಲ್ಲಿ ಸಿಮ್ ಸ್ವಾಪ್ ಪ್ರಕರಣಗಳು ಹೆಚ್ಚಾಗುತ್ತಿದೆ. ಅದರಲ್ಲಿಯೂ ಆಧಾರ್ ಕಾರ್ಡ್ ಲಿಂಕ್ ಮಾಡಿಸಲು ಹೋದ ಸಂದರ್ಭದಲ್ಲಿ, ನಕಲಿ ಸಿಮ್ ಪಡೆಯಲು ಮುಂದಾದ ಸಂದರ್ಭದಲ್ಲಿ ಇದು ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಾಧ್ಯವದಷ್ಟು ಎಚ್ಚರದಿಂದ ಇರುವುದು ಒಳ್ಳೆಯದು.

ಸಿಮ್ ಯಾರಿಗೂ ಕೊಡಬೇಡಿ:

ಸಿಮ್ ಯಾರಿಗೂ ಕೊಡಬೇಡಿ:

ನಿಮ್ಮ ಕ್ರೆಡಿಟ್ ಕಾರ್ಡ್- ಡೆಬಿಟ್ ಕಾರ್ಡ್‌ಗಳನ್ನು ಯಾರಿಗೂ ನೀಡದ ಮಾದರಿಯಲ್ಲಿಯೇ ಸಿಮ್ ಕಾರ್ಡ್ ಅನ್ನು ಯಾರಿಗೂ ನೀಡಬೇಡಿ. ಮೊಬೈಲ್ ರಿಪೇರಿಗೆ ನೀಡುವ ಸಂದರ್ಭದಲ್ಲಿ ಸಿಮ್ ತೆಗೆದಿಟ್ಟುಕೊಳ್ಳುವುದು ಉತ್ತಮ. ನಿಮ್ಮ ಸಿಮ್ ಕಾರ್ಡ್ ಒಮ್ಮೆ ವಂಚಕರ ಕೈಗೆ ಸಿಕ್ಕರೆ ನೀವು ಭಾರೀ ನಷ್ಟವನ್ನು ಅನುಭವಿಸಬೇಕಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿಮ್ಮ Aadhaar ದುರುಪಯೋಗವಾಗಿದೆಯೇ..? ಪತ್ತೆ ಹಚ್ಚುವುದು ಹೇಗೆ..?

ಓದಿರಿ: ರೂ.28000ಕ್ಕೆ ಆಪಲ್ ಐಪ್ಯಾಡ್: ಮೊದಲು ಬುಕ್ ಮಾಡಿದವರಿಗೆ ಮಾತ್ರ..!

English summary
SIM Swap Fraud: How to Protect Yourself. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot