ವಿಡಿಯೋ ಕರೆಗಳಿಗಾಗಿ ''ಮೀಟ್‌ ನೌ'' ಎಂಬ ಹೊಸ ಆಯ್ಕೆ ಪರಿಚಯಿಸಿದ ಸ್ಕೈಪ್‌!

|

ಟೆಕ್‌ ವಲಯದಲ್ಲಿ ಟೆಕ್ನಾಲಜಿ ಮುಂದುವರೆದಂತೆ ಸಾಕಷ್ಟು ಹೊಸ ಮಾದರಿಯ ತಂತ್ರಜ್ಞಾನ ಆಧಾರಿತ ಸೇವೆಗಳು ಲಭ್ಯವಾಗುತ್ತಲೇ ಇವೆ. ನಿಮಗೆಲ್ಲಾ ಗೊತ್ತಿರುವ ಹಾಗೇ ವೆಬ್‌ ಆಧಾರಿತ ಸೇವೆಯಾದ ಸ್ಕೈಪ್‌ ನಿಮಗೆ ವಿಡಿಯೋ ಕರೆಗಳನ್ನ ಮಾಡುವುದಕ್ಕೆ ಅವಕಾಶವನ್ನ ಮಾಡಿಕೊಟ್ಟಿತ್ತು. ಕಂಪ್ಯೂಟರ್‌ ಮೂಲಕ ಸ್ಕೈಪ್‌ನಲ್ಲಿ ಕರೆ ಮಾಡಿ ಮಾತನಾಡುವ ಅವಕಾಶ ನಿಡಲಾಗಿತ್ತು. ಇಂದು ಸ್ಕೈಪ್‌ ಸಾಕಷ್ಟು ಜನಪ್ರಿಯತೆಯನ್ನ ಹೊಂದಿದೆ. ಕೇವಲ ವೀಡಿಯೊ ಕರೆಗಳಿಗೆ ಮಾತ್ರವಲ್ಲದೆ ಖಾಸಗಿ ಸಭೆಗಳನ್ನ ಸಹ ಮಾಡುವುದಕ್ಕೆ ಅವಕಾಶ ಕಲ್ಪಿಸಿದೆ ಅಷ್ಟರ ಮಟ್ಟಿಗೆ ಸ್ಕೈಪ್‌ ಉಪಯೋಗವಾಗುತ್ತಿದೆ.

ದೇಶದಲ್ಲಿ

ಹೌದು, ದೇಶದಲ್ಲಿ ಕೊರೊನಾ ವೈರಸ್‌ ಭೀತಿಯಿಂದಾಗಿ ಲಾಕ್‌ಡೌನ್‌ ಆದೇಶವಿದೆ. ಮನೆಯಲ್ಲಿಯೇ ಇದ್ದು, ಹೊರಗಡೆ ಬರಬಾರದೆಂದು ಸರ್ಕಾರ ಹೇಳಿದೆ. ಇದೇ ಕಾರಣಕ್ಕೆ ದೇಶವಾಸಿಗಳು ಮನೆ ಸೇರಿಕೊಂಡಿದ್ದಾರೆ. ಆದರೆ ಏನ್ಮಾಡೋದು ಸ್ನೇಹಿತರು, ಸಂಬಂಧಿಕರನ್ನು ಮಾತನಾಡುವುದಕ್ಕೆ ಇವತ್ತಿನ ದಿನಗಳಲ್ಲಿ ವಾಟ್ಸಾಪ್‌, ಫೇಸ್‌ಬುಕ್‌, ಮೆಸೆಂಜರ್‌ನಮತಹ ಅಪ್ಲಿಕೇಶನ್‌ಗಳಿವೆ. ಇದರಂತೆ ಸ್ಕೈಪ್‌ ಕೂಡ ಉತ್ತಮ ಆಯ್ಕೆಯಾಗಿದೆ. ಇದನ್ನೇ ಗುರಿಯಾಗಿರಿಸಿಕೊಂಡಿರುವ ಸ್ಕೈಪ್‌ ಹೊಸದೊಂದು ಫೀಚರ್ಸ್‌ ಅನ್ನು ಪರಿಚಯಿಸಿದೆ.

ಸ್ಕೈಪ್‌

ಸದ್ಯ ಸ್ಕೈಪ್‌ ಹೊಸ ಮಾದರಿಯ ಫೀಚರ್ಸ್‌ ಒಂದನ್ನ ಪರಿಚಯಿಸಿದೆ. ಮೀಟ್‌ ನೌ ಎಂಬುವ ಈ ಆಯ್ಕೆಯು ಸ್ಕೈಪ್‌ ಅಕೌಂಟ್‌ ಹೊಂದಿಲ್ಲದ ಬಳಕೆದಾರರಿಗೂ ಅವಕಾಶ ನೀಡಲಿದೆ. ಅಂದರೆ ನೀವು ಸ್ಕೈಪ್‌ ಅಕೌಂಟ್‌ ಹೊಮದಿಲ್ಲದಿದ್ದರೂ ಮೀಟ್‌ನೌ ಆಯ್ಕೆ ಬಳಸಿ ವಿಡಿಯೊ ಕಾಲ್‌ ಮಾಡಬಹುದಾಗಿದೆ. ಈ ಮೂಲಕ ನಿಮ್ಮ ಸ್ನೇಹಿತರು,ಇಲ್ಲವೇ ನಿಮ್ಮ ಆತ್ಮೀಯರ ಜೊತೆ ವಿಡಿಯೋ ಕರೆಗಳನ್ನ ಮಾಡುವುದಕ್ಕೆ ಅವಕಾಶ ದೊರೆತಿದೆ. ಹಾಗೇ ನೋಡಿದ್ರೆ ಜಾಗತಿಕ ಲಾಕ್‌ಡೌನ್‌ಗಳನ್ನು ವಿಧಿಸಿದ ನಂತರ, ಸ್ಕೈಪ್‌ನ ವೀಡಿಯೊ ಕರೆಗಳಲ್ಲಿನ ಬಳಕೆ 70% ಹೆಚ್ಚಾಗಿದೆ ಎಂದು ರಾಯಿಟರ್ಸ್ ವರದಿ ತಿಳಿಸಿದೆ. ಇದೇ ಕಾರಣಕ್ಕೆ ಸ್ಕೈಪ್‌ ಈ ಹೊಸ ಅವಕಾಶವನ್ನ ಕಲ್ಫಿಸಿದೆ.

ಮೀಟ್‌

ಇನ್ನು 'ಮೀಟ್‌ ನೌ' ಆಯ್ಕೆಯು ಸ್ಕೈಪ್ ಖಾತೆ ಇಲ್ಲದೆ ಚಾಟ್ ಮಾಡಲು ಸಾಧ್ಯವಾಗುವಂತಹ ಅತ್ಯಂತ ಮಹತ್ವದ ಆಪ್ಡೇಟ್ ಆಗಿದೆ. ಸ್ಕೈಪ್‌ ಲಿಂಕ್ ಮೂಲಕ ಇದು ಸಾಧ್ಯವಾಗಲಿದೆ. ಅಷ್ಟೇ ಅಲ್ಲ ಈ ಲಿಂಕ್ ಗೆ ಯಾವುದೇ ಅವಧಿಯ ಮಿತಿ ಇರುವುದಿಲ್ಲ, ಇದನ್ನು ಯಾವುದೇ ಸಮಯದಲ್ಲಿ ಬೇಕಾದರೂ ಬಳಸಬಹುದಾಗಿದೆ. ಇನ್ನು ಮೀಟ್‌ ನೌ ಆಯ್ಕೆಯನ್ನ "ಒಂದೇ ಕ್ಲಿಕ್‌ನಲ್ಲಿ ನಿಮ್ಮ ಉಚಿತ ಲಿಂಕ್ ಅನ್ನು ರಚಿಸಿ, ಅದನ್ನು ನಿಮ್ಮ ಜೊತೆ ವಿಡಿಯೋ ಕರೆಯಲ್ಲಿ ಭಾಗವಹಿಸುವವರೊಂದಿಗೆ ಹಂಚಿಕೊಳ್ಳಿ ಮತ್ತು ಸ್ಕೈಪ್‌ನಲ್ಲಿ ನಿಮ್ಮ ವಿಡಿಯೋ ಕರೆಗಳನ್ನ ಆನಂದಿಸಬಹುದಾಗಿದೆ.

ಸ್ಕೈಪ್

ಇನ್ನು ಸ್ಕೈಪ್ ಖಾತೆಗಾಗಿ ಲಿಂಕ್ ಅನ್ನು ರಚಿಸಲು ಮತ್ತು ಮೀಟ್ ನೌ ವೈಶಿಷ್ಟ್ಯವನ್ನು ಪ್ರವೇಶಿಸಲು ಮೊದಲಿಗೆ ಸ್ಕೈಪ್‌ ವೆಬ್‌ನಲ್ಲಿ ಒಂದು ಕ್ಲಿಕ್‌ ಮೂಲಕ ಲಿಂಕ್ ಅನ್ನು ರಚಿಸಬೇಕು. ನಂತರ ಸ್ಕೈಪ್ ಖಾತೆಯನ್ನು ಹೊಂದಿರುವ ವ್ಯಕ್ತಿಯ ಜೊತಗೆ ವಿಡಿಯೋ ಕರೆ ಮಾಡಲು ಬಯಸುವವರಿಗೆ ಲಿಂಕ್ ಅನ್ನು ಹಂಚಿಕೊಳ್ಳಬಹುದು. ಇದಾದ ನಂತರ ಕರೆಗಳನ್ನು ಕನೆಕ್ಟ್‌ ಮಾಡಲು ಈ ಯೂನಿಕ್‌ ಲಿಂಕ್ ಅನ್ನು ಬಳಸಬಹುದಾಗಿದೆ. ಇದಲ್ಲದೆ ನೀವು ಈ ಅಪ್ಲಿಕೇಶನ್‌ನ ಯಾವುದೇ ನಿರ್ಬಂಧಗಳಿಲ್ಲದೆ ಸ್ಕೈಪ್ ಅನ್ನು ಅದರ ಅಪ್ಲಿಕೇಶನ್‌ ಮೂಲಕ ಪ್ರವೇಶಿಸಬಹುದು. ಡೆಸ್ಕ್ಟಾಪ್‌ಗಾಗಿ, ಸ್ಕೈಪ್ ವೆಬ್ ಕ್ಲೈಂಟ್ ಮೂಲಕ ಸ್ಕೈಪ್ ಅನ್ನು ಪ್ರವೇಶಿಸಬಹುದು. ಮೈಕ್ರೋಸಾಫ್ಟ್ ಎಡ್ಜ್ ಮತ್ತು ಗೂಗಲ್ ಕ್ರೋಮ್ ಇದನ್ನು ಬೆಂಬಲಿಸುತ್ತದೆ.

Best Mobiles in India

English summary
Skype introduces Meet Now, will allow users with no account to make video calls.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X