ಸ್ಲೈಸ್‌ ಅಪ್ಲಿಕೇಶನ್‌ ಅನ್ನು ಕೂಡಲೇ ಡಿಲೀಟ್‌ ಮಾಡಿ ಎಂದ ಗೂಗಲ್‌? ಕಾರಣ ಏನು?

|

ಸ್ಮಾರ್ಟ್‌ಫೋನ್‌ಗಳ ಸಂಖ್ಯೆ ಹೆಚ್ಚಾದಂತೆ ಆಪ್‌ ಆಧಾರಿತ ಸೇವೆಗಳು ಕೂಡ ಹೆಚ್ಚಾಗಿದೆ. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ನಿಮಗೆ ಬೇಕಾದಷ್ಟು ಆಪ್‌ಗಳು ಲಭ್ಯವಿದೆ. ಆದರೆ ಪ್ಲೇ ಸ್ಟೋರ್‌ನಲ್ಲಿ ದೊರೆಯುವ ಕೆಲವು ಅಪ್ಲಿಕೇಶನ್‌ಗಳಲ್ಲಿ ಆಗಾಗ ಅಭದ್ರತೆಯ ವರದಿಗಳು ಕೂಡ ಬರುತ್ತವೆ. ಸದ್ಯ ಇದೀಗ ಫಿನ್‌ಟೆಕ್‌ ಕಂಪೆನಿ ಸ್ಲೈಸ್‌ನ ಸ್ಲೈಸ್‌ ಅಪ್ಲಿಕೇಶನ್‌ ಬಳಸುವುದು ಅಪಾಯ ಎನ್ನುವ ವರದಿ ಬಂದಿದೆ. ಬಳಕೆದಾರರ ಡೇಟಾ ಕದಿಯುವ ಅಪ್ಲಿಕೇಶನ್‌ಗಳನ್ನು ಗುರುತಿಸುವ ಗೂಗಲ್‌ ಪ್ಲೇ ಪ್ರೊಟೆಕ್ಟ್‌ ಸ್ಲೈಸ್‌ ಅಪ್ಲಿಕೇಶನ್‌ ಅಪಾಯಕಾರಿ ಎಂದು ಹೇಳಿದೆ.

ಕ್ರೆಡಿಟ್‌

ಹೌದು, ಕ್ರೆಡಿಟ್‌ ಕಾರ್ಡ್‌ಗೆ ಪರ್ಯಾಯ ಎಂದು ಸಾಕಷ್ಟು ಜನಪ್ರಿಯತೆ ಪಡೆದಿರುವ ಸ್ಲೈಸ್‌ ಅಪ್ಲಿಕೇಶನ್‌ ಇದೀಗ ಸುದ್ದಿಯಲ್ಲಿದೆ. ಬಳಕೆದಾರರ ವೈಯುಕ್ತಿಕ ಡೇಟಾವನ್ನು ಕದಿಯುವ ಕೆಲಸವನ್ನು ಸ್ಲೈಸ್‌ ಆಪ್‌ ಮಾಡುತ್ತಿದೆ. ಕೂಡಲೇ ನಿಮ್ಮ ಮೊಬೈಲ್‌ನಲ್ಲಿ ಈ ಅಪ್ಲಿಕೇಶನ್‌ ಅನ್ನು ಡಿಲೀಟ್‌ ಮಾಡಿ ಎನ್ನುವ ವರದಿಗಳು ಬಂದಿವೆ. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ದುರುದ್ದೇಶಪೂರಿತ ಅಪ್ಲಿಕೇಶನ್‌ ಗುರುತಿಸುವ ಗೂಗಲ್‌ ಪ್ಲೇ ಪ್ರೊಟೆಕ್ಟ್‌ ಕೂಡ ಸ್ಲೈಸ್‌ ಅಪ್ಲಿಕೇಶನ್‌ ಬಳಕೆಗೆ ಯೋಗ್ಯವಲ್ಲ ಎಂದು ಹೇಳಿದೆ.

ಸ್ಲೈಸ್‌

ಗೂಗಲ್‌ ನೀಡಿರುವ ಮಾಹಿತಿಯಂತೆ ಸ್ಲೈಸ್‌ ಅಪ್ಲಿಕೇಶನ್‌ ಬಳಕೆದಾರರ ಡೇಟಾವನ್ನು ಕದಿಯುವ ಕೆಲಸ ಮಾಡುತ್ತಿದೆ. ಬಳಕೆದಾರರು ಸ್ಲೈಸ್‌ ಅಪ್ಲಿಕೇಶನ್‌ನ ನೋಟಿಫಿಕೇಶನ್‌ ಅನ್ನು ಕ್ಲಿಕ್‌ ಮಾಡಿದ ತಕ್ಷಣ ಬಳಕೆದಾರರ ಡೇಟಾವನ್ನು ಸ್ಕ್ಯಾನ್‌ ಮಾಡಲಿದೆ. ಇದರಿಂದ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸ್ಲೈಸ್‌ ಅಪ್ಲಿಕೇಶನ್‌ ಇದ್ದರೆ ಕೂಡಲೇ ಡಿಲೀಟ್‌ ಮಾಡುವುದು ಉತ್ತಮ. ಇದರ ನಡುವೆ ಸ್ಲೈಸ್‌ ಅಪ್ಲಿಕೇಶನ್‌ ಬಳಕೆದಾರರ ಕ್ಷಮೆಯಾಚಿಸಿದೆ. ಹಾಗಾದ್ರೆ ಸ್ಲೈಸ್‌ ಅಪ್ಲಿಕೇಶನ್‌ನಲ್ಲಿ ಕಂಡುಬಂದಿರುವ ದೋಷ ಏನು? ಇದರ ಬಗ್ಗೆ ಗೂಗಲ್‌ ಹೇಳಿರೋದೇನು? ಸ್ಲೈಸ್‌ ಅಪ್ಲಿಕೇಶನ್‌ ನೀಡಿರುವ ಸ್ಪಷ್ಟನೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅಪ್ಲಿಕೇಶನ್‌

ಸ್ಲೈಸ್‌ ಅಪ್ಲಿಕೇಶನ್‌ ಇತ್ತೀಚಿಗೆ ಸಾಕಷ್ಟು ಟ್ರೆಂಡಿಂಗ್‌ನಲ್ಲಿದೆ. ಕ್ರೆಡಿಟ್‌ ಕಾರ್ಡ್‌ಗೆ ಪರ್ಯಾಯ ಎಂಬಂತೆ ಬಳಕೆದಾರರಿಂದ ಗುರುತಿಸಿಕೊಂಡಿರುವ ಫಿನ್‌ಟೆಕ್‌ ಕಂಪೆನಿಯಾದ ಸ್ಲೈಸ್‌ ತನ್ನದೇ ಆದ ಅಪ್ಲಿಕೇಶನ್‌ ಹೊಂದಿದೆ. ಇದರ ಮೂಲಕ ಬಳಕೆದಾರರಿಗೆ ತನ್ನ ಸೇವೆಯನ್ನು ನೀಡುತ್ತಿದೆ. ಆದರೆ ಗೂಗಲ್ ನೀಡಿರುವ ಮಾಹಿತಿಯ ಪ್ರಕಾರ ಫಿನ್‌ಟೆಕ್ ಕಂಪನಿ ಸ್ಲೈಸ್ ಆಪ್ ಬಳಕೆದಾರರ ವೈಯಕ್ತಿಕ ಡೇಟಾದ ಮೇಲೆ ಕಣ್ಣಿಡಲು ಪ್ರಯತ್ನಿಸುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಗೂಗಲ್‌ ಜೂನ್ 24 ರಂದು, 'ಸ್ಲೈಸ್ ನಿಮ್ಮ ಡಿವೈಸ್‌ ಅನ್ನು ಅಪಾಯಕ್ಕೆ ತಳ್ಳುತ್ತದೆ' ಎಂದು ಹೇಳುವ ನೋಟಿಫಿಕೇಶನ್‌ ನೀಡಿದೆ. ಈ ಮೂಲಕ ಸ್ಲೈಸ್‌ ಅಪ್ಲಿಕೇಶನ್‌ ಬಳಕೆಗೆ ಯೋಗ್ಯವಲ್ಲ ಎಂದು ಹೇಳಿದೆ.

ಗೂಗಲ್‌ನ

ಗೂಗಲ್‌ನ ಮಾಹಿತಿ ಪ್ರಕಾರ ಬಳಕೆದಾರರು ಸ್ಲೈಸ್ ಅಪ್ಲಿಕೇಶನ್ ನೋಟಿಫಿಕೇಶನ್‌ ಕ್ಲಿಕ್‌ ಮಾಡಿದ ತಕ್ಷಣ ನಿಮ್ಮ ವೈಯಕ್ತಿಕ ಡೇಟಾ, ಅಂದರೆ ಸಂದೇಶಗಳು, ಫೋಟೋಗಳು, ಆಡಿಯೊಗಳನ್ನು ಕದಿಯುತ್ತದೆ ಎಂದು ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದ ಪ್ಲೇ ಪ್ರೊಟೆಕ್ಟ್ ಪೇಜ್‌ ತೆರೆದುಕೊಳ್ಳಲಿದೆ. ಇದರಲ್ಲಿ ವಿವರವಾದ ಮಾಹಿತಿಯನ್ನು ಗೂಗಲ್‌ ಪ್ಲೇ ಪ್ರೊಟೆಕ್ಟ್‌ ಪೇಜ್‌ ನೀಡಿದೆ. ಆದರಿಂದ ಗೂಗಲ್‌ ಪ್ಲೇ ಪ್ರೊಟೆಕ್ಟ್‌ ಬಳಕೆದಾರರಿಗೆ ತಮ್ಮ ಡಿವೈಸ್‌ನಿಂದ ಸ್ಲೈಸ್‌ ಅಪ್ಲಿಕೇಶನ್ ಅನ್ನು ಡಿಲೀಟ್‌ ಮಾಡುವಂತೆ ಶಿಫಾರಸು ಮಾಡಿದೆ.

ಸ್ಲೈಸ್‌ ಅಪ್ಲಿಕೇಶನ್‌ ಹೇಳಿದ್ದೇನು?

ಸ್ಲೈಸ್‌ ಅಪ್ಲಿಕೇಶನ್‌ ಹೇಳಿದ್ದೇನು?

ಇನ್ನು ಗೂಗಲ್‌ ಸ್ಲೈಸ್‌ ಅಪ್ಲಿಕೇಶನ್‌ ಡಿಲೀಟ್‌ ಮಾಡುವಂತೆ ಬಳಕೆದಾರರಿಗೆ ಸೂಚಿಸಿದ ತಕ್ಷಣ ಸ್ಲೈಸ್‌ ಅಪ್ಲಿಕೇಶನ್‌ ಸ್ಪಷ್ಟಿಕರಣ ನೀಡಿದೆ. ಅದರಂತೆ ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿರುವ ಸ್ಲೈಸ್‌ ಅಪ್ಲಿಕೇಶನ್‌ ಈಗಾಗಲೇ ಅಪ್ಲಿಕೇಶನ್‌ನಲ್ಲಿದ್ದ ಸಮಸ್ಯೆಯನ್ನು ಬಗೆಹರಿಸಿರುವುದಾಗಿ ಹೇಳಿದೆ. ಅಲ್ಲದೆ ನಮ್ಮ ಆಂಡ್ರಾಯ್ಡ್‌ ಅಪ್‌ಡೇಟ್ ಪ್ಲೇಸ್ಟೋರ್‌ನಿಂದ ಈ ದೋಷ ಪತ್ತೆಯಾಗಿದೆ. ಈ ದೋಷ ಪತ್ತೆಯಾದ 4 ಗಂಟೆಗಳಲ್ಲಿ ಸಮಸ್ಯೆಯನ್ನು ಪರಿಹರಿಸಿದ್ದೇವೆ ಎಂದು ಹೇಳಿದೆ. ಅಲ್ಲದೆ ಈಗಲೂ ಕೂಡ 1% ಅಪ್ಲಿಕೇಶನ್ ಬಳಕೆದಾರರು ಇನ್ನೂ ಹಿಂದಿನ ಆವೃತ್ತಿಯಲ್ಲಿದ್ದಾರೆ. ಬಳಕೆದಾರರು ಸಾಧ್ಯವಾದಷ್ಟು ಬೇಗ ಸ್ಲೈಸ್‌ ಅಪ್ಲಿಕೇಶನ್‌ ಅನ್ನು ಅಪ್ಡೇಟ್‌ ಮಾಡಿ ಎಂದು ಸ್ಲೈಸ್‌ ಕಂಪೆನಿ ವಿನಂತಿ ಮಾಡಿದೆ.

ಸ್ಲೈಸ್‌

ಇದಲ್ಲದೆ ಸ್ಲೈಸ್‌ ಕಂಪೆನಿ ಬಳಕೆದಾರರ ಕ್ಷಮೆಯನ್ನು ಕೂಡ ಕೇಳಿದೆ. "ಸ್ಲೈಸ್ ಕಂಪೆನಿ ಯಾವಾಗಲೂ ನಿಮ್ಮ ಡೇಟಾ ಮತ್ತು ಗೌಪ್ಯತೆಯನ್ನು ರಕ್ಷಿಸಲು ಸಂಪೂರ್ಣವಾಗಿ ಬದ್ಧವಾಗಿದೆ. ಸ್ಲೈಸ್ UPI ನಲ್ಲಿನ ಅಪ್ಲಿಕೇಶನ್ ಅಪ್‌ಡೇಟ್‌ನಲ್ಲಿ ತಾಂತ್ರಿಕ ದೋಷ ಉಂಟಾದ ಕಾರಣ ಈ ಸಮಸ್ಯೆ ಉದ್ಬವಿಸಿದೆ. ಮುಂದಿನ ದಿನಗಳಲ್ಲಿ ಈ ಮಾದರಿಯ ತಪ್ಪುಗಳು ನಡೆಯದಂತೆ ಎಚ್ಚರ ವಹಿಸುತ್ತೇವೆ ಎನ್ನುವ ಮಾತನ್ನು ಸ್ಲೈಸ್‌ ಕಂಪೆನಿ ನೀಡಿದೆ. ಇನ್ಮುಂದೆ ಹೀಗಾಗದಂತೆ ನೋಡಿಕೊಳ್ಳಲು ನಾವು ಆಳವಾಗಿ ಪರಿಶೀಲಿಸುತ್ತಿದ್ದೇವೆ. ಪ್ರಸ್ತುತ ಉಂಟಾದ ಅನಾನುಕೂಲತೆಗಾಗಿ ಕ್ಷಮೆಯಾಚಿಸುತ್ತೇವೆ ಎಂದು ಹೇಳಿದೆ.

ಸ್ಲೈಸ್‌ ಅಪ್ಲಿಕೇಶನ್‌ ಹಾನಿಕಾರಕ ಎಂದ ಗೂಗಲ್‌

ಸ್ಲೈಸ್‌ ಅಪ್ಲಿಕೇಶನ್‌ ಹಾನಿಕಾರಕ ಎಂದ ಗೂಗಲ್‌

ಗೂಗಲ್‌ ಸಾಮಾನ್ಯವಾಗಿ ತನ್ನ ಪ್ಲೇ ಸ್ಟೋರ್‌ನಲ್ಲಿ ಅಪ್ಲಿಕೇಶನ್‌ಗಳನ್ನು ಗೂಗಲ್‌ ಪ್ಲೇ ಪ್ರೊಟೆಕ್ಟ್ ಮೂಲಕ ಸ್ಕ್ಯಾನ್‌ ಮಾಡಲಿದೆ. ಈ ಸ್ಕ್ಯಾನ್‌ ಮೂಲಕ ಯಾವ್ಯಾವ ಅಪ್ಲಿಕೇಶನ್‌ಗಳು ಬಳಕೆದಾರರ ಡೇಟಾವನ್ನು ಕದಿಯುತ್ತಿವೆ ಎನ್ನುವ ಮಾಹಿತಿಯನ್ನು ಕಲೆಹಾಕಲಿದೆ. ಅದರಂತೆ ಸ್ಲೈಸ್‌ ಅಪ್ಲಿಕೇಶನ್‌ ಕೂಡ ಬಳಕೆದಾರರ ಡೇಟಾ ಕದಿಯುತ್ತಿದೆ ಅನ್ನೊದನ್ನ ಪ್ಲೇ ಪ್ರೊಟೆಕ್ಟ್‌ ಮೂಲಕ ಗೂಗಲ್‌ ಪತ್ತೆ ಹಚ್ಚಿದೆ. ನಂತರ ಬಳಕೆದಾರರಿಗೆ ಗೂಗಲ್‌ ನೋಟಿಫಿಕೇಶನ್‌ ಕಳುಹಿಸಿದ್ದು, ಸ್ಲೈಸ್‌ ಅಪ್ಲಿಕೇಶನ್‌ ಬಳಸದಂತೆ ಹೇಳಿದೆ.

ಸ್ಲೈಸ್‌

ಇನ್ನು ಸ್ಲೈಸ್‌ ಅಪ್ಲಿಕೇಶನ್‌ ನಿಮ್ಮ ಸಂದೇಶಗಳು, ಫೋಟೋಗಳು, ಆಡಿಯೊ ರೆಕಾರ್ಡಿಂಗ್‌ಗಳು ಮತ್ತು ಕಾಲ್‌ ಹಿಸ್ಟರಿಯನ್ನು ಕದಿಯುತ್ತಿದೆ ಎಂದು ಗೂಗಲ್‌ ಹೇಳಿದೆ. ಇದೇ ಕಾರಣಕ್ಕೆ ಸ್ಲೈಸ್‌ ಅಪ್ಲಿಕೇಶನ್‌ ಬಳಸುವ ಬಳಕೆದಾರರು ಅಪ್ಲಿಕೇಶನ್ ಅನ್ನು ಅನ್‌ಇನ್‌ಸ್ಟಾಲ್ ಮಾಡಲು ಗೂಗಲ್‌ ಶಿಫಾರಸು ಮಾಡಿದೆ. ಪ್ರಸ್ತುತ ಗೂಗಲ್ ಪ್ಲೇ ಸ್ಟೋರ್‌ನಲ್ಲಿಯೇ ಸ್ಲೈಸ್ ಅಪ್ಲಿಕೇಶನ್‌ 10 ಮಿಲಿಯನ್‌ಗಿಂತಲೂ ಹೆಚ್ಚಿನ ಡೌನ್‌ಲೋಡ್‌ಗಳನ್ನು ಹೊಂದಿದೆ. ಇದಲ್ಲದೆ ಆಪಲ್‌ನ ಆಪ್‌ ಸ್ಟೋರ್‌ನಲ್ಲಿಯೂ ಕೂಡ ಈ ಅಪ್ಲಿಕೇಶನ್‌ ಬಳಕೆದಾರರಿಗೆ ಡೌನ್‌ಲೋಡ್‌ಗೆ ಲಭ್ಯವಿದೆ. ಸದ್ಯ ಈ ಅಪ್ಲಿಕೇಶನ್‌ ಬಳಕೆದಾರರಿಗೆ ಸೂಕ್ತವಲ್ಲ ಎಂದು ಗೂಗಲ್‌ ಹೇಳಿರುವುದರಿಂದ ಇದರ ಡೌನ್‌ಲೋಡ್‌ ಸಂಖ್ಯೆ ಕಡಿಮೆಯಾಗುವ ಸಾದ್ಯತೆ ಇದೆ. ಸ್ಲೈಸ್‌ ಅಪ್ಲಿಕೇಶನ್‌ ಸ್ಪಷ್ಟನೆಯ ನಡುವೆ ಇದು ಬಳಕೆದಾರರ ಮೇಲೆ ಪರಿಣಾಮ ಬೀರಿದೆ.

Best Mobiles in India

Read more about:
English summary
Slice App is silently spying you and google recommends you to delete it ASAP

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X