ಬರಲಿದೆ ವಿಶ್ವದಲ್ಲೇ ಅತ್ಯಂತ ವೇಗದ ಚಾರ್ಜಿಂಗ್ ಫೋನ್! ಇದರ ಸಾಮರ್ಥ್ಯ ಎಷ್ಟಿರಲಿದೆ?

|

ಕಾಲ ಕಳೆದಂತೆ ಸ್ಮಾರ್ಟ್‌ಫೋನ್‌ಗಳ ಗಾತ್ರ ಹಾಗೂ ವಿನ್ಯಾಸ ಬದಲಾಗುತ್ತಿದೆ. ಅಲ್ಲದೆ ಸ್ಮಾರ್ಟ್‌ಫೋನ್‌ ತಂತ್ರಜ್ಞಾನದಲ್ಲಿ ಅನೇಕ ಬದಲಾವಣೆಗಳನ್ನು ಕಾಣಬಹುದಾಗಿದೆ. ಸದ್ಯ ಸ್ಮಾರ್ಟ್‌ಫೋನ್‌ಗಳು ನಮ್ಮ ದೈನಂದಿನ ಜೀವನದ ಅಗತ್ಯದ ಡಿವೈಸ್‌ಗಳಲ್ಲಿ ಒಂದಾಗಿದೆ. ಫೊನ್‌ ಚಾರ್ಜ್‌ಗೆ ಹಾಕಿ ಹೆಚ್ಚಿನ ಸಮಯ ಕಳೆಯುವ ಸಂಯಮ ಕೂಡ ನಮಗಿಲ್ಲ. ಇದೇ ಕಾರಣಕ್ಕೆ ಸ್ಮಾರ್ಟ್‌ಫೋನ್‌ ತಯಾರಕರು ಕೂಡ ವೇಗದ ಚಾರ್ಜಿಂಗ್‌ ತಂತ್ರಜ್ಞಾನ ಅಳವಡಿಸುವತ್ತ ತಮ್ಮ ಚಿತ್ತ ನೆಟ್ಟಿದ್ದಾರೆ. ಈಗಾಗಲೇ ಅನೇಕ ಸ್ಮಾರ್ಟ್‌ಫೊನ್‌ಗಳು ವೇಗದ ಚಾರ್ಜಿಂಗ್‌ ಬೆಂಬಲಿಸುತ್ತಿವೆ.

ಚಾರ್ಜಿಂಗ್‌

ಹೌದು, ವೇಗದ ಚಾರ್ಜಿಂಗ್‌ ತಂತ್ರಜ್ಞಾನವನ್ನು ಒಳಗೊಂಡ ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ ಜಾಸ್ತಿಯಿದೆ. ವೇಗದ ಸಾಮರ್ಥ್ಯದ ಸ್ಮಾರ್ಟ್‌ಫೋನ್‌ಗಳ ವಿಚಾರದಲ್ಲಿ ಇದೀಗ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. ರಿಯಲ್‌ಮಿ ಕಂಪೆನಿ ಶೀಘ್ರದಲ್ಲೇ ವಿಶ್ವದಲೇ ಅತ್ಯಂತ ವೇಗದ ಚಾಜಿಂಗ್‌ ಬೆಂಬಲಿಸುವ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ತಯಾರಿ ನಡೆಸಿದೆ. ಈ ಸ್ಮಾರ್ಟ್‌ಫೋನ್‌ ರಿಯಲ್‌ಮಿ GT ನಿಯೋ 5 ಆಗಿರಬಹುದು ಎನ್ನಲಾಗಿದೆ. ಹಾಗಾದ್ರೆ ಇದು ಎಷ್ಟು ವೇಗದ ಚಾಜಿಂಗ್‌ ಅನ್ನು ಬೆಂಬಲಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಮಾರ್ಟ್‌ಫೋನ್‌

ರಿಯಲ್‌ಮಿ ಕಂಪೆನಿ ಸದ್ಯದಲ್ಲೇ ವಿಶ್ವದಲ್ಲೇ ಅತ್ಯಂತ ವೇಗದ ಚಾರ್ಜಿಂಗ್‌ ತಂತ್ರಜ್ಞಾನ ಬೆಂಬಲಿಸುವ ಸ್ಮಾರ್ಟ್‌ಫೋನ್‌ ಪರಿಚಯಿಸಲಿದೆ. ಈ ಸ್ಮಾರ್ಟ್‌ಫೋನ್‌ 240W ವೇಗದ ಚಾರ್ಜಿಂಗ್‌ ಬೆಂಬಲಿಸುವ ಸಾಧ್ಯತೆಯಿದೆ. ಇದರಿಂದ ಚಾರ್ಜಿಂಗ್‌ ಟೆಕ್ನಾಲಜಿಯನ್ನು ಹೊಸ ಕ್ರಾಂತಿಯೇ ಸೃಷ್ಟಿಯಾಗಲಿದೆ ಎನ್ನಲಾಗಿದೆ. ಇದು ನೀವು ಕೆಲವೇ ನಿಮಿಷಗಳಲ್ಲಿ ಚಾರ್ಜ್‌ ಮಾಡಲು ಅನುಮತಿಸಲಿದೆ ಎಂದು ಹೇಳಲಾಗಿದೆ. ಪ್ರಸ್ತುತ ಹೈ ಎಂಡ್‌ ಸ್ಮಾರ್ಟ್‌ಫೋನ್‌ಗಳು ಇನ್ನಷ್ಟು ವೇಗದ ಚಾರ್ಜಿಂಗ್‌ ಟೆಕ್ನಾಲಜಿಯನ್ನು ಬಳಸುವ ಸಾಧ್ಯತೆಯಿದೆ.

ಚಾರ್ಜಿಂಗ್‌

ಈಗಾಗಲೇ ಹಲವು ವರ್ಷಗಳಿಂದ, ಒನ್‌ಪ್ಲಸ್‌ ಕಂಪೆನಿ ತನ್ನ ಫೋನ್‌ಗಳಲ್ಲಿ ವೇಗದ ಚಾರ್ಜಿಂಗ್‌ ಟೆಕ್ನಾಲಜಿಯನ್ನು ಬಳಸುತ್ತಿದೆ. ಶಿಯೋಮಿ ಕಂಪೆನಿ ಕೂಡ 120W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸುವ ಡಿವೈಸ್‌ಗಳನ್ನು ಪರಿಚಯಿಸಿದೆ. ಒಪ್ಪೋ ಕಂಪೆನಿ ಕೂಡ ಸೂಪರ್‌ವೂಕ್‌ ಫ್ಲ್ಯಾಷ್ ಚಾರ್ಜಿಂಗ್‌ ಅನ್ನು ಪರಿಚಯಿಸಿದೆ. ಇದು ಕೇವಲ ಒಂಬತ್ತು ನಿಮಿಷಗಳಲ್ಲಿ ಪೂರ್ತಿ ಚಾರ್ಜ್‌ ಮಾಡಲಿದೆ ಎಂದು ಕೂಡ ಹೇಳಲಾಗಿದೆ. ಇದೀಗ ರಿಯಲ್‌ಮಿ ಫೋನ್‌ ಇನ್ನಷ್ಟು ವೇಗವಾಗಿ ಚಾರ್ಜ್‌ ಮಾಡಲಿದೆ ಎಂದು ವರದಿಯಾಗಿದೆ.

ತಂತ್ರಜ್ಞಾನ

ಸದ್ಯ VCKCJACH ಮಾದರಿ ಸಂಖ್ಯೆಯನ್ನು ಹೊಂದಿರುವ ಸ್ಮಾರ್ಟ್‌ಫೋನ್‌ 240W SuperVOOC ಅಡಾಪ್ಟರುಗಳನ್ನು ಹೊಂದಿದೆ ಎಂದು ಚೀನೀ ವೆಬ್‌ಸೈಟ್ MyDrivers ವರದಿ ಮಾಡಿದೆ. ಒಪ್ಪೋ ಮತ್ತು ರಿಯಲ್‌ಮಿ R&D ಸಂಪನ್ಮೂಲಗಳನ್ನು ಹಂಚಿಕೊಳ್ಳುವುದನ್ನು ಪರಿಗಣಿಸಿದರೆ ಈ ಹೊಸ ವೇಗದ ಚಾಜಿಂಗ್‌ ತಂತ್ರಜ್ಞಾನವು ರಿಯಲ್‌ಮಿ GT ನಿಯೋ 5 ನೊಂದಿಗೆ ಬರಲಿದೆ ಎಂದು ಅಂದಾಜಿಸಲಾಗಿದೆ. ಅದರಂತೆ ರಿಯಲ್‌ಮಿ GT ನಿಯೋ 5 ಡ್ಯುಯಲ್-ಸೆಲ್ ಬ್ಯಾಟರಿ ಹೊಂದಿರಬಹುದು ಎನ್ನುವ ನಿರೀಕ್ಷೆಯಿದೆ.

ಸ್ಮಾರ್ಟ್‌ಫೋನ್‌

ಇನ್ನು ಅಡಾಪ್ಟರ್‌ನಿಂದ ಫೋನ್‌ಗೆ ಪವರ್ ಟ್ರಾನ್ಸ್‌ಮಿಷನ್ ಅನ್ನು ಕಸ್ಟಮೈಸ್ ಮಾಡಿದ USB-C ನಿಂದ C ಕೇಬಲ್‌ನಿಂದ ಇಂಟರ್‌ಫೇಸ್‌ಗಳಲ್ಲಿ ಬದಲಾವಣೆಯನ್ನು ಕಾಣಬಹುದು. ಇದರಲ್ಲಿ ಕಡಿಮೆ ಪ್ರತಿರೋಧದೊಂದಿಗೆ ಮತ್ತು ಹೆಚ್ಚಿನ ಪ್ರಸ್ತುತ ರೇಟಿಂಗ್‌ಗಾಗಿ ಹೆಚ್ಚಿನ-ಗೇಜ್ ತಂತಿಗಳಿಂದ ನಿರ್ವಹಿಸಲಾಗುತ್ತದೆ. ಸದ್ಯ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ವೇಗದ ಚಾರ್ಜಿಂಗ್‌ ಬೆಂಬಲಿಸುವ ಸ್ಮಾರ್ಟ್‌ಫೋನ್‌ ಅನ್ನು ಕಾಣಬಹುದು.

ಸ್ಮಾರ್ಟ್‌ಫೋನ್‌

ಇದಲ್ಲದೆ ಇತ್ತೀಚಿನ ದಿನಗಳಲ್ಲಿ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಕೂಡ ಯುಎಸ್‌ಬಿ ಸಿ ಪೋರ್ಟ್‌ ಚಾರ್ಜರ್‌ ಅನ್ನು ಬೆಂಬಲಿಸಬೇಕು ಎನ್ನುವ ನೀತಿ ಜಾರಿಗೆ ಸಿದ್ದತೆ ನಡೆದಿದೆ. ಇದರಿಂದ ಸ್ಮಾರ್ಟ್‌ ಡಿವೈಸ್‌ಗಳೆಲ್ಲಾವೂ ಒಂದೇ ಮಾದರಿಯ ಚಾರ್ಜರ್‌ ಬೆಂಬಲಿಸುವ ದಿನಗಳು ದೂರವಿಲ್ಲ. ಇಂತಹ ಸನ್ನಿವೇಶದಲ್ಲಿ ವೇಗದ ಚಾರ್ಜರ್‌ಗಳ ಸಂಖ್ಯೆ ಇನ್ನಷ್ಟು ಹೆಚ್ಚಾದರೆ ಅಚ್ಚರಿಯಿಲ್ಲ.

Best Mobiles in India

English summary
Smartphone industry observed a need for fast-charging technology

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X