ಸ್ಮಾರ್ಟ್‌ಫೋನ್‌ಗೆ ಉಳಿಗಾಲವಿಲ್ಲ ಹಾಗಾದ್ರೆ ಮುಂದಿನ ಗತಿ!!!

By Shwetha
|

ನಿಮ್ಮೊಂದಿಗಿರುವ ನಿಮ್ಮ ಸ್ಮಾರ್ಟ್‌ಫೋನ್ ಎಲ್ಲಿಯಾದರೂ ಕಳೆದು ಹೋಯಿತು ಅಥವಾ ಕಾಣೆಯಾಯಿತು ಎಂದಾದಲ್ಲಿ ಆ ವೇದನೆಯನ್ನು ನಿಮಗೆ ವಿವರಿಸಲೂ ಸಾಧ್ಯವಿಲ್ಲ ಅಲ್ಲವೇ? ಹಾಗಿದ್ದರೆ ನಾವಿಲ್ಲಿ ತಿಳಿಸುವ ಸುದ್ದಿ ಕೇಳಿದರೆ ನಿಮಗೆ ಆಘಾತವಾಗುವುದು ಖಂಡಿತ. ಒಂದು ಅಧ್ಯಯನದ ಪ್ರಕಾರ ಮುಂದಿನ ಐದು ವರ್ಷಗಳಲ್ಲಿ ನಮ್ಮ ಜೀವವೇ ಆಗಿರುವ ಸ್ಮಾರ್ಟ್‌ಫೋನ್‌ಗಳು ಕಣ್ಮರೆಯಾಗಲಿವೆಯಂತೆ.

ಆರ್ಟಿಫಿಶಿಯಲ್ ಇಂಟಲಿಜೆನ್ಸಿಯೊಂದಿಗೆ (ಕೃತಕ ಬುದ್ಧಿಮತ್ತೆ) ಸ್ಮಾರ್ಟ್‌ಫೋನ್‌ಗಳನ್ನು ಸ್ಥಾನಾಂತರಿಸಲಿದ್ದು ಇದು ಡಿವೈಸ್‌ಗಳೊಂದಿಗೆ ನೇರ ಸಂವಹನವನ್ನು ಉಂಟುಮಾಡಲಿದೆ ಎಂಬುದಾಗಿ ಸ್ವೀಡಿಶ್ ಟೆಲಿಕಾಮ್ ನುರಿತರು ತಿಳಿಸಿದ್ದಾರೆ. ಅಧ್ಯಯನವು 40 ದೇಶಗಳ 100,000 ಜನರನ್ನು ಈ ಕುರಿತು ಸಂದರ್ಶನ ನಡೆಸಿದ ನಂತರವೇ ಈ ವರದಿಯನ್ನು ದೃಢೀಕರಿಸಿದೆ. ವರ್ಚುವಲ್ ರಿಯಾಲಿಟಿ ಸದ್ಯದಲ್ಲಿಯೇ ಸ್ಮಾರ್ಟ್‌ಫೋನ್‌ಗಳ ಸ್ಥಳವನ್ನು ಕ್ರಮಿಸಲಿದೆ ಎಂಬುದು ದಿಟವಾಗಿದೆ. ಇಂದಿನ ಲೇಖನದಲ್ಲಿ ಈ ವರದಿಯ ಇನ್ನಷ್ಟು ಅಂಶಗಳನ್ನು ನಾವು ನಿಮ್ಮ ಮುಂದಿಡಲಿದ್ದೇವೆ.

ಲೈಫ್‌ಸ್ಟೈಲ್ ನೆಟ್‌ವರ್ಕ್

ಲೈಫ್‌ಸ್ಟೈಲ್ ನೆಟ್‌ವರ್ಕ್

ಇಂಟರ್ನೆಟ್‌ನ ಬಳಕೆಯನ್ನು ಬಹಳಷ್ಟು ಜನರು ಮಾಡಿದಂತೆ ಅದರ ಮಹತ್ವ ಹೆಚ್ಚುತ್ತಿದೆ. ಆದ್ದರಿಂದ ಇದಕ್ಕಿಂತಲೂ ಮಿಗಿಲಾದ ಸೇವೆಯನ್ನು ಬಳಕೆದಾರರು ಬಯಸುತ್ತಿದ್ದಾರೆ.

ಸ್ಟ್ರೀಮಿಂಗ್

ಸ್ಟ್ರೀಮಿಂಗ್

ಬೇರೆ ವಯಸ್ಸಿನವರಿಗಿಂತಲೂ ಹದಿಹರೆಯದವರು ಯೂಟ್ಯೂಬ್ ಅನ್ನು ಹೆಚ್ಚು ವೀಕ್ಷಿಸುತ್ತಾರೆ. 16-19 ವರ್ಷಗಳ 46% ದಷ್ಟು ಹದಿಹರೆಯದವರು ಪ್ರತೀ ದಿನ ಯೂಟ್ಯೂಬ್‌ನಲ್ಲಿ ಒಂದು ಗಂಟೆಗಿಂತಲೂ ಹೆಚ್ಚು ಸಮಯವನ್ನು ವ್ಯಯಿಸುತ್ತಿದ್ದಾರೆ ಎನ್ನಲಾಗಿದೆ.

ವರ್ಚುವಲ್ ನೈಜತೆ

ವರ್ಚುವಲ್ ನೈಜತೆ

ಗ್ರಾಹಕರು ಪ್ರತೀ ದಿನ ತಮ್ಮ ದೈನಂದಿನ ಚಟುವಟಿಕೆಗಳಿಗೆ ವರ್ಚುವಲ್ ರಿಯಾಲಿಟಿಯನ್ನು ಬಯಸುತ್ತಿದ್ದು ಕ್ರೀಡೆಗಳ ವೀಕ್ಷಣೆ ಮತ್ತು ವೀಡಿಯೊ ಕರೆಗಳನ್ನು ಮಾಡಲು ಇದರ ಅನುಕೂಲಗಳನ್ನು ಬಳಕೆದಾರರು ಹೆಚ್ಚು ಬಯಸುತ್ತಿದ್ದಾರೆ.

ಸೆನ್ಸಾರ್ ಮನೆಗಳು

ಸೆನ್ಸಾರ್ ಮನೆಗಳು

ಮನೆಗಳ ನಿರ್ಮಾಣದಲ್ಲಿ ಸೆನ್ಸಾರ್‌ಗಳನ್ನು ಬಳಸಿದರೆ ಯವುದೇ ಬಗೆಯ ವಿದ್ಯುತ್ ಸಮಸ್ಯೆಗಳು ಸೋರಿಕೆ ಮೊದಲಾದುವನ್ನು ಇದು ನಿರ್ವಹಿಸಬಹುದು ಎಂಬುದು ಸ್ಮಾರ್ಟ್‌ಫೋನ್ ಮಾಲೀಕರುಗಳ ಯೋಚನೆಯಾಗಿದೆ. ಅದಕ್ಕಾಗಿಯೇ ಸ್ಮಾರ್ಟ್‌ಮನೆಗಳ ಸಿದ್ಧತೆ ಕೂಡ ನಡೆದಿದೆ.

ಸ್ಮಾರ್ಟ್ ಕಮ್ಯೂಟರ್ಸ್

ಸ್ಮಾರ್ಟ್ ಕಮ್ಯೂಟರ್ಸ್

ಪ್ರಯಾಣಿಕರು ತಮ್ಮ ಸಮಯವನ್ನು ಉಳಿಸುವುದಕ್ಕಾಗಿ ಸ್ಮಾರ್ಟ್ ವಿಧಾನವನ್ನು ಅನುಸರಿಸುವ ಯೋಚನೆಯಲ್ಲಿದ್ದಾರೆ.

ತುರ್ತು ಚಾಟ್

ತುರ್ತು ಚಾಟ್

ಸಾಮಾಜಿಕ ನೆಟ್‌ವರ್ಕ್‌ಗಳು ತುರ್ತು ಪರಿಸ್ಥಿತಿಗಳನ್ನು ನಿಭಾಯಿಸುವ ಅತ್ಯುತ್ತಮ ಮಾರ್ಗಗಳು ಎಂದೆನಿಸಿವೆ. 10 ರಲ್ಲಿ 6 ಜನರು ಡಿಸಾಸ್ಟರ್ ಅಪ್ಲಿಕೇಶನ್ ಅನ್ನು ಬಯಸಿದ್ದಾರೆ.

ಇಂಟರ್ನಲ್ಸ್

ಇಂಟರ್ನಲ್ಸ್

ಇಂಟರ್ನಲ್ ಸೆನ್ಸಾರ್‌ಗಳು ನಮ್ಮ ದೇಹವನ್ನು ಅಳತೆ ಮಾಡುವ ಹೊಸ ವೇರಿಯೇಬಲ್‌ಗಳಾಗಿವೆ. 10 ರಲ್ಲಿ ಎಂಟು ಗ್ರಾಹಕರು ಈ ತಂತ್ರಜ್ಞಾನವನ್ನು ಬಳಸುವ ಉತ್ಸಾಹವನ್ನು ತೋರಿದ್ದು ದೃಷ್ಟಿ, ಮೆಮೊರಿ ಮತ್ತು ಆಲಿಸುವಿಕೆ ಸಮಸ್ಯೆಗಳನ್ನು ದೂರಗೊಳಿಸಬಹುದು ಎಂದು ನಂಬಿದ್ದಾರೆ/.

ಹ್ಯಾಕಿಂಗ್

ಹ್ಯಾಕಿಂಗ್

ಹ್ಯಾಕಿಂಗ್ ಮತ್ತು ವೈರಸ್‌ಗಳು ಒಂದು ದೊಡ್ಡ ಸಮಸ್ಯೆಯಾಗಿಯೇ ಹೆಚ್ಚಿನ ಫೋನ್ ಬಳಕೆದಾರರು ನಂಬಿದ್ದಾರೆ. ಆದರೆ ಈ ಸಮಸ್ಯೆಯನ್ನು ನೀಗಿಸಲು ಸಂಸ್ಥೆಗಳು ಹೆಚ್ಚಿನ ಮಹತ್ವವನ್ನು ನೀಡಿವೆ ಎಂಬುದಾಗಿ ಅದರಲ್ಲಿ ಐದು ಜನರು ಅಭಿಪ್ರಾಯಿಸಿದ್ದಾರೆ.

ಸ್ಥಳೀಯ ಪತ್ರಿಕೋದ್ಯಮಿಗಳು

ಸ್ಥಳೀಯ ಪತ್ರಿಕೋದ್ಯಮಿಗಳು

ಗ್ರಾಹಕರು ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಂತೆಲ್ಲಾ ಅವರುಗಳ ಪ್ರಭಾವವನ್ನು ಸಮಾಜದಲ್ಲಿ ಇದು ಹೆಚ್ಚಿಸುತ್ತದೆ ಎಂಬುದಾಗಿಯೇ ಅವರು ನಂಬಿದ್ದಾರೆ.

Best Mobiles in India

English summary
Your smartphone which is an integral part of your life right now may not be around after the next five years.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X