ಸ್ನ್ಯಾಪ್‌ಚಾಟ್‌ನ ಈ ಹೊಸ ಫೀಚರ್ಸ್‌ ನಿಮಗೆ ಸಾಕಷ್ಟು ಉಪಕಾರಿಯಾಗಲಿದೆ!

|

ಸ್ನ್ಯಾಪ್‌ಚಾಟ್‌ ಅಪ್ಲಿಕೇಶನ್‌ ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಗಳಲ್ಲಿ ಒಂದೆನಿಸಿಕೊಂಡಿದೆ. ತನ್ನ ವಿಶಿಷ್ಟ ಫೀಚರ್ಸ್‌ಗಳ ಕಾರಣಕ್ಕೆ ಜನರ ನೆಚ್ಚಿನ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಸ್ನ್ಯಾಪ್‌ಚಾಟ್‌ ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ ಆದರೂ ಇತರ ಅಪ್ಲಿಕೇಶನ್‌ಗಳಿಗಿಂತ ಭಿನ್ನವಾದ ಫೀಚರ್ಸ್‌ಗಳನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಬಳಕೆದಾರರ ಅನುಕೂಲಕ್ಕಾಗಿ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ಸ್ನ್ಯಾಪ್‌ಚಾಟ್‌ನ ಸ್ನ್ಯಾಪ್‌ ಮ್ಯಾಪ್‌ನಲ್ಲಿ ಲೇಯರ್‌ ಎಂಬ ಹೊಸ ಫೀಚರ್ಸ್‌ ಪರಿಚಯಿಸಿದೆ. ಇದು ಆಯ್ದ ಪಾರ್ಟನರ್‌ಗಳಿಂದ ಮತ್ತು ಸ್ನ್ಯಾಪ್‌ನಿಂದ ವಿಶೇಷ ಅನುಭವ ನೀಡಲಿದೆ.

ಸ್ನ್ಯಾಪ್‌ಚಾಟ್‌

ಹೌದು, ಸ್ನ್ಯಾಪ್‌ಚಾಟ್‌ ತನ್ನ ಸ್ನ್ಯಾಪ್‌ ಮ್ಯಾಪ್‌ನಲ್ಲಿ ಲೇಯರ್‌ ಎಂಬ ಫೀಚರ್ಸ್‌ ಪರಿಚಯಿಸಿದೆ. ಈ ಫೀಚರ್ಸ್‌ನಿಮದ ಸ್ನ್ಯಾಪ್‌ಮ್ಯಾಪ್‌ನ ವಿಕಾಸವನ್ನು ಗುರುತಿಸಲಿದೆ ಎನ್ನಲಾಗಿದೆ. ಈ ಲೇಯರ್ಸ್‌ ಫೀಚರ್ಸ್‌ ಮೂಲಕ ಸ್ನ್ಯಾಪ್‌ಚಾಟ್‌ ಹೊಸ ಅನುಭವ ನೀಡಲಿದೆ. ಅದರಲ್ಲೂ ಮೆಮೋರಿಸ್‌ ಮತ್ತು ಎಕ್ಸ್‌ಪ್ಲೋರ್‌ ಅನುಭವವನ್ನು ಉತ್ತಮಗೊಳಿಸಲಿದೆ. ಹಾಗಾದ್ರೆ ಸ್ನ್ಯಾಪ್‌ಚಾಟ್‌ ಪರಿಚಯಿಸಿರುವ ಹೊಸ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೆಮೊರೀಸ್

ಸ್ನ್ಯಾಪ್‌ಚಾಟ್‌ನಲ್ಲಿ ಮೆಮೊರೀಸ್ ಫೀಚರ್ಸ್‌ ಅಪ್ಲಿಕೇಶನ್‌ನಿಂದ ಬರುವ ನೋಟಿಫೀಕೇಶನ್‌ಗಳೊಂದಿಗೆ ನಿರ್ದಿಷ್ಟ ದಿನದಂದು ನಿಮ್ಮ ನೆನಪುಗಳನ್ನು ಬಿಚ್ಚಿಡಲಿದೆ. ಅಂದರೆ ಹೆಸರೇ ಸೂಚಿಸುವಂತೆ ದಿನಗಳ ವಿಶೇಷವನ್ನು ನಿಮಗೆ ನೆನಪಿಸಲಿದೆ. ಸದ್ಯ ಸ್ನ್ಯಾಪ್‌ಚಾಟ್ ಮೆಮೊರೀಸ್ ಅನ್ನು ಇದೀಗ ಸ್ನ್ಯಾಪ್ ಮ್ಯಾಪ್‌ಗೆ ಸೇರಿಸಲಾಗಿದೆ. ಇದರಿಂದ ಬಳಕೆದಾರರು ತಾವು ಬೇಟಿ ಮಾಡಿದ ಮೆಮೊರೀಸ್‌ ಅನ್ನು ನೆನಪು ಮಾಡಿಕೊಳ್ಳಲು ಇದು ಅವಕಾಶ ನೀಡಲಿದೆ. ನೀವು ಎಲ್ಲಿ ಯಾವ ದಿನದಂದು ಯಾರನ್ನು ಬೇಟಿ ಆಡಿದ್ದೀರಾ ಅನ್ನೊದನ್ನ ತೋರಿಸಲಿದೆ.

ಸ್ನ್ಯಾಪ್‌ಚಾಟ್‌

ಸ್ನ್ಯಾಪ್‌ಚಾಟ್‌ನ ಈ ಲೇಯರ್ ನಿಮ್ಮ ಸ್ವಂತ ನೆನಪುಗಳನ್ನು ಮಾತ್ರ ತೋರಿಸುತ್ತದೆ ಎಂದು ಹೇಳಲಾಗಿದೆ. ಆದರೆ ಸ್ನ್ಯಾಪ್ ಮ್ಯಾಪ್‌ನಲ್ಲಿ ಬಳಕೆದಾರರು ಸ್ನೇಹಿತರ ನೆನಪುಗಳನ್ನು ನೋಡಲು ಸಾಧ್ಯವಿಲ್ಲ. ಇನ್ನು ಎಕ್ಸ್‌ಪ್ಲೋರ್ ಫೀಚರ್ಸ್‌ ಮೂಲಕ ಸ್ನ್ಯಾಪ್ ಮ್ಯಾಪ್‌ನಲ್ಲಿ ರಿ ಡಿಸೈನ್‌ ಮಾಡಿದ ವ್ಯೂಪೋರ್ಟ್ ಅನ್ನು ಸ್ನ್ಯಾಪ್ ಪರಿಚಯಿಸಿದೆ. ಇದು ಸಿಗ್ನೇಚರ್ ಹೀಟ್ ಮ್ಯಾಪ್‌ನಲ್ಲಿ ನಿರ್ಮಿಸುತ್ತದೆ. ಹೀಟ್ ಮ್ಯಾಪ್ ಮೂಲಕ ಬಳಕೆದಾರರು ನಿರ್ದಿಷ್ಟ ಪ್ರದೇಶದಲ್ಲಿ ತೆಗೆದುಕೊಂಡ ಸ್ನ್ಯಾಪ್‌ಗಳನ್ನು ನೋಡಲು ಅನುಮತಿಸುತ್ತದೆ.

ಎಕ್ಸ್‌ಪ್ಲೋರ್

ಇನ್ನು ಈ ಹೊಸ ಎಕ್ಸ್‌ಪ್ಲೋರ್ ಫೀಚರ್ಸ್‌ ಸ್ನ್ಯಾಪ್‌ಚಾಟ್‌ನಲ್ಲಿ ಶೇರ್‌ ಮಾಡಿದ ಫೋಟೋಗಳು ಮತ್ತು ವೀಡಿಯೊಗಳ ಮೂಲಕ ಇತರ ಸ್ಥಳಗಳನ್ನು ನೋಡುವುದಕ್ಕೆ ಸಾಧ್ಯವಾಗಲಿದೆ. ಇದಲ್ಲದೆ, ಸ್ನ್ಯಾಪ್‌ಚಾಟ್‌ ಬಳಕೆದಾರರು ಲ್ಯಾಂಡ್‌ಸ್ಕೇಪ್ ಅನ್ನು ಕಸ್ಟಮೈಸ್ ಮಾಡಲು ಲೇಯರ್‌ಗಳ ನಡುವೆ ಟಾಗಲ್ ಮಾಡಲು ಸಾಧ್ಯವಾಗಲಿದೆ. ಇದರಿಂದ ನೀವು ಯಾವುದನ್ನು ಸರ್ಚ್‌ ಮಾಡುತ್ತಿದ್ದಿರೊ ಅದು ನಿಮಗೆ ನಿಖರವಾಗಿ ನೋಡಲು ಸಾದ್ಯವಾಗಲಿದೆ. ಇದಕ್ಕಾಗಿ Snap ಸಹ Ticketmaster ನಂತಹ ಪಾಲುದಾರರಿಂದ ಲೇಯರ್‌ಗಳನ್ನು ತರಲು ಯೋಜಿಸಿದೆ, ಇದು ನಿಮಗೆ ಹೊಸ ಅನುಭವ ನೀಡಲಿದೆ.

ಸ್ನ್ಯಾಪ್‌ಚಾಟ್‌

ಇದಲ್ಲದೆ ಸ್ನ್ಯಾಪ್‌ಚಾಟ್‌ ಅಪ್ಲಿಕೇಶನ್‌ ಕೆಲ ದಿನಗಳ ಹಿಂದೆಯಷ್ಟೇ ಹೊಸ "ಕ್ರಿಯೇಟರ್ ಹಬ್" ಅನ್ನು ಪರಿಚಯಿಸಿದೆ. ಇದು ಸ್ನ್ಯಾಪ್ ಸ್ಟಾರ್ಸ್ ಮತ್ತು ಇತರ ಕ್ರಿಯೆಟರ್ಸ್‌ಗಳಿಂದ ಶೈಕ್ಷಣಿಕ ಮತ್ತು ಮಾಹಿತಿ ವೀಡಿಯೊ ಟ್ಯುಟೋರಿಯಲ್‌ಗಳನ್ನು ಒಳಗೊಂಡಿದೆ. ಈ ವೀಡಿಯೋಗಳಲ್ಲಿ ಬಳಕೆದಾರರಿಗೆ ಫಿಲ್ಟರ್‌ಗಳು, ಲೆನ್ಸ್‌ಗಳು ಮತ್ತು ಆಪ್‌ನಲ್ಲಿನ ಇತರ ವಿಚಾರಗಳ ಬಗ್ಗೆ ಮಾಹಿತಿ ನೀಡಲಿದೆ. ಇನ್ನು ಸ್ನ್ಯಾಪ್‌ಚಾಟ್‌ ಪರಿಚಯಿಸಿರುವ ಕ್ರಿಯೇಟರ್‌ ಭಾರತದಲ್ಲಿ ಹಿಂದಿ, ಬಂಗಾಳಿ, ಗುಜರಾತಿ, ಕನ್ನಡ, ಮರಾಠಿ, ತೆಲುಗು, ತಮಿಳು, ಜಪಾನೀಸ್ ಮತ್ತು ಮಲಯಾಳಂ ಭಾಷೆಗಳಲ್ಲಿ ಲಭ್ಯವಾಗಲಿದೆ. ಸದ್ಯ ಸ್ನ್ಯಾಪ್‌ಚಾಟ್‌ ನೀಡಿರುವ ಮಾಹಿತಿ ಪ್ರಕಾರ ಕ್ರಿಯೇಟರ್‌ನ ಉದ್ದೇಶ ಸ್ನ್ಯಾಪ್‌ನಲ್ಲಿರುವ ಕ್ರಿಯೇಟರ್ಸ್‌ಗಳಿಗೆ ಪರಿಪೂರ್ಣವಾದ ಮಾಹಿತಿ ನೀಡುವುದಾಗಿದೆ. ವೀಡಿಯೊ ಟ್ಯುಟೋರಿಯಲ್‌ಗಳ ಜೊತೆಗೆ, ಎಲ್ಲಾ ಮಾದರಿಯ ಲಿಖಿತ ಮಾಹಿತಿಯನ್ನು ಪ್ರವೇಶಿಸಲು ಇದು ಉತ್ತಮ ಮಾರ್ಗವಾಗಿದೆ. .

ಸ್ನ್ಯಾಪ್‌ಚಾಟ್

ಇನ್ನು ಸ್ನ್ಯಾಪ್‌ಚಾಟ್ ಕ್ರಿಯೇಟರ್ ಹಬ್ ಈಗಾಗಲೇ ಬಳಕೆದಾರರಿಗೆ ಲಭ್ಯವಿದೆ. ಸ್ನ್ಯಾಪ್ ಸ್ಟಾರ್‌ಗಳು ಮತ್ತು ಕ್ರಿಯೆಟರ್ಸ್‌ ತಮ್ಮ ಪಬ್ಲಿಕ್‌ ಸ್ಟೋರೀಸ್, ಪ್ಲೇ ಮತ್ತು ಡಿಸ್ಕವರ್‌ನಲ್ಲಿ ಸ್ನ್ಯಾಪ್ ಒರಿಜಿನಲ್ಸ್ ಮೂಲಕ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗಲಿದೆ. ಇದು ಸ್ನ್ಯಾಪ್‌ಚಾಟ್‌ ನಲ್ಲಿ ಹೊಸ ವಿಷಯದ ಮೇಲೆ ಹೆಚ್ಚು ಟ್ರಾಫಿಕ್ ಪಡೆಯುವುದಕ್ಕೆ ಹಾಗೂ ಪ್ರೇಕ್ಷಕರನ್ನು ವಿಶ್ಲೇಷಣೆ ಮಾಡುವುದು ಹೇಗೆ ಅನ್ನೊದನ್ನು ಅರ್ಥಮಾಡಿಕೊಳ್ಳಲು ಅವಕಾಶ ನೀಡಲಿದೆ. ಇನ್ನು ಸ್ನ್ಯಾಪ್‌ಚಾಟ್‌ ಕ್ರಿಯೇಟರ್‌ ಹಬ್‌ ಸ್ಥಳಿಯ ಭಾಷೆಗಳನ್ನು ಬೆಂಬಲಿಸುವದರಿಂದ ಶೈಕ್ಷಣಿಕ ಮಾಹಿತಿ ಪಡೆಯುವುದು ಸುಲಭವಾಗಿದೆ. ನಿಮಗೆ ವೀಡಿಯೋಗಳಲ್ಲಿ ಬಳಕೆದಾರರಿಗೆ ಫಿಲ್ಟರ್‌ಗಳು, ಲೆನ್ಸ್‌ಗಳು ಮತ್ತು ಆಪ್‌ನಲ್ಲಿನ ಇತರ ವಿಚಾರಗಳ ಬಗ್ಗೆ ಮಾಹಿತಿ ನೀಡಲಿದೆ. ಇದರಿಂದ ಸ್ನ್ಯಾಪ್‌ ಕ್ರಿಯೆಟರ್‌ ಹಂಚಿಕೊಳ್ಳುವ ವಿಡಿಯೋಗಳಿಗೆ ಪ್ರೇಕ್ಷಕರು ಟ್ರಾಫಿಕ್‌ ಪಡೆಯುವುದು ಸುಲಭವಾಗಲಿದೆ. ಈ ಮೂಲಕ ವಿಡಿಯೋಗಳನ್ನುಹೆಚ್ಚಿನ ಜನರಿಗೆ ತಲುಪುವಂತೆ ಮಾಡಲು ಸಾದ್ಯವಾಗಲಿದೆ.

ಸ್ನ್ಯಾಪ್‌ಚಾಟ್‌ನಲ್ಲಿ ಯಾರಾದರೂ ನಿಮ್ಮನ್ನು ಬ್ಲಾಕ್‌ ಮಾಡಿದರೆ ನೋಡುವುದು ಹೇಗೆ ?

ಸ್ನ್ಯಾಪ್‌ಚಾಟ್‌ನಲ್ಲಿ ಯಾರಾದರೂ ನಿಮ್ಮನ್ನು ಬ್ಲಾಕ್‌ ಮಾಡಿದರೆ ನೋಡುವುದು ಹೇಗೆ ?

ಸ್ನ್ಯಾಪ್‌ಚಾಟ್‌ನಲ್ಲಿ ಯಾರಾದರೂ ನಿಮ್ಮನ್ನು ನಿರ್ಬಂಧಿಸಿದ್ದಾರೆಯೇ ಎಂದು ನೋಡಲು ನೀವು ಕೆಲವು ವಿಚಾರಗಳನ್ನು ಗಮನಿಸಬೆಕಾಗುತ್ತದೆ. ಇದರಲ್ಲಿ ನೀವು ಯಾರಾದರೂ ನಿಮ್ಮನ್ನು ನಿರ್ಬಂಧಿಸಿದರೆ, ಅವರ ಚಾಟ್‌ಗಳು ಇನ್ನೂ ಇರಬಹುದು ಮತ್ತು ನಿಮ್ಮ ಸ್ನೇಹಿತರ ಪಟ್ಟಿಯಲ್ಲಿ ಕಾಣಿಸಿಕೊಳ್ಳಬಹುದು. ಯಾರಾದರೂ ನಿಮ್ಮನ್ನು ಸ್ನೇಹಿತರೆಂದು ತೆಗೆದುಹಾಕಿದರೆ, ಚಾಟ್‌ಗಳು ಕಾಣೆಯಾಗಿರುತ್ತವೆ ಮತ್ತು ಅವರು ನಿಮ್ಮ ಸ್ನೇಹಿತರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ.

ನಿಮ್ಮ ಚಾಟ್ ಪಟ್ಟಿಯನ್ನು ಪರಿಶೀಲಿಸಿ

ನಿಮ್ಮ ಚಾಟ್ ಪಟ್ಟಿಯನ್ನು ಪರಿಶೀಲಿಸಿ
ಸ್ನ್ಯಾಪ್‌ಚಾಟ್‌ನಲ್ಲಿ ಸ್ನೇಹಿತರಿಂದ ನಿಮ್ಮನ್ನು ನಿರ್ಬಂಧಿಸಲಾಗಿದೆ ಎಂದು ನೀವು ಭಾವಿಸಿದರೆ, ಮೊದಲು ಮಾಡಬೇಕಾದದ್ದು ಅವನ ಅಥವಾ ಅವಳೊಂದಿಗೆ ಚಾಟ್‌ಗಳನ್ನು ನೋಡಿ. ಚಾಟ್‌ಗಳನ್ನು ಅಳಿಸಿದರೆ, ಇಲ್ಲಿ ಒಂದು ಸೂಚನೆ ಇದೆ. ಆದರೆ, ಇದರರ್ಥ ವ್ಯಕ್ತಿಯು ಬಹುಶಃ ತನ್ನ Snapchat ಖಾತೆಯನ್ನು ಅಳಿಸಿರಬಹುದು, ಇಲ್ಲವೇ ನಿಮ್ಮನ್ನು ಬ್ಲಾಕ್‌ ಮಾಡಿರುವ ಸಾದ್ಯತೆ ಇರುತ್ತದೆ.

ಮೆಸೇಜ್‌ ಸೆಂಡ್‌ ಮಾಡಿ!
ನೀವು ಯಾವುದೇ ವ್ಯಕ್ತಿಗೆ ಸಂದೇಶ ಕಳುಹಿಸಿದಾಗ ಸಂದೇಶವು ರಿಸೀವರ್ ಅನ್ನು ತಲುಪಲು ವಿಫಲವಾದರೆ, ಅವರು ನಿಮ್ಮನ್ನು ಬ್ಲಾಕ್‌ ಮಾಡಿರುವ ಸಾದ್ಯತೆ ಇರಲಿದೆ.

Best Mobiles in India

English summary
Snapchat’s Snap Map is getting a new feature called ‘Layers’ which will introduce specialised experiences from select partners and from Snap.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X