ಸೋನಿ ಕಂಪೆನಿಯಿಂದ ಹೊಸ ವಾಕ್‌ಮ್ಯಾನ್‌ ಬಿಡುಗಡೆ!..ಜಬರ್ದಸ್ತ್‌ ಫೀಚರ್ಸ್‌!

|

ಸೋನಿ ಕಂಪೆನಿ ಗುಣಮಟ್ಟದ ಡಿವೈಸ್‌ಗಳಿಗೆ ಹೆಸರುವಾಸಿಯಾಗಿದೆ. ತನ್ನ ಭಿನ್ನ ಶ್ರೇಣಿಯ ಡಿವೈಸ್‌ಗಳ ಮೂಲಕ ಮಾರುಕಟ್ಟೆಯಲ್ಲಿ ತನ್ನದೇ ಆದ ಪ್ರಾಬಲ್ಯವನ್ನು ಹೊಂದಿದೆ. ಸದ್ಯ ಇದೀಗ ಸೋನಿ ಕಂಪೆನಿ ಹೊಸದಾಗಿ NW-A306 ವಾಕ್‌ಮ್ಯಾನ್ ಅನ್ನು ಬಿಡುಗಡೆ ಮಾಡಿದ. ಈ ವಾಕ್‌ಮ್ಯಾನ್ ಪ್ರೀಮಿಯಂ ಲುಕ್‌ ಮತ್ತು ಉತ್ತಮ ಗುಣಮಟ್ಟದ ಆಡಿಯೋ ಸಿಸ್ಟಂ ಅನ್ನು ಒಳಗೊಂಡಿದೆ. ಇದಲ್ಲದೆ ಈ ವಾಕ್‌ಮ್ಯಾನ್‌ ಅಲ್ಯೂಮಿನಿಯಂ ಫ್ರೇಮ್‌ ಅನ್ನು ಹೊಂದಿದ್ದು, ಕ್ಲಿಯರ್‌ ಆಂಡ್‌ ಸ್ಟೇಬಲ್‌ ಸೌಂಡ್‌ ಅನ್ನು ನೀಡಲಿದೆ.

ಸೋನಿ ಕಂಪೆನಿಯಿಂದ ಹೊಸ ವಾಕ್‌ಮ್ಯಾನ್‌ ಬಿಡುಗಡೆ!..ಜಬರ್ದಸ್ತ್‌ ಫೀಚರ್ಸ್‌!

ಹೌದು, ಸೋನಿ ಕಂಪೆನಿ ಹೊಸ ಸೋನಿ NW-A306 ವಾಕ್‌ಮ್ಯಾನ್‌ ಅನ್ನು ಲಾಂಚ್‌ ಮಾಡಿದೆ. ಈ ವಾಕ್‌ಮ್ಯಾನ್‌ ಅಪ್‌ಸ್ಕೇಲಿಂಗ್ ಮ್ಯೂಸಿಕ್‌ ಅನ್ನು ನೀಡಲಿದೆ. ಇದಕ್ಕಾಗಿ DSEE ಅಲ್ಟಿಮೇಟ್ ಅನ್ನು ಸೇರಿಸಲಾಗಿದೆ. ಇದಲ್ಲದೆ ಎಡ್ಜ್-ಎಐ ಮತ್ತು DSEE ಅಲ್ಟಿಮೇಟ್ ಸಂಕುಚಿತ ಡಿಜಿಟಲ್ ಮ್ಯೂಸಿಕ್ ಫೈಲ್‌ಗಳನ್ನು ಉನ್ನತ ಗುಣಮಟ್ಟದಲ್ಲಿ ನೀಡಲಿವೆ. ಇದನ್ನು ನೀವು ವಾಯರ್‌ಲೆಸ್‌ ಹೆಡ್‌ಫೋನ್‌ಗಳ ಮೂಲಕ ಆಲಿಸಬಹುದಾಗಿದೆ. ಹಾಗಾದ್ರೆ ಈ ಹೊಸ ವಾಕ್‌ಮ್ಯಾನ್‌ ವಿಶೇಷತೆ ಏನು? ಇದರ ಫೀಚರ್ಸ್‌ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸೋನಿ NW-A306 ವಾಕ್‌ಮ್ಯಾನ್‌ 3.6 ಇಂಚಿನ HD TFT ಟಚ್ ಸ್ಕ್ರೀನ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1280 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ ಬಿಳಿ LED-ಬ್ಯಾಕ್‌ಲೈಟ್ ಅನ್ನು ಒಳಗೊಂಡಿದೆ. ಇನ್ನು ವಾಕ್‌ಮ್ಯಾನ್‌ 360 ರಿಯಾಲಿಟಿ ಆಡಿಯೊ ಬೆಂಬಲವನ್ನು ನೀಡಲಿದೆ. ಇದು 360-ಡಿಗ್ರಿ ಗೋಳಾಕಾರದ ಸೌಂಡ್‌ ಸಿಸ್ಟಂ ಮೂಲಕ ವಿವಿಧ ಸೌಂಡ್‌ ಎಫೆಕ್ಟ್‌ಗಳನ್ನು ಅನುಭವಿಸಲು ಅನುಮತಿಸಲಿದೆ.

ಸೋನಿ ಕಂಪೆನಿಯಿಂದ ಹೊಸ ವಾಕ್‌ಮ್ಯಾನ್‌ ಬಿಡುಗಡೆ!..ಜಬರ್ದಸ್ತ್‌ ಫೀಚರ್ಸ್‌!

ಇನ್ನು ಈ ವಾಕ್‌ ಮ್ಯಾನ್‌ ವೈಫೈ ಬೆಂಬಲವನ್ನು ನೀಡಲಿದೆ. ಅಲ್ಲದೆ 32GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ, ಜೊತೆಗೆ ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ ಸ್ಟೋರೇಜ್‌ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ. ಇದು ಹೈ-ರೆಸ್ ಆಡಿಯೊ, ಎಲ್‌ಡಿಎಸಿ, ಡಿಎಸ್‌ಡಿ ಮತ್ತು ಎಫ್‌ಎಲ್‌ಎಸಿ ಆಡಿಯೊ ಸ್ವರೂಪಗಳನ್ನು ಕೂಡ ಬೆಂಬಲಿಸುವ ಸಾಮರ್ಥ್ಯವಿದೆ. ಈ ವಾಕ್‌ಮ್ಯಾನ್‌ ಡಿಜಿಟಲ್ ಆಂಪ್ಲಿಫೈಯರ್ ಅನ್ನು ಬೆಂಬಲಿಸಲಿದೆ. ಅಲ್ಲದೆ ಮೀಡಿಯಾ ಪ್ಲೇಬ್ಯಾಕ್ ಕಂಟ್ರೋಲ್‌ ಅನ್ನು ಸಹ ಪಡೆದಿದೆ.

ಇದಲ್ಲದೆ ಈ ವಾಕ್‌ಮ್ಯಾನ್‌ ಬ್ಲೂಟೂತ್‌ ಕೋಡೆಕ್‌ ಬೆಂಬಲವನ್ನು ಪಡೆದಿದೆ. ಇನ್ನು ಈ ವಾಕ್‌ಮ್ಯಾನ್‌ 32 ಗಂಟೆಗಳ 96 kHz FLAC ಹೈ-ರೆಸಲ್ಯೂಶನ್ ಆಡಿಯೊ ಪ್ಲೇಬ್ಯಾಕ್ ಟೈಂ ಹಾಗೂ 36 ಗಂಟೆಗಳ 44.1 kHz FLAC ಪ್ಲೇಬ್ಯಾಕ್ ನೀಡಲಿದೆ. ಹಾಗೆಯೇ ಕನೆಕ್ಟಿವಿಟಿ ಆಯ್ಕೆಗಳಲ್ಲಿ USB ಟೈಪ್-C, ಸ್ಟಿರಿಯೊ ಮಿನಿ-ಜಾಕ್ ಅನ್ನು ಬೆಂಬಲಿಸಲಿದೆ. ಅಲ್ಲದೆ ಷಫಲ್ ಪ್ಲೇಬ್ಯಾಕ್, ರಿಪೀಟ್ ಆಫ್, ರಿಪೀಟ್ 1 ಸಾಂಗ್, ರಿಪೀಟ್ ಆಲ್ ನಂತ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಸೋನಿ ಕಂಪೆನಿಯಿಂದ ಹೊಸ ವಾಕ್‌ಮ್ಯಾನ್‌ ಬಿಡುಗಡೆ!..ಜಬರ್ದಸ್ತ್‌ ಫೀಚರ್ಸ್‌!

ಬೆಲೆ ಮತ್ತು ಲಭ್ಯತೆ
ಸೋನಿ NW-A306 ವಾಕ್‌ಮ್ಯಾನ್ ಪ್ರಸ್ತುತ ಯುರೋಪ್‌ನಲ್ಲಿ ಬಿಡುಗಡೆಯಾಗಿದೆ. ಇದರ ಬೆಲೆ UK ನಲ್ಲಿ £350 (ಅಂದಾಜು 34,840ರೂ.)ಆಗಿದೆ. ಇನ್ನು ಈ ವಾಕ್‌ಮ್ಯಾನ್‌ ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ಬರಲಿದೆ.

ಇದಲ್ಲದೆ ಸೋನಿ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಹೊಸ ಸೋನಿ SRS-XV900 ಪಾರ್ಟಿ ಸ್ಪೀಕರ್ ಲಾಂಚ್‌ ಮಾಡಿದೆ. ಈ ಸ್ಪೀಕರ್‌ ಒಮ್ನಿ ಡೈರೆಕ್ಷನಲ್‌ ಸೌಂಡ್‌ ಅನ್ನು ಒದಗಿಸಲಿದೆ. ಜೊತೆಗೆ ಡೀಪ್‌ ಮತ್ತು ಪಂಚಿಯರ್‌ ಬಾಸ್‌ ಔಟ್‌ಪುಟ್‌ ಅನ್ನು ಆಕ್ಟಿವ್‌ ಮಾಡಲು ವೃತ್ತಾಕಾರದ ಡಾಯಾಫ್ರಾಮ್‌ ಅನ್ನು ಒಳಗೊಂಡಿದೆ. ಇದಲ್ಲದೆ ಸ್ಪೀಕರ್‌ನಲ್ಲಿ ಮಿಡ್‌ರೇಂಜ್‌ ಡ್ರೈವರ್‌ಗಳು ಮತ್ತು ಟ್ವಿಟರ್‌ಗಳನ್ನು ಸಹ ನೀಡಲಾಗಿದೆ.

Best Mobiles in India

English summary
Sony announced NW-A306 Walkman with Hi-Res Audio

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X