ಹೊಸ ಪ್ರೀಮಿಯಂ ಶ್ರೇಣಿಯ ಸ್ಮಾರ್ಟ್‌ಟಿವಿ ಲಾಂಚ್‌ ಮಾಡಿದ ಸೋನಿ ಕಂಪೆನಿ!

|

ಸೋನಿ ಕಂಪೆನಿ ಪ್ರೀಮಿಯಂ ಸ್ಮಾರ್ಟ್‌ಟಿವಿಗಳಿಗೆ ಹೆಸರುವಾಸಿಯಾಗಿದೆ. ಪ್ರೀಮಿಯಂ ಶ್ರೇಣಿಯಲ್ಲಿ ಅತ್ಯಂತ ಗುಣಮಟ್ಟದ ಸ್ಮಾರ್ಟ್‌ಟಿವಿಗಳಿಗೆ ಸೋನಿ ಕಂಪೆನಿ ಅತ್ಯುತ್ತಮ ಆಯ್ಕೆ ಎನಿಸಿದೆ. ಇದೇ ಕಾರಣಕ್ಕೆ ಹೆಚ್ಚಿನ ಜನರು ಸೋನಿ ಸ್ಮಾರ್ಟ್‌ಟಿವಿಗಳನ್ನು ಲೈಕ್‌ ಮಾಡುತ್ತಾರೆ. ಇದಕ್ಕೆ ತಕ್ಕಂತೆ ಸೋನಿ ಕಂಪೆನಿ ಕೂಡ ಹೊಸ ಟೆಕ್ನಾಲಜಿಯನ್ನು ಒಳಗೊಂಡ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ಭಾರತದಲ್ಲಿ ತನ್ನ ಹೊಸ ಪ್ರೀಮಿಯಂ ಶ್ರೇಣಿಯ ಸ್ಮಾರ್ಟ್‌ಟಿವಿಯನ್ನು ಲಾಂಚ್‌ ಮಾಡಿದೆ.

ಸೋನಿ

ಹೌದು, ಸೋನಿ ಕಂಪೆನಿ ಭಾರತದಲ್ಲಿ ಹೊಸ ಪ್ರೀಮಿಯಂ ಶ್ರೇಣಿಯ ಸೋನಿ ಬ್ರಾವಿಯಾ XR-85X95K ಸ್ಮಾರ್ಟ್ ಟಿವಿಯನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಟಿವಿ 85 ಇಂಚಿನ ಮಿನಿ ಎಲ್‌ಇಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಸೋನಿ ಕಂಪೆನಿಯ "ಕಾಗ್ನಿಟಿವ್ ಪ್ರೊಸೆಸರ್ XR" ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಮಿನಿ ಎಲ್ಇಡಿ ಬ್ಯಾಕ್ಲೈಟ್ ಅನ್ನು ಕಂಟ್ರೋಲ್‌ ಮಾಡಲು XR ಬ್ಯಾಕ್ಲೈಟ್ ಮಾಸ್ಟರ್ ಡ್ರೈವ್ ಅನ್ನು ಹೊಂದಿರಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೋನಿ

ಸೋನಿ ಬ್ರಾವಿಯಾ XR 85X95K ಸ್ಮಾರ್ಟ್‌ಟಿವಿ 85 ಇಂಚಿನ ಮಿನಿ ಎಲ್‌ಇಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಡೀಪ್‌ ಬ್ಲ್ಯಾಕ್‌ ಮತ್ತು ಉತ್ತಮ ಕಾಂಟ್ರಾಸ್ಟ್‌ಗಾಗಿ XR ಟ್ರೈಲುಮಿನೋಸ್ ಪ್ರೊ ಮತ್ತು XR ಕಾಂಟ್ರಾಸ್ಟ್ ಬೂಸ್ಟರ್ ತಂತ್ರಜ್ಞಾನವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿ XR ಬ್ಯಾಕ್‌ಲೈಟ್ ಮಾಸ್ಟರ್ ಡ್ರೈವ್ ಟೆಕ್ನಾಲಜಿ ಒಳಗೊಂಡಿದೆ. ಇದರಿಂದ ಮಿನಿ ಎಲ್‌ಇಡಿ ಬ್ಯಾಕ್ಲೆಟ್‌ ಅನ್ನು ಕಂಟ್ರೋಲ್‌ ಮಾಡಬಹುದಾಗಿದೆ. ಇದು ಕಾಗ್ನಿಟಿವ್ ಪ್ರೊಸೆಸರ್ XRನಲ್ಲಿ ಕಾರ್ಯನಿರ್ವಹಿಸಲಿದೆ.

ಸ್ಮಾರ್ಟ್‌ಟಿವಿ

ಇನ್ನು ಈ ಸ್ಮಾರ್ಟ್‌ಟಿವಿ ಒಳಗೊಂಡಿರುವ ಪ್ರೊಸೆಸರ್‌ ನೀವು ನೋಡುವ ಮತ್ತು ಕೇಳುವ ವಿಧಾನಕ್ಕೆ ಅನುಗುಣವಾಗಿ ಕಂಟೆಂಟ್‌ ಅನ್ನು ರಿ ಪ್ರೊಡ್ಯೂಸ್‌ ಮಾಡಲಿದೆ. ಅಂದರೆ ನಿಮ್ಮ ಕಣ್ಣು ಹೇಗೆ ಕೇಂದ್ರಿಕರಿಸುತ್ತದೆ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲಿದೆ. ಇನ್ನು ಈ ಹೊಸ ಸೋನಿ ಬ್ರಾವಿಯ XR 85X95K ಟಿವಿಯು XR 4K ಅಪ್‌ಸ್ಕೇಲಿಂಗ್ ಮತ್ತು XR OLED ಮೋಷನ್ ಸ್ಪಷ್ಟತೆಯೊಂದಿಗೆ ಲೋ ಚಿತ್ರದ ಗುಣಮಟ್ಟದೊಂದಿಗೆ ಉತ್ತಮ ವೀಕ್ಷಣೆಯ ಅನುಭವವನ್ನು ನೀಡುತ್ತದೆ.

ಸ್ಮಾರ್ಟ್‌ಟಿವಿ

ಇದಲ್ಲದೆ ಈ ಸ್ಮಾರ್ಟ್‌ಟಿವಿ ಗೇಮಿಂಗ್‌ ಪ್ರಿಯರನ್ನು ಕೂಡ ಆಕರ್ಷಿಸುವ ಫೀಚರ್ಸ್‌ ಒಳಗೊಂಡಿದೆ. ಇದರಲ್ಲಿ ಗೇಮರ್‌ಗಳಿಗಾಗಿಯೇ HDMI 2.1 ಪೋರ್ಟ್ ಅನ್ನು ನೀಡಲಾಗಿದೆ. ಇದು 4K 120fps, ವೇರಿಯಬಲ್ ರಿಫ್ರೆಶ್ ರೇಟ್ (VRR), ಆಟೋ ಲೋ ಲೇಟೆನ್ಸಿ ಮೋಡ್ (ALLM), ಆಟೋ HDR ಟೋನ್ ಮತ್ತು ಆಟೋ ಗೇಮ್ ಮೋಡ್ ಅನ್ನು ಬೆಂಬಲಿಸುತ್ತದೆ. ಇದಲ್ಲದೆ ಇನ್‌ಪುಟ್ ಲ್ಯಾಗ್ ಅನ್ನು ಕಡಿಮೆ ಮಾಡಲು ಮತ್ತು ಕ್ರಿಯೆಯನ್ನು ಹೆಚ್ಚು ಸ್ಪಂದಿಸುವಂತೆ ಮಾಡಲು ಟಿವಿ ಸ್ವಯಂಚಾಲಿತವಾಗಿ ಗೇಮ್ ಮೋಡ್‌ಗೆ ಬದಲಾಗುತ್ತದೆ.

ಬ್ರಾವಿಯಾ

ಇನ್ನು ಈ ಸ್ಮಾರ್ಟ್‌ಟಿವಿಯಲ್ಲಿ ಬ್ರಾವಿಯಾ ಕೋರ್‌ ಅಪ್ಲಿಕೇಶನ್‌ BRAVIA XR TVs ಮೂವಿಸ್‌ ಸರ್ವಿಸ್‌ನಲ್ಲಿ ಪ್ರತ್ಯೇಕವಾಗಿ ಲಭ್ಯವಿರುವ ಪ್ರೀ-ಲೋಡ್ ಆಗಿದೆ. ಇದು 5 ಪ್ರಸ್ತುತ ಬಿಡುಗಡೆಗಳು ಮತ್ತು ಕ್ಲಾಸಿಕ್ ಬ್ಲಾಕ್‌ಬಸ್ಟರ್ ಚಲನಚಿತ್ರಗಳನ್ನು ಮತ್ತು 12 ತಿಂಗಳ ಅನಿಯಮಿತ ಚಲನಚಿತ್ರಗಳ ಸ್ಟ್ರೀಮಿಂಗ್‌ಗೆ ಅವಕಾಶ ನೀಡುತ್ತದೆ. ಇದರಿಂದ ನೀವು ಬ್ರಾವಿಯ XR ಟೆಕ್ನಾಲಜಿ ಮೂಲಕ ಕ್ಲಿಯರ್‌ ಸ್ಟ್ರೀಮಿಂಗ್‌ ಮಾಡುವುದಕ್ಕೆ ಸಾಧ್ಯವಾಗಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸೋನಿ ಕಂಪೆನಿಯ ಹೊಸ ಸೋನಿ ಬ್ರಾವಿಯಾ XR-85X95K 85-ಇಂಚಿನ ಟಿವಿ ಬೆಲೆ 6,99,990ರೂ.ಆಗಿದೆ. ಈ ಸ್ಮಾರ್ಟ್‌ಟಿವಿ ಈಗಾಗಲೇ ಖರೀದಿಗೆ ಲಭ್ಯವಿದೆ. ಇದು ಭಾರತದಲ್ಲಿನ ಎಲ್ಲಾ ಸೋನಿ ಸೆಂಟರ್‌, ಎಲೆಕ್ಟ್ರಾನಿಕ್ ಸ್ಟೋರ್‌ಗಳು ಮತ್ತು ಇ-ಕಾಮರ್ಸ್ ಪೋರ್ಟಲ್‌ಗಳಲ್ಲಿ ಲಭ್ಯವಿರುತ್ತದೆ.

Best Mobiles in India

Read more about:
English summary
Sony Compony has launched a new premium range smart TV in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X