ಸೋನಿ ಕಂಪೆನಿಯಿಂದ ಹೊಸ ಹೆಡ್‌ಫೋನ್‌ ಬಿಡುಗಡೆ! ಅತ್ಯಾಕರ್ಷಕ ಫೀಚರ್ಸ್‌!

|

ಸೋನಿ ಕಂಪೆನಿಯ ಹೆಡ್‌ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ಉತ್ತಮ ಗುಣಮಟ್ಟ ಹಾಗ ದೀರ್ಘ ಬ್ಯಾಟರಿ ಬಾಳಿಕೆಯ ಕಾರಣದಿಂದ ಸೋನಿ ಹೆಡ್‌ಫೋನ್‌ಗಳು ಎಲ್ಲರ ಗಮನಸೆಳೆದಿವೆ. ಸದ್ಯ ಇದೀಗ ಭಾರತದಲ್ಲಿ ಸೋನಿ ಕಂಪೆನಿ ಹೊಸ ಸೋನಿ WH-1000XM5 ಹೆಡ್‌ಫೋನ್‌ ಲಾಂಚ್‌ ಮಾಡಿದೆ. ಇದು ವಾಯರ್‌ಲೆಸ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್‌ ಹೆಡ್‌ಫೋನ್‌ ಆಗಿದೆ. ಈ ಹೆಡ್‌ಫೋನ್‌ಗಳು ಇಂಟಿಗ್ರೇಟೆಡ್‌ ಪ್ರೊಸೆಸರ್‌ V1ನಲ್ಲಿ ಕಾರ್ಯನಿರ್ವಹಿಸಲಿದೆ.

ಸೋನಿ

ಹೌದು, ಸೋನಿ ಕಂಪೆನಿ ಭಾರತದಲ್ಲಿ ಹೊಸ ಸೋನಿ WH-1000XM5 ಹೆಡ್‌ಫೋನ್‌ ಬಿಡುಗಡೆ ಮಾಡಿದೆ. ಇದು ಅಡ್ವಾನ್ಸ್‌ ಸೌಂಡ್‌ ಸಿಸ್ಟಂ ಅನ್ನು ನೀಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ SBC, AAC ಮತ್ತು LDAC ಬ್ಲೂಟೂತ್ ಕೊಡೆಕ್‌ಗಳಿಗೆ ಬೆಂಬಲಿಸಲಿದೆ. ಇದು ಹಗುರವಾದ ಮತ್ತು ಹೆಚ್ಚು ಆರಾಮದಾಯಕ ಅನುಭವವನ್ನು ನೀಡಲಿದೆ. ಇನ್ನುಳಿದಂತೆ ಈ ಹೊಸ ಹೆಡ್‌ಫೋನ್‌ ಏನೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹೆಡ್‌ಫೋನ್‌

ಸೋನಿ WH-1000XM5 ಹೆಡ್‌ಫೋನ್‌ ಇಂಟಿಗ್ರೇಟೆಡ್ ಪ್ರೊಸೆಸರ್ V1 ನಲ್ಲಿ ರನ್‌ ಆಗಲಿದ್ದು, QN1 ನಾಯ್ಸ್‌ ಕ್ಯಾನ್ಸಲೇಶನ್‌ ಪ್ರೊಸೆಸರ್ ಜೊತೆಗೆ ಉತ್ತಮ ಕಾರ್ಯಕ್ಷಮತೆಯನ್ನು ನೀಡಲಿದೆ. ಇದು 30mm ಡೈನಾಮಿಕ್ ಆಡಿಯೋ ಡ್ರೈವರ್‌ಗಳನ್ನು ಹೊಂದಿದ್ದು, 1000X ಲೈನ್‌ಅಪ್‌ನಲ್ಲಿನ ಹೆಡ್‌ಫೋನ್‌ಗಳಿಗಿಂತ ಉತ್ತಮವಾದ ಅನುಭವ ನೀಡಲಿದೆ. ಅಲ್ಲದೆ ಈ ಹೆಡ್‌ಫೋನ್‌ ಹಗುರವಾದ ಮತ್ತು ಹೆಚ್ಚು ಆರಾಮದಾಯಕವಾದ ರಿಫ್ರೆಶ್ ಮತ್ತು ಅಡ್ವಾನ್ಸ್‌ ಡಿಸೈನ್‌ ಹೊಂದಿದೆ.

ಕಾರ್ಯನಿರ್ವಹಿಸುತ್ತವೆ

ಇನ್ನು ಈ ಹೆಡ್‌ಫೋನ್‌ ಸೋನಿ ಹೆಡ್‌ಫೋನ್‌ ಕನೆಕ್ಟ್ ಅಪ್ಲಿಕೇಶನ್‌ನೊಂದಿಗೆ ಕಾರ್ಯನಿರ್ವಹಿಸುತ್ತವೆ. ಇದರಲ್ಲಿ ಕಸ್ಟಮೈಸ್‌ಮಾಡಬಹುದಾ ನಾಯ್ಸ್‌ ಕ್ಯಾನ್ಸಲೇಶನ್‌ ಮತ್ತು ಇಯರ್‌-ಥ್ರೋ ಮೋಡ್, ಸ್ಪೀಕ್‌ ಟು ಚಾಟ್, 360 ರಿಯಾಲಿಟಿ ಆಡಿಯೊ ಫೀಚರ್ಸ್‌ ಹೊಂದಿದೆ. ಜೊತೆಗೆ ಗೂಗಲ್ ಅಸಿಸ್ಟೆಂಟ್ ಮತ್ತು ಅಮೆಜಾನ್ ಅಲೆಕ್ಸಾದಂತಹ ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಬೆಂಬಲಿಸುವ ಫೀಚರ್ಸ್‌ಗಳನ್ನು ಒಳಗೊಂಡಿದೆ. ಅದರಲ್ಲೂ ವಿಂಡೋಸ್‌ ಡಿವೈಸ್‌ಗಳಿಗಾಗಿ ಗೂಗಲ್ ಫಾಸ್ಟ್ ಪೇರ್ ಮತ್ತು ಸ್ವಿಫ್ಟ್ ಪೇರ್‌ಗೆ ಬೆಂಬಲವನ್ನು ಕೂಡ ಪಡೆದಿದೆ.

ಹೆಡ್‌ಫೋನ್‌

ಸೋನಿ WH-1000XM5 ಹೆಡ್‌ಫೋನ್‌ ಪ್ರತಿ ಚಾರ್ಜ್‌ಗೆ 30 ಗಂಟೆಗಳ ಬ್ಯಾಟರಿ ಬಾಳಿಕೆ ನೀಡಲಿದೆ ಎಂದು ಸೋನಿ ಕಂಪೆನಿ ಹೇಳಿಕೊಂಡಿದೆ. ಇದು ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ SBC, AAC ಮತ್ತು LDAC ಬ್ಲೂಟೂತ್ ಕೊಡೆಕ್‌ಗಳಿಗೆ ಬೆಂಬಲಿಸಲಿದೆ. ಇದಲ್ಲದೆ ಸೋನಿ WH-1000XM5 ಹೆಡ್‌ಫೋನ್‌ ಬ್ಲೂಟೂತ್ 5.2 ಬೆಂಬಲಿಸಲಿದೆ. ಜೊತೆಗೆ ಏಕಕಾಲದಲ್ಲಿ ಎರಡು ಡಿವೈಸ್‌ಗಳಿಗೆ ಮಲ್ಟಿ-ಪಾಯಿಂಟ್ ಕನೆಕ್ಟಿವಿಟಿಯನ್ನು ಸಹ ಹೊಂದಿದೆ.

ಹೆಡ್‌ಫೋನ್‌

ಇನ್ನು ಈ ಹೆಡ್‌ಫೋನ್‌ ಬಟನ್ ಮತ್ತು ಟಚ್‌ ಕಂಟ್ರೋಲ್‌ ಎರಡನ್ನು ಕೂಡ ಹೊಂದಿದೆ. ಇದರ ರೈಟ್‌ ಇಯರ್ ಕಪ್‌ನಲ್ಲಿ ಕಂಡುಬರುವ ಟಚ್‌-ಮೈಕ್ರೋ ಸ್ಪೇಸ್‌ ಸನ್ನೆಗಳ ಮೂಲಕ ಪ್ಲೇಬ್ಯಾಕ್ ಮತ್ತು ವಾಲ್ಯೂಮ್ ಅನ್ನು ಕಂಟ್ರೋಲ್‌ ಮಾಡಬಹುದಾಗಿದೆ. ಇದರಲ್ಲಿ ANC ಮತ್ತು ಸೌಂಡ್‌ಗಾಗಿ ಎಂಟು ಮೈಕ್ರೊಫೋನ್‌ಗಳನ್ನು ಅಳವಡಿಸಲಾಗಿದೆ. ಇದು ಸಾಕಷ್ಟು ಆಕರ್ಷಕವಾದ ವಿನ್ಯಾಸವನ್ನು ಪಡೆದಿದ್ದು, ಕಪ್ಪು ಮತ್ತು ಬೆಳ್ಳಿ ಬಣ್ಣಗಳ ಆಯ್ಕೆಗಳಲ್ಲಿ ಬರಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸೋನಿ WH-1000XM5 ಹೆಡ್‌ಫೋನ್‌ಭಾರತದಲ್ಲಿ 34,990ರೂ. ಬೆಲೆಯನ್ನು ಹೊಂದಿದೆ. ಇನ್ನು ಲಾಂಚ್‌ ಆಫರ್‌ನಲ್ಲಿ ಇದು ಅಕ್ಟೋಬರ್ 7 ರ ಮೊದಲು ಮಾಡಿದ ಪ್ರೀ-ಆರ್ಡರ್‌ಗಳಿಗೆ 26,990ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು ಈ ಹೆಡ್‌ಫೋನ್‌ಗಳು ಅಕ್ಟೋಬರ್ 8 ರಂದು ಸೋನಿ ಸೆಂಟರ್ ಸ್ಟೋರ್‌ಗಳು, ಪ್ರಮುಖ ಎಲೆಕ್ಟ್ರಾನಿಕ್ಸ್ ಸ್ಟೋರ್‌ಗಳು ಮತ್ತು ಭಾರತದಲ್ಲಿನ ಇ-ಕಾಮರ್ಸ್ ಪೋರ್ಟಲ್‌ಗಳ ಮೂಲಕ ಖರೀದಿಗೆ ಲಭ್ಯವಾಗಲಿದೆ.

Best Mobiles in India

English summary
Sony WH-1000XM5 Headphones Launched in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X