ಹೆಲ್ಮೆಟ್ ಧರಿಸದೇ ಬೈಕ್ ಓಡಿಸಿದರೆ ಕೃತಕ ಬುದ್ಧಿಮತ್ತೆಯಿಂದ ಶಿಕ್ಷೆ..!

By GizBot Bureau
|

ಟ್ರಾಫಿಕ್ ಪೋಲೀಸರು ಬೈಕ್ ಸವಾರರಿಗೆ ಹೆಲ್ಮೆಟ್ ಧರಿಸುವಂತೆ ಅದೆಷ್ಟೇ ಬಾರಿ ಎಚ್ಚರಿಕೆ ನೀಡಲಿ ಅದು ಕೋಣನ ಮುಂದೆ ಕಿನ್ನರಿ ಬಾರಿಸಿದಂತೆಯೇ ಆಗುತ್ತಿದೆ. ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನಗಳನ್ನು ಸವಾರಿ ಮಾಡುವವರ ಸಂಖ್ಯೆ ಕಡಿಮೆ ಏನೂ ಆಗುತ್ತಿಲ್ಲ. ಹೆಲ್ಮೆಟ್ ಧರಿಸದೇ ಇದ್ದರೆ ಆಗುವ ಅಪಾಯಗಳ ಬಗ್ಗೆ ಅದೆಷ್ಟೇ ಅರಿವು ಮೂಡಿಸುವ ಕೆಲಸ ನಡೆದರೂ, ತಪ್ಪು ಮಾಡಿದವರಿಗೆ ದಂಡ ವಿಧಿಸುವ ಕೆಲಸ ನಡೆದರೂ ಕೂಡ ಪದೇ ಪದೇ ರೂಲ್ಸ್ ಬ್ರೇಕ್ ಮಾಡುವವರು ಇದ್ದೇ ಇದ್ದಾರೆ.

ಈ ಸಮಸ್ಯೆಗೊಂದು ಹೊಸ ಮಾರ್ಗ ಅಂದರೆ ಹೆಲ್ಮೆಟ್ ಧರಿಸದೇ ಇರುವವರಿಗೆ ಶಿಕ್ಷೆ ನೀಡುವ, ಎಚ್ಚರಿಕೆ ನೀಡುವ ಹೊಸ ತಂತ್ರಜ್ಞಾನವೊಂದನ್ನು ಈಗ ಅಭಿವೃದ್ಧಿ ಪಡಿಸಲಾಗಿದೆ. ಹೌದು ಭಾರತೀಯ ತಂತ್ರಜ್ಞಾನ ವಿಶ್ವವಿದ್ಯಾಲಯ ಹೈದ್ರಾಬಾದ್ ಇಲ್ಲಿನ ಅಧ್ಯಯನಕಾರರು ಕೃತಕ ಬುದ್ಧಿಮತ್ತೆ ಬಳಸಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೇ ಇದ್ದಲ್ಲಿ ಅದನ್ನು ಕಂಡುಹಿಡಿಯುವ ಹೊಸ ಮಾರ್ಗವೊಂದನ್ನು ಕಂಡುಹಿಡಿದಿದ್ದಾರೆ. ಇದು ಮುಂದಿನ ದಿನಗಳಲ್ಲಿ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುವವರಿಗೆ ಕಡಿವಾಣ ಹಾಕಲು ನೆರವು ನೀಡಲಿದೆ.

ಹೆಲ್ಮೆಟ್ ಧರಿಸದೇ ಬೈಕ್ ಓಡಿಸಿದರೆ ಕೃತಕ ಬುದ್ಧಿಮತ್ತೆಯಿಂದ ಶಿಕ್ಷೆ..!

ಇತ್ತೀಚೆಗೆ ಈ ಇನ್ಸಿಟ್ಯೂಟ್ ಹೈದ್ರಾಬಾದ್ ಸಿಟಿ ಪೋಲೀಸರ ಜೊತೆಗೆ ಒಂದು ಒಪ್ಪಂದಕ್ಕೆ ಸಹಿ ಮಾಡಿದ್ದು , ಸಿಟಿಯ ಸಿಸಿಟಿವಿ ನೆಟ್ ವರ್ಕ್ ನಿಂದ ವೀಡಿಯೋ ಆಕ್ಸಿಸ್ ಮಾಡಲು ಅನುಮತಿ ಪಡೆದುಕೊಂಡಿದೆ. ಈ ತಂತ್ರಜ್ಞಾನವು ಈಗಾಗಲೇ ಸಿದ್ಧರೂಪದ ನಿಯೋಜಿತ ಹಂತದಲ್ಲಿದ್ದು ಅದರ ಪೇಟೆಂಟ್ ಹಕ್ಕುಗಳಿಗಾಗಿ ಇನ್ಸಿಟ್ಯೂಟ್ ಅರ್ಜಿ ಸಲ್ಲಿಸಿದೆ.

ಅದು ಹೇಗೆ ಕೆಲಸ ಮಾಡುತ್ತದೆ?:

ಈ ಸಮಸ್ಯೆಯ ಪರಿಹಾರವು ಅರ್ಧದಷ್ಟು ಕ್ಯಾಮರಾಗಳಲ್ಲಿ ಮತ್ತು ಉಳಿದ ಅರ್ಥ ಕಂದ್ರೀಯ ಪೋಲೀಸ್ ಕಂಟ್ರೋಲ್ ರೂಮ್ ನ ಸರ್ವರ್ ಗಳಲ್ಲಿ ಅಳವಡಿಸಲಾಗುತ್ತದೆ. ಈ ಸಾಫ್ಟ್ ವೇರ್ ನ್ನು ಸಿಸಿಟಿವಿಗೆ ಅಟ್ಯಾಚ್ ಆಗಿರುವ ಅಮೆಂಡೆಡ್ ಕಾರ್ಡ್ ನಲ್ಲಿ ಇನ್ಸ್ಟಾಲ್ ಮಾಡಲಾಗುತ್ತದೆ. ಅದು ಯಾರು ನಿಯಮವನ್ನು ಬ್ರೇಕ್ ಮಾಡಿ ಹೆಲ್ಮೆಟ್ ಧರಿಸದೇ ದ್ವಿಚಕ್ರ ಸವಾರಿ ಮಾಡುತ್ತಾರೋ ಅವರನ್ನು ಗುರುತಿಸಲು ನೆರವಾಗುತ್ತದೆ ಮತ್ತು ಅದರಿಂದ ಕೇಂದ್ರದ ಡಾಟಾಬೇಸ್ ಗೆ ಅಲರ್ಟ್ ನ್ನು ಕಳುಹಿಸಿಕೊಡುತ್ತದೆ.

“ವೆಬ್ ಇಂಟರ್ಫೇಸ್ ಬಳಸಿ ಇದು ಸಂಪೂರ್ಣ ಸ್ವಯಂಚಾಲಿತವಾಗಿರುತ್ತದೆ . ಅಲರ್ಟ್ ಗಳನ್ನು ಟ್ರಾಫಿಕ್ ಆಪರೇಟರ್ ಗಳು ವೆರಿಫೈ ಮಾಡಿದರೆ ಆಯಿತು. ಅಲ್ಲಿಂದ ಅದು ನೇರವಾಗಿ ಆರ್.ಟಿ.ಓ ಕಛೇರಿಯ ವೆಬ್ ಸೈಟ್ ಗೆ ಲಿಂಕ್ ಆಗಿರುತ್ತದೆ ಮತ್ತು ಅವರು ಚಲನ್ ಇಲ್ಲವೇ ಫೈನ್ ಗಳನ್ನು ಹಾಕಬಹುದು. ಅಷ್ಟೇ ಅಲ್ಲ ಇದರ ನೋಟಿಫಿಕೇಷನ್ ಬೈಕ್ ಸವಾರರಿಗೂ ತಲುಪುತ್ತದೆ” ಎಂದು ಹೊಸ ತಂತ್ರಜ್ಞಾನದ ಬಗ್ಗೆ ಈ ತಂತ್ರಜ್ಞಾನದ ತಯಾರಕರಲ್ಲಿ ಒಬ್ಬರಾಗಿರುವ ದಿನೇಶ್ ಸಿಂಗ್ ತಿಳಿಸಿದ್ದಾರೆ.

ದೆಹಲಿ ಪೋಲೀಸರು ನೀಡಿರುವ ವಾರ್ಷಿಕ ವರದಿಯ ಅನುಸಾರ 2017 ರಲ್ಲಿ ಸುಮಾರು 35 ರಿಂದ 40 ಶೇಕಡಾ ಅಪಘಾತದಲ್ಲಿ ನಡೆದ ಸಾವಿನ ಪ್ರಕರಣಕ್ಕೆ ಕಾರಣ ಹೆಲ್ಮೆಟ್ ಧರಿಸದೇ ಇರುವುದು ಅಥವಾ ಕೆಟ್ಟ ಕ್ವಾಲಿಟಿಯ ಹೆಲ್ಮೆಟ್ ಗಳನ್ನ ಧರಿಸಿರುವುದೇ ಆಗಿದೆ. ಹಾಗಾಗಿ ಬೈಕ್ ಸವಾರರಿಗೆ ಎಚ್ಚರಿಗೆ ನೀಡುವ ಉದ್ದೇಶವನ್ನು ಈ ಸಾಫ್ಟ್ ವೇರ್ ಮೂಲಕ ಹೊಂದಲಾಗಿದೆ.

ಹೆಲ್ಮೆಟ್ ಧರಿಸದೇ ಬೈಕ್ ಓಡಿಸಿದರೆ ಕೃತಕ ಬುದ್ಧಿಮತ್ತೆಯಿಂದ ಶಿಕ್ಷೆ..!

ಈ ತಂತ್ರಜ್ಞಾನವನ್ನು ವಾಣಿಜ್ಯಿಕವಾಗಿ ಲಭ್ಯವಾಗುವಂತೆ ಮಾಡುವ ಉದ್ದೇಶವನ್ನು ಸಂಶೋಧಕರು ಹೊಂದಿದ್ದಾರೆ. ಇದು ಒಂದು ರೀತಿ ಮಾನವನ ಮೆದುಳಿನಂತೆ ಕೆಲಸ ನಿರ್ವಹಿಸುವ ತಂತ್ರಜ್ಞಾನವಾಗಿದೆ. ಅಂದರೆ ಕೃತಕ ಬುದ್ಧಿಮತ್ತೆಯು ಇಲ್ಲಿ ಹೆಚ್ಚು ಕೆಲಸ ಮಾಡುತ್ತದೆ. ಟ್ರಿಪಲ್ ರೈಡ್ ಮಾಡುವುದು, ಝಿಗ್ ಝಾಕ್ ಬೈಕ್ ರೈಡಿಂಗ್, ಟ್ರಾಫಿಕ್ ನಿಯಮಗಳನ್ನು ಪಾಲಿಸದೇ ಇರುವುದು, ಇತ್ಯಾದಿ ಎಲ್ಲಾ ಟ್ರಾಫಿಕ್ ಸಂಬಂಧಿ ಸಮಸ್ಯೆಗಳಿಗೂ ಪರಿಹಾರ ನೀಡುವಂತೆ ಇದನ್ನು ಎಕ್ಸ್ ಡೆಂಡ್ ಮಾಡುವ ಸಾಮರ್ಥ್ಯವು ಈ ಸಾಫ್ಟ್ ವೇರ್ ಗೆ ಇದೆ.

ಇನ್ನುಳಿದಂತೆ ಬೈಕ್ ಕಳ್ಳರು, ಸರಗಳ್ಳರು ಇಂತವರನ್ನು ಹಿಡಿಯಲು ಕೂಡ ಈ ತಂತ್ರಜ್ಞಾನವನ್ನು ಬಳಸಬಹುದಾಗಿದೆ ಎಂಬುದು ತಂತ್ರಜ್ಞಾನ ಅಭಿವೃದ್ಧಿಕಾರರ ಅಂಬೋಣ. ಆದರೆ ಅದು ಹೇಗೆ ಎಂಬೆಲ್ಲ ವಿಚಾರಗಳು ಇನ್ನಷ್ಟೇ ತಿಳಿದುಬರಬೇಕಿದೆ. ಒಟ್ಟಾರೆ ಸಂಚಾರಿ ನಿಯಮವನ್ನು ಉಲ್ಲಂಘಿಸುವವರಿಗೆ ಕೃತಕ ಬುದ್ಧಿಮತ್ತೆ ಖಂಡಿತ ಮುಂದಿನ ದಿನಗಳಲ್ಲಿ ದಂಡ ನೀಡುತ್ತದೆ.

Best Mobiles in India

English summary
Soon, AI to make sure bikers wear helmets. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X