ಇನ್ಮುಂದೆ ವಿಮಾನದಲ್ಲಿ ಕೂಡ ಲಭ್ಯವಾಗಲಿದೆ ಸ್ಟಾರ್‌ಲಿಂಕ್‌ ಇಂಟರ್‌ನೆಟ್‌ ಸೇವೆ!

|

ಜನಪ್ರಿಯ ಉದ್ಯಮಿ ಎಲೋನ್‌ ಮಸ್ಕ್‌ ಸ್ಪೇಸ್‌ ಎಕ್ಸ್‌ನ ಸ್ಯಾಟ್‌ಲೈಟ್‌ ಇಂಟರ್‌ನೆಟ್‌ ಸೇವೆ ಸ್ಟಾರ್‌ಲಿಂಕ್‌ ಅನ್ನು ಎಲ್ಲೆಡೆ ವಿಸ್ತರಿಸುವ ಪ್ರಯತ್ನದಲ್ಲಿದ್ದಾರೆ. ಅದರಂತೆ ಇದೀಗ ಶೀಘ್ರದಲ್ಲೇ ಕೆಲವು ಆಯ್ದ ವಿಮಾನಗಳಲ್ಲಿ ಸ್ಟಾರ್‌ಲಿಂಕ್ ಏವಿಯೇಷನ್ ಪ್ರಾರಂಭಿಸುವುದಾಗಿ ಘೊಷಿಸಿದ್ದಾರೆ. ಇದರಿಂದ ಇನ್ಮುದೆ ವಿಮಾನಗಳಲ್ಲಿ ಸ್ಟಾರ್‌ಲಿಂಕ್‌ ಮೂಲಕ ಇಂಟರ್‌ನೆಟ್‌ ಸೇವೆ ಬಳಸುವುದಕ್ಕೆ ಸಾಧ್ಯವಾಗಲಿದೆ. ಈ ಸೇವೆಯು ತನ್ನ ಏರೋ ಟರ್ಮಿನಲ್ ಹೊಂದಿರುವ ಪ್ರತಿ ವಿಮಾನಕ್ಕೆ 350Mbps ವರೆಗಿನ ಇಂಟರ್ನೆಟ್ ವೇಗವನ್ನು ನೀಡಲಿದೆ ಎನ್ನಲಾಗಿದೆ.

ಸ್ಟಾರ್‌ಲಿಂಕ್‌

ಹೌದು, ಸ್ಟಾರ್‌ಲಿಂಕ್‌ ಏವಿಯೇಷನ್‌ ಸೇವೆಯನ್ನು ವಿಮಾನದಲ್ಲಿ ಪ್ರಾರಂಭಿಸುವುದಕ್ಕೆ ಎಲೋನ್‌ ಮಸ್ಕ್‌ ಘೋಷಿಸಿದ್ದಾರೆ. ಇದರಿಂದ ವಿಮಾನದಲ್ಲಿ ವೀಡಿಯೊ ಕರೆಗಳು, ಆನ್‌ಲೈನ್ ಗೇಮಿಂಗ್ ಮತ್ತು ಇತರ ಹೆಚ್ಚಿನ ಡೇಟಾ ರೇಟ್‌ ಆಕ್ಟಿವಿಟಿಗಳನ್ನು ಸಾಕಷ್ಟು ವೇಗವಾಗಿ ಮಾಡಲು ಸಾಧ್ಯವಾಗಲಿದೆ. ಇದು ಇನ್-ಫ್ಲೈಟ್ ವೈ-ಫೈ ನೀಡುವ ವಿಶಿಷ್ಟ ವೇಗಕ್ಕಿಂತ ಹೆಚ್ಚಿನ ವೇಗವನ್ನು ಹೊಂದಿದೆ ಎಂದು ಹೇಳಲಾಗಿದೆ. ಹಾಗಾದ್ರೆ ಸ್ಟಾರ್‌ಲಿಂಕ್‌ ಏವಿಯೇಷನ್‌ ಸೇವೆ ಎಲ್ಲಿ ಲಭ್ಯವಿದೆ? ಇದರ ಬೆಲೆ ಎಷ್ಟಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಟಾರ್‌ಲಿಂಕ್ ಏವಿಯೇಷನ್ ​​ಸೇವೆ ಎಲ್ಲಿ ಲಭ್ಯವಿದೆ?

ಸ್ಟಾರ್‌ಲಿಂಕ್ ಏವಿಯೇಷನ್ ​​ಸೇವೆ ಎಲ್ಲಿ ಲಭ್ಯವಿದೆ?

ಸ್ಟಾರ್‌ಲಿಂಕ್ ಏವಿಯೇಷನ್ ಸೇವೆಯು ಜಾಗತಿಕ ವ್ಯಾಪ್ತಿಯನ್ನು ಹೊಂದಿರಲಿದೆ. ಇದು ಸ್ಯಾಟ್‌ಲೈಟ್‌ ಆಧಾರಿತ ಸೇವೆಯಾಗಿರುವುದರಿಂದ ಎಲ್ಲಾ ಕಡೆಯು ಲಭ್ಯವಾಗಲಿದೆ. ಇದು ವಿಮಾನ, ಟೇಕ್‌ಆಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ಲಭ್ಯವಾಗಲಿದೆ. ಅದರಲ್ಲಿ ವಿಮಾನ ನೆಲ ಮತ್ತು ನೀರಿನ ಮೇಲೆ ಸಂಚಾರಿಸುವಾಗಲು ಈ ಸೇವೆ ದೊರೆಯಲಿದೆ. ಸ್ಟಾರ್‌ಲಿಂಕ್ ಸ್ಯಾಟ್‌ಲೈಟ್‌ ಆಧಾರಿತ ಇಂಟರ್‌ನೆಟ್‌ ಸೇವೆ ಆಗಿರುವುದರಿಂಧ ಎಲ್ಲೆಡೆ ಕನೆಕ್ಟಿವಿಟಿ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗಲಿದೆ.

ಯಾವೆಲ್ಲಾ ವಿಮಾನಗಳು ಸ್ಟಾರ್‌ಲಿಂಕ್ ಏವಿಯೇಷನ್‌ ಸೇವೆ ಬೆಂಬಲಿಸಲಿವೆ?

ಯಾವೆಲ್ಲಾ ವಿಮಾನಗಳು ಸ್ಟಾರ್‌ಲಿಂಕ್ ಏವಿಯೇಷನ್‌ ಸೇವೆ ಬೆಂಬಲಿಸಲಿವೆ?

ಸ್ಟಾರ್‌ಲಿಂಕ್‌ನ ಏವಿಯೇಷನ್‌ ಸೇವೆಯನ್ನು ERJ-135, ERJ-145, G650, G550, Falcon 2000, G450, Challenger 300, Challenger 350, Global Express, Global 5000, Global 5000, G0060 ವಿಮಾನಗಳು ಬೆಂಬಲಿಸಲಿವೆ ಎಂದು ಹೇಳಲಾಗಿದೆ. ಅಂದರೆ ಖಾಸಗಿ ಜೆಟ್‌ಗಳು ಸ್ಟಾರ್‌ಲಿಂಕ್‌ ಏವಿಯೇಷನ್‌ ಸೇವೆ ನೀಡಲಿವೆ.

ಸ್ಟಾರ್‌ಲಿಂಕ್ ಏವಿಯೇಷನ್ ಸೇವೆ ಪಡೆಯುವುದು ಹೇಗೆ?

ಸ್ಟಾರ್‌ಲಿಂಕ್ ಏವಿಯೇಷನ್ ಸೇವೆ ಪಡೆಯುವುದು ಹೇಗೆ?

ಸ್ಟಾರ್‌ಲಿಂಕ್ ಏವಿಯೇಷನ್‌ ಸೇವೆಯನ್ನು ವಿಮಾನದಲ್ಲಿ ಪಡೆದುಕೊಳ್ಳಬೇಕಾದರೆ ನೀವು starlink.com/aviation ನಲ್ಲಿ ಬುಕ್‌ ಮಾಡಬೇಕಾಗುತ್ತದೆ. ಇದಕ್ಕಾಗಿ ಆರಂಭಿಕ $5,000 (ಅಂದಾಜು 4,11,422ರೂ.)ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಈ ಸೇವೆ ಯಾವಾಗ ಲಭ್ಯವಾಗಲಿದೆ?

ಈ ಸೇವೆ ಯಾವಾಗ ಲಭ್ಯವಾಗಲಿದೆ?

ಸ್ಟಾರ್‌ಲಿಂಕ್‌ನ ಈ ಏವಿಯೇಷನ್‌ ಸೇವೆಯು 2023 ರ ಮಧ್ಯದಲ್ಲಿ ಪ್ರಾರಂಭವಾಗಲಿದೆ ಎಂದು ಸ್ಪೇಸ್‌ ಎಕ್ಸ್‌ ಸಂಸ್ಥೆ ಹೇಳಿಕೊಂಡಿದೆ.

ಏವಿಯೇಷನ್

ಸ್ಟಾರ್‌ಲಿಂಕ್ ಏವಿಯೇಷನ್ ಸೇವೆಯ ಮೂಲಕ ವಿಮಾನದಲ್ಲಿ ಪ್ರಯಾಣಿಸುವಾಗ ವೇಗವಾದ ವೈಫೈ ಇಂಟರ್‌ನೆಟ್‌ ಸೇವೆ ಬಳಸಲು ಸಾಧ್ಯವಾಗಲಿದೆ. ಆದರೆ ಇದಕ್ಕಾಗಿ ಇಂತಿಷ್ಟು ಶುಲ್ಕವನ್ನು ಪಾವತಿಸುವ ಅಗತ್ಯವಿದೆ. ಇದನ್ನು ಪಾವತಿಸಿ ಯಶಸ್ವಿಯಾಗಿ ಏವಿಯೇಷನ್‌ ಸೇವೆ ಪಡೆದುಕೊಂಡರೆ ವಿಮಾನದಲ್ಲಿ ವೇಗದ ಇಂಟರ್‌ನೆಟ್‌ ಬಳಸಿಕೊಂಡು ಗೇಮ್‌, ಆನ್‌ಲೈನ್‌ ಸರ್ಚ್‌ ಸೇರಿದಂತೆ ಇಂಟರ್‌ನೆಟ್‌ ಆಕ್ಟಿವಿಟಿಯನ್ನು ನಡೆಸುವುದಕ್ಕೆ ಸಾಧ್ಯವಾಗಲಿದೆ.

ಎಲೋನ್‌

ಇನ್ನು ಟೆಸ್ಲಾ ಕಂಪೆನಿ ಮಾಲೀಕ ಎಲೋನ್‌ ಮಸ್ಕ್‌ ತಮ್ಮ ಸ್ಯಾಟ್‌ಲೈಟ್‌ ಇಂಟರ್‌ನೆಟ್‌ ಸ್ಟಾರ್‌ ಲಿಂಕ್‌ ಸೇವೆಯನ್ನು ಭಾರತದಲ್ಲಿ ಕೂಡ ಪರಿಚಯಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಭಾರತ ಸರ್ಕಾರ ಇಲ್ಲಿಯವರೆಗೂ ಎಲೋನ್‌ಮಸ್ಕ್‌ ಅವರ ಸ್ಟಾರ್‌ಲಿಂಕ್‌ ಸೇವೆಗೆ ಓಕೆ ಎಂದು ಹೇಳಿಲ್ಲ. ಭಾರತದಲ್ಲಿ ಪ್ರಸ್ತುತ 5G ಸೇವೆ ಪ್ರಾರಂಭವಾಗಿರುವುದರಿಂದ ಮುಂದಿನ ದಿನಗಳಲ್ಲಿ ಅವಕಾಶ ಸಿಗುವ ನಿರೀಕ್ಷೆಯಲ್ಲಿ ಇದೀಗ ಮತ್ತೊಮ್ಮೆ ಭಾರತದ ದೂರಸಂಪರ್ಕ ಇಲಾಖೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ಲೈಸೆನ್ಸ್‌ ಅನ್ನು ನೀಡುವ ವಿಚಾರದಲ್ಲಿ ಸರ್ಕಾರ ನಿರ್ಧಾರ ಮಾಡಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ ಲೈಸೆನ್ಸ್‌ ದೊರೆತ ನಂತರ ಬಾಹ್ಯಕಾಶ ಇಲಾಖೆಯ ಅನುಮತಿ ಕೂಡ ಪಡೆಯಬೇಕಾಗುತ್ತದೆ.

Best Mobiles in India

English summary
SpaceX’s satellite internet service Starlink Aviation coming in mid-2023: details

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X