ಹಾಳಾದ ನೆಟ್ ವರ್ಕ್ ಸಿಗೋದೆ ಇಲ್ವೇ? ಹಾಗಾದ್ರೆ ಆನ್ ಲೈನ್ ನಲ್ಲೇ ಪೋರ್ಟ್ ಮಾಡಿಬಿಡಿ

By Gizbot Bureau
|

ಸದ್ಯ ನಾವು ಮನೆಯಲ್ಲೇ ಬಂಧಿಯಾಗಿರುವುದರಿಂದಾಗಿ ಇಂಟರ್ನೆಟ್ ಬಳಕೆ ಅತಿಯಾಗಿ ನಡೆಯುತ್ತಿದೆ. ಇಂಟರ್ನೆಟ್ ಅವಶ್ಯಕತೆ ಕೂಡ ಅಧಿಕಗೊಳ್ಳುತ್ತಿದೆ. ಒಂದು ವೇಳೆ ನೀವು ವೈಫೈ ಕನೆಕ್ಷನ್ ನ್ನು ಪಡೆದುಕೊಳ್ಳುವುದಕ್ಕೆ ಅಸಾಧ್ಯವಾಗಿದ್ದು ಮೊಬೈಲ್ ಡಾಟಾವನ್ನೇ ಹೆಚ್ಚು ಬಳಸಬೇಕಾದ ಅನಿವಾರ್ಯತೆ ಇದ್ದಲ್ಲಿ ನಿಮ್ಮ ಮೊಬೈಲ್ ಡಾಟಾ ಸ್ಟ್ರಾಂಗ್ ಆಗಿ ಇದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕಾಗುತ್ತದೆ. ಫೈಲ್ ಗಳನ್ನು ಡೌನ್ ಲೋಡ್ ಮತ್ತು ಅಪ್ ಲೋಡ್ ಮಾಡುವುದಕ್ಕೆ ಮತ್ತು ವೀಡಿಯೋ ಕಾಲ್ ಮತ್ತು ಇತರೆ ಅಂತರ್ಜಾಲ ಸಂಬಂಧಿ ಕೆಲಸಗಳು ಸುಲಭವಾಗಿ ನಡೆಯುವುದಕ್ಕೆ ಇದು ಬಹಳ ಅವಶ್ಯಕ.

ಮೊಬೈಲ್ ಡಾಟಾ

ಒಂದು ವೇಳೆ ನಿಮ್ಮ ಮೊಬೈಲ್ ಡಾಟಾ ಅಷ್ಟೇನು ತೃಪ್ತಿದಾಯಕವಾಗಿ ಇಲ್ಲದೇ ಇದ್ದಲ್ಲಿ ಮತ್ತು ನಿಮ್ಮ ಕೆಲಸವನ್ನು ಅದು ನಿಧಾನಗೊಳಿಸುತ್ತಿದ್ದಲ್ಲಿ ಏನು ಮಾಡಬಹುದು? ಇದಕ್ಕಾಗಿ ಇರುವ ಒಂದು ಪರಿಹಾರವೆಂದರೆ ನಿಮ್ಮ ಮೊಬೈಲ್ ನೆಟ್ ವರ್ಕ್ ನ್ನು ಬೇರೆ ನೆಟ್ ವರ್ಕ್ ಗೆ ಸ್ವಿಚ್ ಮಾಡಿಕೊಳ್ಳಬಹುದು.

ಆದರೆ ಈ ಕ್ರಮಕ್ಕೆ ಮುಂದಾಗುವ ಮೊದಲು ಮೊಬೈಲ್ ಡಾಟಾ ನಿಧಾನವಿದ್ದಲ್ಲಿ ಅದನ್ನು ಚುರುಕುಗೊಳಿಸಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.

• ನೋಟಿಫಿಕೇಷನ್ ಶೇಡ್ ನಲ್ಲಿ ನಿಮ್ಮ ಮೊಬೈಲ್ ಡಾಟಾ ಆಯ್ಕೆಯನ್ನು ಆಫ್ ಮಾಡಿ ಪುನಃ ಆನ್ ಮಾಡಿ ನೋಡಿ.

• ನಿಮ್ಮ ಡಿವೈಸ್ ನ್ನು ಸ್ವಿಚ್ ಆಫ್ ಮಾಡಿ ಅಥವಾ ಏರೋಪ್ಲೇನ್ ಮೋಡ್ ಗೆ ಹಾಕಿ ಮತ್ತು ಪುನಃ ಸ್ವಿಚ್ ಆನ್ ಮಾಡಿ.

• ನಿಮ್ಮ ಮೊಬೈಲ್ ನಂಬರ್ ನ್ನು ರೀಚಾರ್ಜ್ ಮಾಡಬೇಕೇ ಎಂಬುದನ್ನು ಗಮನಿಸಿ.

• ಗೂಗಲ್ ನಲ್ಲಿ ಸ್ಪೀಡ್ ಟೆಸ್ಟ್.ಕಾಮ್ ಎಂದು ಟೈಪ್ ಮಾಡಿ ನೆಟ್ ವರ್ಕ್ ಸ್ಪೀಡ್ ಚೆಕ್ ಮಾಡಿ ಅಥವಾ ಆಪ್ ನ್ನೇ ಇನ್ಸ್ಟಾಲ್ ಮಾಡಿಕೊಳ್ಳಬಹುದು. ಒಂದು ವೇಳೆ ಅಷ್ಟಕ್ಕೂ ಮೀರಿ ಇಂಟರ್ನೆಟ್ ನಿಧಾನವಿದ್ದರೆ ನಿಮ್ಮ ಸರ್ವೀಸ್ ಪ್ರೊವೈಡರ್ ನ್ನು ಸಂಪರ್ಕ್ ಮಾಡಿ ನೋಡಿ.

ಕೆಲವೊಮ್ಮೆ ನೆಟ್ ವರ್ಕ್ ಸಮಸ್ಯೆ ಬಂದಾಗ ಈ ಮೇಲಿನ ವಿಧಾನಗಳನ್ನು ನೀವು ಟ್ರೈ ಮಾಡಬಹುದು. ಆದರೆ ನಿರಂತರ ನೆಟ್ ವರ್ಕ್ ಸಮಸ್ಯೆ ಇದ್ದಲ್ಲಿ ಮೊಬೈಲ್ ನಂಬರ್ ನ್ನು ಪೋರ್ಟ್ ಮಾಡಿಕೊಳ್ಳುವುದು ಬಹಳ ಸೂಕ್ತ. ಅತ್ಯುತ್ತಮವಾಗಿ ನೆಟ್ ವರ್ಕ್ ಸೇವೆ ನೀಡುವವರ ನೆಟ್ ವರ್ಕ್ ಗೆ ನೀವು ಸ್ವಿಚ್ ಆಗಬಹುದು.

ಆದರೆ ನಂಬರ್ ಪೋರ್ಟ್ ಮಾಡುವುದು ಹೇಗೆ? ಯಾರದ್ದೋ ಕೈಕಾಲು ಹಿಡಿದು, ಯಾವುದೋ ಅಂಗಡಿಗೆ ತೆರಳಿ, ಅವರ ಬಳಿ ನಿಮ್ಮ ದಾಖಲಾತಿ ಕೊಟ್ಟು, ದಾಖಲಾತಿಗಳ ಜೆರಾಕ್ಸ್ ಪ್ರತಿಗಳನ್ನು ನೀಡುವುದು, ಸಹಿ ಹಾಕಿ ಬಂದು ಎರಡೆರಡು ದಿನ ಕಾಯುವುದು ಅದೆಲ್ಲಾ ಹಳೆ ಜಮಾನದ ವಿಧಾನಗಳಾದವು. ಈಗೇನಿದ್ದರೂ ಪೋರ್ಟ್ ಮಾಡುವುದು ಕ್ಷಣ ಮಾತ್ರದಲ್ಲಿ ಆನ್ ಲೈನ್ ನಲ್ಲೇ ಆಗುವ ಕೆಲಸವಾಗಿದೆ. ಹಾಗಾದ್ರೆ ನಂಬರ್ ಪೋರ್ಟ್ ಮಾಡುವುದು ಆನ್ ಲೈನ್ ಹೇಗೆ ಎಂಬ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

ರಿಲಯನ್ಸ್ ಜಿಯೋಗೆ ಮೊಬೈಲ್ ನಂಬರ್ ಪೋರ್ಟ್ ಮಾಡುವುದು ಹೇಗೆ? (ಆನ್ ಲೈನ್ )

ರಿಲಯನ್ಸ್ ಜಿಯೋಗೆ ಮೊಬೈಲ್ ನಂಬರ್ ಪೋರ್ಟ್ ಮಾಡುವುದು ಹೇಗೆ? (ಆನ್ ಲೈನ್ )

* ಗೂಗಲ್ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ ನಿಂದ ಮೈಜಿಯೋ ಆಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಿ.

* ಆಪ್ ನ್ನು ತೆರೆಯಿರಿ ಮತ್ತು ಆಪ್ ನ ಪೋರ್ಟ್ ಸೆಕ್ಷನ್ ಗೆ ತೆರಳಿ.

* ಆಪ್ ನಲ್ಲಿ ಎರಡು ಆಯ್ಕೆಗಳಿರುತ್ತದೆ:ಹೊಸ ಜಿಯೋ ಸಿಮ್ ಪಡೆಯುವುದು ಮತ್ತು ಇರುವ ನಂಬರ್ ಗೆ ಜಿಯೋ ನೆಟ್ ವರ್ಕ್ ಪಡೆಯುವುದು.

* ಯಾವ ಸಿಮ್ ಬೇಕು ಎಂಬುದನ್ನು ಆಯ್ಕೆ ಮಾಡಿ. ಪ್ರೀಪೇಡ್ ಅಥವಾ ಪೋಸ್ಟ್ ಪೇಯ್ಡ್.

* ನಿಮ್ಮ ಅಗತ್ಯತೆಗೆ ಹೊಂದಿಕೊಳ್ಳುವ ಪ್ಲಾನ್ ನ್ನು ಆಯ್ಕೆ ಮಾಡಿ.

* ನಿಮ್ಮ ಸ್ಥಳವನ್ನು ಖಾತ್ರಿಗೊಳಿಸಿ.

* ಇಲ್ಲಿ ಎರಡು ಆಯ್ಕೆಗಳು ಲಭ್ಯವಿರುತ್ತದೆ. ಡೋರ್ ಸ್ಟೆಪ್ ಅಂದರೆ ಮನೆಬಾಗಿಲಿಗೆ ತರಬೇಕೇ ಅಥವಾ ಸ್ಟೋರ್ ನಲ್ಲಿ ನೀವೇ ಪಡೆದುಕೊಳ್ಳುತ್ತೀರೋ ಎಂಬುದಾಗಿದೆ. ಜಿಯೋ ಸ್ಟೋರ್ ಗೆ ತೆರಳುವುದು ನಿಮಗೆ ಕಷ್ಟವಾಗಿದ್ದರೆ ನಿಮ್ಮ ಮನೆಬಾಗಿಲಿಗೆ ಸಿಮ್ ಕಾರ್ಡ್ ನ್ನು ತರುವಂತೆ ಕೇಳಿಕೊಳ್ಳಬಹುದು. ನಿಮ್ಮ ಅನುಕೂಲಕ್ಕೆ ತಕ್ಕಂತೆ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಬಹುದು. ಹೊಸ ಸಿಮ್ ಡೆಲಿವರಿ ಆಗುವ ವಿವರಗಳನ್ನು ಟ್ರ್ಯಾಕ್ ಮಾಡಬಹುದು.

ಏರ್ ಟೆಲ್ ಗೆ ನಿಮ್ಮ ಮೊಬೈಲ್ ನಂಬರ್ ನ್ನು ಆನ್ ಲೈನ್ ಮೂಲಕ ಪೋರ್ಟ್ ಮಾಡುವುದು ಹೇಗೆ?

ಏರ್ ಟೆಲ್ ಗೆ ನಿಮ್ಮ ಮೊಬೈಲ್ ನಂಬರ್ ನ್ನು ಆನ್ ಲೈನ್ ಮೂಲಕ ಪೋರ್ಟ್ ಮಾಡುವುದು ಹೇಗೆ?

* ಗೂಗಲ್ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ ಮೂಲಕ ಏರ್ ಟೆಲ್ ಥ್ಯಾಂಕ್ಸ್ ಆಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಿ.

* ನಂತರ ನೀವು ಪ್ಲಾನ್ ನ್ನು ಸೆಲೆಕ್ಟ್ ಮಾಡಿ ಪೋರ್ಟ್ ಇನ್ ಮನವಿಯನ್ನು ಖಾತ್ರಿಗೊಳಿಸಬೇಕು.

* ನಂತರ ಏರ್ ಟೆಲ್ ತಮ್ಮ ಸಿಬ್ಬಂದಿಯನ್ನು ನಿಮ್ಮ ವಿಳಾಸಕ್ಕೆ ಕಳುಹಿಸುತ್ತಾರೆ ಮತ್ತು ಅಗತ್ಯ ದಾಖಲಾತಿಗಳನ್ನು ಪಡೆದು ನಿಮಗೆ ಸಿಮ್ ನೀಡುತ್ತಾರೆ.

* ನಂತರ ನೀವು ಹೊಸ ಸಿಮ್ ಕಾರ್ಡ್ ನ್ನು ನಿಮ್ಮ ಮೊಬೈಲಿಗೆ ಇನ್ಸರ್ಟ್ ಮಾಡಿ ಮತ್ತು ಆಕ್ಟಿವೇಟ್ ಮಾಡಿಕೊಳ್ಳಬಹುದು.

ವಡಾಫೋನ್ ಐಡಿಯಾಗೆ ನಿಮ್ಮ ಮೊಬೈಲ್ ನಂಬರ್ ನ್ನು ಆನ್ ಲೈನ್ ಮೂಲಕ ಪೋರ್ಟ್ ಮಾಡುವುದು ಹೇಗೆ?

ವಡಾಫೋನ್ ಐಡಿಯಾಗೆ ನಿಮ್ಮ ಮೊಬೈಲ್ ನಂಬರ್ ನ್ನು ಆನ್ ಲೈನ್ ಮೂಲಕ ಪೋರ್ಟ್ ಮಾಡುವುದು ಹೇಗೆ?

* ವಡಾಫೋನ್ ಐಡಿಯಾ ಆಪ್ ಗೆ ತೆರಳಿ ಮತ್ತು ನಿಮ್ಮ ಹೆಸರು, ಕಾಂಟ್ಯಾಕ್ಟ್ ನಂಬರ್ ಮತ್ತು ಸಿಟಿಯನ್ನು ಎಂಎನ್ ಪಿ ಪೇಜ್ ನಲ್ಲಿ ನಮೂದಿಸಿ.

* ನಂತರ ವಡಾಫೋನ್ RED ಪೋಸ್ಟ್ ಪೇಯ್ಡ್ ಪ್ಲಾನ್ ನ್ನು ನಿಮ್ಮ ಅಗತ್ಯಕ್ಕೆ ಅನುಸಾರ ಆಯ್ಕೆ ಮಾಡಿಕೊಳ್ಳಿ.

* ನಂತರ ಸ್ವಿಚ್ ಟು ವಡಾಫೋನ್ ಬಟನ್ ನ್ನು ಕ್ಲಿಕ್ಕಿಸಿ .

* ನಿಮ್ಮ ವಿಳಾಸ ಮತ್ತು ಪಿನ್ ನಂಬರ್ ನ್ನು ನಮೂದಿಸಿದರೆ ಸಿಮ್ ಡೆಲಿವರಿಯನ್ನು ನಿಮ್ಮ ವಿಳಾಸಕ್ಕೆ ಉಚಿತವಾಗಿ ಮಾಡಲಾಗುತ್ತದೆ.

Best Mobiles in India

Read more about:
English summary
Steps To Port Your Number Online To Airtel, Jio, Vodafone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X