ಫ್ಲಿಪ್‌ಕಾರ್ಟ್‌ನಲ್ಲಿ ಆರ್ಡರ್ ಮಾಡಿದ್ದು ಲ್ಯಾಪ್‌ಟಾಪ್‌, ಆದ್ರೆ ಮನೆಗೆ ಬಂದಿದ್ದೆ ಬೇರೆ!

|

ಜನಪ್ರಿಯ ಇ ಕಾಮರ್ಸ್‌ ತಾಣ ಆಗಿರುವ ಫ್ಲಿಪ್‌ಕಾರ್ಟ್‌ (Flipkart) ಹಬ್ಬದ ಪ್ರಯುಕ್ತ ಆಯೋಜಿಸಿರುವ ಬಿಗ್ ಬಿಲಿಯನ್‌ ಡೇಸ್‌ (Big Billion Days) ಸೇಲ್‌ ಇದೀಗ ಲೈವ್‌ ಇರುವುದು ನಿಮಗೆ ಗೊತ್ತೆ ಇದೆ. ಈ ಸೇಲ್‌ನಲ್ಲಿ ಸಂಸ್ಥೆಯು ಪ್ರಮುಖ ಗ್ಯಾಡ್ಜೆಟ್ಸ್‌ಗಳಿಗೆ ಭರ್ಜರಿ ಡಿಸ್ಕೌಂಟ್‌ ಘೋಷಿಸಿದೆ. ಈ ನಿಟ್ಟಿನಲ್ಲಿ ಗ್ರಾಹಕನೋರ್ವ ಲ್ಯಾಪ್‌ಟಾಪ್‌ ಆರ್ಡರ್ ಮಾಡಿದ್ದು, ಫ್ಲಿಪ್‌ಕಾರ್ಟ್‌ನಿಂದ ಡೆಲಿವರಿ ಬಂದಾಗ ಆತ ಬೆಚ್ಚಿಬಿದ್ದಿದ್ದಾನೆ.

ಅಹಮದಾಬಾದ್‌ನ

ಹೌದು, ಐಐಎಮ್ (IIM) ಅಹಮದಾಬಾದ್‌ನ ವಿದ್ಯಾರ್ಥಿ ಯಶಸ್ವಿ ಶರ್ಮಾ ಅವರು ಇತ್ತೀಚೆಗೆ ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ ಲ್ಯಾಪ್‌ಟಾಪ್‌ ಆರ್ಡರ್ ಮಾಡಿದ್ದಾರೆ. ಆದರೆ ಫ್ಲಿಪ್‌ಕಾರ್ಟ್‌ ಲ್ಯಾಪ್‌ಟಾಪ್‌ ಬದಲಿಗೆ ಬಟ್ಟೆ ತೊಳೆಯುವ ಸೋಪ್ (Ghadi Detergent Soap) ಪ್ಯಾಕೆಟ್‌ಗಳನ್ನು ಡೆಲಿವರಿ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೇ ಫ್ಲಿಪ್‌ಕಾರ್ಟ್‌ ತನ್ನ ತಪ್ಪನ್ನು ಒಪ್ಪಿಕೊಳ್ಳಲು ನಿರಾಕರಿಸಿದೆ ಎಂದೂ ಅವರು ಹೇಳಿದ್ದಾರೆ.

ಪ್ಯಾಕೆಟ್‌ಗಳು

ಫ್ಲಿಪ್‌ಕಾರ್ಟ್‌ನಿಂದ ಬಂದ ಪ್ಯಾಕೇಜ್ ತೆರೆದಾಗ ಅವರಿಗೆ ಅದರಲ್ಲಿ ಲ್ಯಾಪ್‌ಟಾಪ್‌ ಬದಲಿಗೆ ಡಿಟರ್ಜೆಂಟ್ ಸೋಪ್ ಪ್ಯಾಕೆಟ್‌ಗಳು ಕಾಣಿಸಿವೆ. ಈ ಬಗ್ಗೆ ಯಶಸ್ವಿ ಶರ್ಮಾ ಅವರು ಫೋಟೊಗಳ ಸಮೇತ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ಅವರು ಮಾಡಿರುವ ಈ ಟ್ವಿಟ್ ವೈರಲ್‌ ಆಗಿದೆ.

ಪ್ರಕಾರ

ಇನ್ನು ಯಶಸ್ವಿ ಶರ್ಮಾ ಅವರ ಲಿಂಕ್ಡ್‌ಇನ್ (LinkedIn) ಹಾಗೂ ಟ್ವಿಟ್ಟರ್‌ (Twitter) ಪೋಸ್ಟ್ ಪ್ರಕಾರ, ಲ್ಯಾಪ್‌ಟಾಪ್ ಬದಲಿಗೆ ಘಡಿ ಡಿಟರ್ಜೆಂಟ್ ಸ್ಯಾಚೆಟ್‌ಗಳನ್ನು ಕಳುಹಿಸಿದ್ದರೂ ಸಹ ಫ್ಲಿಪ್‌ಕಾರ್ಟ್‌ನ ಕಸ್ಟೋಮರ್‌ ಕೇರ್‌ ತನ್ನನ್ನೇ ದೂಷಿಸುತ್ತಿದೆ ಎಂದಿದ್ದಾರೆ. ತನ್ನ ಬಳಿ ಸಿಸಿಟಿವಿ ದೃಶ್ಯಗಳಿದ್ದರೂ, ಅದು ವ್ಯರ್ಥವಾಯಿತು ಎಂದು ಆರೋಪಿಸಿದ್ದಾರೆ.

ಪೋಸ್ಟ್‌ನಲ್ಲಿ

ಫ್ಲಿಪ್‌ಕಾರ್ಟ್‌ನಿಂದ ಬಂದ ಪ್ಯಾಕೇಜ್‌ ಅನ್ನು ಸ್ವೀಕರಿಸುವಲ್ಲಿ ತನ್ನ ತಂದೆಯ ಒಂದು ತಪ್ಪು ಕಾರಣವಾಗಿದೆ ಎಂದೂ ಅವರು ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. ತನ್ನ ತಂದೆಗೆ 'ಓಪನ್-ಬಾಕ್ಸ್' ಡೆಲಿವರಿಯ ಬಗ್ಗೆ ತಿಳಿದಿರಲಿಲ್ಲ. ಈ ಹಿನ್ನೆಲೆ ಅವರು ಚೆಕ್‌ ಮಾಡದೆ ಡೆಲಿವರಿ ಪಡೆದುಕೊಂಡಿದ್ದಾರೆ ಎಂದೂ ಹೇಳಿಕೊಂಡಿದ್ದಾರೆ.

ಓಪನ್ ಬಾಕ್ಸ್‌ ವಿತರಣೆ

ಓಪನ್ ಬಾಕ್ಸ್‌ ವಿತರಣೆ

ಓಪನ್ ಬಾಕ್ಸ್‌ ವಿತರಣೆ ಪರಿಕಲ್ಪನೆಯ ಪ್ರಕಾರ, ಖರೀದಿದಾರನು ಡೆಲಿವರಿ ಮಾಡುವ ವ್ಯಕ್ತಿಯ ಎದುರು ಬಾಕ್ಸ್ ಓಪನ್ ಮಾಡಬೇಕು ಮತ್ತು ಉತ್ಪನ್ನವನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ನಂತರ ಮಾತ್ರ OTP ಅನ್ನು ಒದಗಿಸಬೇಕು.

ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ಆಫರ್‌ನಲ್ಲಿ ಲಭ್ಯವಿರುವ ಲ್ಯಾಪ್‌ಟಾಪ್‌ಗಳು:

ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ಆಫರ್‌ನಲ್ಲಿ ಲಭ್ಯವಿರುವ ಲ್ಯಾಪ್‌ಟಾಪ್‌ಗಳು:

ಆಸುಸ್‌ ವಿವೋಬುಕ್‌ 15 (2021) ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ ಆಸುಸ್‌ ವಿವೋಬುಕ್‌ 15 (2021) ಲ್ಯಾಪ್‌ಟಾಪ್‌ 44% ಡಿಸ್ಕೌಂಟ್‌ ಪಡೆದಿದೆ. ಆದರಿಂದ ಈ ಲ್ಯಾಪ್‌ಟಾಪ್‌ ಅನ್ನು ನೀವು 35,990ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇದಲ್ಲದೆ ಆಕ್ಸಿಸ್‌ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಬಳಸುವ ಗ್ರಾಹಕರು 10% ಕ್ಯಾಶ್‌ಬ್ಯಾಕ್‌ ಕೂಡ ಪಡೆಯಲಿದ್ದಾರೆ. ಇನ್ನು ನೋಕಿಯಾ ಪ್ಯೂರ್‌ ಬುಕ್‌ X14 ಲ್ಯಾಪ್‌ಟಾಪ್‌ ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ 57% ಡಿಸ್ಕೌಂಟ್‌ ಪಡೆದಿದೆ. ಇದರಿಂದ ಈ ಲ್ಯಾಪ್‌ಟಾಪ್‌ ನಿಮಗೆ 37,890ರೂ. ಬೆಲೆಗೆ ಲಭ್ಯವಾಗಲಿದೆ.

ಬಿಲಿಯನ್‌

ಅದೇ ರೀತಿ ಲೆನೊವೊ ಐಡಿಯಾಪ್ಯಾಡ್‌ 3 ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ಲೆನೊವೊ ಐಡಿಯಾಪ್ಯಾಡ್‌ 3 ಲ್ಯಾಪ್‌ಟಾಪ್‌ 42% ಡಿಸ್ಕೌಂಟ್‌ ಹೊಂದಿದೆ. ಇದರಿಂದ ಈ ಲ್ಯಾಪ್‌ಟಾಪ್‌ ಅನ್ನು ನೀವು ಕೇವಲ 33,990ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಹಾಗೆಯೇ ಹೆಚ್‌ಪಿ ಕೋರ್‌ i3 11ನೇ Gen 14s - dy2508TU ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ ಈ ಲ್ಯಾಪ್‌ಟಾಪ್‌ 21% ಆಫರ್‌ ಪಡೆದುಕೊಂಡಿದೆ. ಇದರಿಂದ ಈ ಲ್ಯಾಪ್‌ಟಾಪ್‌ ಅನ್ನು ನೀವು ಕೇವಲ 38,990ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ.

Best Mobiles in India

English summary
Student orders laptop From Flipkart, But receives detergent bars.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X