ಫ್ಲಿಪ್‌ಕಾರ್ಟ್‌ನಲ್ಲಿ ದುರ್ವರ್ತನೆ ಆರೋಪಕ್ಕೆ ಪ್ರತಿಕ್ರಿಯಿಸಿದ 'ಬಿನ್ನಿ ಬನ್ಸಾಲ್'!..ಏನಂದರು ಗೊತ್ತಾ?

|

ಗಂಭೀರ ಸ್ವರೂಪದ ವೈಯಕ್ತಿಕ ದುರ್ವರ್ತನೆ ಆರೋಪದ ಹಿನ್ನಲೆಯಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದ ಫ್ಲಿಪ್‌ಕಾರ್ಟ್ ಸಹ ಸಂಸ್ಥಾಪಕರಾದ 'ಬಿನ್ನಿ ಬನ್ಸಾಲ್' ಅವರು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮೇಲೆ ಬಂದಿರುವ ವೈಯಕ್ತಿಕ ದುರ್ವರ್ತನೆ ಆರೋಪದಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ಆಘಾತವಾಗಿದೆ ಎಂದು ಬಿನ್ನಿ ಬನ್ಸಾಲ್ ಅವರು ಕಂಪೆನಿ ಉದ್ಯೋಗಿಗಳಿಗೆ ಇಮೇಲ್‌ ಮೂಲಕ ತಿಳಿಸಿದ್ದಾರೆ

ನನ್ನ ವಿರುದ್ಧ ಮಾಡಲಾಗಿರುವ ವೈಯಕ್ತಿಕ ದುರ್ವರ್ತನೆ ಆರೋಪದಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ಆಘಾತವಾಗಿದೆ. ನನ್ನ ವಿರುದ್ಧದ ಈ ಆರೋಪ ಸತ್ಯಕ್ಕೆ ದೂರವಾಗಿದ್ದು. ತನಿಖೆಯ ನಂತರ ಎಲ್ಲವೂ ತಿಳಿಯಲಿದೆ. ಸದ್ಯ ನಾನು ಸಿಇಒ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಸಂಸ್ಥೆಯ ನಿರ್ದೇಶಕ ಮಂಡಳಿಯಲ್ಲಿ ಪಾಲುದಾರನಾಗಿ ಮುಂದುವರೆಯುವೆ ಎಂದು ಸಿಬ್ಬಂದಿಗೆ ಬರೆದ ಇ ಮೇಲ್‌ನಲ್ಲಿ ಬರೆದಿದ್ದಾರೆ ಎಂದು ತಿಳಿದುಬಂದಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ದುರ್ವರ್ತನೆ ಆರೋಪಕ್ಕೆ ಪ್ರತಿಕ್ರಿಯಿಸಿದ ಬಿನ್ನಿ ಬನ್ಸಾಲ್!

ವೈಯಕ್ತಿಕ ದುರ್ವರ್ತನೆ ಆರೋಪಕ್ಕೆ ಬನ್ಸಾಲ್ ಅವರ ರಾಜೀನಾಮೆ ತಕ್ಷಣದಿಂದಲೇ ಜಾರಿ ಬಂದಿದೆ. ತಮ್ಮ ವಿರುದ್ದ ಗಂಭೀರ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಆರೋಪಗಳ ಕುರಿತು ಸಮಗ್ರವಾದ ತನಿಖೆ ನಡೆಸುವುದು ನಮ್ಮ ಕರ್ತವ್ಯ ಎಂದು ಫ್ಲಿಪ್ಕಾರ್ಟ್ ಸ್ವಾಧೀನಪಡಿಸಿಕೊಂಡಿರುವ ವಾಲ್‌ಮಾರ್ಟ್ ಸಂಸ್ಥೆ ಹೇಳಿದೆ. ಆದರೆ, ಈ ಎಲ್ಲಾ ಘಟನೆಗಳ ನಡುವೆ ಬಿನ್ನಿ ಬನ್ಸಲ್ ತಲೆದಂಡ ಉದ್ದೇಶವೇ ಬೇರೆ ಇತ್ತು ಎನ್ನುತ್ತಿದೆ ಫ್ಲಿಪ್‌ಕಾರ್ಟ್ ಸಂಸ್ಥೆಯ ಮೂಲಗಳು. ಹಾಗಾದರೆ, ಏನಿದು ಶಾಕಿಂಗ್ ವರದಿ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಬಿನ್ನಿ ಬನ್ಸಲ್ ರಾಜಿನಾಮೆ!

ಬಿನ್ನಿ ಬನ್ಸಲ್ ರಾಜಿನಾಮೆ!

ಫ್ಲಿಪ್‌ಕಾರ್ಟ್ ಸಹ ಸ್ಥಾಪಕ ಹಾಗೂ ಸಿಇಒ ಬಿನ್ನಿ ಬನ್ಸಾಲ್ ಅವರು ಇತ್ತೀಚಿನ ಅಹಿತಕರ ಘಟನೆಗಳ ಬಳಿಕ ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದಾರೆ ಎಂದು ವಾಲ್‌ಮಾರ್ಟ್ ಹೇಳಿದೆ. ಫ್ಲಿಪ್‌ಕಾರ್ಟ್ ಹಾಗೂ ವಾಲ್‌ಮಾರ್ಟ್ ನಡೆಸಿದ ಸ್ವತಂತ್ರ ತನಿಖೆ ವೇಳೆ ವೈಯಕ್ತಿಕ ದುರ್ವತನೆ ತೋರಿಸಿರುವ ವಿಷಯದಲ್ಲಿ ಈ ರಾಜಿನಾಮೆ ನೀಡಲಾಗಿದೆ ಎಂದು ಅದು ಸ್ಪಷ್ಟಪಡಿಸಿದೆ.

ಆರೋಪ ತಳ್ಳಿಹಾಕಿದ ಬಿನ್ನಿ ಬನ್ಸಲ್

ಆರೋಪ ತಳ್ಳಿಹಾಕಿದ ಬಿನ್ನಿ ಬನ್ಸಲ್

ಸಂಸ್ಥೆಯ ತನಿಖೆ ವೇಳೆ ವೈಯಕ್ತಿಕವಾಗಿ ದುರ್ವತನೆ ತೋರಿಸಿರುವ ಆರೋಪಗಳನ್ನು ಬಿನ್ನಿ ಬನ್ಸಾಲ್ ಅವರು ತಳ್ಳಿಹಾಕಿದ್ದಾರೆ. ಆದರೆ, ಬಿನ್ನಿ ಬನ್ಸಾಲ್ ಪರಿಸ್ಥಿತಿಗೆ ತಕ್ಕಂತೆ ನಿರ್ಧಾರ ಕೈಗೊಳ್ಳುವಲ್ಲಿ ಅವರು ಎಡವಿರುವುದು ಬಹಿರಂಗಪಡಿಸುತ್ತದೆ. ಹೀಗಾಗಿ, ಅವರ ರಾಜೀನಾಮೆಯ ನಿರ್ಧಾರವನ್ನು ನಾವು ಒಪ್ಪಿಕೊಂಡಿದ್ದೆವೆ'' ಎಂದು ವಾಲ್‌ಮಾರ್ಟ್ ಕಂಪನಿ ಮಾಹಿತಿ ನೀಡಿದೆ.

ಯಾವುದೇ ದಾಖಲೆ ದೊರೆತಿಲ್ಲ!

ಯಾವುದೇ ದಾಖಲೆ ದೊರೆತಿಲ್ಲ!

ತನಿಖೆ ವೇಳೆ ದೂರುದಾರರ ಆರೋಪಗಳಂತೆ ಬಿನ್ನಿ ವಿರುದ್ಧ ಯಾವುದೇ ದಾಖಲೆಗಳು ದೊರೆತಿಲ್ಲ ಎಂದು ತಿಳಿದುಬಂದಿದೆ. ಆದರೂ, ತನಿಖೆ ಉದ್ದೇಶಪೂರ್ವಕ ಮತ್ತು ಸಂಪೂರ್ಣವಾಗಿ ನಡೆಯಬೇಕೆಂಬ ಜವಾಬ್ದಾರಿ ನಮ್ಮ ಮೇಲಿದೆ. ಬನ್ಸಾಲ್ ವಿರುದ್ಧ ದಾಖಲೆಗಳಿಲ್ಲದಿದ್ದರೂ ಸಹ ಪಾರದರ್ಶಕತೆಯ ಕೊರತೆ ಇದೆ ಎಂದು ಮಾಲ್‌ಮಾರ್ಟ್ ಕಂಪನಿ ಮಾಹಿತಿ ನೀಡಿದೆ.

ರಾಜಿನಾಮೆಗೆ ಒತ್ತಡವಿತ್ತೇ?

ರಾಜಿನಾಮೆಗೆ ಒತ್ತಡವಿತ್ತೇ?

ಇತ್ತೀಚಿನ ಘಟನೆಗಳ ಬಳಿಕ ಬನ್ಸಾಲ್ ಅವರು ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದಾರೆ. ಇನ್ನು ಕೆಲ ಸಮಯದಿಂದ ಬಿನ್ನಿ ಬದಲಾವಣೆ ಬಗ್ಗೆ ಆಲೋಚನೆ ಮಾಡುತ್ತಿದ್ದರು. ಹೀಗಾಗಿ ನಾವೂ ಸಹ ಅವರ ಉತ್ತರಾಧಿಕಾರಿಯ ಆಯ್ಕೆ ಬಗ್ಗೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ವಾಲ್‌ಮಾರ್ಟ್ ಹೇಳುತ್ತಿರುವುದು ರಾಜಿನಾಮೆಗೆ ಒತ್ತಡವಿತ್ತೇ ಎಂಬ ಅನುಮಾನಕ್ಕೆ ಕಾರಣವಾಗಿದೆ.

ಇದು ವಾಲ್‌ಮಾರ್ಟ್ ಆಟ!

ಇದು ವಾಲ್‌ಮಾರ್ಟ್ ಆಟ!

ಬನ್ಸಾಲ್ ವಿರುದ್ಧ ದಾಖಲೆಗಳಿಲ್ಲದಿದ್ದರೂ ಸಹ ಪಾರದರ್ಶಕತೆಯ ಕೊರತೆ, ಪರಿಸ್ಥಿತಿಗೆ ತಕ್ಕಂತೆ ನಿರ್ಧಾರ ಕೈಗೊಳ್ಳುವಲ್ಲಿ ಅವರು ಎಡವಿರುವುದು ಬಹಿರಂಗಪಡಿಸುತ್ತದೆ. ಹೀಗಾಗಿ, ಅವರ ರಾಜೀನಾಮೆಯ ನಿರ್ಧಾರವನ್ನು ನಾವು ಒಪ್ಪಿಕೊಂಡಿದ್ದೆವೆ ಎಂದು ವಾಲ್‌ಮಾರ್ಟ್ ಹೇಳಿದೆ. ಇದು ಉದ್ದೇಶಪೂರ್ವಕವಾಗಿತ್ತು ಎಂದು ಕಂಪೆನಿಯ ಮೂಲಗಳು ಮಾಹಿತಿಯನ್ನು ಬಿಚ್ಚಿಟ್ಟಿವೆ.

ನೂತನ ಸಿಇಒಗಳು ಇವರು!

ನೂತನ ಸಿಇಒಗಳು ಇವರು!

ಇನ್ನು ಕಲ್ಯಾಣ್‌ ಕೃಷ್ಣಮೂರ್ತಿ ಅವರು ಫ್ಲಿಪ್‌ಕಾರ್ಟ್‌ನ ನೂತನ ಸಿಇಒ ಆಗಲಿದ್ದಾರೆ. ಮಿಂತ್ರಾ ಹಾಗೂ ಜಬಾಂಗ್ ಕಂಪನಿಗಳಿಗೆ ಅನಂತ್ ನಾರಾಯಣ್‌ ಸಿಇಒ ಆಗಿ ಮುಂದುವರಿಯಲಿದ್ದು, ಎರಡೂ ಕಂಪನಿಗಳು ಫ್ಲಿಪ್‌ಕಾರ್ಟ್ ಬ್ಯುಸಿನೆಸ್‌ನ ಪ್ರತ್ಯೇಕ ಭಾಗಗಳಾಗಿ ಮುಂದುವರಿಯಲಿದೆ. ಇನ್ನು, ಅನಂತ್ ನಾರಾಯಣ್‌ ಫ್ಲಿಪ್‌ಕಾರ್ಟ್ ಸಿಇಒ ಕಲ್ಯಾಣ್‌ಗೆ ವರದಿ ನೀಡಬೇಕಾಗಿದೆ.

ಫೋನ್‌ಪೇಗೆ ಸಮೀರ್!

ಫೋನ್‌ಪೇಗೆ ಸಮೀರ್!

ಕಲ್ಯಾಣ್‌ ಅವರು ಫ್ಲಿಪ್‌ಕಾರ್ಟ್‌ನ ನೂತನ ಸಿಇಒ ಆಗಿದ್ದರೆ, ಇನ್ನ ಫೋನ್‌ಪೇಯ ಸಿಇಒ ಆಗಿ ಸಮೀರ್ ನಿಗಮ್ ಮುಂದುವರಿಯಲಿದ್ದಾರೆ. ಅಲ್ಲದೆ, ಕಲ್ಯಾಣ್‌ ಹಾಗೂ ಸಮೀರ್ ಇಬ್ಬರೂ ಮಂಡಳಿಗೆ ನೇರವಾಗಿ ವರದಿ ನೀಡಲಿದ್ದಾರೆ. ಬಿನ್ನಿ ರಾಜೀನಾಮೆ ಸಲ್ಲಿಸಿದ ನಂತರ ಈ ಎಲ್ಲಾ ಬೆಳವಣಿಗೆಗಳು ಇದು ಉದ್ದೇಶಪೂರ್ವಕ ಎಂಬುದಕ್ಕೆ ಅನುಮಾನ ಕೂಡ ದಟ್ಟವಾಗುತ್ತಿದೆ.

Best Mobiles in India

English summary
Binny will continue to be a large shareholder in Flipkart, which was acquired by Walmart in May 2018.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X