ವೈರಲ್‌ ಆಯ್ತು ಗೂಗಲ್‌ ಸಿಇಒ ಮಾಡಿದ ಆ ಒಂದು ಟ್ವೀಟ್‌!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ನ ಸಿಇಒ ಸುಂದರ್‌ ಪಿಚೈ ಮಾಡಿರುವ ಟ್ವೀಟ್‌ ಒಂದು ಭಾರಿ ವೈರಲ್‌ ಆಗಿದೆ. ನಿಮಗೆಲ್ಲಾ ತಿಳಿದಿರುವಂತೆ ನೀವು ಆಫ್‌ಲೈನ್‌ನಲ್ಲಿರುವಾಗ ಕ್ರೋಮ್‌ ಬ್ರೌಸರ್ ಸರ್ಚ್‌ ಮಾಡಿದರೆ ನಿಮಗೊಂದು ಗೂಗಲ್‌ ಹಿಡನ್‌ ಗೇಮ್‌ ಕಾಣಲಿದೆ. ಸ್ಪೇಸ್ ಬಟನ್ ಒತ್ತಿ ಮತ್ತು ಮುದ್ದಾದ ಟಿ-ರೆಕ್ಸ್ ಸಮೀಪಿಸುತ್ತಿರುವ ಪಾಪಾಸುಕಳ್ಳಿಯ ಮೇಲೆ ಹಾರಿ ಮತ್ತು ಅದರ ಎಂಡ್‌ ಇಲ್ಲದ ಓಟವನ್ನು ಮುಂದುವರಿಸಲಿದೆ. ಈಗ ಗೂಗಲ್ ಸಿಇಒ ಸುಂದರ್‌ ಪಿಚೈ ಅವರು ಹಂಚಿಕೊಂಡ ಆಟಕ್ಕೆ ಸಂಬಂಧಿಸಿದ ಪೋಸ್ಟ್ ಕೂಡ ಜನರ ಆಸಕ್ತಿಯನ್ನು ಕೆರಳಿಸಿದೆ.

ಸುಂದರ್‌

ಹೌದು, ಗೂಗಲ್‌ ಸಿಇಒ ಸುಂದರ್‌ ಪಿಚೈ ಟ್ವಿಟರ್‌ನಲ್ಲಿ "ನನ್ನ ಸರ್ಫಿಂಗ್ ಕೌಶಲ್ಯದ ಬಗ್ಗೆ ಕೆಲಸ ಮಾಡಬೇಕಾಗಬಹುದು" ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಈ ಹಿಡನ್‌ ಗೇಮ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ, ಗುಲಾಬಿ ಸರ್ಫಿಂಗ್ ಬೋರ್ಡ್‌ನಲ್ಲಿ ಪರಿಚಿತ ಡಿನೋ ಸರ್ಫ್ ಮಾಡಲು ಪ್ರಯತ್ನಿಸುತ್ತಿರುವುದನ್ನು ಚಿತ್ರ ತೋರಿಸುತ್ತದೆ. ಅಷ್ಟಕ್ಕೂ ಗೂಗಲ್‌ ಸಿಇಒ ಈ ಚಿತ್ರದ ಮೂಲಕ ಏನು ಹೇಳಲು ಹೊರಟ್ಟಿದ್ದಾರೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಸರ್ಫಿಂಗ್

ಸುಂದರ್‌ ಪಿಚೈ ತಮ್ಮಸರ್ಫಿಂಗ್ ಕೌಶಲ್ಯ ಹೇಗಿರಲಿದೆ ಅನ್ನೊದನ್ನ ಬರೆದುಕೊಂಡಿದ್ದಾರೆ. ಇಂಟರ್‌ನೆಟ್‌ ಇಲ್ಲದೆ ಹೋದಾಗ ಗೂಗಲ್‌ನಲ್ಲಿ ಕಾಣಿಸಿಕೊಳ್ಳುವ ಹಿಡನ್‌ ಗೇಮ್‌ನ ಚಿತ್ರವನ್ನು ಶೇರ್‌ ಮಾಡಿದ್ದಾರೆ. ಆದರೆ ಇದರಲ್ಲಿ ಆಶ್ಚರ್ಯಕರ ಸಂಗತಿಯೆಂದರೆ ಸಾಮಾನ್ಯವಾಗಿ ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಕಾಣುವ ಈ ಗೇಮ್‌ನಲ್ಲಿ ಗುಲಾಬಿ ಬಣ್ಣದ ಸ್ಪ್ಲಾಶ್‌ ಅನ್ನು ಕಾಣಬಹುದಾಗಿದೆ. ಇದೇ ಕಾರಣಕ್ಕೆ ಈ ಟ್ವೀಟ್‌ ಸಾಕಷ್ಟು ವೈರಲ್‌ ಆಗಿದೆ.

ಟ್ವೀಟ್‌

ಇನ್ನು ಈ ಮಾದರಿಯ ಟ್ವೀಟ್‌ ಮಾಡಲು ಟೋಕಿಯೊ ಒಲಿಂಪಿಕ್ಸ್ 2020 ಅನ್ನು ಆಚರಿಸಲು ಈ ಆಟಕ್ಕೆ ಇತ್ತೀಚೆಗೆ ಒಂದು ಮೇಕ್ ಓವರ್ ಸಿಕ್ಕಿದೆ ಎಂಬುದು ಇದಕ್ಕೆ ಕಾರಣ. ಇನ್ನು ಪಿಚೈ ಈ ಪೋಸ್ಟ್ ಅನ್ನು ಹಂಚಿಕೊಂಡಾಗಿನಿಂದ, 8,600 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ ಮತ್ತು ಇನ್ನು ಹೆಚ್ಚಿನ ಸಂಖ್ಯೆಗಳು ಶೀಘ್ರವಾಗಿ ಹೆಚ್ಚುತ್ತಿವೆ. ಮೇಕ್ ಓವರ್ ಅನ್ನು ಶ್ಲಾಘಿಸುವ ಅನೇಕ ಟ್ವೀಟ್ಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ "ಡೈನೋಸಾರ್ ರಕ್ಷಣೆಗಾಗಿ ಹೆಲ್ಮೆಟ್‌ನೊಂದಿಗೆ ಕುದುರೆ ಸವಾರಿ ಮಾಡುವುದನ್ನು ನಾನು ಇದೇ ಮೊದಲ ಬಾರಿಗೆ ನೋಡಿದ್ದೇನೆ ಎಂಬ ರಿಪ್ಲೆ ಸ್ವಾರಸ್ಯಕರವಾಗಿದೆ.

Best Mobiles in India

English summary
“Might need to work on my surfing skills," Sundar Pichai wrote while sharing the image from Google's dino game.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X