ಗೂಗಲ್‌ ಸರ್ಚ್‌ನಲ್ಲಿ ಮೋದಿ ಲಾಸ್ಟ್ , ಸನ್ನಿಲಿಯೋನ್‌ ಫಸ್ಟ್‌

By Suneel
|

ಭಾರತದಲ್ಲಿ ಟಾಪ್‌ ಬೇಡಿಕೆ ಈ ವರ್ಷ ಯಾರಿಗಿದೆ ? ಎಂದು ಪ್ರಶ್ನೆ ಕೇಳಿದರೆ ಬಹುಶಃ ನಿಮಗೆ ಉತ್ತರ ಹೇಳಲು ಕಷ್ಟ ಕಷ್ಟವಾಗಬಹುದು. ಆದರೆ ಇಂದು ಗೂಗಲ್‌ ನೀಡಿರುವ ಗೂಗಲ್‌ನಲ್ಲಿ 2015 ರಲ್ಲಿ ಅಧಿಕವಾಗಿ ಹುಡುಕಾಡಿರುವ ವ್ಯಕ್ತಿಗಳ ಪಟ್ಟಿಯನ್ನು ಒಮ್ಮೆ ಗಮನಿಸಿದರೆ ಬಹುಶಃ ನಿಮಗೆ 2015 ರ ಭಾರತದ ಟಾಪ್‌ ವ್ಯಕ್ತಿಗಳು ಯಾರು ಎಂದು ಗೂಗಲ್‌ನ ಪ್ರಕಾರ ಹೇಳಬಹುದಾಗಿದೆ.

ಓದಿರಿ: 60 ದಶಲಕ್ಷ ಜನರ ವೈಯಕ್ತಿಕ ಮಾಹಿತಿ ಹ್ಯಾಕಿಂಗ್ : ಎಚ್ಚರ!!..

ಗೂಗಲ್‌, ಹೊಸ ವರ್ಷ 2016 ಅನ್ನು ಮುನ್ನೊಡುತ್ತಿರುವ ಪ್ರಪಂಚದ ಎಲ್ಲಾ ಜನರಿಗೆ ಗೂಗಲ್‌ನಲ್ಲಿ ಹೆಚ್ಚು ಹುಡುಕಾಡಲ್ಪಟ್ಟಿರುವ ವ್ಯಕ್ತಿಗಳ ಹೆಸರು ಮತ್ತು ಅನುಕ್ರಮವಾಗಿ ಅವರು ಎಷ್ಟನೇ ಶ್ರೇಣಿಯಲ್ಲಿದ್ದಾರೆ ಎಂಬುದನ್ನು ಸಹ ನೀಡಿದೆ. ಹಾಗಾದರೆ ಗಿಜ್‌ಬಾಟ್‌ನ ಈ ಲೇಖನದಲ್ಲಿ 2015ರಲ್ಲಿ ಭಾರತದ ಯಾವ ವ್ಯಕ್ತಿಗಳು ಹೆಚ್ಚು ಹುಡುಕಾಡಲ್ಪಟ್ಟರು ಎಂಬುದನ್ನು ತಿಳಿದುಕೊಳ್ಳಿ.

ಸನ್ನಿಲಿಯೋನ್‌

ಸನ್ನಿಲಿಯೋನ್‌

2015ರ ಭಾರತದ ಗೂಗಲ್‌ ಟ್ರೆಂಡ್‌ ವ್ಯಕ್ತಿಯಲ್ಲಿ ಟಾಪ್‌ ಒಂದರಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಹುಡುಕಾಡಲ್ಪಟ್ಟಿರುವವರಲ್ಲಿ ಸನ್ನಿಲಿಯೋನ್‌ ಮೊದಲ ಸ್ಥಾನ ಪಡೆದಿದ್ದಾರೆ. ಪೋರ್ನೊಗ್ರಾಫಿಕ್ ನಟಿ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದಾರೆ.

ಸಲ್ಮಾನ್‌ ಖಾನ್‌

ಸಲ್ಮಾನ್‌ ಖಾನ್‌

ಅಬ್ದುಲ್‌ ರಸೀದ್ ಸಲೀಂ ಸಲ್ಮಾನ್‌ ಖಾನ್‌ ರವರು 2015 ರಲ್ಲಿ ಭಾರತದಲ್ಲಿ ಗೂಗಲ್‌ನಲ್ಲಿ ಅತ್ಯಧಿಕವಾಗಿ ಹುಡುಕಾಡಲ್ಪಟ್ಟ ಎರಡನೇ ವ್ಯಕ್ತಿಯಾಗಿದ್ದಾರೆ. ಇವರು ಭಾರತದ ಸಿನಿಮಾ ಕಲಾವಿದ, ನಟ, ನಿರ್ಮಾಪಕ ಹಾಗೂ ಮಾಧ್ಯಮ ಪ್ರಖ್ಯಾತಿ ವ್ಯಕ್ತಿಯಾಗಿದ್ದಾರೆ. ಅಲ್ಲದೇ ಏಷ್ಯಾ ಖಂಡದಲ್ಲಿ ಹೆಚ್ಚು ಜನರು ಇವರನ್ನು ಫಾಲೋ ಮಾಡುತ್ತಿದ್ದಾರೆ.

 ಎಪಿಜೆ ಅಬ್ದುಲ್ ಕಲಾಂ

ಎಪಿಜೆ ಅಬ್ದುಲ್ ಕಲಾಂ

ಭಾರತದ ಕೀರ್ತಿಯನ್ನು ಎತ್ತಿ ಹಿಡಿದ ಭಾರತದ ಕ್ಷಿಪಣಿ ಪಿತಾಮಹ 'ಎಪಿಜೆ ಅಬ್ದುಲ್‌ ಕಲಾಂ' ರವರು ಭಾರತದಲ್ಲಿ ಗೂಗಲ್‌ನಲ್ಲಿ ಹುಡುಕಾಡಿದ ಟಾಪ್‌ ವ್ಯಕ್ತಿಗಳಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇವರು ಭಾರತದ ಮಾಜಿ ರಾಷ್ಟ್ರಪತಿಗಳು ಹೌದು.

 ಕತ್ರಿನಾ ಕೈಫ್‌

ಕತ್ರಿನಾ ಕೈಫ್‌

2015 ರಲ್ಲಿ ಭಾರತದಾದ್ಯಂತ ಗೂಗಲ್‌ ಸರ್ಚ್‌ನಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹುಡುಕಾಡಲ್ಪಟ್ಟ ಟಾಪ್‌ ನಾಲ್ಕನೇ ಸ್ಥಾನದಲ್ಲಿ ಕತ್ರಿನಾ ಕೈಫ್‌ ಇದ್ದಾರೆ. ಇವರು ಬ್ರಿಟಿಷ್-ಭಾರತೀಯ ಸಿನಿಮಾ ನಟಿ. ಬಾಲಿವುಡ್‌ ಸಿನಿಮಾ ರಂಗದಲ್ಲಿ ಹೆಚ್ಚು ಪ್ರಖ್ಯಾತಿಯಾಗಿದ್ದಾರೆ.

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ

ಭಾರತದ ಗೂಗಲ್‌ ಸರ್ಚ್‌ನ ಟಾಪ್‌ 5ನೇ ಸ್ಥಾನದಲ್ಲಿ ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಇದ್ದಾರೆ. ಇವರು ಭಾರತ ಸಿನಿಮಾ ರಂಗದ ನಟಿ ಹಾಗೂ ಮಾಡೆಲ್‌ ಬೆಡಗಿ. ವಿಶೇಷವೆಂದರೆ ಭಾರತದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಂಬರ್ 1 ನಟಿ.

ಶಾರುಖ್ ಖಾನ್

ಶಾರುಖ್ ಖಾನ್

ಗೂಗಲ್‌ ಸರ್ಚ್‌ನ ಟಾಪ್‌ 6ನೇ ಸ್ಥಾನ ಬಾಲಿವುಡ್‌ ಬಾದ್‌ ಶಾ ಎಂದೇ ಹೆಸರಾದ ಭಾರತದ ಸಿನಿಮಾ ನಟ, ನಿರ್ಮಾಪಕ ಹಾಗೂ ಟೆಲಿವಷನ್‌ ತಾರೆ ಶಾರುಖ್‌ ಖಾನ್‌ರದ್ದು. ಅಲ್ಲದೇ ಇವರನ್ನು "ಕಿಂಗ್ ಆಫ್‌ ಬಾಲಿವುಡ್‌", ಕಿಂಗ್‌ ಖಾನ್‌" ಎಂದು ಸಹ ಕರೆಯುತ್ತಾರೆ.

 ಯೋ ಯೋ ಹನಿ ಸಿಂಗ್

ಯೋ ಯೋ ಹನಿ ಸಿಂಗ್

2015 ರಲ್ಲಿ ಭಾರತದಲ್ಲಿ ಗೂಗಲ್‌ ಸರ್ಚ್‌ನಲ್ಲಿ ಹುಡುಕಾಡಿದ ವ್ಯಕ್ತಿಗಳಲ್ಲಿ ಟಾಪ್‌ ಏಳನೇ ಸ್ಥಾನವನ್ನು ಭಾರತದ ರಾಪ್ಪರ್, ಸಂಗೀತ ನಿರ್ಮಾಪಕ, ಹಾಡುಗಾರ, ಹಾಗೂ ಸಿನಿಮಾ ಕಲಾವಿದರು ಆದ ಯೋ ಯೋ ಹನಿ ಸಿಂಗ್ ಅಲಂಕರಿಸಿದ್ದಾರೆ. ಇವರು ಬಾಂಗ್ರಾ ಸಂಗೀತ ನಿರ್ಮಾಪಕರಾಗಿಯೂ ಹೊರಹೊಮ್ಮಿದ್ದಾರೆ.

ಕಾಜಲ್‌ ಅಗರ್ವಾಲ್‌

ಕಾಜಲ್‌ ಅಗರ್ವಾಲ್‌

ಕಾಜಲ್‌ ಅಗರ್ವಾಲ್‌ ಸಹ ಭಾರತದ ಸಿನಿಮಾ ನಟಿ ಹಾಗೂ ಮಾಡೆಲಿಂಗ್ ಬೆಡಗಿ. ಇವರು ಪ್ರಾಥಮಿಕವಾಗಿ ತೆಲುಗು ಮತ್ತು ತಮಿಳು ಸಿನಿಮಾ ಕ್ಷೇತ್ರದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ಇವರು ಟಾಪ್‌ 8 ನೇ ಶ್ರೇಣಿಯಲ್ಲಿ ಗೂಗಲ್‌ ಸರ್ಚ್‌ನಲ್ಲಿ ಹುಡುಕಾಡಲ್ಪಟ್ಟಿದ್ದಾರೆ.

ಅಲಿಯಾ ಭಟ್‌

ಅಲಿಯಾ ಭಟ್‌

ಟಾಪ್‌ 9ನೇ ಸ್ಥಾನದಲ್ಲಿ ಬಾಲಿವುಡ್‌ನ ಸಿನಿಮ ನಟಿ ಅಲಿಯಾ ಭಟ್‌ ಗೂಗಲ್‌ ಸರ್ಚ್‌ನಲ್ಲಿ ಹುಡುಕಾಡಲ್ಪಟ್ಟಿದ್ದಾರೆ.

ನರೇಂದ್ರ ಮೋದಿ

ನರೇಂದ್ರ ಮೋದಿ

ಭಾರತದ ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಿ ಗೂಗಲ್‌ ಸರ್ಚ್‌ನಲ್ಲಿ ಟಾಪ್‌ ಹುಡುಕಾಡಿದ ವ್ಯಕ್ತಿಗಳಲ್ಲಿ ಯಾಕೋ ಏನೋ 10ನೇ ಸ್ಥಾನದಲ್ಲಿದ್ದಾರೆ.

Most Read Articles
Best Mobiles in India

English summary
The 'most searched' for people in India list was topped by Sunny Leone, for the second consecutive time this year. This was followed by others including Salman Khan, APJ Abdul Kalam, Katrina Kaif, and Deepika Padukone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X