ಸೆಟ್ ಅಪ್ ಬಾಕ್ಸ್ ಬದಲಾಯಿಸದೇ ಕೇಬಲ್/ಡಿಟಿಹೆಚ್ ಆಪರೇಟರ್ ನ್ನು ಬದಲಾಯಿಸಿಕೊಳ್ಳಿ

By Gizbot Bureau
|

ಎಷ್ಟು ಸಾಧ್ಯವೋ ಅಷ್ಟು ಬೇಗ ಹೊಸ ನಿಯಮಾವಳಿಗಳ ಅನುಸಾರದ ಸೇವೆಯನ್ನು ಅಳವಡಿಸಬೇಕು ಎಂದು ಎಲ್ಲಾ ಡಿಟಿಹೆಚ್ ಆಪರೇಟರ್ ಮತ್ತು ಕೇಬಲ್ ಕಂಪೆನಿಗಳಿಗೆ ಟ್ರಾಯ್ ಸ್ಪಷ್ಟವಾಗಿ ತಿಳಿಸಿದೆ.

ಈ ಹೊಸ ನಿಯಮದಿಂದ ಗ್ರಾಹಕರು ಹೇಗೆ ಲಾಭವನ್ನು ಗಳಿಸುತ್ತಾರೆ?

ಟ್ರಾಯ್: ಇಂಟರ್ಪೊಟೆಬಿಲಿಟಿಯನ್ನು ಇದೀಗ ಅಳವಡಿಸಬೇಕಾಗಿದೆ

ಟ್ರಾಯ್: ಇಂಟರ್ಪೊಟೆಬಿಲಿಟಿಯನ್ನು ಇದೀಗ ಅಳವಡಿಸಬೇಕಾಗಿದೆ

ಟ್ರಾಯ್ ಚೇರ್ ಮೆನ್ ಆಗಿರುವ ಆರ್ ಎಸ್ ಶರ್ಮಾ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿರುವಂತೆ ಎಲ್ಲಾ ಡಿಟಿಹೆಚ್ ಮತ್ತು ಕೇಬಲ್ ಸೇವೆಯವರು ಹೊಸ ನಿಮಯವಾಳಿಗಳನ್ನು ಅಳವಡಿಸಿ ಇಂಟರ್ಪೊಟೆಬಿಲಿಟಿಯನ್ನು ಜಾರಿಗೆ ತರುವುದಕ್ಕೆ ಬಹಳ ಶ್ರಮಿಸುತ್ತಿದ್ದಾರೆ ಎಂದಿದ್ದಾರೆ. ಅಂದರೆ ಪರೋಕ್ಷವಾಗಿ ಈ ವರ್ಷಾಂತ್ಯದ ಒಳಗೆ ಎಲ್ಲಾ ಡಿಟಿಹೆಚ್ ಮತ್ತು ಕೇಬಲ್ ಆಪರೇಟರ್ ಗಳು ಇದನ್ನು ಅಳವಡಿಸಬೇಕು ಎಂಬ ಖಡಕ್ ಸಂದೇಶ ನೀಡಿದ್ದಾರೆ. ಕೆಲವು ತಾಂತ್ರಿಕ ದೋಷಗಳಿದ್ದು ಅವುಗಳನ್ನು ಈ ವರ್ಷಾಂತ್ಯದ ಒಳಗೆ ಪರಿಹರಿಸಲಾಗುವುದು ಎಂದಿದ್ದಾರೆ.

ಸಣ್ಣಪುಟ್ಟ ತೊಂದರೆಗಳು ವರ್ಷಾಂತ್ಯದೊಳಗೆ ನಿವಾರಣೆ:

ಸಣ್ಣಪುಟ್ಟ ತೊಂದರೆಗಳು ವರ್ಷಾಂತ್ಯದೊಳಗೆ ನಿವಾರಣೆ:

ಕಳೆದ ಎರಡು ವರ್ಷಗಳಿಂದ ಎಸ್ ಟಿಬಿಯನ್ನು ಪರಸ್ಪರ ಕಾರ್ಯಗತಗೊಳಿಸುವುದಕ್ಕೆ ಶ್ರಮಿಸಲಾಗುತ್ತಿದ್ದು ದೊಡ್ಡ ಮಟ್ಟದ ಸಮಸ್ಯೆಗಳನ್ನೆಲ್ಲ ನಿವಾರಿಸಲಾಗಿದೆ. ಇನ್ನು ವ್ಯಾಪಾರಕ್ಕೆ ಸಂಬಂಧಿಸಿದ ಕೆಲವು ಸವಾಲುಗಳಿದ್ದು ಅದನ್ನು ಈ ವರ್ಷದ ಅಂತ್ಯದೊಳಗೆ ಪರಿಹರಿಸಲಾಗುತ್ತದೆ ಎಂದು ಹೇಳಲಾಗಿದೆ. ಆಧಾರ್ ಓಪಲ್ ಸೋರ್ಸ್ ಸಿಸ್ಟಮ್ ಮತ್ತು ಮೊಬೈಲ್ ಇಂಟರ್ಪೊಲೆಬಿಲಿಟಿ ಗಳನ್ನು ಅವರು ಉದಾಹರಿಸುತ್ತಾ, ಕೇಬಲ್ ಟಿವಿ ಬಳಕೆದಾರರು ಇದನ್ನು ವಿರೋಧಿಸದೇ ಅಭಿವೃದ್ಧಿಯ ಭಾಗವೆಂದು ಪರಿಗಣಿಸಬೇಕು ಎಂದು ಅವರು ಹೇಳಿದ್ದಾರೆ. ತೆರದ ಸಿಸ್ಟಮ್ ಭವಿಷ್ಯದಲ್ಲಿರುತ್ತದೆ.

ಸೆಟ್ ಅಪ್ ಬಾಕ್ಸ್ ಬದಲಾಯಿಸದೇ ಕೇಬಲ್ , ಡಿಟಿಹೆಚ್ ಆಪರೇಟರ್ ಗೆ ಸ್ವಿಚ್ ಆಗುವುದಕ್ಕೆ ಸಾಧ್ಯವೇ?

ಸೆಟ್ ಅಪ್ ಬಾಕ್ಸ್ ಬದಲಾಯಿಸದೇ ಕೇಬಲ್ , ಡಿಟಿಹೆಚ್ ಆಪರೇಟರ್ ಗೆ ಸ್ವಿಚ್ ಆಗುವುದಕ್ಕೆ ಸಾಧ್ಯವೇ?

2017 ರಲ್ಲಿ ಭಾರತದಾದ್ಯಂತ ಟ್ರಾಯ್ ಕೆಲವು ಗೈಡ್ ಲೈನ್ ಗಳನ್ನು ಸೆಟ್ ಅಪ್ ಬಾಕ್ಸ್ ಇಂಟರ್ಪೊಲೆಬಿಲಿಟಿಗಾಗಿ ಪ್ರಕಟಿಸಿತ್ತು. ಟ್ರಾಯ್ ಚೇರ್ ಮೆನ್ ಸುಧೀರ್ ಗುಪ್ತಾ ಆದಷ್ಟು ಬೇಗ ಇದನ್ನು ಅಳಡಿಸುವಂತೆಯೂ ಹೇಳಿದ್ದರು.

ಹೊಸ ಸೆಟ್ ಬಾಕ್ಸ್ ಪ್ರತಿಬಾರಿ ಖರೀದಿಸುವ ಅಗತ್ಯವಿಲ್ಲ:

ಹೊಸ ಸೆಟ್ ಬಾಕ್ಸ್ ಪ್ರತಿಬಾರಿ ಖರೀದಿಸುವ ಅಗತ್ಯವಿಲ್ಲ:

ಆದರೆ ಇದು ಇದುವರೆಗೂ ಜಾರಿಗೆ ಬರದೆ ಒಂದು ವೇಳೆ ಗ್ರಾಹಕ ಡಿಟಿಹೆಚ್ ಪ್ರೊವೈಡರ್ ನ್ನು ಅಥವಾ ಕೇಬಲ್ ಕಂಪೆನಿಯನ್ನು ಬದಲಾಯಿಸಿದರೆ ಆಗ ಹೊಸ ಸೆಟ್ ಅಪ್ ಬಾಕ್ಸ್ ಖರೀದಿಸಬೇಕಾಗಿರುವ ಅನಿವಾರ್ಯತೆ ಇದೆ.

ಒಮ್ಮೆ ಡಿಟಿಹೆಚ್ ಸೇವೆಗಳ ಈ ಇಂಟರ್ಪೊಲೆಬಿಟಿ ಜಾರಿಗೆ ಬಂದರೆ ಗ್ರಾಹಕರಿಗೆ ಸಾಕಷ್ಟು ತೊಂದರೆಯನ್ನು ನಿವಾರಿಸುತ್ತದೆ ಮತ್ತು ಹೆಚ್ಚು ಕಂಟ್ರೋಲ್ ಮತ್ತು ಫ್ಲೆಕ್ಸಿಬ್ಲಿಟಿ ಸಿಕ್ಕಂತಾಗುತ್ತದೆ.

ಹೆಚ್ಚುವರಿ ಶುಲ್ಕಕ್ಕೆ ಕಡಿವಾಣ:

ಹೆಚ್ಚುವರಿ ಶುಲ್ಕಕ್ಕೆ ಕಡಿವಾಣ:

ಹೊಸ ಕೇಬಲ್ ಟಿವಿ ನಿಯಮಾವಳಿಗಳ ಅಡಿಯಲ್ಲಿ ಟ್ರಾಯ್ ಅದಾಗಲೇ ಇದನ್ನು ಖಡ್ಡಾಯಗೊಳಿಸಿದ್ದು ಗ್ರಾಹಕರು ತಮ್ಮದೇ ಸ್ವಂತ ಸೆಟ್ ಅಪ್ ಬಾಕ್ಸ್ ಖರೀದಿಸುವುದಕ್ಕೆ ಅವಕಾಶವಿದೆ ಮತ್ತು ಕಡ್ಡಾಯವಾಗಿ ಕೇಬಲ್ ಆಪರೇಟರ್ ಗಳು ಹೇರುವ ಹೆಚ್ಚುವರಿ ಶುಲ್ಕವನ್ನು ಕಡಿತಗೊಳಿಸಿಕೊಳ್ಳಲು ಅವಕಾಶವಿರುತ್ತದೆ. ಆದರೆ ಅದಕ್ಕಾಗಿ ಓಪನ್ ಸೋರ್ಸ್ ಆಧಾರಿತ ಸೆಟ್ ಅಪ್ ಬಾಕ್ಸ್ ನ ಆಗತ್ಯವಿರುತ್ತದೆ. ಅದೇ ಕಾರಣಕ್ಕೆ ಇಂಟರ್ಪೊಲೆಬಿಲಿಟಿ ಬಹಳ ಮುಖ್ಯವಾಗಿದೆ.

ಕೇಬಲ್ ವೆಚ್ಚಗಳ ಉಳಿತಾಯ:

ಕೇಬಲ್ ವೆಚ್ಚಗಳ ಉಳಿತಾಯ:

ಎಪ್ರಿಲ್ 1,2019 ರಿಂದ ಹೊಸ ಕೇಬಲ್ ಟಿವಿ ಆಡಳಿತ ಜಾರಿಗೆ ಬರುತ್ತದೆ ಮತ್ತು ಇದರಿಂದ ಕೇಬಲ್ ಟಿವಿಯ ವೆಚ್ಚಗಳು ಬಹುಪಾಲು ಉಳಿತಾಯವಾಗುತ್ತದೆ. ನಿಮಗೆ ಇಷ್ಟವಿರುವ ಚಾನಲ್ ಗಳನ್ನು ಮಾತ್ರವೇ ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶವಿರುವುದರಿಂದಾಗಿ ಕೇಬಲ್ ಟಿವಿ ವೆಚ್ಚವು ನನ್ನ ಮನೆಯಲ್ಲಿ 700 ರುಪಾಯಿಯಿಂದ 236 ರುಪಾಯಿಗೆ ಇಳಿದಿದೆ ಎಂದು ತಮ್ಮ ಮನೆಯದ್ದೇ ಉದಾಹರಣೆ ನೀಡಿದ್ದಾರೆ ಟ್ರಾಯ್ ಅಧ್ಯಕ್ಷರಾಗಿರುವ ಆರ್ ಎಸ್ ಶರ್ಮಾ.

ದೂರು ದಾಖಲಿಸಲು ಅವಕಾಶ:

ದೂರು ದಾಖಲಿಸಲು ಅವಕಾಶ:

ಶೇಕಡಾ 90 ರಷ್ಟು ಮಂದಿ 50 ಚಾನಲ್ ಗಳಿಗಿಂತಲೂ ಕಡಿಮೆ ಚಾನಲ್ ಗಳನ್ನು ಪ್ರತಿದಿನ ವೀಕ್ಷಣೆ ಮಾಡುತ್ತಾರೆ ಎಂದು ಅವರು ತಿಳಿಸಿದ್ದಾರೆ. ಹೊಸ ನಿಯಮಾವಳಿಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಅಥವಾ ಕೇಬಲ್ ಆಪರೇಟರ್ ಗಳಿಂದ ಒತ್ತಡಗಳು ನಡೆದಲ್ಲಿ ಗ್ರಾಹಕರು ದೂರು ಕೂಡ ದಾಖಲಿಸಬಹುದು ಎಂದು ಅವರು ತಿಳಿಸಿದ್ದಾರೆ.

Best Mobiles in India

Read more about:
English summary
Switch Your DTH/Cable Operator Without Changing Set Top Box – TRAI

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X