ಡಿಜಿಟಲ್‌ ಕ್ಯಾಮೆರಾ ಮೋಡಿ :ಕ್ಲಿಕ್ ಮಾಡಿ ನೋಡಿ ಪುಸ್ತಕ ಲೋಕಾರ್ಪ‌ಣೆ

By Ashwath
|

ಛಾಯಾಗ್ರಹಣದ ಸ್ವರೂಪವನ್ನೇ ಬದಲಿಸಿರುವ ಡಿಜಿಟಲ್ ಕ್ಯಾಮೆರಾಗಳು ನಮ್ಮ ಮುಂದಿಡುವ ಸಾಧ್ಯತೆಗಳು ಅಸಂಖ್ಯ. ಅವುಗಳಲ್ಲಿ ಕೆಲವನ್ನು ಪರಿಚಯಿಸುವ ಟಿ.ಜಿ.ಶ್ರೀನಿಧಿಯವರು ಬರೆದಿರುವ ನವಕರ್ನಾಟಕ ಪ್ರಕಾಶನದವರು ಹೊರತಂದ ಕೃತಿ‘ ಡಿಜಿಟಲ್ ಕ್ಯಾಮೆರಾ ಮೋಡಿ - ಕ್ಲಿಕ್ ಮಾಡಿ ನೋಡಿ'ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ.

ಟಿ.ಜಿ.ಶ್ರೀನಿಧಿ ಬರೆದಿರುವ ಈ ಕೃತಿ ಛಾಯಾಗ್ರಹಣ ನಡೆದುಬಂದ ದಾರಿಯ ಪರಿಚಯದಿಂದ ಡಿಜಿಟಲ್ ಕ್ಯಾಮೆರಾ ತಂತ್ರಜ್ಞಾನದ ಪಕ್ಷಿನೋಟದವರೆಗೆ,ಛಾಯಾಗ್ರಹಣಕ್ಕೆ ಸಂಬಂಧಪಟ್ಟ ಪರಿಕಲ್ಪನೆಗಳ ಪರಿಚಯದಿಂದ ಕ್ಯಾಮೆರಾ ಕೊಳ್ಳುವಾಗ ನೆನಪಿಟ್ಟುಕೊಳ್ಳಬೇಕಾದ ಅಂಶಗಳವರೆಗೆ ಅನೇಕ ವಿಷಯಗಳತ್ತ ಗಮನಹರಿಸುತ್ತದೆ.

ಕ್ಯಾಮೆರಾದ ವಿವಿಧ ವಿಧಗಳು,ಅವುಗಳ ವಿಶೇಷತೆ,ಪಿಕ್ಸಲ್‌,ಮೆಗಾಪಿಕ್ಸೆಲ್‌,ಪಾಯಿಂಟ್ ಅಂಡ್ ಶೂಟ್ ಝೂಮ್,ಅಪರ್ಚ‌ರ್‌,ಡೆಪ್‌ ಆಫ್‌ ಫೀಲ್ಡ್‌,ಶಟರ್‌ ಸ್ಪೀಡ್‌‌,ಸೆನ್ಸಿಟಿವಿಟಿ,ಫೋಕಸ್‌ ಲೆಂತ್‌ ನಂತಹ ಇನ್ನಿತರ ಕ್ಯಾಮೆರಾ ಪರಿಭಾಷಿಕ ಪದಗಳನ್ನು ಸುಲಭವಾಗಿ ಓದುಗರಿಗೆ ಅರ್ಥ‌ವಾಗುವಂತೆ ಫೋಟೋದೊಂದಿಗೆ ವಿವರಿಸಲಾಗಿದೆ.

ಲೆನ್ಸ್ ಉಪಯೋಗ,ಫೋಟೋ ಎಡಿಟಿಂಗ್ ಸುಲಭಸೂತ್ರಗಳು, ಮೆಮೊರಿ ಕಾರ್ಡ್ ಕೈಕೊಟ್ಟಾಗ ನಮ್ಮ ಚಿತ್ರಗಳನ್ನು ಮರಳಿ ಪಡೆಯಲು ಅನುಸರಿಸಬೇಕಾದ ಕ್ರಮಗಳು,ಛಾಯಾಗ್ರಹಣದ ಅನೇಕ ಪರಿಕಲ್ಪನೆಗಳನ್ನು ಸ್ಪಷ್ಟಪಡಿಸುವ ಉದಾಹರಣೆಗಳು- ಹೀಗೆ ಇನ್ನೂ ಹಲವಾರು ಅಂಶಗಳು ಈ ಕೃತಿಯಲ್ಲಿವೆ. ವಿವಿಧ ಬಗೆಯ ಕ್ಯಾಮೆರಾಗಳಷ್ಟೇ ಅಲ್ಲದೆ ಎಚ್‍ಡಿ,ಥ್ರೀಡಿ ಮುಂತಾದ ತಂತ್ರಜ್ಞಾನಗಳನ್ನೂ ಈ ಕೃತಿ ಪರಿಚಯಿಸುತ್ತದೆ.ದೊಡ್ಡಗಾತ್ರದ(1/4 ಡೆಮಿ)175 ರೂ ಬೆಲೆಯಿರುವ ಈ ಕೃತಿಯ ಎಲ್ಲ ಪುಟಗಳೂ ಬಹುವರ್ಣದಲ್ಲಿ ಮುದ್ರಿತವಾಗಿವೆ.ಜೊತೆಗೆ ಈ ಕೃತಿಯ ಪುಟವನ್ನು ಸ್ವತಃ ಶ್ರೀನಿಧಿಯವರೇ ವಿನ್ಯಾಸ ಮಾಡಿದ್ದಾರೆ.

ಫೋಟೋಗ್ರಫಿಯ ಬಗ್ಗೆ ತಿಳಿದುಕೊಳ್ಳವವರಿಗೆ ಮತ್ತು ಆರಂಭದಲ್ಲಿ ಫೋಟೋಗ್ರಫಿ ಹವ್ಯಾಸವನ್ನು ಬೆಳೆಸಿಕೊಳ್ಳುವವರಿಗೆ ಈ ಕೃತಿಯು ಮಾಹಿತಿಪೂರ್ಣ‌ ಕೈಪಿಡಿ ಎಂದರೆ ತಪ್ಪಾಗಲಾರದು.

ಟಿ. ಜಿ. ಶ್ರೀನಿಧಿ:
ಮೈಸೂರಿನ ಜಯಚಾಮರಾಜೇಂದ್ರ ಕಾಲೇಜಿನಿಂದ ಬಿ.ಇ. ಪದವಿ ಹಾಗೂ ಬಿಟ್ಸ್ ಪಿಲಾನಿಯಿಂದ ಎಂ.ಎಸ್.ಸ್ನಾತಕೋತ್ತರ ಪದವಿ.ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಸಾಫ್ಟ್‌‌ವೇರ್‌ ತಂತ್ರಜ್ಞನಾಗಿ ಉದ್ಯೋಗ.ವಿಜ್ಞಾನ ತಂತ್ರಜ್ಞಾನ ಬರವಣಿಗೆ ಅಚ್ಚುಮೆಚ್ಚಿನ ಹವ್ಯಾಸ.ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಈವರೆಗೆ ಐದುನೂರಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ. ಹಲವು ಪತ್ರಿಕೆಗಳಿಗೆ ಅಂಕಣಕಾರನಾಗಿದ್ದೂ ಉಂಟು. ಪುಸ್ತಕಗಳ ಸಾಲಿನಲ್ಲಿ ‘ಕ್ಲಿಕ್ ಮಾಡಿ ನೋಡಿ!' ಹತ್ತನೆಯದು. 2011ರಲ್ಲಿ ಪ್ರಕಟವಾದ ‘ತಿನ್ನಲಾಗದ ಬಿಸ್ಕತ್ತು ನುಂಗಲಾಗದ ಟ್ಯಾಬ್ಲೆಟ್ಟು' ಕೃತಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಶ್ರೇಷ್ಠ ಲೇಖಕ ಪ್ರಶಸ್ತಿ ಬಂದಿದೆ.

ಭಾರತೀಯ ಭಾಷೆಗಳಲ್ಲಿ ಕಂಪ್ಯೂಟಿಂಗ್ ಕ್ಷೇತ್ರದ ಪಿತಾಮಹರೆಂದೇ ಪ್ರಸಿದ್ಧರಾದ ಕೆ.ಪಿ.ರಾವ್‌ ಅವರ ಬಗ್ಗೆ ಇಜ್ಞಾನ.ಕಾಂನ ಶ್ರೀನಿಧಿಯವರು ಬರೆದ ಒಂಭತ್ತನೇ ಪುಸ್ತಕ 'ಕಂಪ್ಯೂಟರ್, ಕನ್ನಡ ಮತ್ತು ಕೆ. ಪಿ. ರಾವ್' ಕೃತಿ ಇದೇ ಏಪ್ರಿಲ್‌ನಲ್ಲಿ ಬಿಡುಗಡೆಯಾಗಿತ್ತು.

ಕಂಪ್ಯೂಟರ್‌, ತಂತ್ರಜ್ಞಾನದ ಬಗ್ಗೆ ಕನ್ನಡದಲ್ಲಿ ತಿಳಿಯುವ ಆಸಕ್ತರಿಗಾಗಿ ಟಿ.ಜಿ.ಶ್ರೀನಿಧಿಯರು ಬರೆದ ಈ ಪುಸ್ತಕದ ಜೊತೆಗೆ ಈ ಹಿಂದೆ ಬಿಡುಗಡೆಯಾದ ಎರಡು ಪುಸ್ತಕಗಳು ಆನ್‌ಲೈನ್‌ ಶಾಪಿಂಗ್‌ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ. ಹೀಗಾಗಿ ಆ ಮೂರು ಪುಸ್ತಕ ಮತ್ತು ನಿನ್ನೆ ನವಕರ್ನಾಟಕ ಪ್ರಕಾಶನದವರು ಹೊರ ತಂದಿರುವ ಐದು ಪುಸ್ತಕಗಳ ಮಾಹಿತಿ ಇಲ್ಲಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

 ಡಿಜಿಟಲ್ ಕ್ಯಾಮೆರಾ ಮೋಡಿ - ಕ್ಲಿಕ್ ಮಾಡಿ ನೋಡಿ

ಡಿಜಿಟಲ್ ಕ್ಯಾಮೆರಾ ಮೋಡಿ - ಕ್ಲಿಕ್ ಮಾಡಿ ನೋಡಿ


ಲೇಖಕರು: ಟಿ.ಜಿ.ಶ್ರೀನಿಧಿ
ಪ್ರಕಾಶಕರು:ನವಕರ್ನಾಟಕ ಪ್ರಕಾಶನ
ರೂ.175 ಬೆಲೆಯಲ್ಲಿ ಫ್ಲಿಪ್‌‌ಕಾರ್ಟ್‌ನಲ್ಲಿಖರೀದಿಸಿ

ರೂ.158 ಬೆಲೆಯಲ್ಲಿ ನವಕರ್ನಾಟಕ ಆನ್‌ಲೈನ್ ಮಳಿಗೆಯಲ್ಲಿ ಖರೀದಿಸಿ

 ತಿನ್ನಲಾಗದ ಬಿಸ್ಕತ್ತು ನುಂಗಲಾಗದ ಟ್ಯಾಬ್ಲೆಟ್ಟು

ತಿನ್ನಲಾಗದ ಬಿಸ್ಕತ್ತು ನುಂಗಲಾಗದ ಟ್ಯಾಬ್ಲೆಟ್ಟು

'ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಶ್ರೇಷ್ಠ ಲೇಖಕ' ಪ್ರಶಸ್ತಿ ಪಡೆದ ಕೃತಿ
ಲೇಖಕರು:ಟಿ.ಜಿ.ಶ್ರೀನಿಧಿ
ಪ್ರಕಾಶಕರು:ಆಕೃತಿ ಪುಸ್ತಕ,ರಾಜಾಜಿನಗರ ಬೆಂಗಳೂರು
ರೂ.85 ಬೆಲೆಯಲ್ಲಿ ಖರೀದಿಸಿ

 ಕಂಪ್ಯೂಟರ್‌ ಪ್ರಪಂಚ

ಕಂಪ್ಯೂಟರ್‌ ಪ್ರಪಂಚ


ಲೇಖಕರು:ಟಿ.ಜಿ.ಶ್ರೀನಿಧಿ
ಪ್ರಕಾಶಕರು:ನವಕರ್ನಾಟಕ ಪ್ರಕಾಶನ
ರೂ.120 ಬೆಲೆಯಲ್ಲಿ ಫ್ಲಿಪ್‌‌ಕಾರ್ಟ್‌ನಲ್ಲಿಖರೀದಿಸಿ

ರೂ.108 ಬೆಲೆಯಲ್ಲಿ ನವಕರ್ನಾಟಕ ಆನ್‌ಲೈನ್ ಮಳಿಗೆಯಲ್ಲಿ ಖರೀದಿಸಿ

 ಕಾಡು ಕಲಿಸುವ ಪಾಠ

ಕಾಡು ಕಲಿಸುವ ಪಾಠ

ಲೇಖಕರು:ಟಿ. ಎಸ್. ಗೋಪಾಲ್
ಪ್ರಕಾಶಕರು: ನವಕರ್ನಾಟಕ ಪ್ರಕಾಶನ
ಬೆಲೆ: 110

 ಭೂಮಿಯ ಟೈಂ ಬಾಂಬ್ : ಜ್ವಾಲಾಮುಖಿ

ಭೂಮಿಯ ಟೈಂ ಬಾಂಬ್ : ಜ್ವಾಲಾಮುಖಿ


ಲೇಖಕರು: ಅನಂತರಾಮು ಟಿ. ಆರ್.
ಪ್ರಕಾಶಕರು: ನವಕರ್ನಾಟಕ ಪ್ರಕಾಶನ
ಬೆಲೆ:150

 ಬಾಲಾಂಕೃತ ಚುಕ್ಕಿ:ಧೂಮಕೇತು

ಬಾಲಾಂಕೃತ ಚುಕ್ಕಿ:ಧೂಮಕೇತು


ಲೇಖಕರು:ಶೈಲಜಾ ಬಿ. ಎಸ್.
ಪ್ರಕಾಶಕರು:ನವಕರ್ನಾಟಕ ಪ್ರಕಾಶನ
ಬೆಲೆ:80

 ಬಲುತ

ಬಲುತ


ಲೇಖಕರು: ದಯಾ ಪವಾರ
ಪ್ರಕಾಶಕರು:ನವಕರ್ನಾಟಕ ಪ್ರಕಾಶನ
ಬೆಲೆ: 125

 ಭಾರತೀಯ ಇತಿಹಾಸದ ವೈಲಕ್ಷಣ್ಯಗಳು

ಭಾರತೀಯ ಇತಿಹಾಸದ ವೈಲಕ್ಷಣ್ಯಗಳು


ಲೇಖಕರು:ಸರ್ದೇಸಾಯಿ ಎಸ್. ಜಿ.
ಪ್ರಕಾಶಕರು:ನವಕರ್ನಾಟಕ ಪ್ರಕಾಶನ
ಬೆಲೆ:75

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X