ಯೂಟ್ಯೂಬ್ ಸಬ್ಸ್ಕ್ರೈಬರ್ ಸಮರದಲ್ಲಿ ಪ್ಯೂಡಿಪೈ ಹಿಂದಿಕ್ಕಿದ T-ಸಿರೀಸ್!

|

ಕಳೆದ 6 ವರ್ಷಗಳಿಂದ ಯೂಟ್ಯೂಬ್‌ನಲ್ಲಿ ನಡೆಯುತ್ತಿದ್ದ ನಂ.1 ಸ್ಥಾನದ ಯುದ್ಧದಲ್ಲಿ ಭಾರತದ ಯೂಟ್ಯೂಬ್ ಚಾನಲ್ ಟಿ-ಸಿರೀಸ್ ಗೆದ್ದಿದೆ. ವಿಶ್ವದಲ್ಲೇ ಅತಿಹೆಚ್ಚು ಯೂಟ್ಯೂಬ್ ಸಬ್ ಸ್ಕ್ರೈಬರ್ ಗಳನ್ನು ಹೊಂದಿರುವ ಚಾನೆಲ್ ಎಂಬ ಹೆಗ್ಗಳಿಕೆ ಹೊಂದಿದ್ದ 'ಪ್ಯೂಡಿಪೈ' ಅನ್ನು ಭಾರತದ ಯೂಟ್ಯೂಬ್ ಚಾನಲ್ ಟಿ-ಸಿರೀಸ್ ಭಾರೀ ಅಂತರದಿಂದ ಹಿಂದಿಕ್ಕಿದೆ. ಜೊತೆಗೆ ಇದೀಗ ವಿಶ್ವದಲ್ಲೇ ಅತಿಹೆಚ್ಚು ಯೂಟ್ಯೂಬ್ ಸಬ್ ಸ್ಕ್ರೈಬರ್ಸ್ ಹೊಂದಿರುವ ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದೆ.

ಹೌದು, ಇದೊಂದು ಯೂಟ್ಯೂಬ್ ಸಬ್ ಸ್ಕ್ರೈಬರ್ ಸಮರದ ಇಂಟರೆಸ್ಟಿಂಗ್ ಕಥೆಯಾಗಿದ್ದು, ಇಲ್ಲಿಯವರೆಗೂ ವಿಶ್ವದಲ್ಲೇ ಅತೀ ಹೆಚ್ಚು ಯೂಟ್ಯೂಬ್ ಸಬ್ ಸ್ಕ್ರೈಬರ್ ಗಳನ್ನು ಸ್ವೀಡನ್ ಮೂಲದ ಯೂ-ಟ್ಯೂಬರ್ ಓರ್ವ ಪಡೆದುಕೊಂಡಿದ್ದನು. ಕಳೆದ 6 ವರ್ಷಗಳಿಂದಲೂ ಈತನಿಗೆ ಭಾರತೀಯ ಮ್ಯೂಸಿಕ್ ಕಂಪೆನಿ ಟಿ-ಸಿರೀಸ್ ಸ್ಪರ್ಧೆ ನೀಡುತ್ತಿತ್ತು. ಆದರೆ, ಇದೀಗ 'ಪ್ಯೂಡಿಪೈ' ಅನ್ನು ಭಾರತದ ಟಿ-ಸಿರೀಸ್ ಹಿಂದಿಕ್ಕಿದ್ದು, 'ಪ್ಯೂಡಿಪೈ'ಗಿಂತ ಹೆಚ್ಚು ಸಬ್ ಸ್ಕ್ರೈಬರ್ ಪಡೆದು ನಂ.1 ಸ್ಥಾನವನ್ನು ಪಡೆದುಕೊಂಡಿದೆ.

ಯೂಟ್ಯೂಬ್ ಸಬ್ಸ್ಕ್ರೈಬರ್ ಸಮರದಲ್ಲಿ ಪ್ಯೂಡಿಪೈ ಹಿಂದಿಕ್ಕಿದ T-ಸಿರೀಸ್!

ಪ್ರಸ್ತುತ ಪ್ಯೂಡಿಪೈ ಯೂಟ್ಯೂಬ್‌ನಲ್ಲಿ 9,04,89,284 ಜನ ಸಬ್ ಸ್ಕ್ರೈಬರ್ಸ್ ಗಳನ್ನು ಹೊಂದ್ದರೆ, ಭಾರತದ ಟಿ-ಸಿರೀಸ್ ಚಾನಲ್ 9,05,21,900 ಜನ ಸಬ್ ಸ್ಕ್ರೈಬರ್ಸ್ ಗಳನ್ನು ಹೊಂದಿದೆ. (ಲೇಖನ ಬರೆಯುವ ವೇಳೆಗೆ) ವಿಶ್ವದ ಜನಪ್ರಿಯ ವಿಡಿಯೋ ಸ್ಟ್ರೀಮರ್ ಯೂ-ಟ್ಯೂಬ್ ನಲ್ಲಿ ಅತೀ ಹೆಚ್ಚು ಸಬ್ ಸ್ಕ್ರೈಬರ್ ಗಳನ್ನು ಹೊಂದಿದವರ ನಡುವಿನ ಜಿದ್ದಾಜಿದ್ದಿನಲ್ಲಿ 'ಪ್ಯೂಡಿಪೈ'ಗಿಂತ ಟಿ-ಸಿರೀಸ್ ಈಗಾಗಲೇ 32,000 ಕ್ಕಿಂತ ಹೆಚ್ಚು ಸಬ್ ಸ್ಕ್ರೈಬರ್ಸ್ ಲೀಡ್ ಪಡೆದಿದೆ.

ಭೂಷಣ್ ಕುಮಾರ್ ಮಾಲಿಕತ್ವದ ಟಿ-ಸಿರೀಸ್ 1980ರಿಂದಲೂ ಭಾರತದಲ್ಲಿ ಚಿರಪರಿಚಿತವಾಗಿದೆ. ಇನ್ನು ಸ್ವೀಡನ್ ಮೂಲದ ಫೆಲಿಕ್ಸ್ ಅರ್ವಿಡ್ ಉಲ್ಫ್ ಝೆಲ್ಬರ್ಗ್ ಯೂ-ಟ್ಯೂಬ್ ನಲ್ಲಿ ತನ್ನ ಹಾಸ್ಯದ ವಿಡಿಯೋಗಳಿಂದ ಹೆಸರುವಾಸಿಯಾಗಿದ್ದು ಅಂತರ್ಜಾಲ ವಲಯದಲ್ಲಿ 'ಪ್ಯೂಡಿಪೈ' ಎಂದೇ ಕರೆಸಿಕೊಳ್ಳುತ್ತಿದ್ದಾನೆ. ಮೊದಲಿನಿಂದಲೂ ಯೂಟ್ಯೂಬ್‌ನಲ್ಲಿ ಭಾರೀ ಹೆಸರು ಗಳಿಸಿದ್ದ ಫೆಲಿಕ್ಸ್ ಅರ್ವಿಡ್ ಉಲ್ಫ್ ಝೆಲ್ಬರ್ಗ್ ಇದೀಗ ತನ್ನ ಸ್ಥಾನವನ್ನು ಬಿಟ್ಟುಕೊಟ್ಟಿದ್ದಾನೆ.

ಯೂಟ್ಯೂಬ್ ಸಬ್ಸ್ಕ್ರೈಬರ್ ಸಮರದಲ್ಲಿ ಪ್ಯೂಡಿಪೈ ಹಿಂದಿಕ್ಕಿದ T-ಸಿರೀಸ್!

ಕಳೆದ ಫೆಬ್ರವರಿ ತಿಂಗಳಿನಲ್ಲೇ 'ಪ್ಯೂಡಿಪೈ' ಅನ್ನು ಟಿ-ಸಿರೀಸ್ ಹಿಂದಿಕ್ಕಿತ್ತು. ಈ ಸಬ್ ಸ್ಕ್ರೈಬರ್ ಸಮರದಲ್ಲಿ ಪ್ಯೂಡಿಪೈ ಚಾನೆಲನ್ನು ಹಿಂದಿಕ್ಕಿ ವಿಶ್ವದ ನಂಬರ್ 1 ಯೂಟ್ಯೂಬ್ ಸಬ್ ಸ್ಕ್ರೈಬರ್ ಚಾನೆಲ್ ಎಂದು ಗುರುತಿಸಿಕೊಂಡಿತು. ಆದರೆ ವಿಷಾದವೆಂದರೆ ಈ ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ. ಕೇವಲ 8 ನಿಮಿಷಗಳ ಕಾಲ ಮಾತ್ರ ಟಿ ಸಿರಿಸ್ ಗ್ ಈ ನಂಬರ್ 1 ಪಟ್ಟ ಲಭ್ಯವಾಗಿತ್ತು. ಆದರೆ, ಇದೀಗ 32,000 ಕ್ಕಿಂತ ಹೆಚ್ಚು ಸಬ್ ಸ್ಕ್ರೈಬರ್ಸ್ ಲೀಡ್ ಪಡೆದು ತಾನೇ ದಿಗ್ಗಜ ಎಂಬುದನ್ನು ತೋರಿಸಿಕೊಟ್ಟಿದೆ.

Most Read Articles
Best Mobiles in India

English summary
T-Series Finally Overtakes PewDiePie to Become the Biggest YouTube Channel. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X