Subscribe to Gizbot

ಟಾಟಾ ಡೊಕೊಮೊ ಬಳಕೆದಾರರಿಗೆ ಬಂಪರ್ ಕೊಡುಗೆ

Posted By:

ನೀವು ಟಾಟಾ ಡೊಕೊಮೊಗೆ ಚಂದಾದಾರರಾಗಿ ಯೂಟ್ಯೂಬ್ ಮೂಲಕ ವೀಡಿಯೋವನ್ನು ವೀಕ್ಷಿಸುತ್ತಿದ್ದೀರಿ ಎಂದಾದಲ್ಲಿ ನಿಮಗೊಂದು ಸಂತಸಕರ ಸುದ್ದಿ ಇದೆ. ವರದಿಗಳ ಪ್ರಕಾರ, ಜನಪ್ರಿಯ ವೀಡಿಯೋ ಸೈಟ್ ಆದ ಯೂಟ್ಯೂಬ್ ಟಾಟಾ ಡೊಕೊಮೊದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಇದಕ್ಕನುಸಾರವಾಗಿ ಪ್ರೀಪೇಯ್ಡ್ ಬಳಕೆದಾರರು ಆನ್‌ಲೈನ್ ವೀಡಿಯೋಗಳನ್ನು 3ಜಿ ನಲ್ಲಿ ರೂಪಾಯಿ 9 ಅನ್ನು ಪಾವತಿಸಿ ವೀಕ್ಷಿಸಬಹುದಾಗಿದೆ.

ಬಳಕೆದಾರರು 100 ಎಮ್‌ನಷ್ಟು ವೀಡಿಯೋಗಳನ್ನು 9 ರೂಗಳಲ್ಲಿ ವೀಕ್ಷಿಸಬಹುದಾಗಿದ್ದು, ಇದರೊಂದಿಗೆ ಅಪಲ್ಯಾರ ಲೈವ್ ಟಿವಿ ಸ್ಟ್ರೀಮಿಂಗ್ ಸೇವೆಯನ್ನು ಕೂಡ ಪಡೆಯಬಹುದಾಗಿದೆ. ಇಷ್ಟಲ್ಲದೆ ರೂ 19 ಅನ್ನು ಪಾವತಿಸಿ 150 ಎಮ್‌ಬಿಗೆ ಪ್ರವೇಶ ಪಡೆದುಕೊಂಡಲ್ಲಿ ಹೆಚ್ಚಿನದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ರೂ .9 ಕ್ಕೆ ವೀಡಿಯೋ ವೀಕ್ಷಿಸುವ ಅದ್ಭುತ ಆಫರ್

ಹಿಂದೆ ಘೋಷಿಸಿದಂತೆ, ಯೂಟ್ಯೂಬ್, ಅಪಲ್ಯಾ ತಂತ್ರಜ್ಞಾನ ಮತ್ತು ಟಾಟಾ ಡೊಕೊಮೊ ಹೊಸ ವೀಡಿಯೋ ಯೋಜನೆಯಾದ 'ಯೂಟ್ಯೂಬ್ ರೀಚಾರ್ಜ್' ಎಂಬ ಹೊಸ ವೀಡಿಯೋ ಡೇಟಾ ಯೋಜನೆಯನ್ನು ಪ್ರಸ್ತುತಪಡಿಸಿದ್ದು ಇದು ವೀಡಿಯೋಗಳನ್ನು ವೀಕ್ಷಿಸಲು ನಿಯಮಿತ ಡೇಟಾ ಯೋಜನೆಗಳಿಂದ ಬಳಕೆದಾರರಿಗೆ ಶೇಕಡಾ 50 ರಷ್ಟು ವಿನಾಯಿತಿಯನ್ನು ನೀಡುತ್ತದೆ.

ದೇಶದಲ್ಲಿರುವ ಹೆಚ್ಚಿನ ಗ್ರಾಹಕರು ಅಂತರ್ಜಾಲವನ್ನು ಮೊಬೈಲ್‌ನಲ್ಲಿ ಬಳಸುತ್ತಿದ್ದು ಇದು ಗ್ರಾಹಕರಿಗೆ ವೀಡಿಯೋ ವಿಷಯವನ್ನು ಒದಗಿಸುವ ನಮ್ಮ ಪ್ರಯತ್ನದ ಒಂದು ಭಾಗವಾಗಿದೆ ಮತ್ತು ಭಾರತದಲ್ಲಿ ಈ ರೀತಿಯ ಪಾಲುದಾರಿಕೆ ಇದೇ ಮೊದಲ ಬಾರಿಯಾಗಿದೆ ಎಂದು ಎಷ್ಯಾ ಪೆಸಿಫಿಕ್ ಪ್ರಾಂತ್ಯದ ಯೂಟ್ಯೂಬ್ ಡೈರೆಕ್ಟರ್ ಗೌತಮ್ ಆನಂದ್ ಪಿಟಿಐಗೆ ತಿಳಿಸಿದ್ದಾರೆ.

ಮೊಬೈಲ್‌ನಲ್ಲಿ ವೀಡಿಯೋವನ್ನು ವೀಕ್ಷಿಸುವುದು ವೆಚ್ಚದಾಯಕವೆಂದು ಹೆಚ್ಚಿನ ಬಳಕೆದಾರರು ಅಂದುಕೊಂಡಿದ್ದಾರೆ. ಭಾರತವು ದೊಡ್ಡದಾದ ಪ್ರೀಪೈಯ್ಡ್ ಮಾರುಕಟ್ಟೆಯನ್ನು ಹೊಂದಿದೆ ಮತ್ತು ಡೇಟಾ ಸಂಪರ್ಕಕ್ಕೆ ಹೆಚ್ಚಿನ ಜನಸಂಖ್ಯೆಯನ್ನು ಕರೆತರುವುದು ನಮ್ಮ ಉದ್ದೇಶವಾಗಿದೆ ಎಂದು ಟಾಟಾ ಡೊಕೊಮೊ ಮುಖ್ಯಸ್ಥ ಆನಂದ್ ಅಗರ್‌ವಾಲ್ ಅಭಿಪ್ರಾಯಿಸಿದ್ದಾರೆ.

ನಿಮಗಿದು ಇನ್ನೂ ತಿಳಿದಿಲ್ಲವೆಂದಾದಲ್ಲಿ, ದಿನಕ್ಕೆ 8 ರೂಗಳ ದರದಲ್ಲಿ ಟಾಟಾ ಡೊಕೊಮೊ ಈಗಾಗಲೇ 3ಜಿಯನ್ನು ನೀಡುತ್ತಿದೆ. ಮತ್ತು ಈ ಸುದ್ದಿ ಒಪ್ಪಂದವು ಮುಂದಿನ ದಿನಗಳಲ್ಲಿ ಹೆಚ್ಚಿನ ಬಳಕೆದಾರರನ್ನು ಆಕರ್ಷಿಸುವುದು ಖಂಡಿತ.

Read more about:
English summary
This article tells that Tata docomo and youtube set to offer video streaming plan at low price...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot