ಟಾಟಾಪ್ಲೇನಿಂದ 49ರೂ.ಬೆಲೆಯ ಹೊಸ ಬಿಂಜ್ ಸ್ಟಾರ್ಟರ್ ಪ್ಯಾಕ್ ಘೋಷಣೆ!

|

ಟಾಟಾ ಪ್ಲೇ ಎಂದು ಹೆಸರು ಬದಲಾಯಿಸಿಕೊಂಡಿರುವ ಟಾಟಾ ಸ್ಕೈ ತನ್ನ ಗ್ರಾಹಕರಿಗೆ ಇದೀಗ ಹೊಸ ಬಿಂಜ್‌ ಸ್ಟಾರ್ಟರ್‌ ಪ್ಯಾಕ್‌ ಲಾಂಚ್‌ ಮಾಡಿದೆ. ಟಾಟಾ ಪ್ಲೇ ಪರಿಚಯಿಸಿರುವ ಈ ಹೊಸ ಆಫರ್‌ನಲ್ಲಿ ಹಲವಾರು OTT ಚಂದಾದಾರಿಕೆಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ. ಇನ್ನು ಈ ಪ್ಯಾಕ್‌ 49ರೂ. ಬೆಲೆಯನ್ನು ಹೊಂದಿದೆ. ಇದು 30 ದಿನಗಳ ಮಾನ್ಯತೆಯನ್ನು ಹೊಂದಿದ್ದು, ಜೀ5, ಇರೋಸ್‌ನೌ, ಹಂಗಾಮಾ ಮತ್ತು ಶೇಮರೂಮಿಗೆ ಉಚಿತ ಚಂದಾದಾರಿಕೆಯನ್ನು ನೀಡಲಿದೆ.

ಟಾಟಾ ಪ್ಲೇ

ಹೌದು, ಟಾಟಾ ಪ್ಲೇ ತನ್ನ ಗ್ರಾಹಕರಿಗೆ 49ರೂ.ಬೆಲೆಯ ಹೊಸ ಬಿಂಜ್‌ ಸ್ಟಾರ್ಟರ್‌ ಪ್ಯಾಕ್‌ ಲಾಂಚ್‌ ಮಾಡಿದೆ. ಇದರಲ್ಲಿ ನೀವು ಹಲವು ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ಪಡದುಕೊಳ್ಳಬಹುದಾಗಿದೆ. ಒಂದು ವೇಳೆ ನಿಮಗೆ ಹೊಸ ಬಿಂಜ್ ಸ್ಟಾರ್ಟರ್ ಪ್ಯಾಕ್ ನಿಮ್ಮ ಮೌಲ್ಯಕ್ಕೆ ಯೋಗ್ಯವಾಗಿದೆಯೇ ಎಂದು ನೋಡಲು ನೀವು ಏಳು ದಿನಗಳ ಟ್ರಯಲ್‌ ಸಹ ತೆಗೆದುಕೊಳ್ಳಬಹುದಾಗಿದೆ. ಹಾಗಾದ್ರೆ 49ರೂ.ಬೆಲೆಯ ಹೊಸ ಬಿಂಜ್ ಸ್ಟಾರ್ಟರ್‌ ಪ್ಯಾಕ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟಾಟಾ ಪ್ಲೇ

ಟಾಟಾ ಪ್ಲೇ ಪರಿಚಯಿಸಿರುವ ಹೊಸ ಪ್ಲಾನ್‌ ಟ್ರಯಲ್‌ ಜೊತೆಗೆ, ಬಳಕೆದಾರರಿಗೆ ಮೂರು ಮೊಬೈಲ್ ಫೋನ್‌ಗಳಲ್ಲಿ ಈ ಯೋಜನೆಯನ್ನು ಬಳಸುವುದಕ್ಕೆ ಅವಕಾಶ ನೀಡುತ್ತದೆ. ಇನ್ನು ಈ ಪ್ಯಾಕ್ ಅನ್ನು ಮೊಬೈಲ್ ಆವೃತ್ತಿಯಲ್ಲಿ ಮಾತ್ರ ಬಳಸಬಹುದಾಗಿದೆ. ಆದ್ದರಿಂದ ಬಳಕೆದಾರರು ಈ ಪ್ಯಾಕ್ ಅನ್ನು ಬಳಸಿಕೊಂಡು ಟಿವಿ ಅಥವಾ ವೆಬ್‌ನಲ್ಲಿ ಕಂಟೆಂಟ್‌ ಅನ್ನು ಸ್ಟ್ರೀಮ್ ಮಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಒಮ್ಮೆ ನೀವು ಈ ಪ್ಲಾನ್‌ ಖರೀದಿಸಿದರೆ, ಗೂಗಲ್‌ ಪ್ಲೇ ಸ್ಟೋರ್‌ನಿಂದ ಟಾಟಾ ಪ್ಲೇ ಬಿಂಜ್‌ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಟಾಟಾ ಪ್ಲೇ ಬಿಂಜ್‌ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿದ ನಂತರ ನೀವು ಆಯಾ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಚಲನಚಿತ್ರಗಳು ಮತ್ತು ಟಿವಿ ಶೋಗಳನ್ನು ಸ್ಟ್ರೀಮ್ ಮಾಡಲು ಸಾಧ್ಯವಾಗುತ್ತದೆ.

ಟಾಟಾ ಪ್ಲೇ

ಇನ್ನು ಟಾಟಾ ಪ್ಲೇ ಈ ವರ್ಷದ ಆರಂಭದಲ್ಲಿ, ನೆಟ್‌ಫ್ಲಿಕ್ಸ್‌ಗೆ ಬೆಂಬಲವನ್ನು ಸೇರಿಸಿತು. ಆದರಿಂದ ಟಾಟಾ ಪ್ಲೇ ಬಳಕೆದಾರರು ನೆಟ್‌ಫ್ಲಿಕ್ಸ್‌, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌, ಅಮೆಜಾನ್‌ ಪ್ರೈಮ್‌, ಸೋನಿಲೈವ್‌, ವೂಟ್‌ ಮತ್ತು ಇತರ ಸೇವೆಗಳಿಂದ ವಿಷಯವನ್ನು ವೀಕ್ಷಿಸಬಹುದಾಗಿದೆ. ಆದಾಗ್ಯೂ, ಈ ಎಲ್ಲಾ OTT ವಿಷಯ ಸೇವೆಗಳನ್ನು ಹೊಸ ಬಿಂಜ್ ಸ್ಟಾರ್ಟರ್ ಪ್ಯಾಕ್‌ನಲ್ಲಿ ಸೇರಿಸಲಾಗಿಲ್ಲ, ಇದು ಬಜೆಟ್ ಪ್ಯಾಕ್ ಆಗಿರುವುದರಿಂದ ಕೆಲವೇ ಕೆಲ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಅವಕಾಶ ನೀಡಲಾಗಿದೆ.

ಟಾಟಾ ಪ್ಲೇ ನೆಟ್‌ಫ್ಲಿಕ್ಸ್‌ ಕಾಂಬೊ ಪ್ಲಾನ್‌ ಡಿಟೆಲ್ಸ್‌

ಇದಲ್ಲದೆ ಟಾಟಾ ಪ್ಲೇ ಬಿಂಜ್ ಕಾಂಬೊ ಪ್ಲಾನ್‌ಗಳು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ಜೀ5, ಸೋನಿ ಲೈವ್, ವೂಟ್‌ ಸೆಲೆಕ್ಟ್‌, ವೂಟ್‌ ಕಿಡ್ಸ್‌, ಎರೋಸ್ ನವ್, ಹಂಗಾಮಾ ಪ್ಲೇ, ಶಮಾರೋ, ಸನ್ ನೆಕ್ಸ್ಟ್‌, ಎಪಿಕ್ ಆನ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ನೆಟ್‌ಫ್ಲಿಕ್ಸ್‌ ಅನ್ನು ಒಳಗೊಂಡಿವೆ.

ಟಾಟಾ ಪ್ಲೇ ನೆಟ್‌ಫ್ಲಿಕ್ಸ್‌ ಕಾಂಬೊ ಪ್ಲಾನ್‌ ಡಿಟೆಲ್ಸ್‌
* ತಿಂಗಳ ಶುಲ್ಕ 809ರೂ: ಒಂದು ಡಿವೈಸ್ 28 ಚಾನೆಲ್‌ಗಳು- ಹಿಂದಿ ಟಿವಿ ಹೆಚ್‌ಡಿ ನೆಟ್‌ಫ್ಲಿಕ್ಸ್‌ ಬೇಸಿಕ್ ಕಾಂಬೊ
* ತಿಂಗಳ ಶುಲ್ಕ 849ರೂ: ಒಂದು ಡಿವೈಸ್ 31 ಹೆಚ್‌ಡಿ ಚಾನೆಲ್‌ಗಳು- ಹಿಂದಿ ಫ್ಯಾಮಿಲಿ ಟಿವಿ ಹೆಚ್‌ಡಿ ಬಿಂಜ್ ನೆಟ್‌ಫ್ಲಿಕ್ಸ್‌ ಬೇಸಿಕ್ ಕಾಂಬೊ
* ತಿಂಗಳ ಶುಲ್ಕ 999ರೂ: ಒಂದು ಡಿವೈಸ್ 55 ಹೆಚ್‌ಡಿ ಚಾನೆಲ್‌ಗಳು- ಪ್ರಿಮಿಯಂ ಟಿವಿ ಹೆಚ್‌ಡಿ ಬಿಂಜ್ ನೆಟ್‌ಫ್ಲಿಕ್ಸ್‌ ಬೇಸಿಕ್ ಕಾಂಬೊ
* ತಿಂಗಳ ಶುಲ್ಕ 1109ರೂ: 2 ಡಿವೈಸ್ ಸಪೋರ್ಟ್‌, 31 HD (1080p) ಚಾನೆಲ್‌ಗಳು- ಹಿಂದಿ ಫ್ಯಾಮಿಲಿ ಟಿವಿ ಹೆಚ್‌ಡಿ ಬಿಂಜ್ ನೆಟ್‌ಫ್ಲಿಕ್ಸ್‌ ಸ್ಟ್ಯಾಂಡರ್ಡ್‌ ಕಾಂಬೊ
* ತಿಂಗಳ ಶುಲ್ಕ 1249ರೂ: 4 ಡಿವೈಸ್ ಸಪೋರ್ಟ್‌, 31 HD (4K) ಚಾನೆಲ್‌ಗಳು- ಹಿಂದಿ ಫ್ಯಾಮಿಲಿ ಟಿವಿ ಹೆಚ್‌ಡಿ ಬಿಂಜ್ ನೆಟ್‌ಫ್ಲಿಕ್ಸ್‌ ಪ್ರಿಮಿಯಂ ಕಾಂಬೊ
* ತಿಂಗಳ ಶುಲ್ಕ 1269ರೂ: 2 ಡಿವೈಸ್ ಸಪೋರ್ಟ್‌, 55 HD (1080p) ಚಾನೆಲ್‌ಗಳು- ಹಿಂದಿ ಫ್ಯಾಮಿಲಿ ಟಿವಿ ಹೆಚ್‌ಡಿ ಬಿಂಜ್ ನೆಟ್‌ಫ್ಲಿಕ್ಸ್‌ ಸ್ಟ್ಯಾಂಡರ್ಡ್‌ ಕಾಂಬೊ
* ತಿಂಗಳ ಶುಲ್ಕ 1399ರೂ: 4 ಡಿವೈಸ್ ಸಪೋರ್ಟ್‌, 55 HD (4K) ಚಾನೆಲ್‌ಗಳು- ಹಿಂದಿ ಫ್ಯಾಮಿಲಿ ಟಿವಿ ಹೆಚ್‌ಡಿ ಬಿಂಜ್ ನೆಟ್‌ಫ್ಲಿಕ್ಸ್‌ ಪ್ರಿಮಿಯಂ ಕಾಂಬೊ

Best Mobiles in India

Read more about:
English summary
Tata Play announced a new Rs 49 Binge Starter pack for its customers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X