ಜಿಯೋ ಗಿಗಾಫೈಬರ್‌ಗೆ ಟಾಟಾ ಸ್ಕೈ ಬ್ರಾಡ್‌ಬ್ಯಾಂಡ್‌ ಸವಾಲ್‌..!

By Gizbot Bureau
|

ವೈರ್ಡ್‌ ಲೈನ್‌ ಬ್ರಾಡ್‌ಬ್ಯಾಂಡ್ ಎಂದ ತಕ್ಷಣ ಸದ್ಯ ನಮ್ಮ ತಲೆಗೆ ಬರುವುದು ACT ಫೈಬರ್‌ನೆಟ್‌, ಏರ್‌ಟೆಲ್, ಬಿಎಸ್‌ಎನ್‌ಎಲ್ನಂತಹ ಕೆಲವೇ ಕೆಲವು ಜನಪ್ರಿಯ ಇಂಟರ್‌ನೆಟ್‌ ಪೂರೈಕೆದಾರರು. ಇದರ ಜೊತೆ ರಿಲಾಯನ್ಸ್‌ ಜಿಯೋ ಕೂಡ ಶೀಘ್ರದಲ್ಲಿಯೇ ಜಿಯೋ ಗಿಗಾಫೈಬರ್‌ನ್ನು ಮಾರುಕಟ್ಟೆಗೆ ತರಲು ಕಾಯುತ್ತಿದೆ. ಇವುಗಳ ಸ್ಪರ್ಧೆ ನಡುವೆ ಪ್ರಮುಖ ಡಿಟಿಹೆಚ್‌ ಆಪರೇಟರ್‌ ಟಾಟಾ ಸ್ಕೈ ಕೂಡ ತನ್ನ ಬ್ರಾಡ್‌ಬ್ಯಾಂಡ್‌ ಕಾರ್ಯಾಚರಣೆ ಪ್ರಾರಂಭಿಸಿರುವುದು ಗೊತ್ತಿರೋ ವಿಷಯ. 14 ನಗರಗಳ ಕಾರ್ಯನಿರ್ವಹಣೆಯನ್ನು ಈಗ 20 ನಗರಗಳಿಗೆ ವಿಸ್ತರಿಸಲಾಗಿದ್ದು, ಹೊಸ ಹೊಸ ಆಫರ್‌ಗಳ ಮೂಲಕ ಬಳಕೆದಾರರನ್ನು ಸೆಳೆಯುತ್ತಿದೆ.

ಏನೇನು ಪ್ಲಾನ್‌ಗಳು..?

ಏನೇನು ಪ್ಲಾನ್‌ಗಳು..?

ನಿಮಗಾಗಿ ಅನೇಕ ಪ್ಲಾನ್‌ಗಳು ಟಾಟಾ ಸ್ಕೈ ಬ್ರಾಡ್‌ಬ್ಯಾಂಡ್‌ನಲ್ಲಿವೆ. ಆರಂಭಿಕ ಹಂತದ ಮಾಸಿಕ ಪ್ಲಾನ್‌ 999 ರೂ. ಗೆ ಲಭ್ಯವಿದ್ದು, 10Mbps ವೇಗದಲ್ಲಿ ಇಂಟರ್‌ನೆಟ್‌ ನೀಡುತ್ತದೆ. ಇನ್ನು, 1,249 ರೂ. ದರದಲ್ಲಿ 50Mbps ವೇಗ, 1,599 ರೂ. ದರದಲ್ಲಿ 100Mbps ವೇಗದ ಇಂಟರ್‌ನೆಟ್‌ ಲಭ್ಯವಿದೆ. ಇದರ ಜೊತೆಗೆ ಸ್ಥಿರ ಇಂಟರ್‌ನೆಟ್‌ ಪ್ಲಾನ್‌ಗಳನ್ನು ಟಾಟಾ ಸ್ಕೈ ನೀಡುತ್ತಿದೆ. ತಿಂಗಳಿಗೆ 999 ರೂ. ಪ್ಲಾನ್‌ನಲ್ಲಿ 50Mbps ವೇಗದಲ್ಲಿ 200GB ಇಂಟರ್‌ನೆಟ್‌ ಬಳಕೆದಾರರಿಗೆ ಸಿಗುತ್ತದೆ.

ರಿಯಾಯಿತಿ ಲಭ್ಯ

ರಿಯಾಯಿತಿ ಲಭ್ಯ

ನೀವು ಆರು ತಿಂಗಳು, ವಾರ್ಷಿಕ ಪ್ಲಾನ್‌ಗಳನ್ನು ಸಬ್‌ಸ್ಕ್ರೈಬ್‌ ಮಾಡಿಕೊಂಡರೆ ರಿಯಾಯಿತಿ ಸಿಗುತ್ತದೆ. 999 ರೂ. ತಿಂಗಳ ಪ್ಲಾನ್‌ನ್ನು 6 ತಿಂಗಳಿಗಾಗಿ ಖರೀದಿಸಿದರೆ ನಿಮಗೆ 600 ರೂ. ರಿಯಾಯಿತಿ ದೊರೆಯುತ್ತದೆ. 5,994 ರೂ. ಪಾವತಿಗೆ ರಿಯಾಯಿತಿ ದೊರೆಯುವುದರಿಂದ 5,395 ರೂ.ಗಳನ್ನು ಪಾವತಿಸಿದರೆ ಸಾಕು. ಅದೇ ರೀತಿ, ವಾರ್ಷಿಕ 11,988 ರೂ.ಗಳ ಬದಲು 10,190 ರೂ. ಪಾವತಿಸಿದರೆ, 1,798 ರೂ. ಉಳಿತಾಯ ಆಗುತ್ತದೆ. ದೀರ್ಘಾವಧಿಯ ಯೋಜನೆಗಳನ್ನು ಮೂರು ತಿಂಗಳು, 6 ತಿಂಗಳು ಮತ್ತು 12 ತಿಂಗಳ ಮಾನ್ಯತೆಯೊಂದಿಗೆ ಖರೀದಿಸಬಹುದು. ಈ ಎಲ್ಲಾ ಯೋಜನೆಗಳು ವರ್ಷಾಂತ್ಯಕ್ಕೆ ಬರುವ ರಿಲಯನ್ಸ್ ಜಿಯೋಗಿಗಾ ಫೈಬರ್‌ಗೆ ಸವಾಲೊಡ್ಡುವುದಂತು ಖಂಡಿತ.

ಎಲ್ಲೆಲ್ಲಿ ಲಭ್ಯ..?

ಎಲ್ಲೆಲ್ಲಿ ಲಭ್ಯ..?

ಟಾಟಾ ಸ್ಕೈನ ಬ್ರಾಡ್‌ಬ್ಯಾಂಡ್‌ ಸೇವೆಯನ್ನು ಅಹಮದಾಬಾದ್, ಬೆಂಗಳೂರು, ಭೋಪಾಲ್, ಚೆನ್ನೈ, ಗಾಜಿಯಾಬಾದ್, ಗುರಗಾಂವ್, ಗ್ರೇಟರ್ ನೋಯ್ಡಾ, ಜೈಪುರ, ಜೋಧ್‌ಪುರ್, ಮುಂಬೈ, ಪುಣೆ ಮತ್ತು ಸೂರತ್‌ನಲ್ಲಿ ಬಳಕೆದಾರರು ಪಡೆಯಬಹುದು.

ಹೆಚ್ಚುವರಿ ಸೇವೆಗಳು

ಹೆಚ್ಚುವರಿ ಸೇವೆಗಳು

ಟಾಟಾ ಸ್ಕೈ ಬ್ರಾಡ್‌ಬ್ಯಾಂಡ್‌ ಖರೀದಿಸಿದರೆ ಹಂಗಾಮಾ ವಿಡಿಯೋ ಪ್ಲಾಟ್‌ಫಾರ್ಮ್‌ ಚಂದಾದಾರಿಕೆಯಲ್ಲಿ ಶೇ.50ರಷ್ಟು ರಿಯಾಯಿತಿ ದೊರೆಯುತ್ತದೆ. ಹಂಗಾಮಾ ನಿಮಗೆ ವಿವಿಧ ಪ್ರಾದೇಶಿಕ ಭಾಷೆಗಳ ನೆಚ್ಚಿನ ಚಲನಚಿತ್ರಗಳು ಮತ್ತು ವಿಡಿಯೋಗಳನ್ನು ವೀಕ್ಷಿಸಲು ಅವಕಾಶ ನೀಡುತ್ತದೆ. ಟಾಟಾ ಸ್ಕೈ ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ನಲ್ಲಿ ಅಪ್ಲಿಕೇಶನ್ ಹೊಂದಿದ್ದು, ನಿಮ್ಮ ಖಾತೆಯನ್ನು ನಿರ್ವಹಿಸಲು ಉಪಯುಕ್ತವಾಗಿದೆ. ಖಾತೆಯ ಸಿಂಧುತ್ವ ಪರಿಶೀಲನೆ ಮತ್ತು ರೀಚಾರ್ಜ್, ಇಂಟರ್‌ನೆಟ್‌ ವೇಗದ ಪರೀಕ್ಷೆ ಹಾಗೂ ಡೇಟಾ ಬಳಕೆಯನ್ನು ಟ್ರ್ಯಾಕ್ ಮಾಡಬಹುದು.

Best Mobiles in India

Read more about:
English summary
Tata Sky BroadBand Announces New Unlimited Plans

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X