ಟಾಟಾ ಸ್ಕೈ ನಿಂದ 6 ಹೊಸ ಪ್ಯಾಕ್ ಗಳ ಬಿಡುಗಡೆ

By Gizbot Bureau
|

ಡಿಟಿಹೆಚ್ ಆಪರೇಟರ್ ಟಾಟಾ ಸ್ಕೈ ಇತ್ತೀಚೆಗೆ ತನ್ನ 12 ದೀರ್ಘಾವಧಿ ಪ್ಲಾನ್ ಗಳನ್ನು ಸ್ಧಗಿತಗೊಳಿಸಿತ್ತು ಮತ್ತು ಇದೀಗ ಹೊಸದಾಗಿ 6 ಹೊಸ ಮಾಸಿಕ ಮತ್ತು ವಾರ್ಷಿಕ ಪ್ಲಾನ್ ಗಳನ್ನು ಬಿಡುಗಡೆಗೊಳಿಸಿದೆ. ಈ ಪ್ಯಾಕ್ ಗಳು ಭಾರತದ ಬೇರೆಬೇರೆ ಪ್ರದೇಶದ ಜನರಿಗೆ ಅನ್ವಯಿಸುವಂತೆ ಸಿದ್ಧಗೊಳಿಸಲಾಗಿದೆ. ಹೊಸದಾಗಿ ಬಿಡುಗಡೆಗೊಂಡಿರುವ ಪ್ಯಾಕ್ ಗಳಲ್ಲಿ ಪಂಜಾಬಿ ಪ್ಯಾಕ್, ಒಂದು ಬೆಂಗಾಳಿ ಪ್ಯಾಕ್ ಮತ್ತು ನಾಲ್ಕು ತಮಿಳು ಪ್ಯಾಕ್ ಗಳು ಸೇರಿವೆ.

ಬೆಂಗಾಳಿ ಬಳಕೆದಾರರಿಗಾಗಿ

ತಮಿಳು ಬಳಕೆದಾರರಿಗಾಗಿ ತಮಿಳು ಲೈಟ್ ಪ್ಲಸ್ ಹೆಚ್ ಡಿ, ತಮಿಳು ಲೈಟ್ ಪ್ಲಸ್ ಎಸ್ ಡಿ, ತಮಿಳು ಲೈಟ್ ನ್ಯೂ ಹೆಚ್ ಡಿ, ತಮಿಳು ಲೈಟ್ ನ್ಯೂ ಎಸ್ ಡಿ ಪ್ಯಾಕ್ ಗಳಿವೆ.

ಬೆಂಗಾಳಿ ಬಳಕೆದಾರರಿಗಾಗಿ ಬೆಂಗಾಳಿ ಲೈಟ್ ಪ್ಲಸ್ ಎಸ್ ಡಿ ಪ್ಯಾಕ್ ಸಿದ್ಧಗೊಳಿಸಲಾಗಿದೆ.ಕೊನೆಯದಾಗಿ ಪಂಜಾಬಿ ಬಳಕೆದಾರರಿಗಾಗಿ ಪಂಜಾಬಿ ಸೂಪರ್ ಪ್ಯಾಕ್ ಎಸ್ ಡಿ ಪ್ಯಾಕ್ ಲಭ್ಯವಿದೆ.

ಕೈಗೆಟುಕುವ ಬೆಲೆಯ ಈ ಪ್ಯಾಕ್ ಎಂದರೆ 199 ರುಪಾಯಿ ಪ್ಯಾಕ್ ಆಗಿದ್ದು ಇದರಲ್ಲಿ 26 ಚಾನಲ್ ಗಳು ಬರುತ್ತವೆ.ದುಬಾರಿ ಮಾಸಿಕ ಪ್ಲಾನ್ ಎಂದರೆ 374.1 ರುಪಾಯಿ ಪ್ಲಾನ್ ಆಗಿದೆ. ಈ ಮಾಸಿಕ ಚಾರ್ಜ್ ಗಳ ವಾರ್ಷಿಕ ಚಾರ್ಜ್ ಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದಾದರೆ ನೀವು ಡೀಲರ್ ನ್ನು ಸಂಪರ್ಕಿಸಬೇಕಾಗುತ್ತದೆ. ಡ್ರೀಮ್ ಡಿಟಿಹೆಚ್ ಈ ಪ್ಯಾಕ್ ಗಳನ್ನು ಪಡೆಯಲು ಇರುವ ಮೊದಲ ಜಾಗವಾಗಿದೆ. ಈ ಪ್ಯಾಕ್ ಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ ಎಲ್ಲಾ ಅಂಶಗಳು ಇಲ್ಲಿವೆ ನೋಡಿ.

ಟಾಟಾ ಸ್ಕೈ ಮಾಸಿಕ/ವಾರ್ಷಿಕ ಪ್ಯಾಕ್ ಗಳ ವಿವರ :

ಟಾಟಾ ಸ್ಕೈ ಮಾಸಿಕ/ವಾರ್ಷಿಕ ಪ್ಯಾಕ್ ಗಳ ವಿವರ :

ಬೆಂಗಾಳಿ ಲೈಟ್ ಪ್ಲಸ್ ಎಸ್ ಡಿ:

ತಿಂಗಳಿಗೆ 225 ರುಪಾಯಿ ಪಾವತಿಸಿ ಪಡೆಯಬಹುದು( ತೆರಿಗೆ ಮತ್ತು ಎನ್ ಸಿಎಫ್ ಕೂಡ ಸೇರಿದೆ).ಈ ಪ್ಯಾಕ್ ನಲ್ಲಿ ಒಟ್ಟು 38 ಎಸ್ ಡಿ ಚಾನಲ್ ಗಳು ಬರುತ್ತದೆ. ಅದರಲ್ಲಿ 5 ಮಕ್ಕಳ ಚಾನಲ್ ಗಳು, 2 ಹಿಂದಿ ನ್ಯೂಸ್, 5 ಹಿಂದಿ ಮನರಂಜನೆ, 4 ಹಿಂದಿ ಸ್ಪೋರ್ಟ್ಸ್, ಮತ್ತು 8 ಬೆಂಗಾಳಿ ಪ್ರಾದೇಶಿಕ ಚಾನಲ್ ಗಳು ಇರುತ್ತವೆ. ಅಷ್ಟೇ ಅಲ್ಲ ಈ ಪ್ಯಾಕ್ ನಲ್ಲಿ 1 ಹಿಂದಿ ಪ್ರಾದೇಶಿಕ ಚಾನಲ್, 3 ಮ್ಯೂಸಿಕ್, 4 ಹಿಂದಿ ಮೂವಿ ಮತ್ತು 4 ಇನ್ಫೋಟೈನ್ಮೆಂಟ್ ಚಾನಲ್ ಗಳು ಬರುತ್ತದೆ.

ಪಂಜಾಬಿ ಸೂಪರ್ ಪ್ಯಾಕ್ ಎಸ್ ಡಿ:

ಪಂಜಾಬಿ ಸೂಪರ್ ಪ್ಯಾಕ್ ಎಸ್ ಡಿ:

225 ರುಪಾಯಿಯ ಪ್ಯಾಕ್ ಇದಾಗಿದೆ. ಇದು ಅತೀ ಹೆಚ್ಚು ಚಾನಲ್ ಗಳನ್ನು ಒಳಗೊಂಡಿದೆ(78 ಎಸ್ ಡಿ ಚಾನಲ್ ಗಳು). ಇದರಲ್ಲಿ 13 ಹಿಂದಿ ಮೂವಿ, 13 ಹಿಂದಿ ಮನರಂಜನೆ, 9 ಹಿಂದಿ ನ್ಯೂಸ್, 11 ಇನ್ಫೋಟೈನ್ಮೆಂಟ್, 9 ಹಿಂದಿ ಪ್ರಾದೇಶಿಕ, 6 ಮಕ್ಕಳ ಚಾನಲ್, 7 ಮ್ಯೂಸಿಕ್, 3 ಇತರೆ, 5 ಸ್ಪೋರ್ಟ್ಸ್, 1 ಗುಜರಾತಿ, ಮತ್ತು 1 ಪಂಜಾಬಿ ಪ್ರಾದೇಶಿಕ ಚಾನಲ್ ಲಭ್ಯವಾಗುತ್ತದೆ.

ತಮಿಳು ಲೈಟ್ ಪ್ಲಸ್ ಎಸ್ ಡಿ:

ತಮಿಳು ಲೈಟ್ ಪ್ಲಸ್ ಎಸ್ ಡಿ:

ಈ ಪ್ಯಾಕ್ ನಲ್ಲಿ ನೀವು 374.1 ರುಪಾಯಿ ಬೆಲೆಗೆ ಒಟ್ಟು 42 ಚಾನಲ್ ಗಳನ್ನು ಪಡೆದುಕೊಳ್ಳಬಹುದು. ಇದು ಟಾಟಾ ಸ್ಕೈನಲ್ಲಿ ನೀಡಲಾಗುತ್ತಿರುವ ಅತೀ ದುಬಾರಿ ಪ್ಯಾಕ್ ಆಗಿದೆ. ಇದರಲ್ಲಿ 13 ತಮಿಳು ಪ್ರಾದೇಶಿಕ, 5 ಕನ್ನಡ ಪ್ರಾದೇಶಿಕ, 5 ತೆಲುಗು ಪ್ರಾದೇಶಿಕ, 6 ಮಳಯಾಳಂ ಪ್ರಾದೇಶಿಕ, 3 ಇನ್ಫೋಟೈನ್ಮೆಂಟ್, 1 ಇಂಗ್ಲೀಷ್ ನ್ಯೂ, 1 ಹಿಂದಿ ಮೂವಿ, 1 ಮ್ಯೂಸಿಕ್, 2 ಹಿಂದಿ ನ್ಯೂಸ್, 1 ಇತರೆ ಮತ್ತು 4 ಸ್ಪೋರ್ಟ್ಸ್ ಚಾನಲ್ ಗಳು ಲಭ್ಯವಾಗುತ್ತದೆ.

ತಮಿಳು ಲೈಟ್ ನ್ಯೂ ಹೆಚ್ ಡಿ:

ತಮಿಳು ಲೈಟ್ ನ್ಯೂ ಹೆಚ್ ಡಿ:

ಈ ಪ್ಯಾಕ್ ನಲ್ಲಿ 26 ಚಾನಲ್ ಗಳನ್ನು ಮಾಸಿಕ 319.7 ರುಪಾಯಿ ಪಾವತಿಸಿ ಪಡೆದುಕೊಳ್ಳುವ ಅವಕಾಶವಿದೆ. ಇದರಲ್ಲಿ 12 ತಮಿಳು ಪ್ರಾದೇಶಿಕ, 3 ಇನ್ಫೋಟೈನ್ಮೆಂಟ್, 4 ಸ್ಪೋರ್ಟ್ಸ್, 1 ಇಂಗ್ಲೀಷ್ ನ್ಯೂಸ್, 1 ಹಿಂದಿ ಮೂವಿ, 1ಮ್ಯೂಸಿಕ್, 2 ಹಿಂದಿ ನ್ಯೂಸ್, 1 ಇತರೆ ಮತ್ತು 1 ಮಳಯಾಳಂ ಪ್ರಾದೇಶಿಕ ಚಾನಲ್ ಲಭ್ಯವಾಗುತ್ತದೆ.

ತಮಿಳು ಲೈಟ್ ನ್ಯೂ ಎಸ್ ಡಿ:

ತಮಿಳು ಲೈಟ್ ನ್ಯೂ ಎಸ್ ಡಿ:

ಈ ಪ್ಯಾಕ್ ನ ಅಡಿಯಲ್ಲಿ ಮಾಸಿಕ 199 ರುಪಾಯಿ ಪಾವತಿಸಿ 26 ಚಾನಲ್ ಗಳನ್ನು ಪಡೆದುಕೊಳ್ಳಬಹುದು. ಇದರಲ್ಲಿ ಲಭ್ಯವಾಗುವ ಚಾನಲ್ ಗಳೆಂದರೆ 12 ತಮಿಳು ಪ್ರಾದೇಶಿಕ, 3ಇನ್ಫೋಟೈನ್ಮೆಂಟ್, 4 ಸ್ಪೋರ್ಟ್ಸ್, 1 ಇಂಗ್ಲೀಷ್ ನ್ಯೂಸ್, 1 ಹಿಂದಿ ಮೂವಿ, 1ಮ್ಯೂಸಿಕ್, 2 ಹಿಂದಿ ನ್ಯೂಸ್, 1 ಇತರೆ ಮತ್ತು 1 ಮಳಯಾಳಂ ಪ್ರಾದೇಶಿಕ ಚಾನಲ್ ಗಳು ಸಿಗುತ್ತವೆ.

ತಮಿಳು ಲೈಟ್ ಪ್ಲಸ್ ಎಸ್ ಡಿ:

ತಮಿಳು ಲೈಟ್ ಪ್ಲಸ್ ಎಸ್ ಡಿ:

ಕೊನೆಯದಾಗಿ ತಮಿಳು ಲೈಟ್ ಪ್ಲಸ್ ಎಸ್ ಡಿ ಪ್ಯಕ್ ನಲ್ಲಿ 43 ಚಾನಲ್ ಗಳು ಲಭ್ಯವಾಗಲಿದ್ದು ಇದನ್ನು ಪಡೆಯಲು ನೀವು ಮಾಸಿಕ 225 ರುಪಾಯಿ ಪಾವತಿಸಬೇಕಾಗುತ್ತದೆ. ಇದರಲ್ಲಿ 13 ತಮಿಳು ಪ್ರಾದೇಶಿಕ, 5 ಕನ್ನಡ ಪ್ರಾದೇಶಿಕ, 6 ತೆಲುಗು ಪ್ರಾದೇಶಿಕ, 6 ಮಳಯಾಳಂ ಪ್ರಾದೇಶಿಕ, 3ಇನ್ಫೋಟೈನ್ಮೆಂಟ್, 1 ಇಂಗ್ಲೀಷ್ ನ್ಯೂಸ್, 1 ಹಿಂದಿ ಮೂವಿs, 1 ಮ್ಯೂಸಿಕ್, 2 ಹಿಂದಿ ನ್ಯೂಸ್, 1 ಇತರೆ ಮತ್ತು 4 ಸ್ಪೋರ್ಟ್ಸ್ ಚಾನಲ್ ಗಳು ಲಭ್ಯವಾಗುತ್ತದೆ.

Best Mobiles in India

Read more about:
English summary
Tata Sky Launches Six new Subscription Packs; Price Starts At Rs. 199

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X