ಟಿಸಿಎಲ್‌ನಿಂದ 4K AI ಆಂಡ್ರಾಯ್ಡ್ ಟಿವಿಗಳು ಲಾಂಚ್!.ಆರಂಭಿಕ ಬೆಲೆ 27,990ರೂ!

|

ಜನಪ್ರಿಯ 'ಟಿಸಿಎಲ್' ಕಂಪನಿಯು ಈಗಾಗಲೇ ಸ್ಮಾರ್ಟ್‌ಟಿವಿಗಳಿಂದ ಗುರುತಿಸಿಕೊಂಡಿದ್ದು, ಇತ್ತೀಚಿಗೆ ದೇಶಿಯ ಮಾರುಕಟ್ಟೆಗೆ ಹೊಸ ಟಿವಿ ಪರಿಚಯಿಸಿ ಗಮನ ಸೆಳೆದಿತ್ತು. ಆದ್ರೆ ಇದೀಗ ಮತ್ತೆ ನೂತನ ಆಂಡ್ರಾಯ್ಡ್‌ ಟಿವಿ ಟಿವಿ ಸರಣಿಯನ್ನು ಬಿಡುಗಡೆ ಮಾಡಿದ್ದು, ಈ ಟಿವಿಗಳು ರಿಮೋಟ್‌ ಕಂಟ್ರೊಲ್‌ ಇಲ್ಲದೇ, AI ಸಹಾಯದಿಂದ ವಾಯಿಸ್‌ ಕಂಟ್ರೊಲ್‌ ಮೂಲಕವೇ ನಿಯಂತ್ರಿಸಬಹುದಾದ ವಿಶೇಷತೆಯನ್ನು ಪಡೆದಿವೆ.

ಟಿಸಿಎಲ್‌ನಿಂದ 4K AI ಆಂಡ್ರಾಯ್ಡ್ ಟಿವಿಗಳು ಲಾಂಚ್!.ಆರಂಭಿಕ ಬೆಲೆ 27,990ರೂ!

ಹೌದು, ಟಿಸಿಎಲ್‌ ಕಂಪನಿಯು ಈಗ ಮತ್ತೆ ಹೊಸದಾಗಿ P8S, P8E ಮತ್ತು P8 ಆಂಡ್ರಾಯ್ಡ್ ಟಿವಿಯ ಮೂರು ಸರಣಿಯನ್ನು ಅನಾವರಣಮಾಡಿದೆ. ಅವುಗಳಲ್ಲಿ P8S ಸರಣಿ 65 ಇಂಚಿನ ಮತ್ತು 55 ಇಂಚಿನ ವೇರಿಯಂಟ್‌ ಹೊಂದಿದ್ದು, P8E 55 ಇಂಚಿನ, 50 ಇಂಚಿನ ಮತ್ತು 43 ವೇರಿಯಂಟ್‌ ಆಯ್ಕೆಯಲ್ಲಿವೆ. ಹಾಗೆಯೇ P8 43 ಇಂಚಿನ, 50 ಇಂಚಿನ ಮತ್ತು 55 ಇಂಚಿನ ವೇರಿಯಂಟ್ ಮಾದರಿ ಆಯ್ಕೆಗಳನ್ನು ಒಳಗೊಂಡಿದೆ.

ಟಿಸಿಎಲ್‌ನಿಂದ 4K AI ಆಂಡ್ರಾಯ್ಡ್ ಟಿವಿಗಳು ಲಾಂಚ್!.ಆರಂಭಿಕ ಬೆಲೆ 27,990ರೂ!

ಕಂಪನಿಯ ಹೊಸ ಆಂಡ್ರಾಯ್ಡ್ ಟಿವಿಗಳು 4K ಡಿಸ್‌ಪ್ಲೇಯನ್ನು ಹೊಂದಿದ್ದು, ನೆಟ್‌ಫ್ಲೆಕ್ಸ್‌, ಯೂಟ್ಯೂಬ್, ಹಾಟ್‌ಸ್ಟಾರ್‌, ಯಪ್ಪಿ ಟಿವಿ, ವೂಟ್‌, ALTಬಾಲಾಜಿ, ಸೇರಿದಂತೆ ಜನಪ್ರಿಯ ವಿಡಿಯೊ ಕಂಟೆಂಟ್‌ ಆಪ್ಸ್‌ಗಳನ್ನು ಒಳಗೊಂಡಿದೆ. ಹಾಗಾದರೇ ಟಿಸಿಎಲ್ ಕಂಪನಿಯ P8S, P8E ಮತ್ತು P8 ಆಂಡ್ರಾಯ್ಡ್ ಟಿವಿಯ ಸರಣಿಗಳು ಇತರೆ ಯಾವೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಭರ್ಜರಿ ಬೆಲೆ ಇಳಿಕೆ ಕಂಡ 'ವಿವೋ ವಿ15 ಪ್ರೊ' ಸ್ಮಾರ್ಟ್‌ಫೋನ್! ಓದಿರಿ : ಭರ್ಜರಿ ಬೆಲೆ ಇಳಿಕೆ ಕಂಡ 'ವಿವೋ ವಿ15 ಪ್ರೊ' ಸ್ಮಾರ್ಟ್‌ಫೋನ್!

ಡಿಸ್‌ಪ್ಲೇ ವಿನ್ಯಾಸ

ಡಿಸ್‌ಪ್ಲೇ ವಿನ್ಯಾಸ

ಟಿಸಿಎಲ್‌ನ ಹೊಸ ಆಂಡ್ರಾಯ್ಡ್ ಟಿವಿ ಸರಣಿಯಗಳಲ್ಲಿ P8S ಸರಣಿಯ ಟಿವಿಗಳು ಮೆಟಾಲಿಕ್ ಫ್ರೇಮ್‌ನ ವಿನ್ಯಾಸವನ್ನು ನೀಡಲಾಗಿರುವ ಜೊತೆಗೆ ಅಂಚು ರಹಿತ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಪೂರ್ಣ ಸ್ಕ್ರೀನ್‌ ಡಿಸೈನ್‌ ರಚನೆಯನ್ನು ಪಡೆದುಕೊಂಡಿದೆ. ಟಿವಿಗಳಲ್ಲಿ AI ಕೃತಕ ಬುದ್ಧಿಮತ್ತೆ ತಂತ್ರಜ್ಞಾನವಿದ್ದು, ವಿಡಿಯೊ ವೀಕ್ಷಣೆಯ ಅನುಭವವನ್ನು ಮತ್ತಷ್ಟು ಹೆಚ್ಚಿಸಲಿದೆ.

ಎಂಟರ್‌ಟೈನಮೆಂಟ್‌ ಆಯ್ಕೆಗಳು

ಎಂಟರ್‌ಟೈನಮೆಂಟ್‌ ಆಯ್ಕೆಗಳು

ಈ ಆಂಡ್ರಾಯ್ಡ್‌ ಟಿವಿಯಲ್ಲಿ, ಸ್ಪೋರ್ಟ್ಸ್‌ ಮೋಡ್‌ ಆಯ್ಕೆ ಇದ್ದು, ಕ್ರಿಡಾ ವಿಡಿಯೊ ನೋಡುವಾಗ ಉತ್ತಮ ಬೆಂಬಲ ನೀಡಲಿದೆ. ಇದರೊಂದಿಗೆ ನೆಟ್‌ಫ್ಲೆಕ್ಸ್‌, ಯೂಟ್ಯೂಬ್, ಹಾಟ್‌ಸ್ಟಾರ್‌, ಯಪ್ಪಿ ಟಿವಿ, ವೂಟ್‌, ALTಬಾಲಾಜಿ, ಸೇರಿದಂತೆ ಹಂಗಾಮಾ, ಇನ್ನಿತರೆ ಜನಪ್ರಿಯ ಮನರಂಜನಾ ವಿಡಿಯೊ ಸ್ಟ್ರಿಮಿಂಗ್ ತಾಣಗಳನ್ನು ಸಹಭಾಗಿತ್ವ ಹೊಂದಿದ್ದು, ವಿಡಿಯೊ ವೀಕ್ಷಿಸಬಹುದಾಗಿದೆ.

ಓದಿರಿ : ಅನಾಥ ಮಕ್ಕಳಿಗೆ ಅಡುಗೆ ಮಾಡುವ ಬಾಣಸಿಗ ಈ 'ಯೂಟ್ಯೂಬರ್'! ಓದಿರಿ : ಅನಾಥ ಮಕ್ಕಳಿಗೆ ಅಡುಗೆ ಮಾಡುವ ಬಾಣಸಿಗ ಈ 'ಯೂಟ್ಯೂಬರ್'!

ವಾಯಿಸ್‌ ಕಂಟ್ರೊಲ್

ವಾಯಿಸ್‌ ಕಂಟ್ರೊಲ್

ಟಿಸಿಎಲ್ ಹೊಸ ಆಂಡ್ರಾಯ್ಡ್‌ ಟಿವಿಯು ವಾಯಿಸ್‌ ಕಂಟ್ರೊಲ್ ಫೀಚರ್ ಪಡೆದುಕೊಮಡಿದ್ದು, ಟಿವಿ ರಿಮೋಟ್ ಸಹಾಯವಿಲ್ಲದೇ ವಾಯಿಸ್‌ ಮೂಲಕವೇ ಟಿವಿ ನಿಯಂತ್ರಿಸುವ ಸೌಲಭ್ಯವನ್ನು ಪಡೆದುಕೊಂಡಿದೆ. ಹಾಗೆಯೇ ಆಂಡ್ರಾಯ್ಡ್‌ 9.0 ಓಎಸ್‌ನಲ್ಲಿ ಕಾರ್ಯನಿರ್ವಹಿಸುವ ಈ ಟಿವಿಗಳು ಬ್ಲೂಟೂತ್‌ ಕನೆಕ್ಟಿವಿಟಿ ಸೌಲಭ್ಯಗಳನ್ನು ಒಳಗೊಂಡಿವೆ.

ಓದಿರಿ : ಶುರುವಾಗಲಿದೆ ಅಮೆಜಾನ್ ಫ್ರೀಡಂ ಸೇಲ್ : ಈ ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್! ಓದಿರಿ : ಶುರುವಾಗಲಿದೆ ಅಮೆಜಾನ್ ಫ್ರೀಡಂ ಸೇಲ್ : ಈ ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್!

ಪ್ರೈಸ್‌ಟ್ಯಾಗ್

ಪ್ರೈಸ್‌ಟ್ಯಾಗ್

ಟಿಸಿಎಲ್ ಹೊಸದಾಗಿ P8S, P8E ಮತ್ತು P8 ಸರಣಿಯಲ್ಲಿ ಆಂಟ್ರಾಯ್ಡ್ ಟಿವಿ ಲಾಂಚ್‌ ಮಾಡಿದೆ. P8S ಸರಣಿಯ ಟಿವಿಗಳು ಹೈ ಎಂಡ್‌ ಫೀಚರ್ಸ್‌ನಲ್ಲಿದ್ದು, ಆರಂಭಿಕ ಬೆಲೆಯು 44,990ರೂ.ಗಳಾಗಿದೆ. ಹಾಗೆಯೇ P8 ಸರಣಿಯ ಟಿವಿಗಳ ಆರಂಭಿಕ ಬೆಲೆಯು 27,990 ಆಗಿದೆ ಮತ್ತು 29,990ರೂ.ಗಳ ಆರಂಭಿಕ ಬೆಲೆಯಲ್ಲಿ P8E ಸರಣಿಯ ಟಿವಿಗಳು ಲಭ್ಯವಾಗಲಿವೆ.

ಓದಿರಿ : ಬಿಎಸ್‌ಎನ್‌ಎಲ್ 151ರೂ. ಪ್ಲ್ಯಾನ್‌ನಲ್ಲಿ 1.5GB ಉಚಿತ ಡೇಟಾ! ಓದಿರಿ : ಬಿಎಸ್‌ಎನ್‌ಎಲ್ 151ರೂ. ಪ್ಲ್ಯಾನ್‌ನಲ್ಲಿ 1.5GB ಉಚಿತ ಡೇಟಾ!

Best Mobiles in India

English summary
TCL has unveiled three TVs in India, which includes P8S, P8E and P8. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X