'ಟಿಸಿಎಲ್'ನ ಹೊಸ 55 ಇಂಚಿನ 4K ಆಂಡ್ರಾಯ್ಡ್ ಸ್ಮಾರ್ಟ್‌ಟಿವಿ ಬಿಡುಗಡೆ!

|

ಸ್ಮಾರ್ಟ್‌ಟಿವಿ ವಲಯವು ಸಾಕಷ್ಟು ಬದಲಾಗಿದ್ದು, ಕಡಿಮೆ ಬೆಲೆಗೂ ಅತ್ಯುತ್ತಮ ಸ್ಮಾರ್ಟ್‌ಟಿವಿಗಳು ಲಭ್ಯವಾಗುತ್ತಿವೆ. ಈ ನಿಟ್ಟಿನಲ್ಲಿ ಹಲವಾರು ಕಂಪನಿಗಳು ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದು, ವಿವಿಧ ಶ್ರೇಣಿಯಲ್ಲಿ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿವೆ. ಆ ಫೈಕಿ 'ಟಿಸಿಎಲ್'‌ ಕಂಪನಿಯು ಒಂದಾಗಿದ್ದು, ಈಗಾಗಲೇ ಹಲವು ಸ್ಮಾರ್ಟ್‌ಟಿವಿಗಳನ್ನು ಬಿಡುಗಡೆ ಮಾಡಿದ್ದು, ಈಗ ಮತ್ತೆ ನೂತನ ಸ್ಮಾರ್ಟ್‌ಟಿವಿಯನ್ನು ಬಿಡುಗಡೆ ಮಾಡಿದೆ.

'ಟಿಸಿಎಲ್'ನ ಹೊಸ 55 ಇಂಚಿನ 4K ಆಂಡ್ರಾಯ್ಡ್ ಸ್ಮಾರ್ಟ್‌ಟಿವಿ ಬಿಡುಗಡೆ!

ಹೌದು, ಟಿಸಿಎಲ್ ಕಂಪನಿಯು ಭಾರತೀಯ ಮಾರುಕಟ್ಟೆಗೆ 55 ಇಂಚಿನ 4K ಸ್ಮಾರ್ಟ್‌ ಆಂಡ್ರಾಯ್ಡ್ ಎಲ್‌ಇಡಿ ಟಿವಿಯನ್ನು ಬಿಡುಗಡೆ ಮಾಡಿದ್ದು, ಈ ಸ್ಮಾರ್ಟ್‌ಟಿವಿ ಆಂಡ್ರಾಯ್ಡ್‌ ಪೈ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಮನರಂಜನೆಗಾಗಿ ಭರಪೂರ ಆಯ್ಕೆಗಳನ್ನು ಹೊಂದಿದ್ದು, ನೆಟ್‌ಫ್ಲೆಕ್ಸ್, ಯೂಟ್ಯೂಬ್, ಗೂಗಲ್ ಅಸಿಸ್ಟಂಟ್ ಸೇರಿದಂತೆ ಜನಪ್ರಿಯ ಆಪ್ಸ್‌ಗಳನ್ನು ಸಹ ಒಳಗೊಂಡಿದೆ.

'ಟಿಸಿಎಲ್'ನ ಹೊಸ 55 ಇಂಚಿನ 4K ಆಂಡ್ರಾಯ್ಡ್ ಸ್ಮಾರ್ಟ್‌ಟಿವಿ ಬಿಡುಗಡೆ!

ಗ್ರಾಹಕರು ವಾಯಿಸ್‌ ಮೂಲಕವೇ ಟಿವಿಯನ್ನು ಕಂಟ್ರೋಲ್ ಮಾಡಬಹುದಾಗಿದ್ದು, 20W ಸಾಮರ್ಥ್ಯದ ಔಟ್‌ಪುಟ್‌ ಸೌಂಡ್‌ ಹೊಂದಿದೆ. ಬ್ಲೂಟೂತ್‌ ಮೂಲಕ ಬಾಹ್ಯ ಸ್ಪೀಕರ್ಸ್‌ಗಳೊಂದಿಗೆ ಕನೆಕ್ಟ್‌ ಮಾಡುವ ಸೌಲಭ್ಯ ಸಹ ಇದ್ದು ಸ್ಪರ್ಧಾತ್ಮಕ ಬೆಲೆಯಲ್ಲಿ ಗ್ರಾಹಕರನ್ನು ಸೆಳೆಯಲಿದೆ. ಹಾಗಾದರೇ ಟಿಸಿಎಲ್‌ ಕಂಪನಿಯ ಹೊಸ 4K ಸ್ಮಾರ್ಟ್‌ ಆಂಡ್ರಾಯ್ಡ್ ಎಲ್‌ಇಡಿ ಟಿವಿಯ ವೈಶಿಷ್ಟತೆಗಳೆನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : ವಾಟ್ಸಪ್‌ನಲ್ಲಿ 'ಡಿಜಿಟಲ್ ಪೇಮೆಂಟ್' ಸೇವೆ!ಓದಿರಿ : ವಾಟ್ಸಪ್‌ನಲ್ಲಿ 'ಡಿಜಿಟಲ್ ಪೇಮೆಂಟ್' ಸೇವೆ!

ಡಿಸ್‌ಪ್ಲೇ ಮತ್ತು ಡಿಸೈನ್

ಡಿಸ್‌ಪ್ಲೇ ಮತ್ತು ಡಿಸೈನ್

ಟಿಸಿಎಲ್ ಹೊಸ ಆಂಡ್ರಾಯ್ಡ್‌ ಟಿವಿಯು 3840x2160 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದ್ದು, 55 ಇಂಚಿನ 4K ಅಲ್ಟ್ರಾ ಹೈ ಡೆಫ್ನಿಶನ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಟಿವಿಯು 2080mm x 300mm x 1390mm ಸುತ್ತಳತೆಯ ರಚನೆಯಲ್ಲಿದ್ದು, ಹಗುರವಾದ ತೂಕದಲ್ಲಿದೆ. ಹಾಗೆಯೇ ಸ್ಕ್ರೀನ್ ಸುತ್ತಲೂ ತೆಳುವಾದ ಅಂಚಿನ ಪ್ಯಾನೆಲ್ ಡಿಸೈನ್‌ ಹೊಂದಿದೆ.

ಸೌಂಡ್‌ ಮತ್ತು ಸ್ಪೀಕರ್ಸ್‌

ಸೌಂಡ್‌ ಮತ್ತು ಸ್ಪೀಕರ್ಸ್‌

ಟಿಸಿಎಲ್ ಹೊಸ ಆಂಡ್ರಾಯ್ಡ್‌ ಟಿವಿಯು 20W ಸಾಮರ್ಥ್ಯದ ಡಾಲ್ಬಿ ಸ್ಟಿರಿಯೊ ಸೌಂಡ್‌ ಆಯ್ಕೆಯನ್ನು ಹೊಂದಿದ್ದು, ಔಟ್‌ಪುಟ್‌ ಸೌಂಡ್‌ ಕ್ವಾಲಿಟಿಯು ಉತ್ತಮವಾಗಿರಲಿದೆ. ಇದರೊಂದಿಗೆ ಹೆಚ್ಚಿನ ಸೌಂಡ್‌ಗಾಗಿ ಬ್ಲೂಟೂತ್‌ ಮೂಲಕ ಬಾಹ್ಯ ಸ್ಪೀಕರ್ಸ್‌ಗಳೊಂದಿಗೆ ಕನೆಕ್ಟ್‌ ಮಾಡುವ ಅವಕಾಶಗಳನ್ನು ಕಾಣಬಹುದಾಗಿದೆ. ಅತ್ಯುತ್ತಮ ಸೌಂಡ್‌ ಗುಣಮಟ್ಟವು ನಿರೀಕ್ಷಿಸಬಹುದು.

ಓದಿರಿ : ವಾಟ್ಸಪ್‌ ಮತ್ತು ಟೆಲಿಗ್ರಾಮ್ ಬಳಕೆದಾರರೇ ಸ್ವಲ್ಪ ಎಚ್ಚರ ವಹಿಸಿ!ಓದಿರಿ : ವಾಟ್ಸಪ್‌ ಮತ್ತು ಟೆಲಿಗ್ರಾಮ್ ಬಳಕೆದಾರರೇ ಸ್ವಲ್ಪ ಎಚ್ಚರ ವಹಿಸಿ!

ಮನರಂಜನಾ ಫೀಚರ್ಸ್‌

ಮನರಂಜನಾ ಫೀಚರ್ಸ್‌

ಈ ಆಂಡ್ರಾಯ್ಡ್‌ ಟಿವಿಯಲ್ಲಿ, ಸುಮಾರು 9.5 ಲಕ್ಷದಷ್ಟು ಮನರಂಜನಾ ಕಂಟೆಂಟ್‌ ಇದ್ದು, ಕಿಡ್ಸ್‌, ಮ್ಯೂಸಿಕ್, ಸ್ಪೋರ್ಟ್ಸ್‌ ಮತ್ತು ಸಿನಿಮಾ ವಿಭಾಗಗಳು ಒಳಗೊಂಡಿದೆ. ಹಾಗೆಯೇ ಹಂಗಾಮಾ, ಜಿಯೋ ಸಿನಿಮಾ, ಜಿ5, ALTಬಾಲಾಜಿ, ಯಪ್ಪಿ ಟಿವಿ, ಹಾಟ್‌ಸ್ಟಾರ್‌ ಮತ್ತು ಇನ್ನಿತರೆ ಜನಪ್ರಿಯ ಮನರಂಜನಾ ವಿಡಿಯೊ ಸ್ಟ್ರಿಮಿಂಗ್ ತಾಣಗಳನ್ನು ವೀಕ್ಷಿಸಬಹುದಾಗಿದೆ.

ಕನೆಕ್ಟಿವಿಟಿ ಫೀಚರ್ಸ್‌

ಕನೆಕ್ಟಿವಿಟಿ ಫೀಚರ್ಸ್‌

ಟಿಸಿಎಲ್ ಹೊಸ ಆಂಡ್ರಾಯ್ಡ್‌ ಟಿವಿಯು 2GB RAM ಮತ್ತು 16GB ಸ್ಟೋರೇಜ್‌ ಆಯ್ಕೆಯನ್ನು ಹೊಂದಿದ್ದು, ಆಂಡ್ರಾಯ್ಡ್‌ 9.0 ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಎಚ್‌ಡಿಎಮ್‌ಐ 2.0, ಯುಎಸ್‌ಬಿ 2.0, ವೈಫೈ 2.4G, ಮತ್ತು ಬ್ಲೂಟೂತ್‌ ಕನೆಕ್ಟಿವಿಟಿ ಸೌಲಭ್ಯಗಳನ್ನು ಒಳಗೊಂಡಿದ್ದು, ಯೂಟ್ಯೂಬ್, ನೆಟ್‌ಫ್ಲೆಕ್ಸ್ ಮತ್ತು ಪ್ರೈಮ್‌ ವಿಡಿಯೊಗಳನ್ನು ಬೆಂಬಲಿಸಲಿದೆ. ವಾಯಿಸ್‌ ಅಸಿಸ್ಟಂಟ್ ಸೌಲಭ್ಯ ಸಹ ಇದೆ.

ಓದಿರಿ : 'ಬಿಗ್ ಶಾಪಿಂಗ್ ಡೇಸ್‌'ನಲ್ಲಿ ಈ 5 ಗ್ಯಾಜೆಟ್‌ಗಳಿಗೆ ಬಿಗ್‌ ಡಿಸ್ಕೌಂಟ್!ಓದಿರಿ : 'ಬಿಗ್ ಶಾಪಿಂಗ್ ಡೇಸ್‌'ನಲ್ಲಿ ಈ 5 ಗ್ಯಾಜೆಟ್‌ಗಳಿಗೆ ಬಿಗ್‌ ಡಿಸ್ಕೌಂಟ್!

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಟಿಸಿಎಲ್ ಹೊಸ ಆಂಡ್ರಾಯ್ಡ್‌ ಟಿವಿಯು ಇದೇ ಜುಲೈ 15ರಂದು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಆಗಿದ್ದು, 55 ಇಂಚಿನ 4K ಸ್ಮಾರ್ಟ್‌ ಆಂಟ್ರಾಯ್ಡ್‌ ಎಲ್‌ಇಡಿ ಟಿವಿಯ ಬೆಲೆಯು 40,990ರೂ.ಗಳಾಗಿದೆ. ಮುಖ್ಯವಾಗಿ ಆನ್‌ಲೈನ್‌ ಮಾರುಕಟ್ಟೆಗೆ ಒತ್ತು ನೀಡಿದ್ದು, ಅಮೆಜಾನ್ ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಸದ್ಯದಲ್ಲಿಯೇ ಸೇಲ್ ಆರಂಭಿಸಲಿದೆ.

ಓದಿರಿ : ಶಿಯೋಮಿಯ ಪವರ್‌ಫುಲ್ ಸ್ಮಾರ್ಟ್‌ಫೋನ್ 'ರೆಡ್ಮಿ ಕೆ 20' ರಿಲೀಸ್!ಓದಿರಿ : ಶಿಯೋಮಿಯ ಪವರ್‌ಫುಲ್ ಸ್ಮಾರ್ಟ್‌ಫೋನ್ 'ರೆಡ್ಮಿ ಕೆ 20' ರಿಲೀಸ್!

Best Mobiles in India

English summary
The 55-inch TV runs on Android 9 Pie-based Android TV platform. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X