TCL 40 ಸ್ಮಾರ್ಟ್‌ಫೋನ್‌ ಸರಣಿ ಬಿಡುಗಡೆ! ಡಿಸ್‌ಪ್ಲೇ ಮಾದರಿಯಲ್ಲಿ ಹೊಸ ಟೆಕ್ನಾಲಜಿ!

|

CES 2023 ನಲ್ಲಿ ಹಲವು ಜನಪ್ರಿಯ ಬ್ರ್ಯಾಂಡ್‌ಗಳು ತಮ್ಮ ಮುಂಬರುವ ಡಿವೈಸ್‌ಗಳನ್ನು ಅನಾವರಣಗೊಳಿಸುತ್ತಿವೆ. ಇದೀಗ ಟಿಸಿಎಲ್‌ ಕಂಪೆನಿ ಕೂಡ ತನ್ನ TCL 40 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣಗೊಳಿಸಿದೆ. ಈ ಸರಣಿಯಲ್ಲಿ TCL 40 R 5G, TCL 40 SE, ಮತ್ತು TCL 408 ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಿವೆ. ಇದರಲ್ಲಿ TCL 40 R 5G ಸ್ಮಾರ್ಟ್‌ಫೋನ್‌ ಮಾತ್ರವೇ 5G ಸಂಪರ್ಕವನ್ನು ಬೆಂಬಲಿಸಲಿದೆ. ಇನ್ನುಳಿದ ಎರಡು ಸ್ಮಾರ್ಟ್‌ಫೋನ್‌ಗಳು 4G ನೆಟ್‌ವರ್ಕ್‌ಗೆ ಸೀಮಿತವಾಗಿವೆ ಎನ್ನಲಾಗಿದೆ.

ಟಿಸಿಎಲ್‌

ಹೌದು, ಟಿಸಿಎಲ್‌ ಕಂಪೆನಿ ಹೊಸದಾಗಿ ಟಿಸಿಎಲ್‌ 40 ಸ್ಮಾರ್ಟ್‌ಫೋನ್‌ ಸರಣಿಯನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್‌ಗಳು ವಿಭಿನ್ನ ಪ್ರೈಸ್‌ಟ್ಯಾಗ್‌ಗಳನ್ನು ಹೊಂದಿವೆ, ಆದರೆ ಈ ಎಲ್ಲಾ ಮೂರು ಸ್ಮಾರ್ಟ್‌ಫೋನ್‌ಗಳು 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಮುಖ್ಯ ಕ್ಯಾಮೆರಾವನ್ನು ಒಳಗೊಂಡಿವೆ. ಈ ಸ್ಮಾರ್ಟ್‌ಫೋನ್‌ಗಳು NXTVISION ಪರದೆಯ ತಂತ್ರಜ್ಞಾನವನ್ನು ಒಳಗೊಂಡಿವೆ ಎನ್ನಲಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ಗಳ ವಿಶೇಷತೆ ಏನಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್‌ಪ್ಲೇ ಹೇಗಿರಲಿದೆ?

ಡಿಸ್‌ಪ್ಲೇ ಹೇಗಿರಲಿದೆ?

ಟಿಸಿಎಲ್‌ ಕಂಪೆನಿ ಪರಿಚಯಿಸಿರುವ ಟಿಸಿಎಲ್‌ 40 SE ಮತ್ತು ಟಿಸಿಎಲ್‌ 408 ಸ್ಮಾರ್ಟ್‌ಗಳು 6.75-ಇಂಚಿನ ಡಿಸ್‌ಪ್ಲೇಯನ್ನು ಹೊಂದಿರಲಿವೆ. ಆದರೆ ಟಿಸಿಎಲ್‌ 40 R ಸ್ಮಾರ್ಟ್‌ಫೋನ್‌ ಮಾತ್ರವೇ 6.6-ಇಂಚಿನ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎನ್ನಲಾಗಿದೆ. ಇನ್ನು ಡಿಸ್‌ಪ್ಲೇ 90Hz ರಿಫ್ರೆಶ್‌ ರೇಟ್‌ ಬೆಂಬಲಿಸಲಿದೆ ಎಂದು ಹೇಳಲಾಗಿದೆ. ಇನ್ನು ಸ್ಮಾರ್ಟ್‌ಫೋನ್‌ NXTVISION ಸ್ಕ್ರೀನ್‌ ಟೆಕ್ನಾಲಜಿಯನ್ನು ಒಳಗೊಂಡಿದೆ.

ಪ್ರೊಸೆಸರ್‌ ಸಾಮರ್ಥ್ಯ ಯಾವುದು?

ಪ್ರೊಸೆಸರ್‌ ಸಾಮರ್ಥ್ಯ ಯಾವುದು?

ಇನ್ನು ಈ ಸರಣಿಯಲ್ಲಿ TCL 40 R 5G ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಆದರೆ ಟಿಸಿಎಲ್‌ 40 SE ಮತ್ತು ಟಿಸಿಎಲ್‌ 408 ಸ್ಮಾರ್ಟ್‌ಫೋನ್‌ಗಳು ಮೀಡಿಯಾಟೆಕ್‌ ಹಿಲಿಯೋ G37SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಫೋನ್‌ಗಳು 4GB RAM ಮತ್ತು 128GB ಹಾಗೂ 6GB RAM ಮತ್ತು 256GB ಇನ್‌ಬಿಲ್ಟ್‌ ಸ್ಟೋರೇಜ್‌ ಸಾಮರ್ಥ್ಯದ ಎರಡು ವೇರಿಯೆಂಟ್‌ ಆಯ್ಕೆಗಳನ್ನು ಹೊಂದಿವೆ.

ಕ್ಯಾಮೆರಾ ಸೆಟ್‌ಅಪ್‌ ಏನಿದೆ?

ಕ್ಯಾಮೆರಾ ಸೆಟ್‌ಅಪ್‌ ಏನಿದೆ?

ಇನ್ನು ಈ ಮೂರು ಸ್ಮಾರ್ಟ್‌ಫೋನ್‌ಗಳು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿವೆ. ಇದರಲ್ಲಿ ಮುಖ್ಯ ಕ್ಯಾಮೆರಾ 50MP ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 2MP ಡೆಪ್ತ್ ಸೆನ್ಸರ್ ಮತ್ತು ಮೂರನೇ ಕ್ಯಾಮೆರಾ 2MP ಮ್ಯಾಕ್ರೋ ಲೆನ್ಸ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ 8MP ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿವೆ. ಈ ಕ್ಯಾಮೆರಾ ಮೂಲಕ 1080p ವೀಡಿಯೊ ರೆಕಾರ್ಡ್‌ ಮಾಡಬಹುದಾಗಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಟಿಸಿಎಲ್‌ 40 R 5G, ಟಿಸಿಎಲ್‌ 40 SE ಮತ್ತು ಟಿಸಿಎಲ್‌ 408 ಸ್ಮಾರ್ಟ್‌ಫೋನ್‌ಗಳು 5,010mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇವುಗಳು ವೇಗದ ಚಾರ್ಜಿಂಗ್‌ ಬೆಂಬಲಿಸುವುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆದರೆ ಬಿಗ್‌ ಬ್ಯಾಟರಿ ಬ್ಯಾಕ್‌ಅಪ್‌ ನೀಡೋದು ಪಕ್ಕಾ ಆಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, ಬ್ಲೂಟೂತ್‌ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಟಿಸಿಎಲ್‌ 40 R 5G ಸ್ಮಾರ್ಟ್‌ಫೋನ್‌ ಬೆಲೆ $ 219 (ಅಂದಾಜು 18,106ರೂ) ಆಗಿದೆ. ಆದರೆ ಟಿಸಿಎಲ್‌ 40 SE ಸ್ಮಾರ್ಟ್‌ಫೋನ್‌ ಬೆಲೆ $169 (ಅಂದಾಜು 13,972ರೂ) ಆಗಿದೆ. ಇನ್ನು ಟಿಸಿಎಲ್‌ 408 ಸ್ಮಾರ್ಟ್‌ಫೋನ್‌ ಬೆಲೆ ಕೇವಲ $129 (ಅಂದಾಜು 10,665ರೂ) ಆಗಿರುತ್ತದೆ. ಇನ್ನು ಈ ಸ್ಮಾರ್ಟ್‌ಫೊನ್‌ಗಳು ಮೊದಲ ತ್ರೈಮಾಸಿಕದಲ್ಲಿ ಯುರೋಪ್ ಮತ್ತು ಏಷ್ಯಾದಲ್ಲಿ ಲಭ್ಯವಾಗಲಿದೆ ಎನ್ನಲಾಗಿದೆ.

Best Mobiles in India

English summary
TCL announced TCL 40 smartphones series: Details Here

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X