Subscribe to Gizbot

ಈ ಟೆಕ್ ಉದ್ಯೋಗಗಳಿಂದ ಕೈತುಂಬಾ ಸಂಬಳ ಗ್ಯಾರಂಟಿ

Written By:

ತಂತ್ರಜ್ಞಾನ ಲೋಕದಲ್ಲಿ ಉದ್ಯೋಗ ದೊರೆಯುವುದು ಎಂದರೆ ಅದೃಷ್ಟ ಖುಲಾಯಿಸಿದಂತೆ. ಸಾಫ್ಟ್‌ವೇರ್ ಅಥವಾ ನೆಟ್‌ವರ್ಕ್ ಮ್ಯಾನೇಜ್‌ಮೆಂಟ್ ಏನೇ ಆದರೂ ಕೈತುಂಬಾ ಸಂಬಳವಂತೂ ಗ್ಯಾರಂಟಿ.

ಓದಿರಿ: ಕೈತುಂಬಾ ಸಂಬಳ ಗಳಿಸಬೇಕೇ ಹಾಗಾದರೆ ಇಲ್ಲೊಮ್ಮೆ ಪ್ರಯತ್ನಿಸಿ!

ಇಂದಿನ ಲೇಖನದಲ್ಲಿ ಕೈ ತುಂಬಾ ಸಂಬಳ ಮತ್ತು ಉದ್ಯೋಗ ಭದ್ರತೆಯನ್ನು ನೀಡುವ ಟಾಪ್ ಉದ್ಯೋಗಗಳ ಪಟ್ಟಿಯನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದು ನೀವು ಇಂತಹ ಉದ್ಯೋಗಗಳನ್ನು ಪ್ರಯತ್ನಿಸಬಹುದು. ಹಾಗಿದ್ದರೆ ಬನ್ನಿ ಆ ಉದ್ಯೋಗಗಳ ಪಟ್ಟಿಯನ್ನು ನಾವು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಂಬಳ: $214,000 ಗಿಂತಲೂ ಅಧಿಕ

ಮುಖ್ಯ ಭದ್ರತಾ ಆಫೀಸರ್

ಹ್ಯಾಕರ್‌ಗಳಿಂದ ಸಂಸ್ಥೆಯನ್ನು ರಕ್ಷಿಸುವ ಕೆಲಸವನ್ನು ಇವರು ಮಾಡುತ್ತಾರೆ. ಕಂಪ್ಯೂಟರ್ ಭದ್ರತಾ ಉತ್ಪನ್ನಗಳನ್ನು ಖರೀದಿಸುವುದು ಮತ್ತು ಇನ್‌ಸ್ಟಾಲ್ ಮಾಡುವ ಕೆಲಸಗಳನ್ನು ಮಾಡಬೇಕಾಗುತ್ತದೆ.

ಸಂಬಳ: $200,000 ಗಿಂತಲೂ ಅಧಿಕ

ಚೀಫ್ ಡೇಟಾ ಆಫೀಸರ್

ಹೆಚ್ಚಿನ ಡೇಟಾಗಳನ್ನು ಸಂಗ್ರಹಿಸುವುದು, ಶೇಖರಿಸುವುದು ಮತ್ತು ವಿಶ್ಲೇಷಿಸುವುದು. ಡೇಟಾ ಸೈಂಟಿಸ್ಟ್‌ಗಳು ಇದರಲ್ಲಿದ್ದು ಐಟಿ, ಮಾರ್ಕೆಟಿಂಗ್, ಬ್ಯುಸಿನೆಸ್ ಫಂಕ್ಶನ್‌ನಲ್ಲಿ ಕಾರ್ಯನಿರ್ವಹಿಸಬಹುದು.

ಸಂಬಳ: $178,000 ಗಿಂತಲೂ ಅಧಿಕ

ವಿಪಿ, ಇನ್‌ಫಾರ್ಮೇಶನ್ ಟೆಕ್ನಾಲಜಿ

ಟೆಕ್ ತಂಡವನ್ನು ಮುನ್ನಡೆಸುವ ಮುಖ್ಯಸ್ಥನಾಗಿ ಈತ ಕೆಲಸ ಮಾಡಬೇಕಾಗುತ್ತದೆ.

ಸಂಬಳ: $177,000 ಗಿಂತಲೂ ಅಧಿಕ

ವಿಪಿ ಇಂಜಿನಿಯರ್

ಉತ್ಪನ್ನಗಳನ್ನು ಸುಧಾರಿಸುವ ಸಾಫ್ಟ್‌ವೇರ್ ಅಥವಾ ಹಾರ್ಡ್‌ವೇರ್ ತಂಡಗಳನ್ನು ಈ ವ್ಯಕ್ತಿ ಮುನ್ನಡೆಸಬೇಕಾಗುತ್ತದೆ.

ಸಂಬಳ: $177,000 ಗಿಂತಲೂ ಅಧಿಕ

ಡೈರೆಕ್ಟರ್, ಪಿಎಮ್‌ಒ

ನಿರ್ದಿಷ್ಟ ಟೆಕ್ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಂಡು ಅದನ್ನು ಮುನ್ನಡೆಸುವುದು

ಸಂಬಳ: $177,000 ಗಿಂತಲೂ ಅಧಿಕ

ಸ್ಕಾಲಾ ಡೆವಲಪರ್

ಸ್ಕಾಲಾ ಭಾಷೆಯಲ್ಲಿ ಪಳಗಿದ ಕಂಪ್ಯೂಟರ್ ಪ್ರೊಗ್ರಾಮರ್

ಸಂಬಳ: $175,000 ಗಿಂತಲೂ ಅಧಿಕ

ಅಪ್ಲಿಕೇಶನ್ ಆರ್ಕಿಟೆಕ್ಟ್

ದೊಡ್ಡದಾದ ಕಠಿಣ ಸಾಫ್ಟ್‌ವೇರ್ ಪ್ರೊಗ್ರಾಮ್‌ಗಳನ್ನು ಸಹಾಯ ಮಾಡುವ ಅಪ್ಲಿಕೇಶನ್ ಆರ್ಕಿಟೆಕ್ಟ್

ಸಂಬಳ: $174,000 ಗಿಂತಲೂ ಅಧಿಕ

ಐಓಎಸ್ ಡೆವಲಪರ್

ಆಪಲ್ ಡಿವೈಸ್‌ಗಳಿಗೆ ಅಂದರೆ ಐಫೋನ್ ಮತ್ತು ಐಪ್ಯಾಡ್‌ಗೆ ಮೊಬೈಲ್ ಅಪ್ಲಿಕೇಶನ್‌ಗಳನ್ನು ಬರೆಯುವವರು.

ಸಂಬಳ: $173,000 ಗಿಂತಲೂ ಅಧಿಕ

ವಿಪಿ ಇನ್‌ಫ್ರಾಸ್ಟ್ರಕ್ಚರ್

ಇನ್‌ಫ್ರಾಸ್ಟ್ರಕ್ಚರ್ ವೈಸ್ ಪ್ರೆಸಿಡೆಂಟ್ ಕಂಪೆನಿಯ ಕಂಪ್ಯೂಟರ್ ಹಾರ್ಡ್‌ವೇರ್ ಅನ್ನು ನಿಯಂತ್ರಿಸುತ್ತಾರೆ.

ಸಂಬಳ: $173,000 ಗಿಂತಲೂ ಅಧಿಕ

ಆಂಡ್ರಾಯ್ಡ್ ಡೆವಲಪರ್

ಆಂಡ್ರಾಯ್ಡ್ ಡಿವೈಸ್‌ಗಳಿಗೆ ಮೊಬೈಲ್ ಅಪ್ಲಿಕೇಶನ್‌ಗಳನ್ನು ಬರೆಯುವ ಕೆಲಸ ಇವರದ್ದಾಗಿರುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here's are 13 tech jobs according to Mondo's listing which will help you earn at least $130,000.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot