ಭಾರತದ ಟೆಲಿಕಾಂ ಇಷ್ಟು ಬದಲಾಗಲು ಜಿಯೋ ಕಾರಣವಲ್ಲ..'ಟ್ರಾಯ್'!!

  |

  ಇಂದಿನ ಟೆಲಿಕಾಂ ಪ್ರಪಂಚ ಇಷ್ಟು ಬದಲಾವಣೆಯಾಗಲು ಕಾರಣ ಜಿಯೋ ಎಂದು ನಾವೆಂದುಕೊಂಡಿದ್ದೇವೆ. ಆದರೆ, ಮನುಷ್ಯನ ಮೂಲಭೂತ ಅವಶ್ಯಕತೆಯಾಗಿ ಬದಲಾಗಿದ್ದ ದೂರ ಸಂಪರ್ಕ ಸೇವೆಯನ್ನು ಪ್ರತಿಯೋರ್ವನಿಗೂ ನ್ಯಾಯಸಮ್ಮತ ಬೆಲೆಯಲ್ಲಿ ತಲುಪಿಸಿದ ಕೀರ್ತಿ ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರಕ್ಕೆ 'ಟ್ರಾಯ್‌' ಸಲ್ಲಬೇಕು ಎಂದರೆ ಆಶ್ಚರ್ಯವೇನಿಲ್ಲ.!

  ಹೌದು, ನೀರು, ವಿದ್ಯುತ್‌ನಂತೆ ದೂರವಾಣಿ ಕೂಡ ಇಂದು ಮನುಷ್ಯನ ಮೂಲಭೂತ ಅವಶ್ಯಕತೆಯಾಗಿ ಮಾರ್ಪಾಟಾಗಿದೆ. ಸಂಪರ್ಕ ಕ್ರಾಂತಿಯ ನಡುವೆ, ಇಡೀ ವ್ಯವಸ್ಥೆಯ ನಿಯಂತ್ರಣ ಹೇರುವ ವ್ಯವಸ್ಥೆಯಾಗಿ 'ಟ್ರಾಯ್‌' ಸಮಯೊಚಿತವಾಗಿ ತನ್ನ ಜವಾಬ್ದಾರಿ ಪೂರ್ಣಗೊಳಿಸಿದೆ. 20 ವರ್ಷಗಳ ದೀರ್ಘ ಅವಧಿಯಲ್ಲಿ ಭಾರತೀಯರ ಹಿತ ಕಾಪಾಡುವಲ್ಲಿ ಟ್ರಾಯ್ ಸಫಲವಾಗಿದೆ.

  ಭಾರತದ ಟೆಲಿಕಾಂ ಇಷ್ಟು ಬದಲಾಗಲು ಜಿಯೋ ಕಾರಣವಲ್ಲ..'ಟ್ರಾಯ್'!!

  ದೂರವಾಣಿ ಕ್ಷೇತ್ರವನ್ನು ಖಾಸಗಿಯವರಿಗೆ ತೆರೆದಿಟ್ಟ ಸಂದರ್ಭದಲ್ಲಿ ಹುಟ್ಟಿದ 'ಟ್ರಾಯ್', ಟೆಲಿಕಾಂ ನೀತಿ ನಿರೂಪಕ ಸಂಸ್ಥೆಯಾಗಿ ಹುಟ್ಟಿಕೊಂಡು ಇಂದು ಭಾರತೀಯರ ಹಿತವನ್ನು ಕಾಪಾಡಿಕೊಂಡು ಬಂದಿದೆ. ವಿಶ್ವದ ಟೆಲಿಕಾಂ ಪ್ರಪಂಚದಲ್ಲಿ ಭಾರತದ ಟೆಲಿಕಾಂ ಕ್ಷೇತ್ರ ಅಬ್ಬಾ ಎನ್ನುವಂತೆ ಬದಲಾವಣೆ ಮಾಡಿದ ಕೀರ್ತಿ ಟ್ರಾಯ್‌ಗೆ ದಕ್ಕಿದೆ ಎಂದರೆ ಅತಿಶಯೊಕ್ತಿಯಲ್ಲ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  1997ರಲ್ಲಿ ಟ್ರಾಯ್‌ ಉಗಮ!

  ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಆಕ್ಟ್ಅನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು 1997ರಲ್ಲಿ. ಅದೇ ವರ್ಷ ಟೆಲಿಕಾಂ ನೀತಿ ನಿರೂಪಕ ಸಂಸ್ಥೆಯಾಗಿ ಟ್ರಾಯ್‌ ಅನ್ನು ಸ್ಥಾಪಿಸಲಾಯಿತು. ಇಲ್ಲಿಗೆ 20 ವರ್ಷಗಳ ದೀರ್ಘ‌ ಅವಧಿಯನ್ನು ಪೂರೈಸಿರುವ ಟ್ರಾಯ್‌ ಇಲ್ಲಿಯವರೆಗೂ ಟೆಲಿಕಾಂನಲ್ಲಿ ತಂದಿರುವ ಸುಧಾರಣೆಗಳು ಹಲವು.

  ಟೆಲಿಕಾಂ ಲಾಬಿ ದೊಡ್ಡ ಮಟ್ಟದ್ದು!

  ಟೆಲಿಕಾಂ 2G ಹಗರಣ ಭಾರತದಲ್ಲಿ ನಡೆದ ಒಂದು ದೊಡ್ಡ ಹಗರಣ ಎಂಬುದು ನಿಮಗೆಲ್ಲಾ ತಿಳಿದಿದೆ. ಇಂತಹ ಒಂದೊಂದು ನಿರ್ಧಾರ ಕೂಡ ಸಾವಿರಾರು ಕೋಟಿಗಳ ವ್ಯವಹಾರವಾಗಿರುತ್ತದೆ. ಹಾಗಾಗಿ, ಸರ್ಕಾರದ ಮೇಲೆ ಖಾಸಗಿ ಲಾಬಿ ಚಾಲೂ ಇದ್ದುದ್ದರಿಂದ ಸರ್ಕಾರ ಜಾಣ್ಮೆಯಿಂದ ಜವಾಬ್ದಾರಿಗಳನ್ನು ಟ್ರಾಯ್‌ಗೆ ವಹಿಸಿ ಟೆಲಿಕಾಂ ಪ್ರಪಂಚಕ್ಕೆ ಕಡಿವಾಣ ಹಾಕಿತು.

  ಎಂದೂ ಗ್ರಾಹಕನ ಪರ

  ದೇಶದಲ್ಲಿ ಹೆಚ್ಚು ಜನ ಮೊಬೈಲ್‌ ಗ್ರಾಹಕರು ಅನಕ್ಷರಸ್ಥರಾಗಿರುವುರಿಂದ ಟ್ರಾಯ್‌ ಅವರ ಪರ ನಿಲ್ಲದಿದ್ದರೆ ಇಲ್ಲಿಗೆ ಮೊಬೈಲ್ ಬಳಕೆದಾರರು ಕಷ್ಟಕ್ಕೆ ಸಿಲುಕುತ್ತಿದ್ದರು. ಖಾಸಗಿ ಮೊಬೈಲ್‌ ಕಂಪೆನಿಗಳು ಕೇವಲ ಲಾಭಕ್ಕಾಗಿಯೇ ಕೆಲಸ ಮಾಡುತ್ತಿದ್ದರಿಂದಾಗಿ, ಟ್ರಾಯ್ ಕಾಲಕಾಲಕ್ಕೆ ಹಲವು ನಿಯಮಗಳನ್ನು ಜಾರಿಗೆ ತಂದಿದೆ. ಇದು ಈಗಲೂ ಗ್ರಾಹಕನ ಹಿತ ಕಾಪಾಡುತ್ತಿದೆ.

  ಟೆಲಿ ಮಾರ್ಕೆಟಿಂಗ್ ಕರೆ!

  ಮೊಬೈಲ್ ಬಳಕೆದಾರರಿಗೆ ಕಿರಿಕಿರಿಯೆನ್ನಿಸುವ ಟೆಲಿ ಮಾರ್ಕೆಟಿಂಗ್ ಕರೆಗಳಿಂದ ರಕ್ಷಿಸಲು ಟ್ರಾಯ್‌ "ನ್ಯಾಷನಲ್‌ ಡು ನಾಟ್ ಕಾಲ್‌' ಜಾರಿಗೆ ತಂದಿರುವುದು ಈಗ ಎಲ್ಲರಿಗೂ ತಿಳಿದಿದೆ. ಯಾವುದೇ ಟೆಲಿಕಾಂ ಕಂಪೆನಿಯಿಂದಲು ಕೂಡ ಅಪ್ಪಿತಪ್ಪಿಯೂ ಮಾರ್ಕೆಟಿಂಗ್ ಕರೆ, ಸಂದೇಶ ಬರುವಂತಿಲ್ಲ. ಇದು ಗ್ರಾಹಕ ಕಿರಿಕಿರಿಯನ್ನು ಪಟ್ಟಿಸಿದೆ.

  ಮೊಬೈಲ್‌ ನಂಬರ್‌ ಪೋರ್ಟಬಿಲಿಟಿ!

  ಮೊಬೈಲ್ ಕಂಪೆನಿಗಳಿಗೆ ಈಗಲೂ ಮೂಗುದಾರ ಹಾಕಿರುವಂತಹ ಒಂದು ಜನಪ್ರಿಯ ಬದಲಾವಣೆ ಎಂದರೆ ಟ್ರಾಯ್‌ ರೂಪಿಸಿದ ಮೊಬೈಲ್‌ ನಂಬರ್‌ ಪೋರ್ಟಬಿಲಿಟಿ ಅರ್ಥಾತ್‌ 'ಎಂಎನ್‌ಪಿ' ಇಂದು ಮೊಬೈಲ್‌ ನಂಬರ್‌ ಪೋರ್ಟಬಿಲಿಟಿ ಭಯ ಇಲ್ಲದಿದ್ದರೆ ಮೊಬೈಲ್ ಕಂಪೆನಿಗಳ ಸೇವೆ ಎಷ್ಟು ಕೆಟ್ಟದಾಗಿರುತಿತ್ತು ಎಂಬುದನ್ನು ಊಹಿಸಲು ಸಾಧ್ಯವಿಲ್ಲ.!

  ಎಲ್ಲವನ್ನು ನೆನಪಿಸುವುದಾದರೆ!

  ಟೆಲಿಕಾಂ ಕಂಪೆನಿಗಳು ಗುಪ್ತ ಶುಲ್ಕ ಹೇರುವಂತಿಲ್ಲ, 20 ರೂ.ಗಿಂತ ಹೆಚ್ಚು ಟಾಕ್ ಟೈಮ್‌ ಹೊಂದಿರುವ ಸಿಮ್ ಅನ್ನು ನಿಷ್ಕ್ರಿಯಗೊಳಿಸುವಂತಿಲ್ಲ. ಆರು ತಿಂಗಳವರೆಗೆ ಟ್ಯಾರಿಫ್ ದರ ಎರಿಸುವಂತಿಲ್ಲ. ಮೌಲ್ಯವರ್ಧಿತ ಸೇವೆಗೆ ಗ್ರಾಹಕ ಒಪ್ಪಿಗೆ ಅಗತ್ಯ, ಪ್ಲಾನ್ ಬದಲಾವಣೆಗೆ ಶುಲ್ಕ ವಿಧಿಸುವಂತಿಲ್ಲ ಎಂಬ ನಿಯಮಗಳು ಇಂದು ಗ್ರಾಹಕರ ಹಿತ ಕಾಪಾಡಿವೆ.

  ಗ್ರಾಹಕರ ದೂರಿಗೆ ನಿಯಮಗಳು!

  ಟೆಲಿಕಾಂ ಕಂಪೆನಿಗಳ ಸೆವೆಗಳ ಬಗ್ಗೆ ಗ್ರಾಹಕರ ದೂರು ನಿರ್ವಹಣೆಗೆ ಸ್ಪಷ್ಟ ನಿಯಮಗಳನ್ನು ಟ್ರಾಯ್‌ ಈಗ ರೂಪಿಸಿದೆ. ಉಚಿತ ಕಾಲ್‌ಸೆಂಟರ್‌, ನೋಡಲ್ ಆಫೀಸರ್, ಅಪಲೇಟ್ ಅಥಾರಿಟಿಗಳ ಈ ನಿರೂಪಣೆ ಜನಪರವಾಗಿದೆ. ಈ ಹಂತದಲ್ಲಿಯೂ ಟ್ರಾಯ್‌, ಹಲವು ಗ್ರಾಹಕ ಪರ ಹೆಜ್ಜೆಗಳನ್ನು ಇಟ್ಟಿದೆ.

  ಜಿಯೋಗೆ ಟ್ರಾಯ್ ಸಪೋರ್ಟ್?

  ಜಿಯೋ ಈಗ ಇಷ್ಟು ಬೆಳೆದಿರಲು ಟ್ರಾಯ್ ನೀಡಿರುವ ಸಪೋರ್ಟ್ ಕಾರಣ ಎಂದು ಎಲ್ಲರೂ ಅಭಿಪ್ರಾಯವಾಗಿದೆ. ಆದರೆ, ಜಿಯೋ ಭಾರತದ ಟೆಲಿಕಾಂನಲ್ಲಿ ಕಾಲಿಡಲು ಟ್ರಾಯ್ ಸರಿಯಾದ ನಿಯಮಗಳನ್ನಷ್ಟೆ ಇಟ್ಟಿರುವ ಬಗ್ಗೆ ದಾಖಲೆಗಳಿವೆ. ಒಂದು ವೇಳೆ ಟ್ರಾಯ್ ಜಿಯೋ ಪರವಾಗಿದ್ದರೂ ಸಹ ಅದರ ಲಾಭ ಬಡ ಮೊಬೈಲ್ ಬಳಕೆದಾರರಿಗೆ ಎಂಬುದು ಸುಳ್ಳಲ್ಲ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  The Telecom Regulatory Authority of India (TRAI) is a statutory body set up by the Government of India under section 3 of the Telecom Regulatory Authority of India Act, 1997. to know more visit to kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more