ಟೆಲಿಗ್ರಾಮ್‌ನಿಂದ ಹೊಸ ಅಪ್‌ಡೇಟ್‌ ಪ್ರಕಟ! ಯಾವೆಲ್ಲಾ ಹೊಸ ಫೀಚರ್ಸ್‌ ಸೇರ್ಪಡೆ!

|

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ಗಳಲ್ಲಿ ಟೆಲಿಗ್ರಾಮ್‌ ಕೂಡ ಒಂದಾಗಿದೆ. ಟೆಲಿಗ್ರಾಮ್‌ ಅಪ್ಲಿಕೇಶನ್‌ ತನ್ನ ವೈವಿಧ್ಯಮಯ ಫೀಚರ್ಸ್‌ಗಳ ಮೂಲಕ ವಾಟ್ಸಾಪ್‌ಗಿಂತ ಭಿನ್ನವಾಗಿ ಗುರುತಿಸಿಕೊಂಡಿದೆ. ಅಲ್ಲದೆ ವಾಟ್ಸಾಪ್‌ಗೆ ಪ್ರಬಲ ಪೈಪೋಟಿಯನ್ನು ಕೂಡ ನೀಡುತ್ತಾ ಬಂದಿದೆ. ಅದೇ ಹಾದಿಯಲ್ಲಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ಟೆಲಿಗ್ರಾಮ್‌ ತನ್ನ ಬಳಕೆದಾರರಿಗೆ ಹೊಸ ಅಪ್ಡೇಟ್‌ ಅನ್ನು ಪರಿಚಯಿಸಿದೆ. ಇದರಲ್ಲಿ ಹಲವು ಹೊಸ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಿದೆ.

ಟೆಲಿಗ್ರಾಮ್‌

ಹೌದು, ಟೆಲಿಗ್ರಾಮ್‌ ಹೊಸ ಅಪ್ಡೇಟ್‌ ಅನ್ನು ಪರಿಚಯಿಸಿದೆ. ಹೊಸ ಅಪ್ಡೇಟ್‌ನಲ್ಲಿ ಗ್ರೂಪ್ಸ್‌ ಟಾಪಿಕ್‌, ಕಲೆಕ್ಟಿಬಲ್‌ ಯೂಸರ್‌ನೇಮ್ಸ್‌ ಮತ್ತು ವಾಯ್ಸ್‌ ಟು ಟೆಕ್ಸ್ಟ್‌ ಫಾರ್‌ ವೀಡಿಯೊ ಮೆಸೇಜ್‌ ನಂತಹ ಫೀಚರ್ಸ್‌ಗಳನ್ನು ಅನಾವರಣಗೊಳಿಸಿದೆ. ಪ್ರಸ್ತುತ ಈ ಹೊಸ ಅಪ್ಡೇಟ್‌ ಆಂಡ್ರಾಯ್ಡ್‌ ಅಪ್ಲಿಕೇಶನ್‌ನಲ್ಲಿ ಮಾತ್ರ ಲಭ್ಯವಾಗಲಿದೆ. ಆದರೆ ಮುಂದಿನ ದಿನಗಳಲ್ಲಿ iOS ಬಳಕೆದಾರರು ಕೂಡ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ಟೆಲಿಗ್ರಾಮ್‌ನ ಹೊಸ ಅಪ್ಡೇಟ್‌ನಲ್ಲಿ ಏನೆಲ್ಲಾ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ..

ಟಾಪಿಕ್ಸ್‌ ಇನ್‌ ಗ್ರೂಪ್ಸ್‌

ಟಾಪಿಕ್ಸ್‌ ಇನ್‌ ಗ್ರೂಪ್ಸ್‌

ಟೆಲಿಗ್ರಾಮ್‌ ಪರಿಚಯಿಸಿರುವ ಹೊಸ ಅಪ್ಡೇಟ್‌ನಲ್ಲಿ ಗುಂಪುಗಳಲ್ಲಿ ವಿಷಯಗಳು (ಟಾಪಿಕ್ಸ್‌ ಇನ್‌ ಗ್ರೂಪ್ಸ್‌) ಎಂಬ ಹೊಸ ಫೀಚರ್ಸ್‌ ಪರಿಚಯಿಸಿದೆ. ಇದು 200 ಸದಸ್ಯರ ಗುಂಪಿನಲ್ಲಿ ವೈಯಕ್ತಿಕ ಚಾಟ್‌ಗಳಾಗಿ ಕಾರ್ಯನಿರ್ವಹಿಸುತ್ತದೆ. ಅಂದರೆ ಬಳಕೆದಾರರು ಯಾವುದೇ ವಿಷಯಕ್ಕೆ ಪ್ರತ್ಯೇಕ ಸ್ಪೇಸ್‌ ಕ್ರಿಯೆಟ್‌ ಮಾಡಬಹುದು. ಸಮೀಕ್ಷೆಗಳು, ಪಿನ್ ಮಾಡಿದ ಸಂದೇಶಗಳು ಮತ್ತು ಬಾಟ್‌ಗಳಂತಹ ಫೀಚರ್ಸ್‌ಗಳಿಗೆ ಪ್ರವೇಶವನ್ನು ಕೂಡ ಪಡೆಯಲು ಸಾಧ್ಯವಾಗಲಿದೆ. ಈ ಫೀಚರ್ಸ್‌ ಅನ್ನು ವಿಶೇಷವಾಗಿ ಬಿಗ್‌ ಗ್ರೂಪ್‌ಗಳಿಗೆ ಉದ್ದೇಶಿಸಲಾಗಿದೆ. ಇದರಲ್ಲಿ ಅವರ ಚಾಟ್‌ಗಳನ್ನು ಕಸ್ಟಮೈಸ್ ಮಾಡಲು ಮತ್ತು ಚರ್ಚೆಯನ್ನು ಉತ್ತೇಜಿಸಲು ಹೊಸ ಮಾರ್ಗಗಳನ್ನು ಸೇರಿಸುವ ಕೆಲಸವನ್ನು ಮಾಡಲಿದೆ.

ಕಲೆಕ್ಟಿಬಲ್‌ ಯೂಸರ್‌ನೇಮ್ಸ್‌

ಕಲೆಕ್ಟಿಬಲ್‌ ಯೂಸರ್‌ನೇಮ್ಸ್‌

ಕಲೆಕ್ಟಿಬಲ್‌ ಯೂಸರ್‌ನೇಮ್ಸ್‌ (ಸಂಗ್ರಹಿಸಬಹುದಾದ ಬಳಕೆದಾರರ ಹೆಸರುಗಳು) ಫೀಚರ್ಸ್‌ ಅಪ್ಲಿಕೇಶನ್‌ನಲ್ಲಿ ಸೆಟ್‌ ಮಾಡಬಹುದಾದ ಪ್ರಮಾಣಿತ ಬಳಕೆದಾರ ಹೆಸರುಗಳಂತೆಯೇ ಕಾರ್ಯನಿರ್ವಹಿಸುತ್ತದೆ. ಆದರೆ ಇದರಲ್ಲಿ ಬಳಕೆದಾರ ಹೆಸರುಗಳು ಉದ್ದದಲ್ಲಿ ಐದು ಅಕ್ಷರಗಳಿಗಿಂತ ಕಡಿಮೆಯಿರಬೇಕು. ಒಮ್ಮೆ ಸ್ವಾಧೀನಪಡಿಸಿಕೊಂಡ ನಂತರ, ಬಳಕೆದಾರರು ತಮ್ಮ ಸಂಗ್ರಹಯೋಗ್ಯ ಬಳಕೆದಾರ ಹೆಸರಿನ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದುವುದಕ್ಕೆ ಸಾಧ್ಯವಿದೆ. ಅಂದರೆ ನಿಮ್ಮ ಬಳಕೆದಾರರ ಹೆಸರುಗಳ ಮಾಲೀಕತ್ವವನ್ನು ಸ್ಕೇಲೆಬಲ್ ಬ್ಲಾಕ್‌ಚೈನ್ ನೆಟ್‌ವರ್ಕ್ ಮೂಲಕ ಸುರಕ್ಷಿತಗೊಳಿಸಲಾಗಿದೆ.

ವಾಯ್ಸ್‌ ಟು ಟೆಕ್ಸ್ಟ್‌ ಫಾರ್‌ ವೀಡಿಯೊ

ವಾಯ್ಸ್‌ ಟು ಟೆಕ್ಸ್ಟ್‌ ಫಾರ್‌ ವೀಡಿಯೊ

ಟೆಲಿಗ್ರಾಮ್ ವೀಡಿಯೊ ಸಂದೇಶಗಳಿಗಾಗಿ ವಾಯ್ಸ್-ಟು-ಟೆಕ್ಸ್ಟ್ ಎಂಬ ಫೀಚರ್ಸ್‌ ಪರಿಚಯಿಸಿದೆ. ಇದರಲ್ಲಿ ಹೆಸರೇ ಸೂಚಿಸುವಂತೆ ಬಳಕೆದಾರರಿಗೆ ವೀಡಿಯೊ ಸಂದೇಶಗಳನ್ನು ಟೆಕ್ಸ್ಟ್‌ ಪ್ರತಿಗಳಾಗಿ ಪರಿವರ್ತಿಸಲು ಅನುಮತಿಸುತ್ತದೆ. ಈ ಫೀಚರ್ಸ್‌ ಪ್ರಸ್ತುತ ಪ್ರೀಮಿಯಂ ಬಳಕೆದಾರರಿಗೆ ಮಾತ್ರ ಲಭ್ಯವಿದೆ.

ಟೆಲಿಗ್ರಾಮ್‌

ಇದಲ್ಲದೆ ಟೆಲಿಗ್ರಾಮ್‌ ಅಪ್ಡೇಟ್‌ನಲ್ಲಿ 12 ಹೊಸ ಎಮೋಜಿ ಪ್ಯಾಕ್‌ಗಳಿಗೆ ಬೆಂಬಲವನ್ನು ಸಹ ನೀಡಲಾಗಿದೆ. ಈ ಹೊಸ ಎಮೋಜಿ ಪ್ಯಾಕ್‌ಗಳು ಪ್ರೀಮಿಯಂ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಇದರಲ್ಲಿ ನಾಲ್ಕು ಹೊಸ ಇಂಟರ್‌ ಆಕ್ಟಿವ್‌ ಎಮೋಜಿಗಳನ್ನು ಸೇರಿಸಿದೆ. ಇದು 1-ಆನ್-1 ಚಾಟ್‌ಗಳಲ್ಲಿ ಫುಲ್‌-ಸ್ಕ್ರೀನ್‌ ಎಫೆಕ್ಟ್‌ಗಳನ್ನು ಪ್ಲೇ ಮಾಡುತ್ತದೆ ಮತ್ತು ರಿಯಾಕ್ಷನ್ ಆಗಿಯು ಬಳಸುವುದಕ್ಕೆ ಸಾಧ್ಯವಿದೆ. ಇನ್ನು ಟೆಲಿಗ್ರಾಮ್‌ ತನ್ನ ಐಒಎಸ್‌ ಬಳಕೆದಾರರಿಗೆ ನೈಟ್‌ಮೋಡ್‌ ಫೀಚರ್ಸ್‌ ಅನ್ನು ರಿ ಡಿಸೈನ್‌ ಮಾಡಿದೆ. ಹೊಸ ಡಾರ್ಕ್ ಮೋಡ್ ಥೀಮ್‌ಗಳು ನೀವು ಚಾಟ್‌ಗಳು ಮತ್ತು ಚಾಟ್ ಪಟ್ಟಿಯಲ್ಲಿ ಸ್ಕ್ರಾಲ್ ಮಾಡುವಾಗ ಉತ್ತಮ ಬ್ಲರ್‌ ಎಫೆಕ್ಟ್‌ಗಳೊಂದಿಗೆ ಕಲರ್‌ ಹೆಚ್ಚು ಸಮತೋಲಿತವಾಗಿ ಕಾಣುವಂತೆ ಮಾಡಲಿದೆ ಎಂದು ಟೆಲಿಗ್ರಾಮ್‌ ಹೇಳಿದೆ.

Best Mobiles in India

English summary
Telegram has rolled out a new update for its users

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X