ಟೆಲಿಗ್ರಾಮ್‌ನಿಂದ ಹೊಸ ಅಪ್ಡೇಟ್‌ ಪ್ರಕಟ! ಯಾವೆಲ್ಲಾ ಫೀಚರ್ಸ್‌ ಲಭ್ಯ!

|

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ಗಳಲ್ಲಿ ಟೆಲಿಗ್ರಾಮ್‌ ಕೂಡ ಒಂದಾಗಿದೆ. ಆದರೆ ವಾಟ್ಸಾಪ್‌ ಆಕರ್ಷಕ ಫೀಚರ್ಸ್‌ಗಳ ಎದುರು ಟೆಲಿಗ್ರಾಮ್‌ ಪೈಫೊಟಿಯನ್ನು ಎದುರಿಸುತ್ತಿದೆ. ವಾಪ್‌ಗೆ ಪ್ರಬಲ ಪೈಪೋಟಿ ನೀಡುತ್ತಿರುವ ಟೆಲಿಗ್ರಾಮ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಅಳವಡಿಸುತ್ತಲೇ ಬಂದಿದೆ. ಸದ್ಯ ಇದೀಗ ತನ್ನ ಬಳಕೆದಾರರಿಗೆ ಹೊಸ ಅಪ್ಡೇಟ್‌ ಅನ್ನು ಪರಿಚಯಿಸಿದೆ. ಈ ಅಪ್ಡೇಟ್‌ನಲ್ಲಿ ಇನ್ಫಿನಿಟಿ ರಿಯಾಕ್ಷನ್‌ ಮತ್ತು ಎಮೋಜಿ ಸ್ಟೇಟಸ್‌ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಿದೆ.

ಟೆಲಿಗ್ರಾಮ್‌

ಹೌದು, ಟೆಲಿಗ್ರಾಮ್‌ ಅಪ್ಲಿಕೇಶನ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಇನ್ಫಿನಿಟಿ ರಿಯಾಕ್ಷನ್‌ ಮತ್ತು ಎಮೋಜಿ ಸ್ಟೇಟಸ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದರಿಂದ ಬಳಕೆದಾರರು ಸಂದೇಶಗಳಿಗೆ ರಿಯಾಕ್ಷನ್‌ ಮಾಡುವಾಗ ಮೂರು ರಿಯಾಕ್ಷನ್‌ಗಳನ್ನು ಸೇರಿಸಬಹುದಾಗಿದೆ. ಅಲ್ಲದೆ ಟೆಲಿಗ್ರಾಂ ಪ್ರೀಮಿಯಂ ಬಳಕೆದಾರರು ಅನ್‌ಲಿಮಿಟೆಡ್‌ ಕಸ್ಟಮ್ ಎಮೋಜಿ ರಿಯಾಕ್ಷನ್‌ ನೀಡಬಹುದು ಎಂದು ಟೆಲಿಗ್ರಾಮ್‌ ಹೇಳಿದೆ. ಹಾಗಾದ್ರೆ ಟೆಲಿಗ್ರಾಮ್‌ ಪರಿಚಯಿಸಿರುವ ಹೊಸ ಫಿಚರ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟೆಲಿಗ್ರಾಮ್‌

ಟೆಲಿಗ್ರಾಮ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಅನ್‌ಲಿಮಿಟೆಡ್‌ ಎಮೋಜಿಗಳನ್ನು ನೀಡುತ್ತಿದೆ. ಇದರಲ್ಲಿ ನೀವು ಸುಲಭವಾಗಿ ಎಮೋಜಿಗಳನ್ನು ಆಯ್ಕೆ ಮಾಡಬಹುದು. ಅಲ್ಲದೆ ಪ್ರತಿ ಸಂದೇಶಕ್ಕೆ ನೀವು ಮೂರು ಎಮೋಜಿ ರಿಯಾಕ್ಷನ್‌ ಅನ್ನು ನೀಡಬಹುದಾಗಿದೆ. ಈ ಹಿಂದೆ ಟೆಲಿಗ್ರಾಮ್‌ ಪ್ರೀಮಿಯಂ ಬಳಕೆದಾರರಿಗೆ ಮಾತ್ರ ಲಭ್ಯವಿದ್ದ ಈ ಫೀಚರ್‌ ಅನ್ನು ಇದೀಗ ಟೆಲಿಗ್ರಾಮ್‌ ಬಳಸುವ ಎಲ್ಲಾ ಬಳಕೆದಾರರು ಬಳಸಬಹುದಾಗಿದೆ. ಇದರಿಂದ ಸಾಕಷ್ಟು ರಿಯಾಕ್ಷನ್‌ ಎಮೋಜಿಗಳಿಗೆ ಬಳಕೆದಾರರು ಪ್ರವೇಶವನ್ನು ಪಡೆಯಬಹುದಾಗಿದೆ.

ರಿಯಾಕ್ಷನ್‌

ಇದಲ್ಲದೆ ಹೊಸ ಎಮೋಜಿಗಳನ್ನು ಸೆಟ್‌ ಮಾಡಲು ಮತ್ತು ರಿಯಾಕ್ಷನ್‌ ಪ್ಯಾನಲ್‌ ಅನ್ನು ರಿ ಡಿಸೈನ್‌ ಮಾಡಿದ್ದೇವೆ, ಆದರಿಂದ ಅದನ್ನು ವಿಸ್ತರಿಸಬಹುದಾಗಿದೆ. ಜೊತೆಗೆ ನೀವು ಆಗಾಗ್ಗೆ ಬಳಸುವ ರಿಯಾಕ್ಷನ್‌ಗಳು ಪ್ಲಾಟ್‌ಫಾರ್ಮ್‌ನ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತವೆ ಎಂದು ಟೆಲಿಗ್ರಾಮ್‌ ಹೇಳಿದೆ. ಇನ್ನು ನೀವು ನೀಡುವ ರಿಯಾಕ್ಷನ್‌ಗಳು ಪ್ರಸ್ತುತ ಗುಂಪುಗಳಲ್ಲಿ ಮತ್ತು 1-ಆನ್-1 ಚಾಟ್‌ಗಳಲ್ಲಿ ಲಭ್ಯವಿದೆ. ಹೊಸ ಅಪ್‌ಡೇಟ್‌ ಮೂಲಕ ಗ್ರೂಪ್‌ ಅಡ್ಮಿನ್‌ ತಮ್ಮ ಗ್ರೂಪ್‌ಗಳಿಗೆ ಕಸ್ಟಮ್‌ ರಿಯಾಕ್ಷನ್‌ಗಳನ್ನು ಬಳಸಬಹುದೇ ಇಲ್ಲವೇ ಅನ್ನೊದನ್ನ ಕಂಟ್ರೋಲ್‌ ಮಾಡಬಹುದಾಗಿದೆ.

ಟೆಲಿಗ್ರಾಮ್‌

ಟೆಲಿಗ್ರಾಮ್‌ನ ಹೊಸ ಅಪ್ಡೇಟ್‌ನ ನಂತರ ಪ್ರೀಮಿಯಂ ಬಳಕೆದಾರರು ತಮ್ಮ ಹೆಸರಿನ ಪಕ್ಕದಲ್ಲಿ ಪ್ರದರ್ಶಿಸಲಾದ ಅನಿಮೇಟೆಡ್ ಎಮೋಜಿ ಸ್ಟೇಟಸ್‌ ಅನ್ನು ಸೇರಿಸಬಹುದು. ತಮ್ಮ ಸ್ಟೇಟಸ್‌ಗಳಲ್ಲಿ ಎಮೋಜಿ ಮೂಲಕ ತಮ್ಮ ಭಾವನೆಗಳನ್ನ ವ್ಯಕ್ತಪಡಿಸಬಹುದಾಗಿದೆ. ಇದಲ್ಲದೆ ಟೆಲಿಗ್ರಾಮ್‌ ಬಳಕೆದಾರರು ಟೆಲಿಗ್ರಾಮ್ ಥೀಮ್‌ಗಳನ್ನು ಸೆಟ್‌ ಮಾಡವುದಕ್ಕೆ ಕೂಡ ಅವಕಾಶವಿದೆ. ಅದರಲ್ಲೂ ವಿಭಿನ್ನ ಟೆಲಿಗ್ರಾಮ್‌ ಥಿಮ್‌ಗಳಿಗೆ ಕಲರ್‌ ಬದಲಾಯಿಸುವುದಕ್ಕೆ ಕೂಡ ಸಾಧ್ಯವಾಗಲಿದೆ.

ಟೆಲಿಗ್ರಾಮ್‌

ಇನ್ನು ಟೆಲಿಗ್ರಾಮ್‌ ಪ್ರೀಮಿಯಂ ಬ್ಯಾಡ್ಜ್‌ ಅನ್ನು ಟ್ಯಾಪ್‌ ಮಾಡುವ ಮೂಲಕ ನಿಮ್ಮ ಟೆಲಿಗ್ರಾಮ್‌ ಸ್ಟೇಟಸ್‌ ಅನ್ನು ಬದಲಾಯಿಸುವ ಆಯ್ಕೆಯನ್ನು ನೀಡಲಾಗಿದೆ. ಇದಲ್ಲದೆ ಟೆಲಿಗ್ರಾಮ್ ಪ್ರೀಮಿಯಂ ಬಳಕೆದಾರರಿಗೆ ಯೂನಿಕ್‌ ಆರ್ಟ್‌ ಸ್ಟೈಲ್ಸ್‌ ಮತ್ತು ಅಕ್ಷರಗಳೊಂದಿಗೆ ಕಸ್ಟಮ್ ಪ್ಯಾಕ್‌ಗಳನ್ನು ಅಪ್‌ಲೋಡ್ ಮಾಡುವುದಕ್ಕೆ ಅವಕಾಶವಿದೆ. ಇದಕ್ಕಾಗಿ ಟೆಲಿಗ್ರಾಮ್‌ ತೆರೆದ ಬಳಕೆದಾರರು ಎಮೋಜಿ ಪ್ಲಾಟ್‌ಫಾರ್ಮ್ ಅನ್ನು ಬಳಸುವುದಕ್ಕೆ ಅವಕಾಶ ನೀಡಲಾಗಿದೆ ಎಂದು ಟೆಲಿಗ್ರಾಮ್‌ ಹೇಳಿದೆ.

ಟೆಲಿಗ್ರಾಮ್‌

ಇದಲ್ಲದೆ ಟೆಲಿಗ್ರಾಮ್‌ ಅಕೌಂಟ್‌ ಅನ್ನು ಲಾಗ್ ಔಟ್ ಆಗುವ ಮತ್ತು ಪದೇ ಪದೇ ಲಾಗ್ ಇನ್ ಆಗುವ ಬಳಕೆದಾರರು ತಮ್ಮ ಇಮೇಲ್ ವಿಳಾಸದ ಮೂಲಕ ಲಾಗಿನ್ ಕೋಡ್‌ಗಳನ್ನು ಸ್ವೀಕರಿಸಬಹುದು. ಇಲ್ಲವೇ ಗೂಗಲ್‌ನೊಂದಿಗೆ ಸೈನ್ ಇನ್ ಮಾಡಬೇಕಾಗುತ್ತದೆ. ಸದ್ಯ ಕಸ್ಟಮ್‌ ಎಮೋಜಿ ರಿಯಾಕ್ಷನ್‌ ಹಾಗೂ ಇನ್ಫಿನಿಟಿ ಎಮೋಜಿ ಫೀಚರ್ ಗಳ ಮೂಲಕ ಟೆಲಿಗ್ರಾಮ್‌ ವಾಟ್ಸಾಪ್‌ಗೆ ಸೆಡ್ಡು ಹೊಡೆಯಲು ಮುಂದಾಗಿದೆ. ಆದರೆ ಇದನ್ನು ಬಳಕೆದಾರರು ಹೇಗೆ ಸ್ವಿಕರಿಸುತ್ತಾರೆ ಅನ್ನೊದು ಮುಖ್ಯವಾಗುತ್ತದೆ.

Best Mobiles in India

English summary
Telegram rolling out a new update with infinite reactions, emoji statuses

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X