Subscribe to Gizbot

ಭರ್ಜರಿ ಆಫರ್ ಮೂಲಕ ಜಿಯೋ ನಡುಗಿಸಿದ ಸಣ್ಣ ಟೆಲಿಕಾಂ ಕಂಪನಿ: ಏರ್‌ಟೆಲ್-ವೊಡಗೂ ಭಯ ಶುರು..!

Written By:

ಟೆಲಿಕಾಂ ಮಾರುಕಟ್ಟೆಯಲ್ಲಿ ದರ ಸಮರವೂ ಜೋರಾಗಿ ನಡೆಯುತ್ತಿದ್ದು, ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್‌ಗಳು ದಿನಕ್ಕೊಂದು ಹೊಸ ಆಫರ್‌ಗಳನ್ನು ಲಾಂಚ್ ಮಾಡುತ್ತಿದೆ. ಇದೇ ಮಾದರಿಯಲ್ಲಿ ಐಡಿಯಾ ಸಹ ಕೆಲವು ಆಫರ್ ಗಳನ್ನು ನೀಡುತ್ತಿದೆ. ಸದ್ಯ ಈ ದರ ಸಮಯರಕ್ಕೆ ಟೆಲಿನಾರ್ ಕಂಪನಿ ಸಹ ಎಂಟ್ರಿಕೊಟ್ಟಿದ್ದು, ಜಿಯೋ ನಾಚಿಸುವಂತಹ ಆಫರ್ ಗಳನ್ನು ಲಾಂಚ್ ಮಾಡುತ್ತಿದೆ. ಈ ಮೂಲಕ ದೊಡ್ಡ ದೊಡ್ಡ ಕಂಪನಿಗಳಿಗೆ ಟಾಂಗ್ ಕೊಡಲು ಮುಂದಾಗಿದೆ.

ಭರ್ಜರಿ ಆಫರ್ ಮೂಲಕ ಜಿಯೋ ನಡುಗಿಸಿದ ಸಣ್ಣ ಟೆಲಿಕಾಂ ಕಂಪನಿ: ಏರ್‌ಟೆಲ್-ವೊಡಗೂ ಭಯ

ಟೆಲಿನಾರ್ ಕಂಪನಿ ಸಹ ಜಿಯೋ ಮಾದರಿಯಲ್ಲಿ ವಿವಿಧ ಆಫರ್ ಗಳನ್ನು ಲಾಂಚ್ ಮಾಡಿದ್ದು, ಬಳಕೆದಾರರಿಗೆ ಹೊಸ ಮಾದರಿಯ ಆಫರ್ ಅನ್ನು ನೀಡಲು ಮುಂದಾಗಿದೆ. ಇದರಿಂದಾಗಿ ಬಳಕೆದಾರರಿಗೆ ಮತ್ತೊಂದು ಕಂಪನಿಯೂ ಆಫರ್ ಅನ್ನು ನೀಡುತ್ತಿದೆ. ಈ ಹಿನ್ನಲೆಯಲ್ಲಿ ಟೆಲಿನಾರ್ ನೀಡುತ್ತಿರುವ ಆಫರ್ ಗಳ ಕುರಿತು ಮಾಹಿತಿಯೂ ಈ ಮುಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ದಿನಕ್ಕೆ 1.5GB ಡೇಟಾ:

ದಿನಕ್ಕೆ 1.5GB ಡೇಟಾ:

ಜಿಯೋ ತನ್ನ ಬಳಕೆದಾರರಿಗೆ ನೀಡಿರುವ ಮಾದರಿಯಲ್ಲಿಯೇ ಟೆಲಿನಾರ್ ಸಹ ಪ್ರತಿ ನಿತ್ಯ ಬಳಕೆದಾರರಿಗೆ 1.5GB 2G/3G/4G ಡೇಟಾ ಸೇವೆಯನ್ನು ನೀಡಲಿದೆ ಎನ್ನಲಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಹೊಸದೊಂದು ಸರ್ಧೆಯನ್ನು ಜಿಯೋ ಎದುರಿಸಬೇಕಾಗಿದೆ.

ರೂ.143 ಪ್ಲಾನ್:

ರೂ.143 ಪ್ಲಾನ್:

ಟೆಲಿನಾರ್ ತನ್ನ ಬಳಕೆದಾರರಿಗೆ ರೂ.143 ಪ್ಲಾನ್‌ ನಲ್ಲಿ 100 SMS ಕಳುಹಿಸುವ ಅವಕಾಶವನ್ನು ಮಾಡಿಕೊಡಲಿದೆ. ಅಲ್ಲದೇ 2GB 2G/3G/4G ಡೇಟಾ ಸೇವೆಯನ್ನು ನೀಡಲಿದೆ. ಆದರೆ ಈ ಆಫರ್‌ನಲ್ಲಿ ಬಳಕೆದಾರರಿಗೆ ಯಾವುದೇ ವಾಯ್ಸ್ ಆಫರ್ ಇಲ್ಲ ಎನ್ನಲಾಗಿದೆ. ಇದರರಲ್ಲಿ ಬಳೆಕೆದಾರರು 28 ದಿನಗಳ ವ್ಯಾಲಿಡಿಟಿಯನ್ನು ಪಡೆದುಕೊಳ್ಳಲಿದ್ದಾರೆ.

ರೂ.195 ಪ್ಲಾನ್:

ರೂ.195 ಪ್ಲಾನ್:

ಇದರರಲ್ಲಿ ಬಳೆಕೆದಾರರು 28 ದಿನಗಳ ವ್ಯಾಲಿಡಿಟಿಯನ್ನು ಪಡೆದುಕೊಳ್ಳಲಿದ್ದು, ಪ್ರತಿ ನಿತ್ಯ 1.5 GB 2G/3G/4G ಡೇಟಾ ಸೇವೆಯನ್ನು ಜೊತೆಗೆ ಉಚಿತ ಕರೆ ಮಾಡುವ ಮತ್ತು ನಿತ್ಯ 100 SMS ಕಳುಹಿಸುವ ಅವಕಾಶವನ್ನು ತಮ್ಮದಾಗಿಸಿಕೊಳ್ಳಿದ್ದಾರೆ.

ರೂ.299 ಪ್ಲಾನ್‌:

ರೂ.299 ಪ್ಲಾನ್‌:

ಇದಲ್ಲದೇ ಟೆಲಿನಾರ್ ಸ್ವಲ್ಪ ವಿಚಿತ್ರವಾಗಿ ಆಫರ್ ಗಳನ್ನು ನೀಡುತ್ತಿದೆ. ಇದರಲ್ಲಿ ರೂ.299 ಪ್ಲಾನ್ ಇದರಲ್ಲಿ ಬಳಕೆದಾರರು ಅನ್‌ಲಿಮಿಟೆಡ್ ಕೆರೆಗಳನ್ನು 84 ದಿನಗಳ ಅವಧಿಗೆ ಪಡೆಯಬಹುದಾಗಿದೆ.

How to create two accounts in one Telegram app (KANNADA)
ರೂ.349 ಪ್ಲಾನ್:

ರೂ.349 ಪ್ಲಾನ್:

ಈ ಪ್ಲಾನ್‌ನಲ್ಲಿ ಬಳಕೆದಾರರು 56 ದಿನಗಳ ವ್ಯಾಲಿಡಿಟಿಯನ್ನು ಪಡೆದುಕೊಳ್ಳಿದ್ದು, ಪ್ರತಿ ನಿತ್ಯ 1GB 2G/3G/4G ಡೇಟಾ ಸೇವೆಯನ್ನು ಜೊತೆಗೆ ಉಚಿತ ಕರೆ ಮಾಡುವ ಮತ್ತು ನಿತ್ಯ 100 SMS ಕಳುಹಿಸುವ ಅವಕಾಶವನ್ನು ತಮ್ಮದಾಗಿಸಿಕೊಳ್ಳಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Telenor is Offering 1.5GB 4G Data Per Day. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot