ಗೂಗಲ್‌ನಿಂದ ಮತ್ತೊಂದು ಫೀಚರ್‌..! ಎಲ್ಲರಿಗೂ .new ಡೊಮೇನ್‌ ಬಿಡುಗಡೆ..

By Gizbot Bureau
|

ಕಳೆದ ವರ್ಷ ಗೂಗಲ್ ತನ್ನ ಕೆಲವು ವೆಬ್‌ಸೈಟ್‌ಗಳಾದ ಗೂಗಲ್ ಡಾಕ್ಸ್, ಸ್ಲೈಡ್‌ಗಳು, ಶೀಟ್‌ಗಳಲ್ಲಿ ಸುಲಭವಾಗಿ ಹೊಸ ಚಟುವಟಿಕೆಯನ್ನು ಸೃಷ್ಟಿಸಲು docs.new, slides.new ಮತ್ತಿತರ .new URLಗಳನ್ನು ಪ್ರಾರಂಭಿಸಿತ್ತು. ಇದರಿಂದ ಗೂಗಲ್‌ ಡಾಕ್‌ನಂತಹ ಸೇವೆ ಬಳಸುವವರಿಗೆ ಬಹಳ ಉಪಯುಕ್ತವಾಗಿತ್ತು. ಈಗ, ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ತನ್ನ ಹೊಸ ವಿಸ್ತರಣೆಯನ್ನು ಥರ್ಡ್‌ ಪಾರ್ಟಿ ಸೇವೆಗಳಿಗೆ ತೆರೆದಿದ್ದು, ಬಳಕೆದಾರರಿಗೆ ಮತ್ತಷ್ಟು ಅನುಕೂಲವಾಗಲಿದೆ.

13 ಹೊಸ ವಿಸ್ತರಣೆಗಳು

13 ಹೊಸ ವಿಸ್ತರಣೆಗಳು

ಗೂಗಲ್‌ನ ವಿಪಿ ಮತ್ತು ಸಿಐಒ ಆಗಿರುವ ಬೆನ್ ಫ್ರೈಡ್ ಹೇಳಿದಂತೆ, ಥರ್ಡ್‌ ಪಾರ್ಟಿ ವೆಬ್‌ಸೈಟ್‌ಗಳು ಹಾಗೂ ಸೇವೆಗಳಿಗಾಗಿ 13 ಹೊಸ ವಿಸ್ತರಣೆಗಳನ್ನು ಹೊರತರಲಾಗಿದೆ. ಇದರಿಂದ ಬಳಕೆದಾರರು ಹೆಚ್ಚು ಸಮಯ ವ್ಯರ್ಥ ಮಾಡದೆ ತಮಗೆ ಬೇಕಾದುದನ್ನು ಪ್ರವೇಶಿಸಲು ಸಹಾಯಕವಾಗುತ್ತದೆ.

ಜಿ ಸ್ಯೂಟ್‌ನಿಂದ ನಾಂದಿ

ಜಿ ಸ್ಯೂಟ್‌ನಿಂದ ನಾಂದಿ

ವರ್ಷದ ಹಿಂದೆ, ಜಿ ಸ್ಯೂಟ್ ಬೆರಳೆಣಿಕೆಯಷ್ಟು ಶಾರ್ಟ್‌ಕಟ್‌ಗಳನ್ನು ರಚಿಸಿತ್ತು. docs.new, slides.new ಮತ್ತು sheets.new ನಂತಹ ಶಾರ್ಟ್‌ಕಟ್‌ಗಳನ್ನು ಸೃಷ್ಟಿಸಿತ್ತು. ಇವುಗಳನ್ನು ಅಡ್ರಸ್‌ ಬಾರ್‌ನಲ್ಲಿ ಟೈಪ್‌ ಮಾಡುವ ಮೂಲಕ ಹೊಸ ಡಾಕ್ಯುಮೆಂಟ್, ಸ್ಪ್ರೆಡ್‌ಶೀಟ್ ಅಥವಾ ಪ್ರೆಸೆಂಟೆಷನ್‌ ಅನ್ನು ಸುಲಭವಾಗಿ ತಯಾರಿಸಬಹುದು. ತ್ವರಿತವಾಗಿ ಜನರು ಆನ್‌ಲೈನ್ ಕ್ರಿಯೆಗಳನ್ನು ನಿರ್ವಹಿಸುವ ಮಾರ್ಗವಾಗಿ .new ಡೊಮೇನ್ ವಿಸ್ತರಣೆಯನ್ನು ಬಿಡುಗಡೆ ಮಾಡಲು ಇದು ಗೂಗಲ್‌ ರಿಜಿಸ್ಟ್ರಿಗೆ ಪ್ರೇರಣೆ ನೀಡಿತು. ಈಗ ಯಾವುದೇ ಕಂಪನಿ ಅಥವಾ ಸಂಸ್ಥೆ ತನ್ನದೇ ಆದ ಹೊಸ ಡೊಮೇನ್‌ನ್ನು ಇಲ್ಲಿ ನೋಂದಾಯಿಸಿಕೊಳ್ಳಬಹುದು,

ಪಟ್ಟಿ 1

ಪಟ್ಟಿ 1

- Playlist.new: ಸ್ಪೂಟಿಫೈನಲ್ಲಿ ಹಾಡುಗಳನ್ನು ಸೇರಿಸಲು ಹೊಸ ಪ್ಲೇಲಿಸ್ಟ್ ರಚಿಸುವ ಯುಆರ್‌ಎಲ್‌

- story.new: ಮೀಡಿಯಂ ವೆಬ್‌ಸೈಟ್‌ನಲ್ಲಿ ಮುಖ್ಯವಾದುದನ್ನು ಬರೆಯಬಹುದು.

- Sell.new: ಇಬೇ ಮೂಲಕ ಜನರು ತಮಗೆ ಬೇಕಾದುದನ್ನು ನಿಖರವಾಗಿ ಪಡೆಯಲು ಸಹಾಯ ಮಾಡುತ್ತದೆ.

ಪಟ್ಟಿ 2

- canva.new: ನಿಮ್ಮ ತಂಡದೊಂದಿಗೆ ಸುಂದರವಾದ ವಿನ್ಯಾಸಗಳನ್ನು ರಚಿಸಲು ಕ್ಯಾನ್ವಾ ಸೈಟ್‌ನ ಯುಆರ್ಎಲ್‌.

- Reservation.new: ನಿಮ್ಮ ಹತ್ತಿರದ ಅತ್ಯುತ್ತಮ ರೆಸ್ಟೋರೆಂಟ್‌ಗಳಲ್ಲಿ ಓಪನ್‌ಟೇಬಲ್ ಕಾಯ್ದಿರಿಸಲು

- word.new: ಮೈಕ್ರೋಸಾಫ್ಟ್‌ ವರ್ಡ್‌ನಲ್ಲಿ ಬರೆಯಲು ಈ ಯುಆರ್‌ಎಲ್‌ ಬಳಸಬಹುದು. ಬುದ್ಧಿವಂತ ತಂತ್ರಜ್ಞಾನದಿಂದ ಕಾಗುಣಿತ, ವ್ಯಾಕರಣ ಮತ್ತು ಶೈಲಿಯ ಬರವಣಿಗೆಯ ಸಲಹೆಗಳಿಗೆ ನಿಮಗೆ ಸಹಾಯ ಮಾಡುತ್ತದೆ.

ಪಟ್ಟಿ 3

Webex.New: ಸಿಸ್ಕೊ ವೆಬ್‌ಎಕ್ಸ್‌ ಮೂಲಕ ಯಾವುದೇ ಬ್ರೌಸರ್‌ನಿಂದ ನಿಮ್ಮ ವೈಯಕ್ತಿಕ ಸಭೆಯನ್ನು ಪ್ರಾರಂಭಿಸಲು ಈ ಶಾರ್ಟ್‌ಕಟ್ ಪ್ರಯತ್ನಿಸಿ.

Link.new: ಬಿಟ್ಲಿ ಮೂಲಕ ವಿಶ್ವಾಸಾರ್ಹ, ಶಕ್ತಿಯುತ, ಗುರುತಿಸಬಹುದಾದ ಲಿಂಕ್‌ಗಳನ್ನು ತಕ್ಷಣ ರಚಿಸಿ.

invoice.new: ಸ್ಟ್ರೈಪ್ ಡ್ಯಾಶ್‌ಬೋರ್ಡ್‌ನಿಂದ ನೇರವಾಗಿ ಗ್ರಾಹಕ ಇನ್‌ವಾಯ್ಸ್‌ಗಳನ್ನು ರಚಿಸಿ

ಪಟ್ಟಿ 4

Api.new: ರನ್‌ಕಿಟ್‌ನಿಂದ ಈ ಶಾರ್ಟ್‌ಕಟ್‌ನೊಂದಿಗೆ ಹೊಸ Node.js API ಎಂಡ್‌ಪಾಯಿಂಟ್‌ಗಳ ಮೂಲಕ ನಿಮ್ಮ ಆಲೋಚನೆಗಳನ್ನು ಪ್ರಾರಂಭಿಸಿ.

coda.new: ಡಾಕ್ಯುಮೆಂಟ್‌ಗಳು ಮತ್ತು ಸ್ಪ್ರೆಡ್‌ಶೀಟ್‌ಗಳನ್ನು ಒಂದೇ ಕ್ಯಾನ್ವಾಸ್‌ಗೆ ಸಂಯೋಜಿಸುವ ಹೊಸ ಡಾಕ್‌ನೊಂದಿಗೆ ಸೇರಿಸಿ.

Music.new: OVO ಸೌಂಡ್ ಆರ್ಟಿಸ್ಟ್ ಬಿಡುಗಡೆಗಳಿಗಾಗಿ ವೈಯಕ್ತಿಕಗೊಳಿಸಿದ ಕಲಾಕೃತಿಗಳನ್ನು ರಚಿಸಿ. ಮುಂಬರುವ ಸಂಗೀತವನ್ನು ಮೊದಲೇ ಉಳಿಸಿ,

ಎಚ್‌ಟಿಟಿಪಿಎಸ್ ಎನ್‌ಕ್ರಿಪ್ಟ್

ಎಚ್‌ಟಿಟಿಪಿಎಸ್ ಎನ್‌ಕ್ರಿಪ್ಟ್

.new ಡೊಮೇನ್‌ಗಳನ್ನು ಎಚ್‌ಟಿಟಿಪಿಎಸ್ ಎನ್‌ಕ್ರಿಪ್ಟ್ ಮಾಡಬೇಕಾಗುತ್ತದೆ. ಟ್ರೇಡ್‌ಮಾರ್ಕ್ ಮಾಲೀಕರು ತಮ್ಮ ಟ್ರೇಡ್‌ಮಾರ್ಕ್ ಮಾಡಿದ .new ಡೊಮೇನ್‌ಗಳನ್ನು ಜನವರಿ 14, 2020ರವರೆಗೆ ನೋಂದಾಯಿಸಬಹುದಾಗಿದ್ದು, ಡಿಸೆಂಬರ್ 2 ರಿಂದ ಅರ್ಜಿ ಸಲ್ಲಿಸಬಹುದಾಗಿದೆ.

Best Mobiles in India

Read more about:
English summary
Thanks To Google Accessing Certain Parts Of the Web Is Now Easy

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X