ಕತ್ತಲೆ ಪ್ರಪಂಚ ಡಾರ್ಕ್‌ವೆಬ್‌ನಲ್ಲೊಂದು ಸುತ್ತು..!

By Avinash
|

ಇಂಟರ್‌ನೆಟ್‌ ಎಂದರೆ ಎಲ್ಲರಿಗೂ ಮಾಹಿತಿ ಒದಗಿಸುವ ಮಾಹಿತಿ ಲೋಕ ಎಂಥಲೇ. ಆದರೆ ಇಂಟರ್‌ನೆಟ್‌ ಲೋಕದಲ್ಲೂ ಜನ ಸಾಮಾನ್ಯರಿಗೆ ಗೊತ್ತಿರದ ಒಂದು ಜಗತ್ತೇ ಕಾರ್ಯ ನಿರ್ವಹಿಸುತ್ತಿದೆ. ಅಂತರ್ಜಾಲ ಲೋಕದಲ್ಲಿ ಈ ಜಗತ್ತು ಹೆಚ್ಚೆಂದರೆ ಹೆಚ್ಚು ಪರಿಚಿತ. ಇಂಟರ್‌ನೆಟ್‌ನಲ್ಲಿ ನಡೆಯುವ ಅಪರಾಧ ಪ್ರಕರಣಗಳಿಗೆ ಆದಿ, ಅಂತ್ಯ ಎಲ್ಲಾ ಇಲ್ಲಿಂದಲೇ. ಕತ್ತಲ ಜಗತ್ತು ಎಂದೇ ಪರಿಚಿತವಾಗಿರುವ ಡಾರ್ಕ್‌ವೆಬ್‌ ಅನೇಕ ಕಾರಣಗಳಿಂದ ಸುದ್ದಿಯಾಗಿದೆ.

ಕತ್ತಲೆ ಪ್ರಪಂಚ ಡಾರ್ಕ್‌ವೆಬ್‌ನಲ್ಲೊಂದು ಸುತ್ತು..!

ಒಂದು ವರದಿ ಅನ್ವಯ ನಾವೂ ನೀವೆಲ್ಲ ಬಳಸುವ ಇಂಟರ್‌ನೆಟ್‌ ಕೇವಲ ಶೇ.4ರಷ್ಟು ಮಾತ್ರ ಇದೆ ಎಂದರೆ ನಂಬಲೇಬೇಕು. ಇನ್ನುಳಿದ ಶೇ.96ರಷ್ಟು ಇಂಟರ್‌ನೆಟ್‌ ಕತ್ತಲೆ ಪ್ರಪಂಚ ಎಂದೇ ಗುರುತಿಸಿಕೊಳ್ಳುತ್ತದೆ. ಎಲ್ಲವೂ ಆನ್‌ಲೈನ್‌ ಆಗಿರುವಾಗ ಡಾರ್ಕ್‌ವೆಬ್‌ ಜಗತ್ತು ಎಂತಹವರನ್ನು ಸಹ ದಂಗುಬಡಿಸುತ್ತದೆ. ಈ ಡಾರ್ಕ್‌ ವೆಬ್‌ ಬಗ್ಗೆ ವಿಶ್ವದ ಎಲ್ಲಾ ಸರ್ಕಾರ ಹಾಗೂ ಪೊಲೀಸ್‌ ವ್ಯವಸ್ಥೆಗಳಿಗೂ ಮಾಹಿತಿ ಇದೆ. ಆದರೆ, ಅಪರಾಧ ಲೋಕದ ರಾಜಧಾನಿ ಯಾರಿಗೂ ಯಾರಿಗೂ ಕಾಣದಂತೆ ತನ್ನ ಅಪರಾಧ ಚಟುವಟಿಕೆಗಳನ್ನು ಮುಂದುವರೆಸುತ್ತಲೆ ಇದೆ.

ಡಾರ್ಕ್‌ವೆಬ್‌ ಎಂದರೇ ಏನು ಗೊತ್ತಾ..?

ಡಾರ್ಕ್‌ವೆಬ್‌ ಎಂದರೇ ಏನು ಗೊತ್ತಾ..?

ಐ2ಪಿ ಮತ್ತು ಟೊರ್‌ ಬ್ರೌಸರ್‌ಗಳ ಮುಖೇನ ನಡೆಯುವ ಲಕ್ಷಾಂತರ ವೆಬ್‌ಸೈಟ್‌ಗಳ ಗುಂಪೆ ಡಾರ್ಕ್‌ವೆಬ್ ಆಗಿದೆ. ಇಲ್ಲಿ ಕಾರ್ಯನಿರ್ವಹಿಸುವ ವೆಬ್‌ಸೈಟ್‌ಗಳ ಐಪಿ ವಿಳಾಸವನ್ನು ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಡಾರ್ಕ್‌ವೆಬ್‌ ಕತ್ತಲೆ ಜಗತ್ತು ಎಂದೇ ಪ್ರತೀತಿ ಹೊಂದಿರುವುದರಿಂದ ಮಾದಕ ವಸ್ತುಗಳ ಮಾರಾಟ ಮತ್ತು ಚೈಲ್ಡ್‌ ಪಾರ್ನ್‌, ಪಾರ್ನ್‌, ವೆಬ್‌ಸೈಟ್‌ಗಳೇ ಇಲ್ಲಿ ಹೆಚ್ಚಿರುತ್ತವೆ. ಆಯುಧಗಳು ಸಹ ಇಲ್ಲಿ ಅಕ್ರಮವಾಗಿ ದೊರೆಯುತ್ತವೆ. ಇಲ್ಲಿನ ಬಳಕೆದಾರರ ಅನಾಮಧೇಯತೆ ಹಾಗೂ ಸರ್ಕಾರದ ವೀಕ್ಷಣೆಯಿಂದ ಅವರನ್ನು ಡಾರ್ಕ್‌ವೆಬ್‌ ಕಾಪಾಡುತ್ತದೆ.

ಏನೇಲ್ಲಾ ವ್ಯವಹಾರಕ್ಕೆ ಕೇಂದ್ರ ಬಿಂದು..?

ಏನೇಲ್ಲಾ ವ್ಯವಹಾರಕ್ಕೆ ಕೇಂದ್ರ ಬಿಂದು..?

ಕತ್ತಲೆ ಜಗತ್ತಾದ ಡಾರ್ಕ್‌ ವೆಬ್‌ನಲ್ಲಿ ನಾವೂ ಊಹಿಸಲು ಅಸಾಧ್ಯವಾದ ಬಹಳಷ್ಟು ವ್ಯವಹಾರಗಳು ನಡೆಯುತ್ತವೆ. ಗ್ಲೋಬಲ್‌ ಕ್ರೈಂ ಲೋಕದ ಮುಖ್ಯ ಕಚೇರಿಯಂತೆ ಡಾರ್ಕ್‌ವೆಬ್ ಕಾರ್ಯನಿರ್ವಹಿಸುತ್ತದೆ. ಅತ್ಯಂತ ಪ್ರಮುಖವಾದ ಸರ್ಕಾರಿ ದಾಖಲೆಗಳು ಮತ್ತು ರಾಷ್ಟ್ರದ ಹಿತಾಸಕ್ತಿಗೆ ಸಂಬಂಧಿಸಿದ ಗೌಪ್ಯ ಮಾಹಿತಿಗಳು ಕತ್ತಲೆ ಜಗತ್ತಿನಲ್ಲಿ ಮಾರಾಟವಾಗುತ್ತವೆ. ಇಂಡಿಯನ್ ಮುಜಾಹಿದ್ದಿನ್, ಲಷ್ಕರೆ ತೋಯ್ಬಾ, ಅಲ್‌ಕೈದಾ, ಐಸಿಎಸ್‌ ನಂತಹ ಅನೇಕ ಉಗ್ರ ಸಂಘಟನೆಗಳು ಡಾರ್ಕ್‌ವೆಬ್‌ನಲ್ಲಿ ಬೀಟ್‌ ಕಾಯಿನ್‌ಗಳಿಂದ ಸಂಘಟನೆಗೆ ಧನಸಹಾಯ ಪಡೆಯುತ್ತವೆ. ಅನೇಕ ರಾಷ್ಟ್ರಗಳಲ್ಲಿ ದಂಗೆ ಎಬ್ಬಿಸಲು ಇಲ್ಲಿಂದಲೇ ಗುಪ್ತವಾಗಿ ಅಜೇಂಡಾ ಸೃಷ್ಟಿಯಾಗಿ ಮಾಹಿತಿಯೂ ಇಲ್ಲಿಂದಲೇ ಹೋಗುತ್ತದೆ.

ಲೈಂಗಿಕ ಹಿಂಸೆ ಮತ್ತು ಅಪರಾಧ ಲೋಕ

ಲೈಂಗಿಕ ಹಿಂಸೆ ಮತ್ತು ಅಪರಾಧ ಲೋಕ

ಮೇಲೆ ಹೇಳಿದಂತೆ ಡಾರ್ಕ್‌ವೆಬ್‌ನಲ್ಲಿ ಚೈಲ್ಡ್‌ ಪೋರ್ನ್‌ ವಿಡಿಯೋಗಳು, ಪೋಟೋಗಳ ವ್ಯಾಪಾರ, ಮಾದಕ ವಸ್ತುಗಳ ವ್ಯಾಪಾರ, ಅಕ್ರಮ ಆಯುಧಗಳ ಮಾರಾಟ, ಸುಫಾರಿ ಕೊಡುವುದು, ಮ್ಯಾಚ್‌ ಫಿಕ್ಸಿಂಗ್, ಹ್ಯಾಕರ್‌ಗಳ ನೇಮಕ ಇಲ್ಲಿಂದಲೇ ನಡೆಯುತ್ತದೆ ಎಂದರೆ ನಾವೇಲ್ಲಾ ನಂಬಲೇಬೇಕು. ಇದಷ್ಟೇ ಅಲ್ಲದೇ ಮಾನವನ ಮೇಲೆ ಇಲ್ಲಿ ವಿಚಿತ್ರವೇನಿಸುವಂತಹ ಪ್ರಯೋಗಗಳು ನಡೆಯುತ್ತಲೆ ಇರುತ್ತವೆ. ಕೆಲವು ಸಿನಿಮಾಗಳಲ್ಲಿ ಈ ಕರಾಳ ಮುಖವನ್ನು ಹೀಗಾಗಲೇ ನಮ್ಮ ಮುಂದಿಟ್ಟಿದ್ದಾರೆ. ಹ್ಯೂಮನ್ ಟ್ರಾಫಿಕಿಂಗ್ ಕೂಡ ಇಲ್ಲಿ ನಡೆಯುತ್ತದೆ. ಅಮಾಯಕರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಬೇಕಂತಾನೇ ಡಾರ್ಕ್‌ವೆಬ್‌ನಲ್ಲಿ ಹಣದ ಹೊಳೆ ಹರಿಯುತ್ತದೆ.

ಡಾರ್ಕ್‌ವೆಬ್‌ ಹೇಗೆ ಕಾರ್ಯನಿರ್ವಹಿಸುತ್ತೆ

ಡಾರ್ಕ್‌ವೆಬ್‌ ಹೇಗೆ ಕಾರ್ಯನಿರ್ವಹಿಸುತ್ತೆ

ನಾವೆಲ್ಲಾ ಇಂಟರ್‌ನೆಟ್‌ ಬಳಸುವಾಗ ನಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಐಪಿ ವಿಳಾಸವನ್ನು ಹೊಂದಿರುತ್ತವೆ. ಅದರ ಮೂಲಕವೇ ಇಂಟರ್‌ನೆಟ್‌ನಲ್ಲಿ ಇನ್ನೊಂದು ಐಪಿ ವಿಳಾಸ ತಲುಪಿ ನಮಗೆ ಮಾಹಿತಿಯನ್ನು ನೀಡುತ್ತದೆ. ಆದರೆ, ಡಾರ್ಕ್‌ವೆಬ್‌ನಲ್ಲಿ ಮಾಹಿತಿ ಹಲವು ಹಂತಗಳಿಂದ ಸಾಗುವುದರಿಂದ ಇಲ್ಲಿ ಇಂಟರ್‌ನೆಟ್ ಪ್ರೊಟೋಕಾಲ್ ಮತ್ತು ವಿಪಿಎನ್ ಎರಡೂ ಗೊತ್ತೇ ಆಗುವುದಿಲ್ಲ.

ಡಾರ್ಕ್‌ವೆಬ್‌ ಹುಟ್ಟಿದ ಬಗೆ ಕೇಳಿದರೆ ನೀವ್ ನಂಬಲ್ಲ..!

ಡಾರ್ಕ್‌ವೆಬ್‌ ಹುಟ್ಟಿದ ಬಗೆ ಕೇಳಿದರೆ ನೀವ್ ನಂಬಲ್ಲ..!

ಮೇಲೆ ಹೇಳಿದಂಗೆ ಅಷ್ಟೊಂದು ಅಪರಾಧ ಚಟುವಟಿಕೆಗೆ ದಾರಿಯಾಗಿರುವ ಡಾರ್ಕ್‌ವೆಬ್‌ ಸರ್ಕಾರಿ ಸಂಸ್ಥೆಯ ಕೊಡುಗೆ ಎಂದರೆ ನೀವ್‌ ನಂಬಲ್ಲ. ಆದ್ರೇ ನಿಜ ಅದೇ, 90ರ ದಶಕದಲ್ಲಿ ಸೈನ್ಯದ ಮಾಹಿತಿ ವಿನಿಮಯಕ್ಕೆ ಟಾರ್‌ ಬ್ರೌಸರ್ ಮತ್ತು ಆನಿಯನ್‌ ನೆಟ್‌ವರ್ಕ್‌ನ್ನು ಅಮೇರಿಕ ನೌಕಾಪಡೆಯ ಮಾಹಿತಿ ತಂತ್ರಜ್ಞಾನ ಪ್ರಯೋಗಾಲಯ ಆವಿಷ್ಕಾರ ಮಾಡಿತು. ಇಲ್ಲಿ ಮಾಹಿತಿ ಕಳುಹಿಸಿದವರು ಮತ್ತು ಅದನ್ನು ಡೌನ್‌ಲೋಡ್‌ ಮಾಡಿಕೊಂಡವರು ಯಾರು ಅಂತ ಗುರುತಿಸಲು ಸಾಧ್ಯವಾಗುವುದಿಲ್ಲ.

ಯುಎಸ್‌ ಸೈನ್ಯ ಯಾಕೆ ಡಾರ್ಕ್‌ವೆಬ್‌ ಹಿಂದೆ ಬಿತ್ತು

ಯುಎಸ್‌ ಸೈನ್ಯ ಯಾಕೆ ಡಾರ್ಕ್‌ವೆಬ್‌ ಹಿಂದೆ ಬಿತ್ತು

ಇಷ್ಟೆಲ್ಲಾ ಅಪರಾಧ ಲೋಕಗಳಿಗೆ ಆದಿಯಾಗಿರುವ ಡಾರ್ಕ್‌ವೆಬ್‌ನ್ನು ಸ್ಥಾಪಿಸಲು ಅಮೇರಿಕ ಸೇನೆಗೆ ಯೋಚನೆ ಬಂದಿದ್ದಾದರೂ ಹೇಗೆ. ಅದಕ್ಕೂ ಒಂದು ರೋಚಕ ಕಥೆ ಇದೆ ಇಂಟರ್‌ನೆಟ್‌ನಲ್ಲಿ ಎಲ್ಲಾ ರೀತಿಯ ಮಾಹಿತಿಗಳು ಬಂದು ಸೇರುವುದರಿಂದ ಯಾವುದು ಪ್ರಮುಖ ಹಾಗೂ ಗೌಪ್ಯ ಮಾಹಿತಿ ಗೊತ್ತಾಗುವುದಿಲ್ಲ. ಇವುಗಳನ್ನು ಸಾಮಾನ್ಯ ವಿಷಯಗಳಿಂದ ಬೇರ್ಪಡಿಸುವುದು ಕಷ್ಟ ಎಂಬ ಕಾರಣಕ್ಕೆ ಡಾರ್ಕ್‌ವೆಬ್‌ಗೆ ಕೈ ಹಾಕಿತು. ಇಲ್ಲಿರುವ ಮಾಹಿತಿ ದುರುಪಯೋಗ ಕಷ್ಟ ಮತ್ತು ಯಾರಿಗೂ ಸುಲಭವಾಗಿ ಸಿಗಲ್ಲ ಎಂಬುದು ಅಮೇರಿಕ ಸೇನೆಯ ಲೆಕ್ಕಾಚಾರವಾಗಿತ್ತು.

ಡೀಪ್‌ವೆಬ್‌ ಕೂಡ ಇದೆ

ಡೀಪ್‌ವೆಬ್‌ ಕೂಡ ಇದೆ

ಡಾರ್ಕ್‌ವೆಬ್‌ನಂತೆ ಇಂಟರ್‌ನೆಟ್‌ ಲೋಕದಲ್ಲಿ ಇನ್ನೊಂದು ಹೆಸರು ಪ್ರಚಲಿತದಲ್ಲಿದೆ. ಅದೇ ಡೀಪ್‌ ವೆಬ್‌, ಡಾರ್ಕ್‌ವೆಬ್ ಮತ್ತು ಡೀಪ್‌ ವೆಬ್‌ ಎರಡೂ ಸಾಮಾನ್ಯ ಇಂಟರ್‌ನೆಟ್ ಬಳಕೆದಾರರಿಗೆ ಗೊತ್ತಿರಲ್ಲ. ಆದರೆ, ಇವೆರಡೂ ಬೇರೆ ಬೇರೆಯಾಗಿದೆ. ಗೂಗಲ್‌ನಂತಹ ಸರ್ಚ್‌ ಇಂಜೀನ್‌ಗಳಲ್ಲಿ ಡೀಪ್‌ ವೆಬ್‌ನ ವೆಬ್‌ಸೈಟ್‌ಗಳು ಸಿಗಲ್ಲ. ಆದರೆ, ವೆಬ್‌ಸೈಟ್‌ಗಳ ಹೆಸರು ತಿಳಿದವರು ನೇರವಾಗಿ ಸಾಮಾನ್ಯ ಬ್ರೌಸರ್‌ಗಳಲ್ಲಿ ಇಂತಹ ವೆಬ್‌ಸೈಟ್‌ಗಳನ್ನು ಅಕ್ಸೇಸ್ ಮಾಡಬಹುದು. ಆದರೆ, ಡಾರ್ಕ್‌ವೆಬ್‌ ಪ್ರವೇಶ ಟಾರ್‌ ಬ್ರೌಸರ್‌ ಅಗತ್ಯವಿದೆ.

ಕತ್ತಲೆ ಜಗತ್ತಿನಿಂದ ಏನಾದರೂ ಉಪಯೋಗವಿದೆಯೇ?

ಕತ್ತಲೆ ಜಗತ್ತಿನಿಂದ ಏನಾದರೂ ಉಪಯೋಗವಿದೆಯೇ?

ಎಷ್ಟೇ ನಕರಾತ್ಮಕ ಕ್ಷೇತ್ರವಿದ್ದರೂ ಅಲ್ಲಿ ಸ್ವಲ್ಪವಾದರೂ ಸಕರಾತ್ಮಕ ಸಂಗತಿಗಳು ಇದ್ದೇ ಇರುತ್ತದೆ. ಅನೇಕ ಹ್ಯಾಕರ್‌ಗಳು ಡಾರ್ಕ್‌ವೆಬ್‌ನಲ್ಲಿರುವುದರಿಂದ ವಿವಿಧ ಸರ್ಕಾರದ ಹಲವು ಹಗರಣಗಳು ಬಯಲಿಗೆ ಬಿದ್ದಿವೆ. ವಿಕಿಲೀಕ್ಸ್‌ನ ಜೂಲಿಯನ್ ಅಸಾಂಜೆ ಕೂಡ ಡಾರ್ಕ್‌ವೆಬ್‌ ನೆರವು ಪಡೆದೇ ಹಲವು ಸರ್ಕಾರಗಳ ಗೌಪ್ಯ ದಾಖಲೆಗಳು ಹಾಗೂ ಅಣನೇಕ ಹಗರಣಗಳನ್ನು ಬಯಲಿಗೆ ತಂದ ಎಂದು ಅನೇಕ ವರದಿಗಳು ಹೇಳುತ್ತವೆ. ಮಾಧ್ಯಮಗಳಿಗೆ ಬೇಕಾಗುವ ಎಕ್ಸ್‌ಕ್ಲೂಸಿವ್ ವರದಿಗಳು ಈ ಡಾರ್ಕ್‌ವೆಬ್‌ನಲ್ಲಿ ಸಿಗುತ್ತವೆ. ಆದರೆ, ನಮ್ಮ ಬಹಳಷ್ಟು ಪತ್ರಕರ್ತ ಮಿತ್ರರಿಗೆ ಡಾರ್ಕ್‌ವೆಬ್‌ ಬಗ್ಗೆ ಗೊತ್ತಿಲ್ಲ. ಇನ್ನೆಲ್ಲಿಂದ ಎಕ್ಸ್‌ಕ್ಲೂಸಿವ್ ಸುದ್ದಿಗಳು ಬರುತ್ತವೆ. ಸರ್ಕಾರಕ್ಕೆ ಬೇಕಾದ ಭಯೋತ್ಪಾದಕ ಸಂಘಟನೆಗಳ ಹಾಗೂ ಶತ್ರು ರಾಷ್ಟ್ರಗಳ ಕುರಿತ ಮಾಹಿತಿಯನ್ನು ಹ್ಯಾಕ್ ಮಾಡಿ ಪಡೆಯಬಹುದು.

ಸರ್ಕಾರದ ಕ್ರಮವೇನು?

ಸರ್ಕಾರದ ಕ್ರಮವೇನು?

ಇಂಟರ್‌ನೆಟ್‌ನ ಕತ್ತಲೆ ಪ್ರಪಂಚವನ್ನು ಪ್ರವೇಶಿಸಲು ಟಾರ್‌ ಬ್ರೌಸರ್‌ ಅಗತ್ಯ. ಇಲ್ಲಿನ ಐಪಿ ಮತ್ತು ವಿಪಿಎನ್‌ ಪತ್ತೆ ಹಚ್ಚುವ ತಂತ್ರಜ್ಞಾನ ಸರ್ಕಾರದ ಬಳಿಯಿಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ. ಅಮೇರಿಕಾ, ಭಾರತ ಸೇರಿದಂತೆ ವಿಶ್ವದ ಯಾವ ಸರ್ಕಾರವೂ ಡಾರ್ಕ್‌ವೆಬ್‌ ವಿರುದ್ಧ ಯಶಸ್ವಿಯಾಗಿಲ್ಲ. ಆದರೆ, ಯುಎಸ್‌ ಇನ್‌ವೆಸ್ಟಿಂಗ್‌ ಏಜೇನ್ಸಿ ಕೆಲವು ಹ್ಯಾಕರ್‌ಗಳ ಜತೆಗೂಡಿ ವೈರಸ್‌ ಅಭಿವೃದ್ಧಿಪಡಿಸಿ ಡಾರ್ಕ್‌ವೆಬ್‌ನಲ್ಲಿನ ಅಕ್ರಮ ವ್ಯಕ್ತಿಗಳನ್ನು ಪತ್ತೆ ಹಚ್ಚುತ್ತಿದ್ದಾರೆ.

ಡಾರ್ಕ್‌ವೆಬ್‌ ಸರ್ಚ್‌ಇಂಜಿನ್‌ಗಳು

ಡಾರ್ಕ್‌ವೆಬ್‌ ಸರ್ಚ್‌ಇಂಜಿನ್‌ಗಳು

ಡಾರ್ಕ್‌ವೆಬ್ ಬಳಸಲು ಟಾರ್‌ ಬ್ರೌಸರ್‌ ಅಗತ್ಯವಾಗಿ ಬೇಕು. Onion.city, Onion.to, Not Evil, Grams, Memex Deep Web Search engineನಂತಹ ಸರ್ಚ್ ಇಂಜಿನ್‌ಗಳಿವೆ. Alphabay, Dream Market, Valhalla, Hansa Market, Outlaw Market, Python Market, Acropolis Market, Silk road 3.0, Tochka, Zocalo Market ಎಂಬ ಮಾರುಕಟ್ಟೆಗಳು ಡಾರ್ಕ್‌ವೆಬ್‌ನಲ್ಲಿ ಕಾಣ ಸಿಗುತ್ತವೆ.

ಡಾರ್ಕ್‌ವೆಬ್‌ನ ಬಳಕೆದಾರರು

ಡಾರ್ಕ್‌ವೆಬ್‌ನ ಬಳಕೆದಾರರು

ಕತ್ತಲೆ ಜಗತ್ತು ಎಂದು ಕುಖ್ಯಾತಿ ಗಳಿಸಿರುವ ಡಾರ್ಕ್‌ವೆಬ್‌ನಲ್ಲಿ 2013ರ ಹೊತ್ತಿಗೆ 4 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು, ಸಕ್ರಿಯವಾಗಿದೆ.

Best Mobiles in India

English summary
The Dark Side of the Internet. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X