Subscribe to Gizbot

30 ರಲ್ಲೇ ಅದ್ಭುತವನ್ನು ಸಾಧಿಸಿದವರು

Posted By:

ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬಂತೆ ಸಣ್ಣ ಪುಟಾಣಿಯಿಂದ ವಯೋವೃದ್ಧರವರೆಗೆ ಸಾಧಿಸಿದವರು ಸಾಧನೆ ಮಾಡಹೊರಟಿರುವವರು ಸಾಧಿಸುತ್ತಿರುವವರು ನಮ್ಮ ಜೊತೆಗಿದ್ದಾರೆ. ಅಚಲ ಪ್ರಯತ್ನ ಮತ್ತು ಗುರಿಮುಟ್ಟಬೇಕೆಂಬ ತುಡಿತ ಇದ್ದಲ್ಲಿ ಕಬ್ಬಿಣದ ಕಡಲೆಯನ್ನೂ ಕೂಡ ಜಗಿದು ತಿನ್ನಬಹುದು.

ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ಎಂಬುದು ಸವಾಲಿನ ಕ್ಷಣವಾಗಿದೆ. ಹೌದು ಅವಿರತ ಶ್ರಮ ಮತ್ತು ನಿಷ್ಠೆ, ಕೊಂಚ ಅದೃಷ್ಟ ಸಾಧನೆಗೆ ಪೂರಕವಾಗಿರುವುದು ಅತ್ಯವಶ್ಯಕ. ಇಂದು ಹಲವಾರು ಕ್ಷೇತ್ರದಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಸಾಧಿಸಿದವರು ಯಶಸ್ಸು ಸಾಧಿಸಿದವರು ಲೆಕ್ಕವಿಲ್ಲದಷ್ಟಿರಿದ್ದಾರೆ. ಆದರೆ ಅವರು ಕೂಡ ನಮ್ಮಂತೆ ಸಾಮಾನ್ಯರಾಗಿದ್ದು ಅಸಾಮಾನ್ಯದವರಾದವರು.

ಇಂದು ಈ ಲೇಖನದಲ್ಲಿ ನಾವು ನಿಮಗೆ ತಿಳಿಸಹೊರಟಿರುವುದು ಕೇವಲ 30 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರು ಮಾಡಿದ ಸಾಧನೆಯನ್ನು. ತಂತ್ರಜ್ಞಾನ ಕ್ಷೇತ್ರದಲ್ಲಿ ಇವರು ಮಾಡಿದ ಸಾಧನೆಯನ್ನು ಇಂದು ವಿಶ್ವವೇ ಕೊಂಡಾಡುತ್ತಿದೆ. ಮೊದಲಿಗೆ ಬರಿಯ ಪ್ರಯತ್ನವೆಂಬಂತೆ ಪುಟ್ಟ ಹೆಜ್ಜೆಯನ್ನು ಹಾಕಿದವರು ಇಂದು ಎಷ್ಟೋ ಎಷ್ಟೋ ಕೋಟಿಗಟ್ಟಲೆ ವ್ಯವಹಾರ ಮಾಡುವ ಕಂಪೆನಿ ಮಾಲೀಕರಾಗಿದ್ದಾರೆ.

ಸವಾಲನ್ನು ನಗುನಗುತ್ತಲೇ ಸ್ವೀಕರಿಸಿ, ಅಡೆ ತಡೆಗಳನ್ನು ಎದುರಿಸಿ ತಮ್ಮ ಗುರಿ ಮುಟ್ಟಿದವರು ಈ ಮಹಾನ್ ಸಾಧಕರು. ಬನ್ನಿ ಹಾಗಿದ್ದರೆ ಅವರು ಯಾರು ಅವರ ಸಾಧನೆಗಳೇನು ಎಂಬುದನ್ನು ತಿಳಿದುಕೊಂಡು ನಮ್ಮ ಜೀವನದಲ್ಲೂ ಅಲ್ಪವನ್ನಾದರೂ ಸಾಧಿಸುವ ಪ್ರಯತ್ನಕ್ಕೆ ಮುನ್ನುಡಿ ಬರೆಯೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಾರ್ಕ್ ಜೂಕರ್‌ಬರ್ಗ್

#1

ವಯಸ್ಸು: 29
ವೃತ್ತಿ: ಸ್ಥಾಪಕ/ಫೇಸ್‌ಬುಕ್ ಸಿಇಒ
ತನ್ನದೇ ಸ್ವಂತ ಸಾಧನೆಯಲ್ಲಿ ಮುಂದೆ ಬಂದವರು ಮಾರ್ಕ್ ಜೂಕರ್‌ಬರ್ಗ್. ಮೊದ ಮೊದಲು ಫೇಸ್‌ಬುಕ್ ಎಂಬ ಸಂಸ್ಥೆಯನ್ನು ಅತಿ ಕಷ್ಟದಲ್ಲೇ ಕಟ್ಟಿವರು. ಆದರೆ ಇದೀಗ ಅದು ಬೆಳೆದು ನಿಂತ ರೀತಿ ವಿಶ್ವಕ್ಕೇ ಮಾದರಿಯಾಗಿದೆ. 1.2 ಬಿಲಿಯನ್ ಜನರು ಸಾಮಾಜಿಕ ನೆಟ್‌ವರ್ಕಿಂಗ್‌ನಲ್ಲಿ ಸದಸ್ಯರಾಗಿದ್ದಾರೆ. ಮಾರ್ಕ್ ಜೂಕರ್‌ಬರ್ಗ್ ಸಣ್ಣ ಅಪ್ಲಿಕೇಶನ್ ಆದ ಗ್ಲಾನ್ಸಿ ಮತ್ತು ಅತಿ ದೈತ್ಯ ವ್ಯವಹಾರ ಅಪ್ಲಿಕೇಶನ್ ವಾಟ್ಸಪ್‌ನ ಸ್ವಾಧೀನಗಾರರಾಗಿದ್ದಾರೆ.

ತ್ರಿಸ್ಟಾನ್ ವಾಲ್ಕರ್

#2

ವಯಸ್ಸು: 30
ವೃತ್ತಿ: ಸ್ಥಾಪಕ/ವಾಲ್ಕರ್ ಮತ್ತು ಕಂಪೆನಿಯ ಸಿಇಒ
ಪೋರ್ಸ್‌ಕ್ವೇರ್ ಅನ್ನು ತ್ಯಜಿಸಿದ ವಾಲ್ಕರ್ ಕಂಪೆನಿ ತನ್ನದೇ ಅಧಿಪತ್ಯವನ್ನು ಸ್ಥಾಪಿಸಿ ಈಗಾಗಲೇ $2.4 ಬಿಲಿಯನ್ ಉದ್ಯಮವನ್ನು ಮಾಡಿಕೊಂಡಿದೆ. ನೀಗ್ರೋ ಜನಾಂಗಕ್ಕೆ ಶೇವಿಂಗ್ ಕ್ರೀಂ ಮತ್ತು ರೇಝರ್ ಅನ್ನು ಒದಗಿಸುವ ಈ ಕಂಪೆನಿ ಪ್ರಸ್ತುತ ಇಬ್ಬರು ಉದ್ಯೋಗಿಗಳಿಂದ ಚಾಲನೆಯಾಗುತ್ತಿದೆ.

ಡಸ್ಟಿನ್ ಮೋಸ್ಕೋವಿಟ್ಸ್

#3

ವಯಸ್ಸು: 29
ವೃತ್ತಿ: ಅಸಾನಾದ ಸಹ ಸಂಸ್ಥಾಪಕ
ಅಸಾನಾ (ಇಮೇಲ್ ಇಲ್ಲದೆ ತಂಡಕಾರ್ಯವನ್ನು ಆಧರಿಸುವ ಅಪ್ಲಿಕೇಶನ್) ಆಗಿದ್ದು ಈ ಸಂಸ್ಥೆ ಮಾಡಿದ ಕಾರುಬಾರು ಯಾರೂ ಕೂಡ ಮೂಗಿನ ಮೇಲೆ ಬೆರಳಿಟ್ಟು ನೋಡುವಂಥದ್ದು. $38.2 ಮಿಲಿಯನ್ ಬಳಕೆದಾರರನ್ನು ಇದು ಹೊಂದಿದ್ದು 80 ಜನರು ಇಲ್ಲಿ ಉದ್ಯೋಗಿಗಳಾಗಿದ್ದಾರೆ.

ಜೋ ಗ್ರೀನ್

#4

ವಯಸ್ಸು: 29
ವೃತ್ತಿ: ಕಾಸಸ್‌ನ ಸಹ ಸ್ಥಾಪಕ
$40 ಮಿಲಿಯನ್ ಲಾಭವನ್ನು ಗ್ರೀನ್ ಸಾಧಿಸಿದ್ದು ಇದನ್ನು ಮಾರ್ಕ್ ಜೂಕರ್‌ಬರ್ಗ್‌ನ ವಿಂಗ್‌ಮನ್ ಎಂದೂ ಕರೆಯಲಾಗುತ್ತದೆ. ಹಾರ್ವರ್ಡ್‌ನಲ್ಲಿ ಜೂಕರ್‌ಬರ್ಗ್‌ನೊಂದಿಗೆ ನೆಲೆಸಿದ್ದ ಗ್ರೀನ್ ಫೇಸ್‌ಬುಕ್ ಸೇರುವ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದವರು. ಕಾಸಸ್ ಉದ್ಯಮ ರಂಗದಲ್ಲಿ ಯಶಸ್ಸನ್ನು ಸಾಧಿಸುವ ಛಾತಿಯಲ್ಲಿದ್ದು ಅದಕ್ಕಾಗಿ ಉತ್ತಮ ಪ್ರಯತ್ನಗಳನ್ನು ಮಾಡುತ್ತಿದೆ.

ಕ್ರಿಸ್ಟನ್ ಟಿಟೂಸ್

#5

ವಯಸ್ಸು: 29
ವೃತ್ತಿ: ಗರ್ಲ್ಸ್ ಹೂ ಕೋಡ್‌ನ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕಿ
ಹುಡುಗಿಯರಿಗೆ ಶಿಕ್ಷಣವನ್ನು ನೀಡುವ ಅವರನ್ನು ಉತ್ತಮವಾಗಿ ಟ್ರೈನ್ ಮಾಡುವ ಕಾರ್ಯವನ್ನು ಈ ಸಂಸ್ಥೆ ಮಾಡುತ್ತದೆ.

ಆಡಮ್ ಡಿ ಏಂಜೆಲೋ

#6

ವಯಸ್ಸು: 29
ವೃತ್ತಿ: ಕೋರಾದ ಸ್ಥಾಪಕ
ಇಲ್ಲಿ 90 ಉದ್ಯೋಗಿಗಳಿದ್ದು $141 ಮಿಲಿಯನ್ ಗಳಿಕೆಯನ್ನು ಈ ಸಂಸ್ಥೆ ಮಾಡಿದೆ.

ಜಾನ್ ಜಿಮ್ಮರ್

#7

ವಯಸ್ಸು: 29
ವೃತ್ತಿ: ಲಿಫ್ಟ್‌ನ ಅಧ್ಯಕ್ಷ
ಅಪ್ಲಿಕೇಶನ್ ಆಧಾರಿತ ಕಾರು ಸೇವೆಯನ್ನು ಈ ಸಂಸ್ಥೆ ಮಾಡುತ್ತಿದೆ. ಲಿಫ್ಟ್ ಪ್ರಸ್ತುತ 596 ಉದ್ಯೋಗಿಗಳನ್ನು ಹೊಂದಿದೆ.

ಆರಾನ್ ಲಿವಿ

#8

ವಯಸ್ಸು: 28
ವೃತ್ತಿ: ಬಾಕ್ಸ್‌ನ ಸಿಇಒ
ಇದರ ವಾರ್ಷಿಕ ಆದಾಯ $124 ಮಿಲಿಯನ್ ಆಗಿದೆ. ಇದರಲ್ಲಿ ಉದ್ಯೋಗಿಗಳು 1,183 ಆಗಿದ್ದಾರೆ.

ಮೈಕ್ ಕ್ರಿಗರ್

#9

ವಯಸ್ಸು: 28
ವೃತ್ತಿ: ಇನ್‌ಸ್ಟಾಗ್ರಾಮ್‌ನ ಸಹ ಸ್ಥಾಪಕ
ಇನ್‌ಸ್ಟಾಗ್ರಾಮ್‌ನ ಆತ್ಮವೆಂದೇ ಮೈಕ್ ಅನ್ನು ಸಂಬೋಧಿಸಲಾಗುತ್ತದೆ.

ಲಿಸಾ ಫಾಲ್ಸೋನ್

#10

ವಯಸ್ಸು: 28
ವೃತ್ತಿ: ರೆವೆಲ್ ಸಿಸ್ಟಮ್ ಸಹ ಸ್ಥಾಪಕಿ
$13.8 ಮಿಲಿಯನ್ ಆದಾಯವನ್ನು ಈ ಸಂಸ್ಥೆ ಗಳಿಸಿದ್ದು 134 ಉದ್ಯೋಗಿಗಳು ಇದರಲ್ಲಿದ್ದಾರೆ.

ಜೋಶ್ ಕುಶ್‌ನರ್

#11

ವಯಸ್ಸು: 28
ವೃತ್ತಿ: ತ್ರೈವ್ ಕ್ಯಾಪಿಟಲ್ ಮತ್ತು ಆಸ್ಕರ್‌ನ ಸ್ಥಾಪಕ
ಆಸ್ಕರ್ ಸದ್ಯಕ್ಕೆ 52 ಉದ್ಯೋಗಿಗಳನ್ನು ಹೊಂದಿದ್ದು ಯಶಸ್ಸಿನತ್ತ ಮುನ್ನಡೆಯುತ್ತಿದೆ.

ರೋಬಿ ಸ್ಟೀನ್

#12

ವಯಸ್ಸು: 28
ವೃತ್ತಿ: ಯಾಹೂನಲ್ಲಿ ಉತ್ಪನ್ನ ಡೈರೆಕ್ಟರ್
ಸ್ಟಾಂಪ್ಡ್ ಅನ್ನು ಖರೀದಿಸಿದ ಹೆಗ್ಗಳಿಕೆ ಈ ಸಂಸ್ಥೆಯದ್ದಾಗಿದೆ. ಇದು ನಿಮ್ಮ ಗೆಳೆಯರಿಂದ ಶಿಫಾರಸುಗಳನ್ನು ಹಂಚಿಕೊಳ್ಳಲು ನೆರವು ನೀಡುವ ಅಪ್ಲಿಕೇಶನ್ ಆಗಿದೆ.

ಸ್ಯಾಮ್ ಆಲ್ಟ್‌ಮಾನ್

#13

ವಯಸ್ಸು: 28
ವೃತ್ತಿ: ಲೂಪ್ಟ್ ಸಹಸ್ಥಾಪಕ
ಲೂಪ್ಟ್ $39.1 ಮಿಲಿಯನ್ ಆದಾಯವನ್ನು ಪ್ರಸ್ತುತ ಗಳಿಸಿಕೊಂಡಿದೆ ಮತ್ತು ಹೆಚ್ಚಿನ ಬಳಕೆದಾರರನ್ನು ಹೊಂದಿದೆ.

ಆರಾಶ್ ಫೇರೋಡ್ವಿಸಿ

#14

ವಯಸ್ಸು: 28
ವೃತ್ತಿ: ಡ್ರಾಪ್ ಬಾಕ್ಸ್ ಸಿಇಒ
ಮಿಲಿಯನ್‌ಗಿಂತಲೂ ಹೆಚ್ಚಿನ ಫೈಲ್‌ಗಳನ್ನು ಡ್ರಾಪ್ ಬಾಕ್ಸ್‌ನಲ್ಲಿ ಸಂಗ್ರಹಿಸಿಡುವ ಯೋಜನೆ ಸಿದ್ಧವಾಗಿದ್ದೇ ಆರಾಶ್‌ನಿಂದ ಎಂದೇ ಹೇಳಬಹುದು. ಇದರಲ್ಲಿ 694 ಉದ್ಯೋಗಿಗಳು ಇದ್ದಾರೆ.

ಎರಿಕ್ ಮಿಗಿಕೋವಸ್ಕಿ

#15

ವಯಸ್ಸು: 27
ವೃತ್ತಿ: ಪೆಬೆಲ್ ಸ್ಥಾಪಕ
$25.7 ಮಿಲಿಯನ್ ಆದಾಯವನ್ನು ಪೆಬೆಲ್ ಗಳಿಸಿದ್ದು ಪ್ರಸ್ತುತ ಇಲ್ಲಿ ಉದ್ಯೋಗವನ್ನು ಮಾಡುತ್ತಿರುವವರು 35 ಜನರಾಗಿದ್ದಾರೆ.

ಸಾರಾ ಹೈದರ್

#16

ವಯಸ್ಸು: 27
ವೃತ್ತಿ: ಸೀಕ್ರೇಟ್‌ನಲ್ಲಿ ಆಂಡ್ರಾಯ್ಡ್ ಇಂಜಿನಿಯರ್
ಗೂಗಲ್ ಹಾಗೂ ಟ್ವಿಟ್ಟರ್‌ನಲ್ಲಿ ಉದ್ಯೋಗವನ್ನು ಮುಗಿಸಿ ಸೀಕ್ರೇಟ್‌ಗೆ ಈ ಚೆಲುವೆ ಬಂದಿದ್ದಾರೆ.

ಡೇವಿಡ್ ಕಾರ್ಪ್

#17

ವಯಸ್ಸು: 27
ವೃತ್ತಿ: ತಂಬ್ಲರ್‌ನ ಸ್ಥಾಪಕ
ಬ್ಲಾಗಿಂಗ್ ಮಾಡುವುದನ್ನು ನಿಜವಾಗಿಯೂ ಸಾಮಾಜಿಕವನ್ನಾಗಿಸಿದ ಕೀರ್ತಿ ಡೇವಿಡ್‌ಗೆ ಸೇರುತ್ತದೆ.

ಟೆಡ್ ಲಿವಿಂಗ್‌ಸ್ಟನ್

#18

ವಯಸ್ಸು: 26
ವೃತ್ತಿ: ಕಿಕ್ ಮೆಸೆಂಜರ್‌ನ ಸ್ಥಾಪಕ
ಹದಿಹರೆಯದವರಲ್ಲಿ ಸಂದೇಶ ಕಳುಹಿಸುವ ಅಪ್ಲಿಕೇಶನ್ ಆವೃತ್ತಿಯನ್ನು ಹೊರತಂದ ಕೀರ್ತಿ ಕಿಕ್ ಮೆಸೆಂಜರ್‌ನದ್ದಾಗಿದೆ.

ಟ್ರೇಸಿ ಚೋ

#19

ವಯಸ್ಸು: 26
ವೃತ್ತಿ: ಪಿಂಟ್ರಸ್ಟ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್
ಸಾಫ್ಟ್‌ವೇರ್ ಇಂಜಿನಿಯರಲ್ಲಿ ತುಂಬಾ ಹಿರಿದು ಉದ್ಯೋಗಿ ಎಂಬ ಹೆಗ್ಗಳಿಕೆ ಟ್ರೇಸಿ ಚೋನದ್ದಾಗಿದೆ. ಫೇಸ್‌ಬುಕ್‌ನಲ್ಲಿ ಕೆಲಸ ಮಾಡುವ ಆಫರ್ ಕೂಡ ಇವರಿಗೆ ದೊರಕಿತ್ತು.

ಸೇತ್ ಪ್ರಿಬ್ಯಾಚ್

#20

ವಯಸ್ಸು: 25
ವೃತ್ತಿ: SCVNGR ಸ್ಥಾಪಕ
38 ಉದ್ಯೋಗಿಗಳನ್ನು ಹೊಂದಿರುವ SCVNGR ಮೊಬೈಲ್ ಅನುಭವವನ್ನು 46 ರಾಜ್ಯಗಳು ಮತ್ತು 3 ದೇಶಗಳಿಗೆ ಮೊದಲು ಹರಡಿದ ಕೀರ್ತಿಗೆ ಭಾಜನವಾಗಿದೆ.

ಬಾಬ್ಬಿ ಮರ್ಫಿ, ಇವಾನ್ ಸ್ಪೈಗಲ್

#21

ವಯಸ್ಸು: 25, 23
ವೃತ್ತಿ: ಸ್ನ್ಯಾಪ್ ಚಾಟ್ ಸಹ ಸ್ಥಾಪಕ
ಫೇಸ್‌ಬುಕ್‌ನ ಆಹ್ವಾನವನ್ನು ಸ್ವೀಕರಿಸಿದ ಈ ಇಬ್ಬರೂ ಸಾಧಕರು ಸ್ನ್ಯಾಪ್ ಚಾಟ್ ಸಂಸ್ಥೆಯನ್ನು ಸ್ಥಾಪಿಸಿದವರು. $123 ಮಿಲಿಯನ್ ಆದಾಯವನ್ನು ಗಳಿಸಿದ ಕೀರ್ತಿ ಸಂಸ್ಥೆಗಿದೆ.

ಪ್ಯಾಟ್ರಿಕ್ ಕೊಲಿಸನ್, ಜಾನ್ ಕೊಲಿಸನ್

#22

ವಯಸ್ಸು: 25, 23
ಉದ್ಯೋಗ: ಸ್ಟ್ರಿಪ್‌ನ ಸಹ ಸ್ಥಾಪಕ
ಬಿಲಿಯನ್ ಡಾಲರ್ ಹೂಡಿಕೆಯನ್ನು ಮಾಡಿದ ಇಬ್ಬರೂ ಸಹೋದರರು $120 ಮಿಲಿಯನ್ ಆಧಾಯವನ್ನು ಗಳಿಸಿ ಸಾಧಿಸಿದವರು. ಪ್ರಸ್ತುತ ಸಂಸ್ಥೆಯಲ್ಲಿ 83 ಉದ್ಯೋಗಿಗಳಿದ್ದಾರೆ.

ಡೇನಿಯಲ್ ಗ್ರೋಸ್

#23

ವಯಸ್ಸು: 23
ಗ್ರೆಪ್ಲಿನ್ ಫೌಂಡರ್
ಗ್ರೋಸ್‌ನ ಪರ್ಸನಲ್ ಅಸಿಸ್ಟೆಂಟ್ ಅಪ್ಲಿಕೇಶನ್‌ ಅನ್ನು ಆಪಲ್ ಕಳೆದ ವರ್ಷ $50 ಮಿಲಿಯನ್‌ಗೆ ಖರೀದಿಸಿತು.

ಬ್ರಿಯಾನ್ ವೋಂಗ್

#24

ವಯಸ್ಸು: 23
ವೃತ್ತಿ: ಕಿಪ್ ಸ್ ಸ್ಥಾಪಕ
ಮೊಬೈಲ್ ಆಡಿಯನ್ಸ್ ಅನ್ನು ಬ್ರಾಂಡ್‌ಗಳು ತಲುಪುವ ಹೊಸ ವಿಧಾನಕ್ಕೆ ಬ್ರಿಯಾನ್ ನಾಂದಿ ಹಾಡಿದರು. ಈ ಸಂಸ್ಥೆಯಲ್ಲಿ 60 ಉದ್ಯೋಗಿಗಳು ವೃತ್ತಿ ನಡೆಸುತ್ತಿದ್ದಾರೆ.

ಕೆಲ್ಸಿ ಫಾಲ್ಟರ್

#25

ವಯಸ್ಸು: 23
ವೃತ್ತಿ: ಪೋಪ್‌ಟಿಪ್‌ನ ಸ್ಥಾಪಕಿ
ಪೋಪ್‌ಟಿಪ್ ಸದ್ಯ 11 ಉದ್ಯೋಗಿಗಳನ್ನು ಹೊಂದಿದ್ದು $2.4 ಮಿಲಿಯನ್ ಆದಾಯವನ್ನು ಗಳಿಸಿಕೊಂಡಿದೆ.

ಲೂಕಸ್ ಡುಪ್ಲನ್

#26

ವಯಸ್ಸು: 22
ವೃತ್ತಿ: ಕ್ಲಿಂಕಲ್ ಸಹ ಸ್ಥಾಪಕ
ಪ್ರಸ್ತುತ ಈ ಸಂಸ್ಥೆಯಲ್ಲಿ 17 ಉದ್ಯೋಗಿಗಳಿದ್ದು ಅದರ ಆದಾಯವಾಗಿದೆ $30.5 ಮಿಲಿಯನ್.

ಜೋಶ್ ಮಿಲ್ಲರ್

#27

ವಯಸ್ಸು: 22
ವೃತ್ತಿ: ಬ್ರಾಂಚ್ ಸಹಸ್ಥಾಪಕ
$15 ಮಿಲಿಯನ್‌ಗೆ ಫೇಸ್‌ಬುಕ್ ಬ್ರಾಂಚ್ ಅನ್ನು ಸ್ವಾಧೀನಪಡಿಸಿಕೊಂಡಿದೆ. ಆರಂಭದಲ್ಲಿ ಇದು ಎಂಟು ಉದ್ಯೋಗಿಗಳನ್ನು ಹೊಂದಿತ್ತು.

ಪಾಲ್ಮರ್ ಲಕ್ಕಿ

#28

ವಯಸ್ಸು: 21
ವೃತ್ತಿ: ಒಕ್ಯುಲಸ್ ವಿಆರ್ ಸ್ಥಾಪಕ
ಹೆಡ್‌ಸೆಟ್ ಉತ್ತಮ ಸಾಧನೆಯನ್ನು ಮಾಡಿದ ಕೀರ್ತಿ ಪಾಲ್ಮರ್‌ಗೆ ಸಲ್ಲುತ್ತದೆ. ಇದು ಪ್ರಸ್ತುತ 81 ಉದ್ಯೋಗಿಗಳನ್ನು ಹೊಂದಿದೆ. $93.4 ಮಿಲಿಯನ್ ಆದಾಯವನ್ನು ಇದು ಗಳಿಸಿದೆ.

ಸಾಹಿಲ್ ಲವಿಂಗಿಯಾ

#29

ವಯಸ್ಸು: 21
ವೃತ್ತಿ: ಗುಮ್ರೋಡ್ ಸ್ಥಾಪಕ
ಗುಮ್ರೋಡ್ ವೆಬ್ ಟೂಲ್ ಸ್ಥಾಪಿಸಿದ ಕೀರ್ತಿ ಸಾಹಿಲ್‌ಗೆ ಸಲ್ಲುತ್ತದೆ. 2011 ರಿಂದ $8.1 ಮಿಲಿಯನ್ ಇದು ಗಳಿಸಿದೆ ಮತ್ತು ಪ್ರಸ್ತುತ 16 ಉದ್ಯೋಗಿಗಳನ್ನು ಹೊಂದಿದೆ.

ನಿಕ್ ಡಲೋಸಿಯೋ

#30

ವಯಸ್ಸು: 18
ವೃತ್ತಿ: ಸಮ್ಲಿ ಸ್ಥಾಪಕ; ಯಾಹೂ ಡೆವೆಲಪರ್; ನ್ಯೂಸ್ ಡೈಜೆಸ್ಟ್
ಈತನಲ್ಲಿದ್ದ ಅಪರಿಮಿತ ಜ್ಞಾನವನ್ನು ಗಳಿಸಿದ ಕಂಪೆನಿ ಯಾಹೂ ಆತನ ಸಮ್ಲಿಯನ್ನು ಖರೀದಿಸಿ ನಿಕ್‌ನನ್ನು ಹೈಉರ್ ಮಾಡಲು ನಿರ್ಧರಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot